ಆಂಡ್ರಾಯ್ಡ್ ಓರಿಯೋದಲ್ಲಿ ಒಂದೇ ಸಂದರ್ಭದಲ್ಲಿ ಎರಡು ಆಪ್ ಬಳಸುವುದು ಹೇಗೆ..?
ಆಂಡ್ರಾಯ್ಡ್ ಸಾಧನಗಳ ಫೀಚರ್ಗಳ ಪೈಕಿ ಅತ್ಯಾಕರ್ಷಕವಾದ ಫೀಚರ್ ಎಂದರೆ ಅದು ಸ್ಪ್ಲಿಟ್ ಸ್ಕ್ರೀನ್ ಮೋಡ್. ಪ್ರತಿಯೊಬ್ಬ ಆಂಡ್ರಾಯ್ಡ್ ಬಳಕೆದಾರರೂ ಕೂಡ ಒಂದು ಸ್ಕ್ರೀನ್ ನಲ್ಲಿ ಒಟ್ಟಿಗೆ ಎರಡು ಆಪ್ ಗಳನ್ನು ಬಳಸುವ ಫೀಚರ್ ಕುರಿತು ಕನಸು ಕಂಡಿರುತ್ತಾರೆ. ಈ ಮೂಲಕ ಪದೇ ಪದೇ ಒಂದು ಆಪ್ ನಿಂದ ಇನ್ನೊಂದು ಆಪ್ ಗೆ ಹೋಗುವುದನ್ನು ತಪ್ಪಿಸಬಹುದು ಎನ್ನುವ ಇರಾದೆ ಅವರದ್ದು. ಗೂಗಲ್ ನ ಆಂಡ್ರಾಯ್ಡ್ ಓರಿಯೋ ಆಪ್ಡೇಟ್ ಮೂಲಕ ಈ ಕನಸು ನನಸಾಗಿದ್ದು ಈ ಫೀಚರ್ ನಿಧಾನವಾಗಿ ಪ್ರತಿಯೊಬ್ಬರ ಆಂಡ್ರಾಯ್ಡ್ ಸಾಧನಕ್ಕೆ ಲಗ್ಗೆಯಿಡುತ್ತಿದೆ.

ಈ ಫೀಚರ್ ತುಂಬ ಉಪಯುಕ್ತವಾದುದಾದರೂ ಇನ್ನೂ ಸಂಪೂರ್ಣವಾಗಿ ಪಕ್ವತೆಯನ್ನು ಪಡೆದಿಲ್ಲ. ಎಲ್ಲಾ ಆಪ್ಗಳು ಇನ್ನೂ ಈ ಸ್ಪ್ಲಿಟ್ ಸ್ಕ್ರೀನ್ ಮೋಡ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಪಡೆದಿರದ ಕಾರಣ ಈ ಫೀಚರ್ ನ ಸಂಪೂರ್ಣ ಬಳಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಫೀಚರ್ನಲ್ಲಿ ಏಕಕಾಲಕ್ಕೆ ಒಂದು ಆಪ್ ನ ಒಂದು ಪ್ರತಿಯನ್ನು ಮಾತ್ರ ಚಲಾಯಿಸಬಹುದಾಗಿದೆ.
ಓದಿರಿ: ಏರ್‌ಟೆಲ್-ಜಿಯೋಗೆ ಸೆಡ್ಡು: ಜೂನ್ 30ರವರೆಗೂ ಉಚಿತ ಸೇವೆ ನೀಡಿದ ವೊಡಾಫೋನ್..!
ನೀವು ಒಂದು ವೇಳೆ ಒಂದೇ ಆಪ್ ನ ಎರಡು ಪ್ರತಿಗಳನ್ನು ಏಕಕಾಲಕ್ಕೆ ಆಂಡ್ರಾಯ್ಡ್ ಓರಿಯೋ ದ ಸ್ಪ್ಲಿಟ್ ಸ್ಕ್ರೀನ್ ಮೂಲಕ ಎರಡು ವಿಭಿನ್ನ ಸ್ಕ್ರೀನ್ ಗಳಲ್ಲಿ ಚಲಾಯಿಸಬಯಸಿದರೆ ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ. ಇಲ್ಲಿ ನೀಡಿರುವ ಹಂತ ಹಂತವಾದ ಸೂಚನೆಗಳು ಒಂದೇ ಆಪ್ ಅನ್ನು ಎರಡು ಸ್ಕ್ರೀನ್ ಗಳಲ್ಲಿ ಚಲಾಯಿಸುವುದಕ್ಕೆ ಸಹಾಯಮಾಡುತ್ತದೆ.

ಹಂತ 1: ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ 'ಪ್ಯಾರಲಲ್ ವಿಂಡೋಸ್' ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿ
ಹಂತ 2: ಈ ಆಪ್ ಅನ್ನು ತೆರೆದಾಗ ಅದು ನಿಮ್ಮಿಂದ ಬಹಳಷ್ಟು ಅನುಮತಿಗಳನ್ನು ಕೇಳುತ್ತದೆ. ನೀವು ಆಪ್ ಗೆ ಅದು ಕೇಳುವ ಅನುಮತಿಗಳನ್ನೆಲ್ಲಾ ನೀಡಬೇಕು. ಆಪ್ ಅನ್ನು PiP ಮೋಡ್ ನಲ್ಲಿ ಬಳಸಲು ಅನುವು ಮಾಡುವಂತೆ ಕೇಳುವ ಚೆಕ್ ಬಾಕ್ಸ್ ಒಂದು ನಿಮ್ಮ ಮುಂದೆ ಬರುತ್ತದೆ. ಅದನ್ನು ಚೆಕ್ ಮಾಡಿ ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಮತ್ತೆ ಆಪ್ ಅನ್ನು ತೆರೆದಾಗ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಲಭ್ಯವಿರುವ ಎಲ್ಲಾ ಆಪ್ಗಳ ಪಟ್ಟಿ ಕಾಣಸಿಗುತ್ತದೆ. ನೀವು ಸ್ಪ್ಲಿಟ್ ಸ್ಕ್ರೀನ್ ಮೋಡ್ ನಲ್ಲಿ ಬಳಸಲು ಇಚ್ಛಿಸುವ ಆಪ್ಗಳನ್ನು ಆಯ್ಕೆ ಮಾಡಿ ಮತ್ತು ಲಭ್ಯವಿರುವ ಆಯ್ಕೆಗಳ ಮೂಲಕ ಆಪ್ ಅನ್ನು ಕ್ಲೋನ್ ಮಾಡಿ. ಈ ಕ್ಲೋನ್ ಪ್ರಕ್ರಿಯೆ ಒಂದೇ ಆಪ್ ನ ಎರಡು ಪ್ರತಿಗಳನ್ನು ಪ್ಯಾರಲಲ್ ವಿಂಡೋಸ್ ನಲ್ಲಿ ಸೇವ್ ಮಾಡುತ್ತದೆ.
ಹಂತ 4: ಈಗ ನೀವು ಕ್ಲೋನ್ ಸೃಷ್ಟಿಸಿರುವ ಯಾವುದೇ ಆಪ್ ಅನ್ನು ಸ್ಪ್ಲಿಟ್ ಸ್ಕ್ರೀನ್ ಮೋಡ್ ನಲ್ಲಿ ಚಲಾಯಿಸಿ ಮತ್ತು ಪರದೆಯ ಇನ್ನೊಂದು ವಿಂಡೋ ಗೆ ಪ್ಯಾರಲಲ್ ವಿಂಡೋ ಆಪ್ ಅನ್ನು ಆಯ್ಕೆ ಮಾಡಿ. ಈ ಆಪ್ ಅನ್ನು ತೆರೆದ ನಂತರ ನೀವು ಈ ಮೊದಲು ಸೃಷ್ಟಿಸಿದ ಆಪ್ ನ ಕ್ಲೋನ್ ಪ್ರತಿಯನ್ನು ಆಯ್ಕೆ ಮಾಡಿ.ಹೀಗೆ ಪರದೆಯ ಇನ್ನೊಂದು ವಿಂಡೋ ನಲ್ಲಿಯೂ ಇದೇ ಆಪ್ ಚಲಾಯಿಸಿ. ಈ ಮೂಲಕ ನೀವು ಏಕ ಕಾಲಕ್ಕೆ ಒಂದೇ ಆಪ್ ಅನ್ನು ಎರಡು ಪ್ರತ್ಯೇಕ ಪ್ಯಾನಲ್ಗಳಲ್ಲಿ ಚಲಾಯಿಸಬಲ್ಲಿರಿ.


Click it and Unblock the Notifications








