ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!!

By Bhaskar

  ಸರ್ಕಾರದ ಬಹುತೇಕ ಎಲ್ಲ ಕೆಲಸಗಳು ಸಹ ಆನ್‌ಲೈನ್‌ನಲ್ಲಿಯೇ ನಡೆಯುವಾಗ ನಾವು ಇದರ ಹೆಚ್ಚಿನ ಉಪಯೋಗ ಪಡೆದುಕೊಳ್ಳಬಹುದು. ಸರ್ಕಾರಿ ಕಾರ್ಯ ಎಂದರೆ ಕಷ್ಟ ಎನ್ನುವ ಜನರು ಈ ಆನ್‌ಲೈನ್ ವ್ಯವಸ್ಥೆಯನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಸರ್ಕಾರಿ ಕಾರ್ಯಗಳು ಬಹುಬೇಗ ಆಗುತ್ತವೆ.

  ಡಿಎಲ್, ವೋಟರ್ ಐಡಿ ಮತ್ತು ಇತರ ಸರ್ಕಾರಿ ಡಾಕ್ಯುಮೆಂಟ್‌ಗಳನ್ನು ಆನ್‌ಲೈನ್ ಮೂಲಕ ಹೇಗೆ ಮಾಡಿಸಿಕೊಳ್ಳುವುದು ಎಂಬುದನ್ನು ನಾವು ಈಗಾಗಲೇ ತಿಳಿಸಿಕೊಟ್ಟಿದ್ದೇವೆ. ಈ ಲೇಖನಗಳ ನಂತರ ಹಲವು ಜನರು ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಿ ಎಂದು ಕೇಳಿದ್ದರು.

  ಹಾಗಾಗಿ, ನಾವು ಇಂದು ಮೊಬೈಲ್ ಮೂಲಕವೇ ರೇಷನ್‌ ಕಾರ್ಡ್ಗೆ ಅರ್ಜಿ ಸಲ್ಲಿಸಿ ಬಹುಬೇಗ ಮತ್ತು ಸರಳವಾಗಿ ರೇಷನ್ ಕಾರ್ಡ್ ಪಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1 9212357123 ನಂಬರ್‌ಗೆ ಮೆಸೇಜ್ ಸೆಂಡ್ ಮಾಡಿ.

  ಮೊಬೈಲ್‌ನಿಂದ "RCNEW" ಎಂದು ಟೈಪ್ ಮಾಡಿ ನಂತರ ಒಂದು ಸ್ಪೇಸ್‌ ಬಿಟ್ಟು ನಿಮ್ಮ ಹೆಸರನ್ನು ಟೈಪ್ ಮಾಡಿ ( ಉದಾ: RCNEW Bhaskar )ನಂತರ 9212357123 ನಂಬರ್‌ಗೆ ಮೆಸೇಜ್ ಸೆಂಡ್ ಮಾಡಿ. 9212357123 ನಂಬರ್‌ಗೆ ಮೆಸೇಜ್ ಸೆಂಡ್ ಮಾಡಿದ ತಕ್ಷಣವೇ ನಿಮ್ಮ ಮೊಬೈಲ್‌ಗೆ ಪ್ರವೇಶ ಸಂಖ್ಯೆ/ ಟೋಕನ್ ಸಂಖ್ಯೆ ಮತ್ತು ಸೆಕ್ಯುರೆಟಿ ಕೋಡ್ ಬರುತ್ತದೆ.

  #2 ಪರಿಚಯಸ್ಥರನ್ನು ಜೊತೆಗೆ ಕರೆದೊಯ್ಯಿರಿ

  ನಂತರ ನಿಮಗೆ ಪರಿಚಯಯಿರುವ ಖಾಯಂ ರೇಷನ್ ಕಾರ್ಡ್ ಹೊಂದಿರುವ ವ್ಯಕ್ತಿಯನ್ನು ನಿಮ್ಮ ಹತ್ತಿರದ ಪಡಿತರ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ( ನೀವು ಕರೆದುಕೊಂಡು ಹೋಗುವ ವ್ಯಕ್ತಿ ಅವರ ವಿದ್ಯುತ್ ಆರ್‌. ಆರ್ ನಂಬರ್ ಮತ್ತು ಅವರ ರೇಷನ್ ಕಾರ್ಡ್ ಎರಡನ್ನು ಹೊಂದಿರಬೇಕು)

  #3 ಅರ್ಜಿ ಸಲ್ಲಿಕೆ ಪ್ರಾರಂಭ

  ಸೇವಾಕೆಂದ್ರಕ್ಕೆ ಭೇಟಿ ನೀಡಿ ನಿಮ್ಮ ಮೊಬೈಲ್‌ಗೆ ರವಾನೆಯಾದ ಪ್ರವೇಶ ಸಂಖ್ಯೆಯನ್ನು ಅಲ್ಲಿನ ಕಾರ್ಯನಿರ್ವಹಣಾ ವ್ಯಕ್ತಿಗೆ ನೀಡಿ. ನಂತರ ನಿಮ್ಮ ಸೆಕ್ಯುರಿಟಿ ಕೋಡ್ ಬಳಸಿ ಅರ್ಜಿ ಸಲ್ಲಿಕೆಯನ್ನು ಅವರು ಪ್ರಾರಂಭಿಸುತ್ತಾರೆ. ( ಸರ್ಕಾರದ ನಿಯಮದಂತೆ ಅರ್ಜಿ ಸಲ್ಲಿಕೆಗಾಗಿ ಪೂರ್ಣ ಒಂದು ಗಂಟೆ ಸಮಯ ಬೇಕಾಗುತ್ತದೆ)

  #4 ಬೆರಳಚ್ಚು ಮತ್ತು ಭಾವಚಿತ್ರ ದೃಡೀಕರಣ

  ಅರ್ಜಿ ಸಲ್ಲಿಕೆ ಪ್ರಾರಂಭವಾದ ಮೇಲೆ ನೀವು ಕರೆದುಕೊಂಡು ಹೋಗಿರುವ ವ್ಯಕ್ತಿಯ ಬೆರಳಚ್ಚು ಮತ್ತು ಭಾವಚಿತ್ರವನ್ನು ದೃಡೀಕರಣದ ನಂತರ ನಿಮ್ಮ ಹಾಗೂ ನಿಮ್ಮ ಕುಟುಂಬದ ಬೆರಳಚ್ಚು ಮತ್ತು ಭಾವಚಿತ್ರವನ್ನು ಸಂಗ್ರಹಿಸುತ್ತಾರೆ.

  #5 ರೇಷನ್ ಕಾರ್ಡ್ ನಿಮ್ಮ ಮನೆಗೆ!!

  ನಂತರ ನೀವು ನೀಡುವ ವಿಳಾಸ ಮತ್ತು ನೀವು ಸಲ್ಲಿಸುವ ಯಾವುದಾದರೂ ಎರಡು ದಾಖಲೆಗಳನ್ನು ಅವರು ಅಪ್‌ಲೋಡ್ ಮಾಡಿ ನಮಗೆ ರಶೀದಿಯನ್ನು ನೀಡುತ್ತಾರೆ. ಇಷ್ಟು ಆದ ನಂತರ ನಿಮಗೆ ರೇಷನ್ ಕಾರ್ಡ್ ನೀಡಲು ಲಭ್ಯವಿದ್ದಲ್ಲಿ, 20 ದಿವಸಗಳ ಒಳಗಾಗಿ ರೇಷನ್ ಕಾರ್ಡ್ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬಂದು ಸೇರುತ್ತದೆ.

  #6 ಸಲ್ಲಿಸಬೇಕಾದ ದಾಖಲೆಗಳು

  • ಚುನಾವಣಾ ಗುರುತಿನಚೀಟಿ
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆಸ್ಸ್
  • ಎಲ್‌ಪಿಜಿ ಪಾಸ್‌ಬುಕ್
  • ಬ್ಯಾಂಕ್ ಪಾಸ್‌ಬುಕ್
  • ಹಿರಿಯ ನಾಗರಿಕ ಗುರುತಿನ ಚೀಟಿ
  Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
  ರೇಷನ್ ಕಾರ್ಡ್ ಕೂಪನ್ ಪಡೆಯುವುದು ಹೇಗೆ?

  ರೇಷನ್ ಕಾರ್ಡ್ ಕೂಪನ್ ಪಡೆಯುವುದು ಹೇಗೆ?

  161 ಗೆ ಡಯಲ್ ಮಾಡಿ ನಂತರ 4 ನ್ನು ಒತ್ತಿ ನಂತರ ನಿಮ್ಮ 12 ಆಧಾರ್ ನಂಬರ್ ಒತ್ತಿರಿ. ಕೂಡಲೇ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತದೆ ಅದನ್ನ ನಿಮ್ಮ ರೇಷನ್ ಅಂಗಡಿ ತೋರಿಸಿ ರೇಷನ್ಪಡೆದುಕೊಳ್ಳಬಹುದು

  ಸೂಚನೆ:

  ನಿಮ್ಮ ಮೊಬೈಲ್ ನಂ ನಿಮ್ಮ ಆಧಾರ್ ನಂಬರ್‌ಗೆ ಲಿಂಕ್ ಆಗಿರಬೇಕು ಲಿಂಕ್ ಹಾಗಿದ್ದಲ್ಲಿ ಮಾತ್ರ ಮೊಬೈಲ್ ಮೂಲಕ ಕೂಪನ್ ಪಡೆಯಲು ಸಾಧ್ಯ , ಇಲ್ಲವಾದಲ್ಲಿ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಸಂಪರ್ಕಿಸಿ

  ಆನ್‌ಲೈನ್‌ನಲ್ಲಿ ಸರ್ಕಾರಿ ದರದಲ್ಲಿ(250ರೂ.) ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು!!

  ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಎಂದರೆ ಸುಲಭದಲ್ಲ. ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿ ತಿಂಗಳುಗಟ್ಟಲೆ ಕಾಯಬೇಕು ಎಂದು ಎಲ್ಲರ ಭಾವನೆ. ಆದರೆ, ಸರಿಯಾದ ಮಾರ್ಗದಲ್ಲಿ ಡಿಎಲ್‌ ಮಾಡಿಸುವುದು ಬಹಳ ಸುಲಭ ಮತ್ತು ಕಡಿಮೆ ಬೆಲೆಯ ಕೆಲಸ ಎನ್ನಬಹುದು.

  ಹಾಗಾಗಿ, ಆನ್‌ಲೈನ್‌ನಲ್ಲಿಯೇ ಡಿಎಲ್‌ಗೆ ಅಪ್ಲಿಕೇಶನ್ ತುಂಬಿ ಸರ್ಕಾರಿ ದರದಲ್ಲಿ(250ರೂ.) ಹೇಗೆ ಡಿಎಲ್ ಮಾಡಿಸುವುದು ಎಂಬುದನ್ನು ನಾವು ಪೂರ್ಣ ಡೀಟೆಲ್ಸ್ ಮೂಲಕ ತಿಳಿಸಿಕೊಡುತ್ತೇವೆ. ಎಲ್ಲಾ ಅಂಶಗಳನ್ನು ತಿಳಿದು ದಲ್ಲಾಳಿಗಳಿಂದ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಿರಿ.!!

  ನಮೂನೆ -2 (CMVR-2): ಅರ್ಜಿ ತುಂಬಿರಿ.

  https://sarathi.nic.in ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್ ಮಾಡಿ ನಂತರ ತೆರೆಯುವ ಆನ್‌ಲೈನ್‌ ಅಪ್ಲಿಕೇಶನ್ ತುಂಬಿರಿ. ಎಲ್ಲಾ ಸರಿಯಾದೆ ಮಾಹಿತಿಗಳನ್ನು ತುಂಬಿದ ನಂತರ ಸಬ್‌ಮಿಟ್ ಕೊಡಿ. ನಂತರ ನಿಮ್ಮ ಅರ್ಜಿ ಕ್ರಿಯೇಟ್ ಆಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿ, ನಿಮ್ಮ ಸಹಿಯನ್ನು ಹಾಕಿರಿ. ನಂತರ ಮುಂದೆ ಏನು ಮಾಡಬೇಕು? ಹೇಗೆ ಡಿಎಲ್‌ ಪಡೆಯುವುದು ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

  #1.ಸಲ್ಲಿಸಬೇಕಾಗಿರುವ ಅರ್ಜಿ ಮತ್ತು ದಾಖಲೆಗಳು


  ನಮೂನೆ -2 (CMVR-2): ಆನ್ ಲೈನ್ ಅರ್ಜಿ ತುಂಬಿದ ನಂತರ ಮುದ್ರಿತ ಪ್ರತಿಯನ್ನು (Print out) ತೆಗೆದುಕೊಳ್ಳಬೇಕು.
  ವಯಸ್ಸಿನ ಪುರಾವೆ
  ವಿಳಾಸ ಪುರಾವೆ
  ಪಾಸ್ ಪೋರ್ಟ್ ಅಳತೆಯ 3 ಭಾವಚಿತ್ರಗಳು
  ನಿಗದಿತ ಶುಲ್ಕ ರೂ.30/- (Rule 32 of CMV Rules 1989). ಈ ಶುಲ್ಕವನ್ನು ಸಂಬಂಧಿಸಿದ ಆರ್.ಟಿ.ಒ. ಕಛೇರಿಯ ನಗದು ಕೌಂಟರ್ನಲ್ಲಿ ಪಾವತಿ ಮಾಡಬೇಕು.
  ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.

  ವಯೋ ಮಿತಿ

  ಸಾರಿಗೇತರ ವಾಹನಗಳು ಅಂದರೆ ಗೇರ್ ಮತ್ತು ಗೇರ್ ಇಲ್ಲದೆ ಇರುವ ವಾಹನಗಳು, ಲಘು ಮೋಟಾರು ವಾಹನಗಳು ಮತ್ತು ಇತರ ನಿರ್ದಿಷ್ಟ ವಾಹನಗಳ ಡಿಎಲ್‌ ಪಡೆಯಲು 18 ವರ್ಷ ತುಂಬಿದ ಮತ್ತು ಮೇಲ್ಪಟ್ಟ ಅರ್ಜಿದಾರರು ಅರ್ಹರಾಗಿರುತ್ತಾರೆ.

  #3 ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ ಇತರ ಅವಶ್ಯಕ ಮಾಹಿತಿ.


  ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆಯಲು ಕನಿಷ್ಠ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. (CMVR -8).

  ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು

  ಬೆಂಗಳೂರು ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಅರ್ಜಿದಾರರು ಆಯಾ ಜಿಲ್ಲೆಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು / ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.ಪರಿಶೀಲನೆಗಾಗಿ ಅರ್ಜಿ ಮತ್ತು ಮೂಲ ದಾಖಲೆಗಳೊಂದಿಗೆ ಅರ್ಜಿದಾರರು ಚಾಲನಾ ಅನುಜ್ಞಾ ಪ್ರಾಧಿಕಾರದ ಮುಂದೆ ಖುದ್ದಾಗಿ ಹಾಜರಾಗಬೇಕು.

  #3 ಪ್ರಾಥಮಿಕ ಪರೀಕ್ಷೆ


  ಈಗಾಗಲೇ ಕಲಿಕಾ ಚಾಲನಾ ಅನುಜ್ಞಾ ಪತ್ರ / ಚಾಲನಾ ಅನುಜ್ಞಾ ಪತ್ರ ಹೊಂದಿರುವವರಿಗೆ ಪ್ರಾಥಮಿಕ ಪರೀಕ್ಷೆಯಿಂದ(ಲಿಖಿತ / ಮೌಖಿಕ) ವಿನಾಯಿತಿ ನೀಡಲಾಗಿದೆ. ಇದು ಇತರ ಹೊಸ ವರ್ಗ ವಾಹನಗಳಿಗೆ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸುತ್ತದೆ.

  ಪ್ರಾಧಮಿಕ ಪರೀಕ್ಷೆಯ ವಿಷಯಗಳು:

  ಸಂಚಾರಿ ಚಿನ್ನೆಗಳು ಮತ್ತು ಸಿಗ್ನಲ್ ಗಳು, ಮೋಟಾರು ವಾಹನ ಕಾಯ್ದೆ 1989ರ ಅಧಿನಿಯಮ 118ರಲ್ಲಿ ನಮೂದಿಸಿರುವ ಸಂಚಾರಿ ನಿಯಂತ್ರಣ ನಿಯಮಗಳೂ
  ವಾಹನವನ್ನು ಅಪಘಾತಕ್ಕೆ ಈಡಾಗಿದಾಗ ಅದರಿಂದ ಸಂಭವಿಸುವ ಪ್ರಾಣಾಪಾಯ ಹಾಗೂ ಗಾಯಗೊಳ್ಳುವಿಕೆ ಅಥವಾ ರಸ್ತೆಅಪಘಾತದ ಸಮಯದಲ್ಲಿ ವಾಹನ ಚಾಲಕ ನಿರ್ವಹಿಸಬೇಕಾದ ಕರ್ತವ್ಯಗಳು.
  ಮಾನವ ರಹಿತ ರೈಲ್ವೇ ಕ್ರಾಸಿಂಗ್ ಗಳಲ್ಲಿ ವಾಹನ ಚಲಿಸುವಾಗ ಚಾಲಕರು ಕೈಗೊಳ್ಳಬೇಕಾದ ಪೂರ್ವ ಜಾಗರುಕತೆ ಬಗ್ಗೆ.
  ವಾಹನ ಚಾಲನೆ ಸಮಯದಲ್ಲಿ ವಾಹನದಲ್ಲಿ ಕಡ್ಡಾಯವಾಗಿ ಇಡಬೇಕಾಗಿರುವ ದಾಖಲೆಗಳ ಬಗ್ಗೆ.

  #4 ತೇರ್ಗಡೆಯಾದ ನಂತರ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಎಲ್ಲಿ ಪಡೆಯಬೇಕು?


  ತೇರ್ಗಡೆಯಾದ ಅರ್ಜಿದಾರರು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು 7 ದಿನಗಳೊಳಗಾಗಿ ಕಛೇರಿಯಲ್ಲಿ ಪಡೆಯಬಹುದು. ವಿತರಣೆ ವೇಳೆ ಸಂಜೆ 4.30 ರಿಂದ 5.30ರ ಒಳಗೆ.

  ಪರೀಕ್ಷೆಯಲ್ಲಿ ಅನುರ್ತ್ತೀಣರಾದರೆ ಏನು ಮಾಡಬೇಕು?

  ಪರೀಕ್ಷೆಯಲ್ಲಿ ಅನುರ್ತ್ತೀಣರಾದ ಅಭ್ಯರ್ಥಿಗಳಿಗೆ ಅರ್ಜಿಯನ್ನು ಹಿಂದಿರುಗಿಸಲಾಗುವುದು.
  ನಂತರ ಅರ್ಜಿದಾರರು ಕಛೇರಿ ಕೆಲಸ ವೇಳೆಯಲ್ಲಿ ಪರೀಕ್ಷೆಗೆ ಮರುದಿನ ಹಾಜರಾಗಬಹುದು.

  #5 ಕಲಿಕಾ ಚಾಲನಾ ಪತ್ರದ ಅವಧಿ

  ಕಲಿಕಾ ಚಾಲನಾ ಪತ್ರದ ಅವಧಿ 6 ತಿಂಗಳು ಮಾತ್ರ ಇರುತ್ತದೆ ಮತ್ತು ಇದನ್ನು ಮುಂದಿನ ಅವಧಿಗೆ ನವೀಕರಲು ಆಗುವುದಿಲ್ಲ ಹಾಗೂ ಹೊಸದಾಗಿ ಪಡೆಯಬೇಕು. ಇದು ಭಾರತದ್ಯಾದಂತ ಸಿಂಧುತ್ವವನ್ನು ಹೊಂದಿರುತ್ತದೆ. ಈ ಎಲ್ಲಾ ಮಾಹಿತಿಗಳನ್ನು ಶೇರ್ ಮಾಡಿ. ಬೇರೆಯವರಿಗೂ ಸಹಾಯವಾಗುವಂತೆ ಮಾಡಿ.

  ಓದಿರಿ:ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!!

  ಓದಿರಿ: ವೂಟರ್ ಐಡಿಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಸುವುದು ಹೇಗೆ? ಮನೆಗೆ ಡೆಲಿವರಿ ಪಡೆಯಿರಿ!!

  ಮೊಬೈಲ್ ಆಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ 7 ಹಂತಗಳು!!

  ಮೊಬೈಲ್ ಮೂಲಕವೇ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡುವ ಹೊಸ ಸೇವೆ ಆರಂಭವಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಸಲ್ಲಿಕೆಯಾದ ಪಾಸ್‌ಪೋರ್ಟ್ ಅರ್ಜಿಯನ್ನು ಟ್ರೇಸ್ ಮಾಡುವುದು ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲು ಎಂ ಪಾಸ್‌ಪೋರ್ಟ್ ಸೇವಾ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ತಿಂಗಳ ಆರಂಭದಿಂದಲೇ ಪ್ಲೇ ಸ್ಟೋರ್‌ನಲ್ಲಿ ಈ ಆಪ್ ಲಭ್ಯವಾಗುತ್ತಿದೆ.

  ದೇಶದಲ್ಲಿ ಎಲ್ಲೇ ನೆಲಸಿದ್ದರೂ ಸಹ ಮೊಬೈಲ್‌ ಆಪ್‌ ಮೂಲಕವೇ ತಮ್ಮ ಮೂಲ ನಿವಾಸದ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಈ ಮೊಬೈಲ್ ಆಪ್ ಸಹಾಯ ಮಾಡಲಿದೆ. ನೀವು ಏನಾದರೂ ಹಾಸನದವರಾಗಿದ್ದು ಮುಂಬೈನಲ್ಲಿ ನೆಲೆಸಿದ್ದರೆ ಈ ಆಪ್ ಮೂಲಕ ಬೆಂಗಳೂರಿನಲ್ಲಿರುವ ಪಾಸ್‌ಪೋರ್ಟ್ ಕಚೇರಿಗೆ ಅರ್ಜಿ ಸಲ್ಲಿಸಬಹುದು.!

  ಇದಕ್ಕಿಂತಲೂ ಮುಖ್ಯವಾಗಿ ಈ ಆಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ, ಪೊಲೀಸ್ ವೆರಿಫಿಕೇಷನ್ ಸಹ ಹಾಸನದಲ್ಲಿಯೇ ನಡೆಯಲಿದೆ ಮತ್ತು ಪಾಸ್‌ಪೋರ್ಟ್ ಅನ್ನು ಸಹ ಅಂಚೆ ಮೂಲಕ ಅರ್ಜಿದಾರರು ನೀಡಿದ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಹಾಗಾದರೆ, ಆಪ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಹಂತಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

  'ಎಂಪಾಸ್‌ಪೋರ್ಟ್ ಸೇವಾ' (Mpassportseva)!!

  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇದೇ ಮಂಗಳವಾರ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕಾಗಿ 'ಎಂಪಾಸ್‌ಪೋರ್ಟ್ ಸೇವಾ' ಎಂಬ ಮೊಬೈಲ್ ಆಪ್‌ಗೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ 'ಎಂಪಾಸ್‌ಪೋರ್ಟ್ ಸೇವಾ' (Mpassportseva) ಆಪ್‌ ಸಹಾಯದಿಂದ ಮೊಬೈಲ್‌ನಲ್ಲಿಯೇ ಪಾಸ್‌ಪೋರ್ಟ್ ಪಡೆಯಬಹುದಾಗಿದೆ.

  ಹೇಗಿದೆ ಮೊಬೈಲ್ ಆಪ್?

  'ಎಂಪಾಸ್‌ಪೋರ್ಟ್ ಸೇವಾ' (Mpassportseva) ಆಪ್‌ ಅನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡರೆ, ಈ ಆಪ್‌ಗೆ ನೀವು ರಿಜಿಸ್ಟರ್ ಆಗುವುದಕ್ಕೆ ಕೇಳಿಕೊಳ್ಳುತ್ತದೆ. ಒಮ್ಮೆ ನೀವು ಪಾಸ್‌ಪೋರ್ಟ್ ಕಚೇರಿ, ಹೆಸರು, ಹುಟ್ಟಿದ ದಿನ, ಇಮೇಲ್‌ ವಿಳಾಸಗಳನ್ನು ನೀಡಿ ನಿಮ್ಮ ಗುರುತನ್ನು ದಾಖಲಿಸಿ ಯುಸರ್‌ನೇಮ್ ಮತ್ತು ಪಾಸ್‌ವರ್ಡ್ ಅನ್ನು ಪಡೆದುಕೊಳ್ಳಬಹುದು

  ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ!

  'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ನಲ್ಲಿ ನೀವು ಲಾಗಿನ್ ಆದ ನಂತರ ನೀವು ನೇರವಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಯೂಸರ್ ಅಪ್ಲಿಕೇಷನ್ ಆಯ್ಕೆಯನ್ನು ತೆರೆದು, ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರ ಎಂಬ ಮಾಹಿತಿಯನ್ನು ತುಂಬಿ ಮುಂದುವರೆಯಬಹುದಾಗಿದೆ.

  ಯಾವ ರೀತಿಯ ಪಾಸ್‌ಪೋರ್ಟ್?

  ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಾ ಎಂಬ ಆಯ್ಕೆಯ ಕೆಳಗೆ ಮತ್ತೆರಡು ಆಯ್ಕೆಗಳನ್ನು ನೀಡಲಾಗಿದೆ. ಸಾಮಾನ್ಯ ಅಥವಾ ತತ್ಕಾಲ್ ಪಾಸ್‌ಪೋರ್ಟ್ ಬೇಕೆ ಮತ್ತು ಎಷ್ಟು ಪೇಜ್ ಹೊಂದಿರುವ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎಂಬ ಮಾಹಿತಿಯನ್ನು ಕೇಳುತ್ತದೆ.

  ಪಾಸ್‌ಪೋರ್ಟ್ ಪಡೆಯುವಿಕೆ!

  ಮೇಲೆ ತಿಳಿಸಿದ ಮಾಹಿತಿಗಳನ್ನು ಅರ್ಜಿಯಲ್ಲಿ ತುಂಬಿದ ನಂತರ ಅರ್ಜಿದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬಲು ಅನುಮತಿ ನೀಡಲಾಗುತ್ತದೆ. ನಿಮ್ಮ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಹಾಗೂ ಮೊಬೈಲ್‌ ಆಪ್‌ನಲ್ಲಿ ಕೇಳಿರುವ ನಿಮ್ಮ ಎಲ್ಲಾ ಗುರುತು ವಿಳಾಸಗಳನ್ನು ತುಂಬಿ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಬಹುದು.

  ಅರ್ಜಿ ಟ್ರ್ಯಾಕ್ ಮಾಡಬಹುದು!

  'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ ಮೂಲಕ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ಪಾಸ್‌ಪೋರ್ಟ್ ಕಚೇರಿಯಿಂದ ನಿಮ್ಮ ಅರ್ಜಿ ವಿಲೇವಾರಿ ಬಗ್ಗೆ ನೀವು ಟ್ರ್ಯಾಕ್ ಮಾಡಬಹುದು, ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಯಶಸ್ವಿ ವೆರಿಫಿಕೇಷನ್ ಆಗಿದೆಯಾ? ಡೆಲಿವರಿ ಯಾವಾಗ ಎಂಬ ಮಾಹಿತಿಗಳನ್ನು ನೀವು ಪಡೆಯಬಹುದು.!

  ಇತರೆ ಏನೆಲ್ಲಾ ಸೇವೆಗಳು ಲಭ್ಯ?

  'ಎಂಪಾಸ್‌ಪೋರ್ಟ್ ಸೇವಾ' ಮೊಬೈಲ್ ಆಪ್‌ನಲ್ಲಿ ಮೇಲೆ ತಿಳಿಸಿದ ಎಲ್ಲಾ ಸೇವೆಗಳ ಜೊತೆಯಲ್ಲಿ ಡಾಕ್ಯುಮೆಂಟ್ ಅಡ್ವೈಸರ್, ಲೊಕೇಟ್ ಸೆಂಟರ್, ಸಂಪರ್ಕ ಪಡೆಯಬಹುದಾದ ಹಲವು ಸೇವೆಗಳನ್ನು ನೀಡಲಾಗಿದೆ. ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಮಾದರಿಗಳಲ್ಲಿಯೇ ಈ 'ಎಂಪಾಸ್‌ಪೋರ್ಟ್ ಸೇವಾ' ಆಪ್ ಲಭ್ಯವಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Department of Food, Civil Supplies and Consumer Affairs started the process for registration of ration card through mobile.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more