ಮೊಬೈಲ್ ಮೆಮೊರಿ ಸಾಲುತಿಲ್ಲವೇ?..ಎಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!!
ಈಗಾಗಲೇ ಹಲವರು ಕಡಿಮೆ RAM ಮತ್ತು ಮೆಮೊರಿ ಹೊಂದಿರುವ ಫೋನ್‌ಗಳನ್ನು ಖರೀದಿಸಿದ್ದಾರೆ. ಇನ್ನು ಹಲವರು ಹಳೆಯ ಫೋನ್‌ಗಳನ್ನೇ ಬಳಸುತ್ತಿದ್ದಾರೆ. ಹಾಗಾಗಿ, ಇವರಿಗೆ ಮೆಮೊರಿ ಕಡಿಮೆ ಇರುವ ಅನಗತ್ಯ ತೊಂದರೆ ಕಾಣಿಸಿಕೊಳ್ಳುತ್ತದೆ.!
ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವವರೆಲ್ಲರೂ ಕನಿಷ್ಠ 3 ಜಿಬಿ RAM ಹಾಗೂ 32 ಜಿಬಿ ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸಿದರೆ ಒಳ್ಳೆಯದು.! ಏಕೆಂದರೆ, ಉತ್ತಮ ಸ್ಪೆಸಿಫಿಕೇಶನ್ ಇರುವ ಈ ಫೋನುಗಳ ಬೆಲೆ 5000 ದಿಂದಲೇ ಶುರುವಾಗುತ್ತಿರುವುದರಿಂದ ಖರೀದಿಸಲು ಕಷ್ಟವಾಗುವುದಿಲ್ಲ ಎನ್ನಬಹುದು.!!
ಆದರೆ, ಈಗಾಗಲೇ ಹಲವರು ಕಡಿಮೆ RAM ಮತ್ತು ಮೆಮೊರಿ ಹೊಂದಿರುವ ಫೋನ್‌ಗಳನ್ನು ಖರೀದಿಸಿದ್ದಾರೆ. ಇನ್ನು ಹಲವರು ಹಳೆಯ ಫೋನ್‌ಗಳನ್ನೇ ಬಳಸುತ್ತಿದ್ದಾರೆ. ಹಾಗಾಗಿ, ಇವರಿಗೆ ಮೆಮೊರಿ ಕಡಿಮೆ ಇರುವ ಅನಗತ್ಯ ತೊಂದರೆ ಕಾಣಿಸಿಕೊಳ್ಳುತ್ತದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಫೋನ್‌ನಲ್ಲಿನ ಮೆಮೊರಿ ಸಾಕಾಗದಂತೆ ಹೇಗೆ ನೋಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.!!

ಅನಗತ್ಯ ಆಪ್‌ಗಳ ಕಿರಿಬೇಡ.!!
ನಿಮಗೆ ಉಪಯೋಗಕ್ಕಿಲ್ಲ ಎಂದು ಕಂಡುಬಂದ ಯಾವುದೇ ಆಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿಬಿಡಿ. ಏಕೆಂದರೆ ಇಂಟರ್ನಲ್ ಮೆಮೊರಿಯಲ್ಲಿ ಫೈಲುಗಳ ಸಂಖ್ಯೆ ಕಡಿಮೆಯಾದಷ್ಟೂ ಮೊಬೈಲ್ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.! ಹಾಗಾಗಿ, ಈಗಲೇ ಅಂತಹ ಆಪ್‌ಗಳನ್ನು ಹುಡುಕಿ ಡಿಲೀಟ್ ಮಾಡಿಬಿಡಿ.!!

RAM ಒತ್ತಡ ಕಡಿಮೆ ಮಾಡಿ.!!
ಒಂದು ವೇಳೆ ಆಪ್ ಡಿಲೀಟ್ ಮಾಡಲು ಇಷ್ಟವಿಲ್ಲದಿದ್ದರೆ, ಸೆಟ್ಟಿಂಗ್ಸ್‌ನಲ್ಲಿ ಆಫ್ಸ್ ಎಂಬಲ್ಲಿಗೆ ಹೋಗಿ, ನಿಮಗೆ ಬೇಡವೆಂದಾದ ಆಪ್ ಮೇಲೆ ಕ್ಲಿಕ್ ಮಾಡಿ, ಡಿಸೇಬಲ್ ಮಾಡಿಬಿಡಿ.ಇದು RAM ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.!! ನಿಮಗೆ ಬೇಕೆಂದಾಗ ಮತ್ತೆ ಆಪ್ ಎನೆಬಲ್ ಮಾಡಿ ಬಳಕೆ ಮಾಡಿ.!!

ಎಸ್‌ಡಿ ಕಾರ್ಡ್‌ಗೆ ಆಪ್!!
ಮೊಬೈಲ್ ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ 'ಆಪ್ಸ್' ಕ್ಲಿಕ್ ಮಾಡಿದರೆ , ನಿಮ್ಮ ಫೋನ್‌ನಲ್ಲಿರುವ ಎಲ್ಲ ಆಪ್‌ಗಳು ಗೋಚರಿಸುತ್ತವೆ. ಒಂದೊಂದನ್ನೇ ಕ್ಲಿಕ್ ಮಾಡಿ. ಹಳೆಯ ಫೋನುಗಳಲ್ಲಿ 'move to SD card' ಎಂಬ ಆಯ್ಕೆ ಮೂಲಕ ಆಪ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ವರ್ಗಾಯಿಸಿ. ಎಸ್‌ಡಿ ಕಾರ್ಡ್‌ಗೆ ಮೂವ್ ಆಗದ( ವಾಟ್ಸ್ಆಪ್) ಆಪ್‌ಗಳು ಸಹ ಇರುತ್ತದೆ.!!

ಕ್ಲೌಡ್ ಸ್ಟೋರೇಜ್ ಮರೆಯದಿರಿ!!
ಒನ್ ಡ್ರೈವ್, ಡ್ರಾಪ್‌ಬಾಕ್ಸ್ ಹೆಸರುಗಳನ್ನು ಕೇಳದಿದ್ದರೂ ಗೂಗಲ್ ಡ್ರೈವ್ ಬಗ್ಗೆ ಕೇಳಿರುತ್ತೀರಾ.! ಆನ್‌ಲೈನ್‌ನಲ್ಲಿ ವೀಡಿಯೋ, ಆಡಿಯೋ ಮುಂತಾದ ಫೈಲುಗಳನ್ನು ಶೇಖರಿಸುವ ಈ ವಿಧಾನ ಭವಿಷ್ಯದ ಮೆಮೊರಿ ಶೇಖರಣಾ ವಿಧಾನವಾಗಿದೆ. ಗೂಗಲ್ ಡ್ರೈವ್‌ನಲ್ಲಿ 15GB ಉಚಿತ ಕ್ಲೌಡ್ ಸ್ಟೋರೇಜ್ ಲಭ್ಯವಿದ್ದು, ಬೇಕಾದಾಗ ಇಂಟರ್ನೆಟ್ ಮೂಲಕ ಫೈಲ್‌ಗಳನ್ನು ವರ್ಗಾಯಿಸಿ.!!


ಒಟಿಜಿ ಸಹಾಯ ಪಡೆಯಿರಿ.!!
ಯುಎಸ್‌ಬಿ ಪೆನ್ ಡ್ರೈವ್‌ನಂತೆಯೇ, ಮೊಬೈಲ್ ಫೋನ್‌ನಿಂದ ಫೈಲುಗಳನ್ನು ಕಾಪಿ ಮಾಡಿಕೊಳ್ಳಲು ಅಥವಾ ಅದಕ್ಕೆ ಸೇರಿಸಲು ಅನುಕೂಲ ಮಾಡಿಕೊಡುವ ಒಟಿಜಿ ಡ್ರೈವ್ ತಂತ್ರಜ್ಞಾನವು ಈಗಿನ ಬಹುತೇಕ ಫೋನುಗಳಲ್ಲಿರುತ್ತವೆ. ಕಂಪ್ಯೂಟರಿನ ನೆರವಿಲ್ಲದೆ ಮೊಬೈಲ್ ಫೋನ್‌ನಿಂದ ಫೈಲುಗಳನ್ನು ಬೇರೊಂದು ಸಾಧನಕ್ಕೆ ವರ್ಗಾಯಿಸಲು ಇರುವ ವ್ಯವಸ್ಥೆಯನ್ನು ಬಳಸಿಕೊಳ್ಳಿ.
ಓದಿರಿ:ಜಿಯೋವಿನಿಂದ ಮತ್ತೆ ಹೊಸ ರೀಚಾರ್ಜ್ ಆಫರ್‌ಗಳು ಬಿಡುಗಡೆ!!..ಗ್ರಾಹಕರು ಫುಲ್ ಖುಷ್!!


Click it and Unblock the Notifications








