ವೆಬ್‌ಸೈಟ್‌ನ್ನು ಪಿನ್‌ ಮಾಡವುದು ಹೇಗೆ?

Posted By:

ಇಂದು ನಾವು ಗೊತ್ತಿಲ್ಲದ ಮಾಹಿತಿಯನ್ನು ಹಿಡಿದು ಪತ್ರಿಯೊಂದು ವಿಚಾರಕ್ಕೆ ಸಂಬಂಧಿಸಿದಂತೆ ಇಂಟರ್‌ನೆಟ್‌ನ್ನು ಬಳಸುತ್ತಿದ್ದೇವೆ.ಇಮೇಲ್‌,ಸೋಶಿಯಲ್‌ ನೆಟ್‌ವರ್ಕ್‌,ಯೂಟ್ಯೂಬ್‌ಗಳನ್ನು ಸೇರಿದಂತೆ ವಿವಿಧ ಜಾಲತಾಣಗಳನ್ನು ಒಂದೇ ಬ್ರೌಸರ್‌ನಲ್ಲಿ ಓಪನ್‌ ಮಾಡಿಕೊಂಡು ಬಳಸುತ್ತಿರುತ್ತೇವೆ.ಈ ಸಂದರ್ಭದಲ್ಲಿ ಕೆಲವೊಮ್ಮೆ ಎಲ್ಲಾ ವೆಬ್‌ ಪೇಜ್‌ಗಳ ಪುಟಗಳು ಬ್ರೌಸರ್‌ನಲ್ಲಿದ್ದಾಗ ‌ಅಕಸ್ಮಿಕವಾಗಿ ಗೊತ್ತಿಲ್ಲದೇ ಯಾವುದೋ ಒಂದು ವೆಬ್‌ ಪುಟ ಕ್ಲೋಸ್‌ ಆಗಿ ಬಿಡುತ್ತವೆ. ಕ್ಲೋಸ್‌ ಆದ ಮೇಲೆ ಮತ್ತೇ ಪುನಃ ಟೈಪ್‌ ಮಾಡಿ ವೆಬ್‌ ಪೇಜ್‌ ಓಪನ್‌ ಮಾಡಬೇಕಾಗುತ್ತದೆ.

ಈ ರೀತಿ ವೆಬ್‌ ಪೇಜ್‌ ಕ್ಲೋಸ್‌ ಆಗದಂತೆ ಫೈರ್‌ಫಾಕ್ಸ್‌ ಮತ್ತು ಕ್ರೋಮ್‌ ಬೌಸರ್‌ನಲ್ಲಿ ವೆಬ್‌ ಪೇಜ್‌ನ್ನು ಪಿನ್‌ ಮಾಡಿ ಸಣ್ಣದಾಗಿ ಮಾಡಬಹುದು.

ವೆಬ್‌ಸೈಟ್‌ನ್ನು ಪಿನ್‌ ಮಾಡವುದು ಹೇಗೆ?

ವೆಬ್‌ ಪೇಜ್‌ ಪಿನ್‌ ಮಾಡಲು ಹೀಗೆ ಮಾಡಿ:

ಕ್ರೋಮ್‌ ಮತ್ತು ಫೈರ್‌ಫಾಕ್ಸ್‌ ಬ್ರೌಸರ್‌ನಲ್ಲಿ ಪಿನ್‌ ಮಾಡಬೇಕಾದ ವೆಬ್‌ ಪೇಜ್‌ನ ಮೇಲೆ ಬಲಗಡೆ ಮೌಸ್‌ ಬಟನ್‌ ಕ್ಲಿಕ್‌ ಮಾಡಿ, 'Pin tab' ಆಯ್ಕೆಯನ್ನು ಆರಿಸಿ.ಆಗ ನೀವು ಓಪನ್‌ ಮಾಡಿರುವ ಪೇಜ್‌ ಸಣ್ಣದಾಗಿ ಬ್ರೌಸರ್‌ನಲ್ಲಿ ಕಾಣುತ್ತಿರುತ್ತದೆ.

ಇನ್ನೂ ಪಿನ್ ಮಾಡಿರುವ ಟ್ಯಾಬ್‌ ಮತ್ತೇ ಪುನಃ ದೊಡ್ಡದಾಗಿ ಕಾಣಬೇಕಿದ್ದರೆ ಪಿನ್‌ ಆಗಿರುವ ಟ್ಯಾಬ್‌ನ ಮೇಲೆ ಬಲಗಡೆ ಮೌಸ್‌ ಬಟನ್‌ ಕ್ಲಿಕ್‌ ಮಾಡಿ 'Unpin' ಆಯ್ಕೆಯನ್ನು ಆರಿಸಿ. ಆಗ ನಿಮ್ಮ ವೆಬ್‌ ಪೇಜ್‌, ಬ್ರೌಸರ್‌ನಲ್ಲಿ ದೊಡ್ಡದಾಗಿ ಕಾಣುತ್ತದೆ.

ಇದನ್ನೂ ಓದಿ: ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ನಲ್ಲಿ ಫೋಟೋ ಹಾಕುವುದು ಹೇಗೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot