"ಡಿಲೀಟ್‌ ಆಗಿರುವ ಮೊಬೈಲ್ ನಂಬರ್‌ಗಳನ್ನು ವಾಪಸ್ ಪಡೆಯವುದು ಹೇಗೆ?

|

ಅಂತರ್ಜಾಲ ದಿಗ್ಗಜ ಗೂಗಲ್ ತನ್ನ ಗ್ರಾಹಕರಿಗೆ ನೂರಾರು ಸೌಲಭ್ಯಗಳನ್ನು ನೀಡಿದೆ. ಆದರೆ, ಅವುಗಳಲ್ಲಿ ಕೆಲವೇ ಕೆಲವು ಸೇವೆಗಳು ಮಾತ್ರ ಹೆಚ್ಚು ಜನರನ್ನು ತಲುಪಿವೆ .! ಏಕೆಂದರೆ, ಗೂಗಲ್‌ನ ಹಲವಾರು ಸೇವೆಗಳು ಹೆಚ್ಚು ಜನರಿಗೆ ತಲುಪುವುದನ್ನು ಮರೆತಿವೆ ಎನ್ನಬಹುದು.!!

ಓದಿರಿ: ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡಿದ್ದವರು ಸತ್ತರು!!.ಒಂದೇ ದಿನಕ್ಕೆ ಬೆಲೆ ಕುಸಿತ ಎಷ್ಟು ಗೊತ್ತಾ?

ಹಾಗಾಗಿ, ಇಂದಿನ ಲೇಖನದಲ್ಲಿ ಗೂಗಲ್‌ ಸೇವೆಗಳಲ್ಲಿ ಒಂದಾದ "ಡಿಲೀಟ್‌ ಆಗಿರುವ ಮೊಬೈಲ್ ನಂಬರ್ ಅನ್ನು ವಾಪಸ್ ಪಡೆಯವುದು ಹೇಗೆ ಎಂಬುದನ್ನು ತಿಳಿಯಿರಿ.! ಅತ್ಯುತ್ತಮವಾದ ಈ ಸೇವೆಯನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಆಗಿ!!

ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಆಗಿ!!

ಡಿಲೀಟ್‌ ಆದ ಕಾಂಟಾಕ್ಟ್‌ಗಳನ್ನು ರಿಸ್ಟೋರ್ ಮಾಡಿಕೊಳ್ಳುವ ಆಯ್ಕೆ ನಿಮ್ಮ ಗೂಗಲ್ ಕಾಂಟಾಕ್ಟ್ಸ್‌ನಲ್ಲಿದೆ. ನಿಮ್ಮ ಕಾಂಟಾಕ್ಟ್‌ ಲಿಸ್ಟ್‌ ಗೂಗಲ್‌ ಅಕೌಂಟ್‌ ಜತೆಗೆ ಸಿಂಕ್‌ ಆಗಿರುತ್ತದೆ.!! ಹಾಗಾಗಿ, ಬ್ರೌಸರ್‌ನಲ್ಲಿ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಆಗಿ. ಗೂಗಲ್‌ ಹೋಮ್‌ ಪೇಜ್‌ನ ಬಲಭಾಗದಲ್ಲಿ ಕಾಣುವ ಒಂಬತ್ತು ಚುಕ್ಕೆಗಳ Google apps ಮೇಲೆ ಕ್ಲಿಕ್‌ ಮಾಡಿ

ಕಾಂಟಾಕ್ಟ್ಸ್ ಪೇಜ್‌ ತೆರೆಯಿರಿ!!

ಕಾಂಟಾಕ್ಟ್ಸ್ ಪೇಜ್‌ ತೆರೆಯಿರಿ!!

Google apps ಮೇಲೆ ಕ್ಲಿಕ್‌ ಮಾಡಿದ ನಂತರ Contacts ಮೇಲೆ ಕ್ಲಿಕ್ಕಿಸಿ. Contactsನ ಹೊಸ ವರ್ಷನ್‌ನಲ್ಲಿ ಎಡಭಾಗದ ಆಯ್ಕೆಗಳ ಕೆಳಗೆ ಕಾಣುವ Switch to the old version ಎಂಬಲ್ಲಿ ಕ್ಲಿಕ್‌ ಮಾಡಿ. ಈಗ ಹಳೆಯ ವರ್ಷನ್‌ನ ಕಾಂಟಾಕ್ಟ್ಸ್ ಪೇಜ್‌ ತೆರೆದುಕೊಳ್ಳುತ್ತದೆ.!!

ರಿಸ್ಟೋರ್ ಸಮಯ ಆಯ್ಕೆ ಮಾಡಿ!!

ರಿಸ್ಟೋರ್ ಸಮಯ ಆಯ್ಕೆ ಮಾಡಿ!!

ಹಳೆಯ ವರ್ಷನ್‌ನ ಕಾಂಟಾಕ್ಟ್ಸ್ ಪೇಜ್‌ ತೆರೆದ ನಂತರ More ಎಂಬಲ್ಲಿ ಕ್ಲಿಕ್ಕಿಸಿ. ಇಲ್ಲಿನ ಆಯ್ಕೆಗಳಲ್ಲಿ Restore Contacts ಮೇಲೆ ಕ್ಲಿಕ್ ಮಾಡಿ. ಇಲ್ಲಿ ಎಷ್ಟು ದಿನಗಳ ಹಿಂದಿನಿಂದ ರಿಸ್ಟೋರ್ ಮಾಡಬೇಕು ಎಂಬ ಆಯ್ಕೆಗಳನ್ನು ಕೇಳುತ್ತದೆ.!!

30 ದಿನ ಕಾಲಾವಕಾಶ!!

30 ದಿನ ಕಾಲಾವಕಾಶ!!

ಡಿಲೀಟ್‌ ಆದ ಕಾಂಟಾಕ್ಟ್‌ಗಳನ್ನು ರಿಸ್ಟೋರ್‌ ಮಾಡುವ ಆಯ್ಕೆ ಗೂಗಲ್‌ ಕಾಂಟಾಕ್ಟ್ಸ್‌ನಲ್ಲಿದ್ದರೂ 10 ನಿಮಿಷದ ಹಿಂದಿನಿಂದ 30 ದಿನಗಳವರೆಗಿನ ಕಾಂಟಾಕ್ಟ್‌ಗಳನ್ನು ರಿಸ್ಟೋರ್ ಮಾಡಲು ಇಲ್ಲಿ ಅವಕಾಶವಿದೆ. ಇಲ್ಲಿ ನಿಮಗೆ ಬೇಕಾದ ಅವಧಿಯನ್ನು ಆಯ್ಕೆ ಮಾಡಿಕೊಂಡು Restore ಎಂಬಲ್ಲಿ ಕ್ಲಿಕ್ಕಿಸಿ.

 ಅವಧಿ ಮುಗಿದರೆ ರಿಸ್ಟೋರ್ ಸಾಧ್ಯವಿಲ್ಲ!!

ಅವಧಿ ಮುಗಿದರೆ ರಿಸ್ಟೋರ್ ಸಾಧ್ಯವಿಲ್ಲ!!

Restore ಎಂಬಲ್ಲಿ ಕ್ಲಿಕ್ಕಿಸಿದರೆ ನೀವು ಆಯ್ಕೆ ಮಾಡಿಕೊಂಡ ಸಮಯದಲ್ಲಿ ಡಿಲೀಟ್‌ ಆಗಿರುವ ಕಾಂಟಾಕ್ಟ್‌ಗಳು ರಿಸ್ಟೋರ್ ಆಗುತ್ತವೆ. ಆದರೆ, 30 ದಿನಗಳ ಹಿಂದೆ ಡಿಲೀಟ್‌ ಆಗಿರುವ ಕಾಂಟಾಕ್ಟ್‌ಗಳನ್ನು ರಿಸ್ಟೋರ್‌ ಮಾಡಲು ಇಲ್ಲಿ ಅವಕಾಶವಿಲ್ಲ ಎಂಬುದನ್ನು ತಿಳಿಯಿರಿ.

Best Mobiles in India

English summary
How to Recover Your contacts on Android Phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X