ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

By Ashwath
|

ಡೆಸ್ಕ್‌ಟಾಪ್‌ನಲ್ಲಿ ಬ್ಯಾಕ್‌ ಗ್ರೌಂಡ್‌ಗೆ ನಿಮಗಿಷ್ಟವಾದ ಫೋಟೋ ಸೆಟ್‌ ಮಾಡುವುದು ಗೊತ್ತಿದೆ ಅಲ್ವೇ ? ಆದ್ರೆ ಕ್ರೋಮ್‌ ಬ್ರೌಸರ್‌ನ ಗೂಗಲ್‌ ಹೋಮ್‌ ಪೇಜ್‌ನಲ್ಲೂ ನೀವು ನಿಮಗಿಷ್ಟವಾದ ಫೋಟೋ ಅಪ್‌ಲೋಡ್‌ ಮಾಡಬಹುದು. ಈ ಫೋಟೋ ಅಪ್‌ಲೋಡ್‌ ಮಾಡಲು ಮೂರು ಸರಳ ವಿಧಾನಗಳಿವೆ. ಅದನ್ನು ಅನುಸರಿಸಿದ್ರೆ ನಿಮಗಿಷ್ಟವಾದ ಫೋಟೋವನ್ನು ಗೂಗಲ್‌ ಹೋಮ್‌ ಪೇಜ್‌ನಲ್ಲಿ ಹಾಕಬಹುದು.

ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ನಂತರ ಕ್ರೌಮ್‌ ಬ್ರೌಸರ್‌ ಮುಖಾಂತರ Custom Google Background ಹೋಗಿ ನಿಮ್ಮ ಇಷ್ಟದ ಫೋಟೋವನ್ನು ಅಪಲೋಡ್‌ ಮಾಡಿಕೊಳ್ಳಿ.

 ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

ಮೊದಲು ನೀವು ಕ್ರೋಮ್‌ ಬ್ರೌಸರ್‌ನಿಂದ Custom Google Background ಹೋಗಿ . ಮೇಲ್ಭಾಗದಲ್ಲಿರುವ ask for permission to access ಕ್ಲಿಕ್‌ ಮಾಡಿ ನಿಮ್ಮ ಡೇಟಾ ವೀಕ್ಷಿಸಲು ಅನುಮತಿ ನೀಡಿ.

ಈ ರೀತಿ ಅನುಮತಿ ನೀಡಿದ ಬಳಿಕ ಸೆಟ್ಟಿಂಗ್ಸ್‌ ಪೇಜ್‌ ಓಪನ್‌ ಅಗುತ್ತದೆ. ಇಲ್ಲಿ ನಿಮಗೆ ಬೇಕಾದ ಫೋಟೋವನ್ನು ನಿಮ್ಮ ಪಿ.ಸಿಯಿಂದ ಅಥವಾ ಯುಆರ್‌ಎಲ್‌ನಿಂದ ಆರಿಸಿಕೊಳ್ಳಿ.

 ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

ಇಲ್ಲಿ ನೀವು ಅಪ್‌ಲೋಡ್‌ ಮಾಡಿರುವ ಫೋಟೋಗಳಲ್ಲಿ ಬೇಕಾದ ಫೋಟೋ ಆರಿಸಿಕೊಳ್ಳಿ. ಬೇಡವಾದ ಫೋಟೋಗಳನ್ನು ಇಲ್ಲಿ ಡಿಲೀಟ್‌ ಮಾಡಬಹುದು, ಜೊತೆಗೆ ಇಲ್ಲಿ Randomise above images ಮತ್ತು No Background ಎರಡು ಆಯ್ಕೆಗಳಿವೆ. ಇದರಲ್ಲಿ ನೀವು ನಿಮಗೆ ಬೇಕಾದ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ.

 ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ ಸುಂದರಗೊಳಿಸಿ

ಇಲ್ಲಿ ನೀವು ಗೂಗಲ್ ಸರ್ಚ್ ಇಂಜಿನ್‌ನ ವಿನ್ಯಾಸ ಬದಲಾಯಿಸಲು ಸಾಧ್ಯ.! ಇದರಲ್ಲಿ ನೀವು ಗೂಗಲ್ ಡೂಡಲ್‌ನ್ನು ಕಾಣದಂತೆ ಮಾಡಬಹುದು,ಗೂಗಲ್‌ ಪ್ಲಸ್‌ ,ಭಾಷೆಗಳನ್ನು ಸೇರಿದಂತೆ ಆರು ಆಯ್ಕೆಗಳನ್ನು ಆರಿಸುವ ಮೂಲಕ ಗೂಗಲ್‌ ಸರ್ಚ್ ಇಂಜಿನ್‌ ಹೋಮ್‌ ಪೇಜ್‌ನ್ನು ಬದಲಾಯಿಸಬಹುದು. ಈ ಮೂರು ಹಂತಗಳನ್ನು ಸೆಟ್‌ ಮಾಡಿದ ಬಳಿಕ ನೇರವಾಗಿ ಕ್ರೋಮ್‌ ಬ್ರೌಸರ್‌ ಮೂಲಕ ಗೂಗಲ್‌ ಪೇಜ್‌ ಓಪನ್‌ ಮಾಡಿದ್ರೆ ನೀವು ಅಪ್‌ಲೋಡ್‌ ಮಾಡಿರುವ ಫೋಟೋದೊಂದಿಗೆ ಕ್ರೌಮ್‌ ಬ್ರೌಸರ್‌ ಹೋಮ್‌ ಪೇಜ್ ಕಾಣಿಸುತ್ತಿರುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X