Home
ಟೆಕ್ ನೌಕರಿ

ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ, ವೆಬ್‌ಸೈಟ್'ಗಳಲ್ಲಿ ಮಾಹಿತಿ ಬ್ರೌಸ್ ಹೇಗೆ?

ನೀವು ಓದಲು ಬಯಸುವ ವೆಬ್‌ಪೇಜ್‌ ಅನ್ನು ಪೂರ್ಣವಾಗಿ ಡೌನ್‌ಲೋಡ್ ಮಾಡಿ, ನಂತರ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದಾಗಲು ಮಾಹಿತಿ ಬ್ರೌಸ್‌ ಮಾಡಬಹುದು. ಹೇಗೆ ಎಂದು ಮುಂದೆ ಓದಿ ತಿಳಿಯಿರಿ.

By Suneel

ಶೀಘ್ರವಾಗಿ ಒಂದು ಮಾಹಿತಿಯನ್ನು ಇಂಟರ್ನೆಟ್‌ನಿಂದ ಬ್ರೌಸ್‌ ಮಾಡಬೇಕು. ಆದರೆ ಇಂಟರ್ನೆಟ್ ಸರ್ವೀಸ್‌ ಸಮಸ್ಯೆಯಿಂದ ಅಥವಾ ಇಂಟರ್ನೆಟ್ ಆಕ್ಸೆಸ್ ಸಮಸ್ಯೆಯಿಂದ ಮಾಹಿತಿ ಬ್ರೌಸ್ ಮಾಡಲು ಆಗುವುದಿಲ್ಲ. ಹಾಗಿದ್ರೆ ಅಂತಹ ಸಮಯದಲ್ಲಿ ಮಾಹಿತಿ ಪಡೆಯೋದಾದ್ರು ಹೇಗೆ? ನಾವು ಈ ಪ್ರಶ್ನೆಗೆ ಸುಲಭವಾದ ಟ್ರಿಕ್ಸ್ ಒಂದನ್ನು ಪರಿಚಯಿಸುತ್ತಿದ್ದೇವೆ.

ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ, ವೆಬ್‌ಸೈಟ್'ಗಳಲ್ಲಿ ಮಾಹಿತಿ ಬ್ರೌಸ್ ಹೇಗೆ?

ಖಾತೆ ಇಲ್ಲದಿದ್ದರೂ, ಲ್ಯಾಪ್‌ಟಾಪ್/ಪಿಸಿಗಳಲ್ಲಿ 'ಸ್ಕೈಪಿ' ಬಳಕೆ ಹೇಗೆ?

ಹಲವು ಸೈಟ್‌ಗಳನ್ನು ಬ್ರೌಸ್‌ ಮಾಡುವ ವೇಳೆ ಅತಿ ವೇಗದ ಇಂಟರ್ನೆಟ್ ಅತ್ಯಾವಶ್ಯಕ. ಆದರೆ ಇಂದಿಗೂ ಸಹ ಭಾರತದಲ್ಲಿ 3G ನೆಟ್‌ವರ್ಕ್‌ ಸಹ ಸರಿಯಾಗಿ ವರ್ಕ್‌ ಆಗದ ಪರಿಸ್ಥಿತಿ ಇದೆ. ಆದರೆ ನಾವಿಂದು ಇಂಟರ್ನೆಟ್ ಆಕ್ಸೆಸ್ ಇಲ್ಲದಿದ್ದರೂ ಸ್ಮಾರ್ಟ್‌ಫೋನ್‌ ಬಳಕೆದಾರರು ಮಾಹಿತಿ ಬ್ರೌಸ್ ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ವಿಶೇಷ ಅಂದ್ರೆ ಕೇವಲ ಒಂದು ಆಂಡ್ರಾಯ್ಡ್ ಅಪ್ಲಿಕೇಶನ್‌ ಸಹಾಯದಿಂದ ಇಂಟರ್ನೆಟ್ ಇಲ್ಲದಿದ್ದರೂ ಮಾಹಿತಿಗಾಗಿ ವೆಬ್‌ಸೈಟ್ ಆಕ್ಸೆಸ್ ಮಾಡಬಹುದು.

ನೀವು ಓದಲು ಬಯಸುವ ವೆಬ್‌ಪೇಜ್‌ ಅನ್ನು ಪೂರ್ಣವಾಗಿ ಡೌನ್‌ಲೋಡ್ ಮಾಡಿ, ನಂತರ ಇಂಟರ್ನೆಟ್(Internet) ಸಂಪರ್ಕ ಇಲ್ಲದಿದ್ದಾಗಲು ಮಾಹಿತಿ ಬ್ರೌಸ್‌ ಮಾಡಬಹುದು. ಹೇಗೆ ಎಂದು ಮುಂದೆ ಓದಿ ತಿಳಿಯಿರಿ.

ಆನ್‌ಲೈನ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಕ್ಲಿಕ್ ಮಾಡಿ

 'ಆಫ್‌ಲೈನ್‌ ಬ್ರೌಸರ್' ಆಪ್‌ ಡೌನ್‌ಲೋಡ್ ಮಾಡಿ

'ಆಫ್‌ಲೈನ್‌ ಬ್ರೌಸರ್' ಆಪ್‌ ಡೌನ್‌ಲೋಡ್ ಮಾಡಿ

ಮೊದಲಿಗೆ ನಿಮ್ಮ ಆಂಡ್ರಾಯ್ಡ್'ಗೆ 'ಆಫ್‌ಲೈನ್‌ ಬ್ರೌಸರ್' ಆಪ್‌ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಬೇಕು.

ಆಪ್‌ ಓಪನ್ ಮಾಡಿ

ಆಪ್‌ ಓಪನ್ ಮಾಡಿ

ಆಪ್‌ ಇನ್‌ಸ್ಟಾಲ್‌ ಆದ ನಂತರ, ಆಪ್‌ ಓಪನ್ ಮಾಡಿ, ನಂತರ ಈ ಮೇಲೆ ಕಾಣುವಂತಹ ಸ್ಕ್ರೀನ್ ಪ್ರದರ್ಶನವಾಗುತ್ತದೆ. ಸ್ಕ್ರೀನ್‌ನಲ್ಲಿ "+" ಐಕಾನ್ ಮೇಲೆ ಲಿಂಕ್ ಆಡ್ ಮಾಡಲು ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಹಿತಿಯ ವೆಬ್‌ಪೇಜ್‌ ಲಿಂಕ್‌ ಎಂಟರ್ ಮಾಡಿ

ಮಾಹಿತಿಯ ವೆಬ್‌ಪೇಜ್‌ ಲಿಂಕ್‌ ಎಂಟರ್ ಮಾಡಿ

ನಂತರ ಓಪನ್‌ ಆಗುವ ಪೇಜ್‌ನಲ್ಲಿ ಡೌನ್‌ಲೋಡ್‌ ಮಾಡಬೇಕಾದ ಮಾಹಿತಿಯ ವೆಬ್‌ಪೇಜ್‌ ಲಿಂಕ್‌ ಅನ್ನು ಎಂಟರ್ ಮಾಡಿ ಮತ್ತು ಟೈಟಲ್ ಹೆಸರು ನೀಡಿ. ನಂತರ ಡೌನ್‌ಲೋಡ್‌ ಬಟನ್‌ ಮೇಲೆ ಕ್ಲಿಕ್ ಮಾಡಿ.

ಡೌನ್‌ಲೋಡ್

ಡೌನ್‌ಲೋಡ್

ಬ್ರೌಸರ್ ಮಾಹಿತಿಯನ್ನು ಆಫ್‌ಲೈನ್‌'ನಲ್ಲಿ ನೀಡಲು ಡೌನ್‌ಲೋಡ್ ಆಗುವವರೆಗೂ ಕಾಯಿರಿ.

ಇಂಟರ್ನೆಟ್ ಬೇಕಿಲ್ಲ

ಇಂಟರ್ನೆಟ್ ಬೇಕಿಲ್ಲ

ಮಾಹಿತಿ ಹೊಂದಿದ ವೆಬ್‌ಪೇಜ್‌ ಡೌನ್‌ಲೋಡ್ ಆದ ನಂತರ, ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಮಾಹಿತಿ ಓದಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How To Access Websites Without Internet Connection On Android. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+