ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

By Ashwath
|

ಫೇಸ್‌ಬುಕ್‌ ಈಗ ನಂಬರ್‌ ಒನ್‌ ಸೋಷಿಯಲ್‌ ನೆಟ್‌ವರ್ಕ್ ತಾಣವಾಗಿದೆ. ವಿಶ್ವದ ಒಂಬತ್ತು ಜನರಲ್ಲಿ ಒಬ್ಬರು ಫೇಸ್‌ಬುಕ್‌ ಅಕೌಂಟ್‌ ಹೊಂದಿದ್ದಾರೆ. ಯಾವುದೋ ಊರಿನ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ಸಂದಿಸಬಹುದಾದ ಫೇಸ್‌ಬುಕ್‌ ಈಗ ಬಹಳಷ್ಟು ಜನರಿಗೆ ಕಿರಿಕಿರಿಯಾಗುತ್ತಿದೆಯಂತೆ. ಹೀಗಾಗಿ ಈ ಫೇಸ್‌ಬುಕ್‌ ಸಹವಾಸ ಬೇಡವೇ ಬೇಡ ಎಂದು ಹೇಳಿ ಗುಡ್‌ಬೈ ಹೇಳುವವರ ಸಂಖ್ಯೆ ಒಂದು ಕಡೆಯಿಂದ ಹೆಚ್ಚಾಗುತ್ತಿದೆಯಂತೆ.

ಬಹಳಷ್ಟು ಜನರಿಗೆ ಇಷ್ಟವಾಗಿರುವ ಫೇಸ್‌ಬುಕ್‌ನ್ನು ಈ ವ್ಯಕ್ತಿಗಳು ಬಿಡಲು ಏನು ಕಾರಣ ಎಂದು ನೀವು ಕೇಳಬಹುದು. ಅದಕ್ಕಾಗಿ ಅವರು ನೀಡಿರುವ ಕಾರಣಗಳ ಪಟ್ಟಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಫೇಸ್‌ಬುಕ್ ಸಂಸ್ಥಾಪಕನಿಗೆ ಮತ್ತೊಂದು ಪಟ್ಟ

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಪೋಸ್ಟ್‌ಗಳಿಗೆ ಮಿತಿಯಿಲ್ಲ, ಫ್ರೆಂಡ್ಸ್‌ ಲಿಸ್ಟ್‌ನಲ್ಲಿರುವವರು ಯಾರೇ ಲೈಕ್‌ ಮಾಡಿದ್ರು ಅದು ನಮ್ಮ ವಾಲ್‌ ಪೋಸ್ಟ್‌ನಲ್ಲಿ ಬರುತ್ತದೆ. ಇದು ಕೆಲವು ಮಂದಿಗೆ ಕಿರಿಕಿರಿಯಾಗುತ್ತಿದೆ.

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಫೇಸ್‌ಬುಕ್‌ನಲ್ಲಿ ಗಾಸಿಪ್‌ ಸುದ್ದಿ ಹರಡುವುದು ಬೇಗ. ಹೀಗಾಗಿ ಬಹಳ ಬೇಗ ಸುಳ್ಳು ಸುದ್ದಿ ಹರಡುತ್ತಿದೆ. ಈ ಕಾರಣ ಹೇಳಿ ಬಿಡುವವರು ಇದ್ದಾರೆ.

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಅನಗತ್ಯವಾಗಿ ಯಾವುದೋ ಅಶ್ಲೀಲ ಫೋಟೋ ವೀಡಿಯೋಗಳನ್ನು ಕೆಲವುರು ಟ್ಯಾಗ್‌ ಮಾಡುತ್ತಿದ್ದು, ಬಹಳಷ್ಟು ಜನರಿಗೆ ಮುಜುಗರವಾಗುತ್ತಿದೆ.

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ವಿಶೇಷವಾಗಿ ಇಂದು ಮಕ್ಕಳು ಫೇಸ್‌ಬುಕ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಈ ಫೇಸ್‌ಬುಕ್‌ ಹುಚ್ಚು ಹಿಡಿಯದಂತೆ ಮಕ್ಕಳ ಫೋಷಕರು ಫೇಸ್‌ಬುಕ್‌ ತೊರೆಯುತ್ತಿದ್ದಾರೆ.

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಕೆಲವೊಮ್ಮೆ ಯಾರೊದ್ದೋ ಹೆಸರಿನಲ್ಲಿ ಫೇಕ್‌ ಅಕೌಂಟ್‌ ಕ್ರಿಯೆಟ್‌ ಮಾಡಿ ಸ್ನೇಹಿತರನ್ನೇ ಮೋಸ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಮೋಸದಿಂದ ಬೇಸತ್ತು ಕೆಲವರು ಫೇಸ್‌ಬುಕ್‌ನ್ನು ಬಿಡುತ್ತಿದ್ದಾರೆ.

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಕೆಲವು ಫ್ರೆಂಡ್ಸ್‌ಗಳು ಬೇರೊಬ್ಬ ಸ್ನೇಹಿತರ ಅವಮಾನ ಪಡಿಸಲೆಂದೇ ಅವನ/ಅವಳ ಕೆಟ್ಟ ಫೋಟೋ ತೆಗೆದು ಅವರಿಗೆ ಆ ಫೋಟೋವನ್ನು ಟ್ಯಾಗ್‌ ಮಾಡಿದಕ್ಕೆ ಬೇಸರವಾಗಿ ಬಿಡುವವರು ಇದ್ದಾರೆ.

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಬಹಳಷ್ಟು ಮಂದಿಗೆ ಇದು ಪಬ್ಲಿಸಿಟಿ ಹುಚ್ಚು ಹೆಚ್ಚಾಗಿ ಸಂಬಂಧವಿಲ್ಲದ ವಿಷಯಗಳಿಗೆ ಕಮೆಂಟ್ ಹಾಕಿ ಫ್ರೆಂಡ್ಸ್‌ಗಳೊಂದಿಗೆ ಜಗಳ ಮಾಡಿ ಫೇಸ್‌ಬುಕ್‌ ಅಕೌಂಟ್‌ನ್ನು ಕ್ಲೋಸ್‌ ಮಾಡುವವರು ಇದ್ದಾರೆ.

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಜನ ಫೇಸ್‌ಬುಕ್‌ ತೊರೆಯಲು ಕಾರಣವೇನು ?

ಬಹಳಷ್ಟು ಮಂದಿ ನೀಡುವ ಕಾರಣ ಟೈಮ್‌ ವೇಸ್ಟ್. ಗೊತ್ತಿರುವ, ಗೊತ್ತಿಲ್ಲದವರ ಫೋಟೋ ಪೋಸ್ಟ್‌ಗಳನ್ನೇ ನೋಡಿ ನಮಗೆ ಏನು ಆಗಬೇಕಿಲ್ಲ. ಇದರಿಂದಾಗಿ ನಮ್ಮ ಅಮೂಲ್ಯ ಸಮಯ ಹಾಳು ಎಂದು ಹೇಳಿ ಬಿಡುವವರು ಇದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X