ಆನ್‌ಲೈನ್‌ನಲ್ಲಿ ಜಮೀನು ಸರ್ವೆನಂಬರ್‌ಗೆ ಆಧಾರ್ ಸಂಖ್ಯೆ ರಿಜಿಸ್ಟರ್ ಹೇಗೆ? ಉಪಯೋಗವೇನು?

Written By:

ಸರ್ಕಾರದ ಬಹುತೇಕ ಎಲ್ಲಾ ಸೇವೆಗಳು ಆನ್‌ಲೈನ್‌ಗೆ ತೆರೆದುಕೊಳ್ಳುತ್ತಿವೆ. ಇದೀಗ ನಾಗರೀಕರು ಜಮೀನು ಸರ್ವೆ ನಂಬರ್‌ಗಳಿಗೂ ಸಹ ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಯನ್ನು ನಮೂದಿಸಿಕೊಳ್ಳಬಹುದಾಗಿದ್ದು, ನಿಮ್ಮ ಜಮೀನುಗಳು ಇನ್ನಷ್ಟು ಸುರಕ್ಷತೆಯಾಗಿವೆ.!!

ರಿಜಿಸ್ಟರ್ ಮಾಡಿದರೆ ಉಪಯೋಗ ಏನು?

ನಾಗರೀಕರು ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಜೊತೆಗೆ ತಮ್ಮ ಜಮೀನುಗಳಿಗೆ ಸಂಬಂದಿಸಿದ ಸರ್ವೆ ನಂಬರುಗಳನ್ನು ನೋಂದಾಯಿಸಿಕೊಳ್ಳಬಹುದು, ಯಾವುದೇ ಮ್ಯುಟೇಶನ್ ವಿನಂತಿಯು ನೋಂದಾಯಿತ ಸರ್ವೆ ನಂಬರುಗಳ ಮೇಲೆ ಪ್ರಾರಂಭವಾದರೆ ಸ್ವಯಂಚಾಲಿತ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗುವುದು.

ಆನ್‌ಲೈನ್‌ನಲ್ಲಿ ಜಮೀನು ಸರ್ವೆನಂಬರ್‌ಗೆ ಆಧಾರ್ ಸಂಖ್ಯೆ ರಿಜಿಸ್ಟರ್ ಹೇಗೆ?

ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

ನೊಂದಣಿ ಮಾಡುವ ವಿಧಾನ :
ಕರ್ನಾಟಕ ಸರ್ಕಾರದ ಭೂಮಿ ವೆಬ್‌ಸೈಟ್‌ಗೆ ಭೇಟಿ ನೀಡಿ. ತೆರೆಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

(http://landrecords.karnataka.gov.in/service0/About.aspx?id=ctzreg) ನಂತರ ಆಧಾರ್ ಸಂಖ್ಯೆ, ಹೆಸರು (ಆರ್.ಟಿ.ಸಿಯಲ್ಲಿರುವಂತೆ) ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಮುಂದೆ ಸಲಹೆಗಳಿವೆ ನೋಡಿ.

ಆನ್‌ಲೈನ್‌ನಲ್ಲಿ ಜಮೀನು ಸರ್ವೆನಂಬರ್‌ಗೆ ಆಧಾರ್ ಸಂಖ್ಯೆ ರಿಜಿಸ್ಟರ್ ಹೇಗೆ?

• ಓ.ಟಿ.ಪಿ ಸಂಖ್ಯೆ ಮೇಲೆ ಕ್ಲಿಕ್ಕಿಸಿ
• ನೋಂದಾಯಿತ ಮೊಬೈಲ್ ಗೆ ಓ.ಟಿ.ಪಿ ಸಂಖ್ಯೆ ಕಳುಹಿಸಲಾಗುವುದು. ಓ.ಟಿ.ಪಿ ಸಂಖ್ಯೆ ನಮೂದಿಸಿ ಪರಿಶೀಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿ
• ಪರಿಶೀಲನೆ ಯಶಸ್ವಿಯ ನಂತರ, ತಂದೆಯ ಹೆಸರು (ಆರ್.ಟಿ.ಸಿಯಲ್ಲಿರುವಂತೆ)), ವಿಳಾಸ, ಎಪಿಕ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ
• ಯಾವುದಾದರೊಂದು ಗುರುತು ಚೀಟಿಯನ್ನು ಅಪ್ಲೋಡ್ ಮಾಡಿ (JPG ಅಥವಾ JPEG ಸ್ವರೂಪದಲ್ಲಿರಬೇಕು)
• ಸಂಬಂಧಪಟ್ಟ ಜಿಲ್ಲೆ, ತಾಲ್ಲೋಕು ಹೋಬಳಿ ಮತ್ತು ಗ್ರಾಮದ ವಿವರಗಳು ಆಯ್ಕೆ ಮಾಡಿ
• ಸರ್ವೆ ಸಂಖ್ಯೆ ಮತ್ತು Captch ಸಂಖ್ಯೆಯನ್ನು ನಮೂದಿಸಿ
• ಸರ್ವೆ ಸಂಖ್ಯೆ ಸೇರಿಸಲು Add ಗುಂಡಿಯನ್ನು ಕ್ಲಿಕ್ ಮಾಡಿ

ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!!English summary
aadhar number to Land Survey No. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot