ಮೊಬೈಲ್ ಮಳೆಗೆ ಒದ್ದೆಯಾದ್ರೆ ಏನು ಮಾಡುವುದು ?
ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ನಮ್ಮ ಕೈ ತಪ್ಪಿ ಮೊಬೈಲ್ ನೀರಿಗೆ ಬಿದ್ದು ಒದ್ದೆಯಾಗುತ್ತದೆ. ಒದ್ದೆಯಾಯಿತು ಅಂದ ಮಾತ್ರಕ್ಕೆ ಮೊಬೈಲ್ ಹಾಳಾಯಿತು ಎಂದು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಮೊಬೈಲ್ ಒಳಗೆ ಸೇರಿರುವ ನೀರನ್ನು ತೆಗೆಯಬಹುದು. ಮನೆಯಿಲ್ಲಿರುವ ಅಕ್ಕಿಯಿಂದಲೇ ನೀರನ್ನು ತೆಗೆಯಬಹುದು.! ಹೇಗೆ ತಗೆಯಬಹುದು ಎಂಬುಕ್ಕೆ ಈ ಕೆಳಗೆ ಮಾಹಿತಿ ನೀಡಲಾಗಿದೆ. ಒಂದೊಮ್ಮೆ ಈ ರೀತಿ ಸಮಸ್ಯೆ ಆದಲ್ಲಿ ಈ ಟಿಪ್ಸ್ ಅನುಸರಿಸಿ.

ಹೀಗೆ ಮಾಡಿ :
- ಮೊದಲಿಗೆ ನಿಮ್ಮ ಮೊಬೈಲ್ ಫೊನ್ ಅನ್ನು ಸ್ವಿಚ್ ಆಫ್ ಮಾಡಿ. ಸ್ವಿಚ್ ಆಫ್ ಮಾಡಿದ ನಂತರ ಬ್ಯಾಟರಿ, ಸಿಮ್ ಕಾರ್ಡ್ ಹಾಗು ಮೆಮೊರಿ ಕಾರ್ಡ್ ತೆಗೆಯಿರಿ. ನಿಮ್ಮ ಬಳಿ ಟಿಶ್ಶು ಪೇಪರ್ ಇದ್ದಲ್ಲಿ ಮೊಬೈಲ್‌ನ ಮೇಲ್ಭಾಗದಲ್ಲಿ ಕಾಣಿಸುತ್ತಿರುವ ನೀರನ್ನು ಒರಿಸಿ.
- ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ತುಂಬಿಕೊಳ್ಳಿ. ನಂತರ ಬಟ್ಟಲಿನಲ್ಲಿ ನಿಮ್ಮ ಬ್ಯಾಟರಿ, ಸಿಮ್ ಹಾಗೂ ಮೊಬೈಲ್ ಫೋನ್ ಇಡಿ.
- ಫೋನ್‌ನ್ನು ಇಡುವಾಗ ಅಕ್ಕಿಯಿಂದ ಸ್ವಲ್ಪ ಹೊರಭಾಗದಲ್ಲಿಡಿ. ನಿಮ್ಮ ಬಟ್ಟಲ್ಲನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿಡಿ ಇದರಿಂದ ನಿಮ್ಮ ಫೋನ್ ಹಾಳಾಗುವುದನ್ನು ತಡೆಯಬಹುದಾಗಿದೆ.
- ಅಕ್ಕಿಯು ಬಿಸಿಯಾದಂತೆ ನಿಮ್ಮ ಮೊಬೈಲ್ ಹಾಗೂ ಒಳಗೆ ತುಂಬಿರುವ ನೀರು ಒಣಗಿಹೋಗುತ್ತದೆ.
ಸ್ವಲ್ಪ ಸಮಯ ಬಿಸಿಲಿನಲ್ಲಿ ಇಟ್ಟ ಬಳಿಕ ಮೊಬೈಲ್ ಹೊರತೆಗೆದು ಸೂಕ್ಷ್ಮವಾಗಿ ಗಮನಿಸಿ ಮೊಬೈಲ್‌ನ ಆಡಿಯೋ ಫೋರ್ಟ್ ಹಾಗೂ ಜ್ಯಾಕ್‌ನಲ್ಲಿ ಅಕ್ಕಿಯ ಕಾಳು ಸೇರಿರುವ ಸಾಧ್ಯತೆ ಇರುತ್ತದೆ. - ಫೋರ್ಟ್ ಹಾಗೂ ಜ್ಯಾಕ್ ಪರಿಶೀಲಿಸಿದ ಬಳಿಕ ಸಿಂ ಕಾರ್ಡ್ ಹಾಗೂ ಬ್ಯಾಟರಿ ಹಾಕಿ ಮೊಬೈಲ್ ಸ್ವಿಚ್ ಆನ್ ಮಾಡಿ. ನಿಮ್ಮ ಮೊಬೈಲ್ ಮೊದಲಿನಂತೆ ಕೆಲಸ ಮಾಡಲು ಆರಂಭಿಸುತ್ತದೆ.
ಇದನ್ನೂ ಓದಿ : ಜನ ಫೇಸ್‌ಬುಕ್ ತೊರೆಯಲು ಕಾರಣವೇನು ?
Comments
Best Mobiles in India


Click it and Unblock the Notifications