ವಾಟ್ಸ್ ಆಪ್ ಸ್ಕ್ಯಾಮ್-ಎಸ್ ಬಿಐ ಗ್ರಾಹಕರಿಗೆ ಎಚ್ಚರಿಕೆ

By Gizbot Bureau
|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಖಾತೆದಾರರಿಗೆ ದುರುದ್ದೇಶಪೂರಿತ ವಾಟ್ಸ್ ಆಪ್ ಮೆಸೇಜ್ ಗಳು ತಮ್ಮ ವಯಕ್ತಿಕ ಮಾಹಿತಿಗಳನ್ನು ಕೇಳುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಎಸ್ ಬಿಐ ತಿಳಿಸಿರುವಂತೆ ಕೆಲವು ಖಾತೆದಾರರು ವಾಟ್ಸ್ ಆಪ್ ನಲ್ಲಿ ಓಟಿಪಿ ನೀಡುವಂತೆ ಮೆಸೇಜ್ ನ್ನು ಪಡೆದಿದ್ದಾರೆ. ಹೊಸ ರೀತಿಯಲ್ಲಿ ನಡೆಯುತ್ತಿರುವ ವಾಟ್ಸ್ ಆಪ್ ಸ್ಕ್ಯಾಮ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಇಲ್ಲಿವೆ ನೋಡಿ.

ವಾಟ್ಸ್ ಆಪ್ ಸ್ಕ್ಯಾಮ್-ಎಸ್ ಬಿಐ ಗ್ರಾಹಕರಿಗೆ ಎಚ್ಚರಿಕೆ

ಮೊದಲು ಒಟಿಪಿ ಬಗ್ಗೆ ಜನರಿಗೆ ಮಾಹಿತಿ ನೀಡುವಂತಹ ಕೆಲಸವನ್ನು ಮಾಡಿ ಗ್ರಾಹಕರ ನಂಬಿಕೆಯನ್ನು ಗಿಟ್ಟಿಸಿಕೊಂಡು ರಿಯಲ್ ಓಟಿಪಿಯನ್ನು ಪಡೆದುಕೊಳ್ಳುವ ಹುನ್ನಾರವನ್ನು ಮಾಡುವ ಸ್ಕ್ಯಾಮ್ ಇದಾಗಿದೆ.

ಕೆಲವು ವಾಟ್ಸ್ ಆಪ್ ಮೆಸೇಜ್ ಗಳಲ್ಲಿ ಕೇವಲ ಒಂದು ಲಿಂಕ್ ಬರುತ್ತದೆ. ಅದನ್ನು ಕ್ಲಿಕ್ಕಿಸಿದಾಗ ದುರುದ್ದೇಶಪೂರಿತ ಆಪ್ ಸ್ಮಾರ್ಟ್ ಫೋನಿನ ಬ್ಯಾಕ್ ಗ್ರೌಂಡ್ ನಲ್ಲಿ ಇನ್ಸ್ಟಾಲ್ ಆಗುತ್ತದೆ.

ಫೋನ್ ನಿಂದ ಓಟಿಪಿಯನ್ನು ಕದಿಯುವುದಕ್ಕೆ ಈ ದುರುದ್ದೇಶಪೂರಿತ ಆಪ್ ಗಳು ಕೆಲಸ ಮಾಡುತ್ತದೆ. ಆದರೆ ಇದು ಸ್ಕ್ಯಾಮ್ ನ ಎರಡನೇ ಭಾಗವಾಗಿದೆ.

ಮೊದಲಿಗೆ ಮೋಸಗಾರರು ಬ್ಯಾಂಕ್ ಉದ್ಯೋಗಿಯಂತೆ ಕರೆ ಮಾಡಿ ನಿಮ್ಮಲ್ಲಿರುವ ಡೆಬಿಟ್/ಕ್ರೆಡಿಟ್ ಕಾರ್ಡ್ ನ್ನು ರಿನ್ಯೂ ಮಾಡಲು ಅಥವಾ ಅಪ್ ಗ್ರೇಡ್ ಮಾಡಲು ಕರೆ ಮಾಡಿರುವುದಾಗಿ ತಿಳಿಸುತ್ತಾರೆ.

ಮೋಸಗಾರರು ಮೊದಲು ನಿಮ್ಮ ಬಳಿ ಡೆಬಿಟ್/ಕ್ರೆಡಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್, ಎಕ್ಸ್ ಪೈರಿ ದಿನಾಂಕವನ್ನು ಮೊದಲು ಪಡೆದು ಅಪ್ ಗ್ರೇಡ್ ಮಾಡಿ ಹೊಸ ಕಾರ್ಡ್ ನೀಡುವುದಾಗಿ ತಿಳಿಸುತ್ತಾರೆ.

ಇದಾದ ನಂತರ ಮೋಸಗಾರರು ನೀವೊಂದು ಎಸ್ಎಂಎಸ್ ಅಥವಾ ವಾಟ್ಸ್ ಆಪ್ ಮೆಸೇಜ್ ರಿಸೀವ್ ಮಾಡುತ್ತೀರಿ ಎಂದು ತಿಳಿಸುತ್ತಾರೆ ಮತ್ತು ಕಾರ್ಡ್ ಅಪ್ ಗ್ರೇಡ್ ಮಾಡಲು ಇದನ್ನು ಕನ್ಪರ್ಮ್ ಮಾಡುವಂತೆ ತಿಳಿಸುತ್ತಾರೆ.

ನಂತರ ಸ್ಕ್ಯಾಮ್ ನ ಎರಡನೇ ಭಾಗ ಆರಂಭವಾಗುತ್ತದೆ. ಎಸ್ಎಂಎಸ್ ಅಥವಾ ವಾಟ್ಸ್ ಆಪ್ ಟೆಕ್ಸ್ಟ್ ನಲ್ಲಿ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ಕಿಸಿದರೆ ಕಾರ್ಡ್ ಅಪ್ ಗ್ರೇಡ್ ಖಾತ್ರಿಯಾಗುತ್ತದೆ ಎಂದು ಹೇಳಿ ಕ್ಲಿಕ್ಕಿಸಲು ತಿಳಿಸುತ್ತಾರೆ. ಆಗ ನಿಮ್ಮ ಫೋನ್ ಹ್ಯಾಕ್ ಆಗುತ್ತದೆ.

ಎಸ್ಎಂಎಸ್ ನಲ್ಲಿರುವ ಲಿಂಕ್ ಸರಳವಾಗಿ ನಿಮ್ಮ ಫೋನಿನಲ್ಲಿ ಮಾಲ್ವೇರ್ ಗಳನ್ನು ಇನ್ಸ್ಟಾಲ್ ಮಾಡುತ್ತದೆ ಮತ್ತು ಓಟಿಪಿಯನ್ನು ನಿಮ್ಮ ಫೋನಿನಿಂದ ಕದಿಯಲು ನೆರವು ನೀಡುತ್ತದೆ.

ಈಗಾಗಲೇ ಕಾರ್ಡ್ ವಿವರಗಳು( ಕಾರ್ಡ್ ನಂಬರ್, ಸಿವಿವಿ, ಎಕ್ಸ್ ಪೈರಿ ಡೇಟ್) ಗಳನ್ನು ತಿಳಿದಿರುವುದರಿಂದಾಗಿ ಸುಲಭವಾಗಿ ಅನಧಿಕೃತ ವಹಿವಾಟನ್ನು ನಿಮ್ಮ ಖಾತೆಯಲ್ಲಿ ನಿರ್ವಹಿಸುತ್ತಾರೆ.

ಟ್ರಾನ್ಸ್ಟ್ಯಾಕ್ಷನ್ನಿನ ಅಧಿಕೃತತೆಗಾಗಿ, ಒಮ್ಮೆ ಒಟಿಪಿಯು ವ್ಯಕ್ತಿಯ ಫೋನಿಗೆ ತಲುಪುವ ಬದಲಾಗಿ ಮಾಲ್ವೇರ್ ಗಳ ಸಹಾಯದಿಂದ ಮೋಸಗಾರರ ಫೋನಿಗೆ ತಲುಪುತ್ತದೆ.

ಒಮ್ಮೆ ಮೋಸಗಾರರಿಗೆ ಓಟಿಪಿ ಸಿಕ್ಕಿದಾಗ ಟ್ರಾನ್ಸ್ಯಾಕ್ಷನ್ ನಡೆಸುವುದು ಸುಲಭವಾಗುತ್ತದೆ.

ರೀಫಂಡ್ ಗಾಗಿ ಒಂದು ವೇಳೆ 3 ದಿನದ ಕೆಲಸದ ಅವಧಿಯಲ್ಲಿ ನೀಲು ದೂರು ನೀಡದರೆ ಸಾಧ್ಯವಾಗುತ್ತದೆ.

ದೂರು ನೀಡುವುದಕ್ಕಾಗಿ ನೀವು 1-800-111109 ಗೆ ಕರೆ ಮಾಡಿ ಮತ್ತು ಬ್ಯಾಂಕ್ ನಲ್ಲಿ ಅಧಿಕೃತವಾಗಿ ಮೋಸವಾಗಿರುವುದರ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ.

“Problem” ಎಂದು ಟೈಪ್ ಮಾಡಿ ನೀವು ಎಸ್ಎಂಎಸ್ ನ್ನು ಕೂಡ ಕಳುಹಿಸಬಹುದು ಮತ್ತು ಅದನ್ನು 9212500888 ಕ್ಕೆ ಸೆಂಡ್ ಮಾಡಿ ಮತ್ತು ಟ್ವೀಟರ್ ನಲ್ಲಿ @SBICard_Connect ನಲ್ಲೂ ತಿಳಿಸಬಹುದು.

SBI ತಿಳಿಸುವ ಪ್ರಕಾರ ಒಂದು ವೇಳೆ ಎಸ್ ಬಿಐ ನ ಯಾವುದೇ ಸಮಸ್ಯೆಯಿಂದಾಗಿ ಮೋಸ ನಡೆದಿದ್ದಲ್ಲಿ ಗ್ರಾಹಕರು ದೂರು ನೀಡದೇ ಇದ್ದರೂ ಕೂಡ ಗ್ರಾಹಕರಿಗೆ ಸಂಪೂರ್ಣ ಪರಿಹಾರವನ್ನು ನೀಡಲಾಗುತ್ತದೆ.

ಒಂದು ವೇಳೆ ಆತ/ಆಕೆಯ ಉದಾಸೀನತೆಯ ಕಾರಣದಿಂದ ಅಂದರೆ ಆತ/ಆಕೆ ತನ್ನ ವಯಕ್ತಿಕ ಬ್ಯಾಂಕಿಂಗ್ ವಿವರಗಳನ್ನು ಖುದ್ದಾಗಿ ನೀಡಿದ್ದಲ್ಲಿ ಮರುಪಾವತಿ ಸಾಧ್ಯವಾಗುವುದಿಲ್ಲ.

Best Mobiles in India

Read more about:
English summary
State Bank of India (SBI) is warning users about this WhatsApp scam

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X