Home
ಟೆಕ್ ನೌಕರಿ

ವಾಟ್ಸ್ ಆಪ್ ನಲ್ಲಿ ಮುಖ್ಯವಾದ ಚಾಟ್ ಗಳನ್ನು ಹೀಗೆ ಸೇವ್ ಮಾಡಿಕೊಳ್ಳಿ

By Gizbot Bureau

ಅಂತರ್ಜಾಲ ಬಳಕೆಯ ಈ ಯುಗದಲ್ಲಿ ವಾಟ್ಸ್ ಆಪ್ ಮನೆಮನೆಯ ಮಾತಾಗಿದೆ. ಈ ಆಪ್ ನ್ನು ಬಳಕೆ ಮಾಡದೇ ಇರುವ ವ್ಯಕ್ತಿಗಳೇ ಕಡಿಮೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. 2010 ರಲ್ಲಿ ಬಿಡುಗಡೆಗೊಂಡ ಈ ಆಪ್ ಈ ದೇಶದಲ್ಲಿ ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಅದೇ ಕಾರಣಕ್ಕೆ ವಾಟ್ಸ್ ಆಪ್ ನ ಅತೀ ದೊಡ್ಡ ಮಾರುಕಟ್ಟೆಯಾಗಿ ವಿಶ್ವದಲ್ಲೇ ಭಾರತ ಗುರುತಿಸಿಕೊಂಡಿದೆ. ಜಾಗತಿಕವಾಗಿ ಈ ಮೆಸೇಜಿಂಗ್ ಆಪ್ ನ್ನು ಸುಮಾರು 1.5 ಬಿಲಿಯನ್ ಬಳಕೆದಾರರು ಬಳಸುತ್ತಿದ್ದಾರೆ.

ವಾಟ್ಸ್ ಆಪ್ ನಲ್ಲಿ ಮುಖ್ಯವಾದ ಚಾಟ್ ಗಳನ್ನು ಹೀಗೆ ಸೇವ್ ಮಾಡಿಕೊಳ್ಳಿ

ಈ ಆಪ್ ನಲ್ಲಿ ಹಲವಾರು ಫೀಚರ್ ಗಳಿದ್ದು ಅವು ಬಹಳ ಮುಖ್ಯವಾದ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಸುಲಭವಾಗಿಸಿದ್ದು ಜೀವನವನ್ನು ಸರಳಗೊಳಿಸುವಲ್ಲಿ ಸಹಕಾರಿಯಾಗಿದೆ. ಈ ಫೀಚರ್ ಗಳನ್ನು ಫೇಸ್ ಬುಕ್ ಇದನ್ನು ಪಡೆದ ನಂತರ ಬಿಡುಗಡೆಗೊಂಡಿರುವುದಾಗಿದೆ.

ಪಿನ್ನಿಂಗ್ ಚಾಟ್ಮ:

ಪಿನ್ನಿಂಗ್ ಚಾಟ್ಮ:

ಬಹಳ ಮುಖ್ಯವಾಗಿರುವ ಮೆಸೇಜ್ ನ್ನು ಬಳಕೆದಾರರು ಪಿನ್ ಮಾಡಿ ಇಟ್ಟುಕೊಳ್ಳಬಹುದು. ಒಂದು ವೇಳೆ ಆ ಮೆಸೇಜ್ ಇನ್ಯಾವತ್ತಾದರೂ ಅಗತ್ಯ ಬಿದ್ದಲ್ಲಿ ಆಗ ಅದನ್ನು ಸುಲಭದಲ್ಲಿ ಹುಡುಕಬಹುದು. ಇರುವ ಎಲ್ಲಾ ಮೆಸೇಜ್ ಗಳನ್ನು ಸ್ಕ್ರೋಲ್ ಡೌನ್ ಮಾಡುತ್ತಾ ಹುಡುಕಾಡುವ ಅಗತ್ಯ ಬೀಳುವುದಿಲ್ಲ.

ಹೇಗೆ ಮಾಡುವುದು?

ಹೇಗೆ ಮಾಡುವುದು?

> ವಾಟ್ಸ್ ಆಪ್ ಮೆಸೇಂಜರ್ ನ್ನು ತೆರೆಯಿರಿ

> ಲಿಸ್ಟ್ ನ ಟಾಪ್ ನಲ್ಲಿ ಪಿನ್ ಮಾಡಿ ಇಡಬೇಕು ಎಂದುಕೊಳ್ಳುವ ಮೆಸೇಜ್ ನ್ನು ಲಾಂಗ್ ಪ್ರೆಸ್ ಮಾಡಿ.

> ಮೇಲ್ಬಾಗದಲ್ಲಿ ನಾಲ್ಕು ಆಯ್ಕೆಗಳು ಇರುತ್ತದೆ- ಪಿನ್, ಡಿಲೀಟ್, ಮ್ಯೂಟ್, ಆರ್ಕೈವ್ ಮತ್ತು ಇತರೆ ನಾಲ್ಕು ಆಯ್ಕೆಗಳು ಡಾಟ್ ಸೈನ್ ನಲ್ಲಿ ಇರುತ್ತದೆ.

>ಸ್ಕ್ರೀನಿನ ಮೇಲ್ಬಾಗದಲ್ಲಿರುವ ಪಿನ್ ಐಕಾನ್ ನ್ನು ಟ್ಯಾಪ್ ಮಾಡಿ ಮತ್ತು ಎಲ್ಲಾ ಚಾಟ್ ಗಳ ಮೇಲ್ಬಾಗದಲ್ಲಿ ನೀವು ಆಯ್ಕೆ ಮಾಡಿರುವ ಚಾಟ್ ಇದೀಗ ಪಿನ್ ಆಗಿರುತ್ತದೆ.

ಆದರೆ, ಬಳಕೆದಾರರು ಕೇವಲ ಮೂರು ಚಾಟ್ ಗಳನ್ನು ಮಾತ್ರವೇ ಪಿನ್ ಮಾಡಿ ಇಡುವುದಕ್ಕೆ ಅವಕಾಶವಿರುತ್ತದೆ. ಈಗಾಗಲೇ ಪಿನ್ ಮಾಡಿರುವ ಚಾಟ್ ನ್ನು ಅನ್ ಪಿನ್ ಮಾಡುವುದಕ್ಕಾಗಿ ಚಾಟ್ ನ್ನು ಲಾಂಗ್ ಪ್ರೆಸ್ ಮಾಡಿ ಮತ್ತು ಡಿಸೇಬಲ್ ಪಿನ್ ಐಕಾನ್ ನ್ನು ಕ್ಲಿಕ್ಕಿಸಿ,

ಚಾಟ್ ನ್ನು ಸ್ಟಾರ್ ಮಾಡುವುದು:

ಚಾಟ್ ನ್ನು ಸ್ಟಾರ್ ಮಾಡುವುದು:

ಬಳಕೆದಾರರು ತುಂಬಾ ಮಹತ್ವದ ಚಾಟ್ ನ್ನು ಸ್ಟಾರ್ ಮಾಡಿ ಇಟ್ಟುಕೊಳ್ಳುವುದಕ್ಕೂ ಕೂಡ ಅವಕಾಶವಿರುತ್ತದೆ ಮತ್ತು ಯಾವುದೇ ಕಿರಿಕಿರಿಯಿಲ್ಲದೆ ಅಗತ್ಯವಾಗಿರುವ ಚಾಟ್ ನ್ನು ಹುಡುಕಾಡುವುದಕ್ಕೆ ಮುಂದಿನ ದಿನಗಳಲ್ಲಿ ಅನುಕೂಲಕರವಾಗಿರುತ್ತದೆ.

> ಇದನ್ನು ಸಾಧಿಸುವುದಕ್ಕಾಗಿ ನೀವು ಸ್ಟಾರ್ ಮಾಡಿಡಬೇಕು ಎಂದುಕೊಳ್ಳುವ ಚಾಟ್ ನ್ನು ತೆರೆಯಿರಿ

> ಮೆಸೇಜ್ ನ್ನು ಲಾಂಗ್ ಟ್ಯಾಪ್ ಮಾಡಿ.

>ಚಾಟ್ ಸ್ಕ್ರೀನಿನ ಮೇಲ್ಬಾಗದಲ್ಲಿ ಐದು ಐಕಾನ್ ಗಳು ಕಾಣಿಸುತ್ತದೆ- ಅದರಲ್ಲೊಂದು ಸ್ಟಾರ್ ಐಕಾನ್

> ಸ್ಟಾರ್ ಐಕಾನ್ ನ್ನು ಕ್ಲಿಕ್ಕಿಸಿ.

ಸ್ಟಾರ್ ಮಾಡಿರುವ ಮೆಸೇಜ್ ನ್ನು ಆಕ್ಸಿಸ್ ಮಾಡುವುದು ಹೇಗೆ?

> ವಾಟ್ಸ್ ಆಪ್ ನ್ನು ತೆರೆದ ನಂತರ ಸ್ಕ್ರೀನಿನ ಮೇಲ್ಬಾಗದ ಬಲ ಬದಿಯಲ್ಲಿರುವ ಮೂರು ಚುಕ್ಕಿಗಳ ಐಕಾನ್ ನ್ನು ಕ್ಲಿಕ್ಕಿಸಿ. ಅದರಲ್ಲಿರುವ ನಾಲ್ಕನೇ ಆಯ್ಕೆಯು ಸ್ಟಾರ್ ಮೆಸೇಜ್ ಆಗಿರುತ್ತದೆ.

> ಸ್ಟಾರ್ಡ್ ಮೆಸೇಜ್ ಗೆ ತೆರಳಿ ಮತ್ತು ನೀವು ನಿಮ್ಮ ಎಲ್ಲಾ ಸ್ಟಾರ್ ಮಾಡಲಾಗಿರುವ ಮೆಸೇಜ್ ನ್ನು ಗಮನಿಸುತ್ತೀರಿ. ಪಿನ್ ಮೆಸೇಜ್ ನಂತಲ್ಲ ಬದಲಾಗಿ ನೀವು ಎಷ್ಟು ಮೆಸೇಜ್ ಗಳನ್ನು ಬೇಕಿದ್ದರೂ ಸ್ಟಾರ್ ಮಾಡಿ ಇಟ್ಟುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಚಾಟ್ ನ್ನು ಇಮೇಲ್ ಮಾಡುವುದು:

ಯಾವುದೇ ಕಾರಣಕ್ಕಾಗಿ ಸಂಪೂರ್ಣ ವಾಟ್ಸ್ ಆಪ್ ಚಾಟ್ ನ್ನು ಬೇಕಿದ್ದರೆ ಇಮೇಲ್ ಮಾಡುವುದಕ್ಕೆ ಅವಕಾಶವಿರುತ್ತದೆ ಮತ್ತು ಒಂದೊಂದೇ ಮೆಸೇಜ್ ನ್ನು ಕಾಪಿ/ಪೇಸ್ಟ್ ಮಾಡಿ ಇಮೇಲ್ ಗೆ ಹಾಕಬೇಕಾದ ಅಗತ್ಯವೂ ಇಲ್ಲ.

ಮಾಡುವುದು ಹೇಗೆ?

> ನೀವು ಮೇಲ್ ಕಳಿಸಬೇಕಾಗಿರುವ ಚಾಟ್ ನ್ನು ತೆರೆಯಿರಿ.

> ಮೇಲ್ಬಾಗದ ಬಲ ಕಾರ್ನರ್ ನಲ್ಲಿರುವ ಮೂರು ಡಾಟ್ ಗಳ ಐಕಾನ್ ನ್ನು ತೆರೆಯಿರಿ.

> ಡ್ರಾಪ್ ಡೌನ್ ಮೆನುವಿನಲ್ಲಿರುವ ಕೊನೆಯ ಆಯ್ಕೆ "ಮೋರ್" ಗೆ ತೆರಳಿ

> ಮತ್ತೊಂದು ಡ್ರೌಪ್ ಡೌನ್ ಮೆನು ಕಾಣಿಸುತ್ತದೆ ಮತ್ತು ಅದರಲ್ಲಿ ‘Export Chat' ಆಯ್ಕೆ ಇರುತ್ತದೆ.

> ‘Export Chat ' ಗೆ ತೆರಳಿ

> ಚಾಟ್ ನ್ನು ಕಳುಹಿಸುವುದಕ್ಕೆ ಬೇರೆಬೇರೆ ಆಯ್ಕೆಗಳಿರುತ್ತದೆ ಇಮೇಲ್, ಬ್ಲೂಟೂತ್ ಮತ್ತು ಇತರೆ ಮೆಸೇಜಿಂಗ್ ಆಯ್ಕೆಗಳು ಮತ್ತು ನಿಮ್ಮ ಫೋನಿನಲ್ಲಿ ಹಂಚಿಕೊಳ್ಳಲು ಅವಕಾಶವಿರುವ ಇತರೆ ಆಪ್ಸ್ ಗಳು ಕೂಡ ಕಾಣಿಸುತ್ತದೆ.

> ನೀವು ಚಾಟ್ ನ್ನು ಮೇಲ್ ಮಾಡಬೇಕು ಅಂದುಕೊಂಡಿರುವ ಆಯ್ಕೆಯನ್ನು ಕ್ಲಿಕ್ಕಿಸಿ ಮತ್ತು ಸ್ವಯಂಚಾಲಿತವಾಗಿ ಚಾಟ್ ನ .txt ಫೈಲ್ ಇಮೇಲ್ ಆಗುತ್ತದೆ.

> ಇಮೇಲ್ ಅಡ್ರೆಸ್ ನ್ನು ಬರೆಯಿರಿ ಮತ್ತು ಸೆಂಡ್ ಕ್ಲಿಕ್ಕಿಸಿ.

Best Mobiles in India

English summary
How to save important messages, chats on WhatsApp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+