ಖಾತೆ ಇಲ್ಲದಿದ್ದರೂ, ಲ್ಯಾಪ್‌ಟಾಪ್/ಪಿಸಿಗಳಲ್ಲಿ 'ಸ್ಕೈಪಿ' ಬಳಕೆ ಹೇಗೆ?

By Suneel
|

ಸ್ಕೈಪಿ, ಅತಿ ಹೆಚ್ಚು ಜನರು ವೀಡಿಯೊ ಕರೆ ಸಂವಹನಕ್ಕಾಗಿ ಬಳಸುತ್ತಿರುವ ಸೇವೆ ಆಗಿದೆ. ಇತ್ತೀಚೆಗೆ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಸ್ಕೈಪಿ ವೇದಿಕೆಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಅವುಗಳಲ್ಲಿ, ಬಳಕೆದಾರರು ತಮ್ಮ ಖಾತೆ ಹೊಂದಿಲ್ಲದಿದ್ದರೂ ಸಹ ಇತರರೊಂದಿಗೆ ಚಾಟ್‌ ಮಾಡಬಹುದು.

ಖಾತೆ ಇಲ್ಲದಿದ್ದರೂ, ಲ್ಯಾಪ್‌ಟಾಪ್/ಪಿಸಿಗಳಲ್ಲಿ 'ಸ್ಕೈಪಿ' ಬಳಕೆ ಹೇಗೆ?

ಈ ಫೀಚರ್ ಕೇವಲ 'Skype For Web'ನಲ್ಲಿ ಮಾತ್ರ ಲಭ್ಯವಿದೆ. ಏನಾಪ್ಪಾ ಈ ಫೀಚರ್ ಅಂತಿರಾ? ಈ ಫೀಚರ್ ಸ್ಕೈಪಿ ಬಳಕೆದಾರರಿಗೆ ಗೆಸ್ಟ್ ಚಾಟ್‌ರೂಮ್ ಕ್ರಿಯೇಟ್ ಮಾಡಲು ಅವಕಾಶ ನೀಡುತ್ತದೆ ಮತ್ತು ಇತರರನ್ನು ಲಿಂಕ್ ಮೂಲಕ ಆಹ್ವಾನ ನೀಡುತ್ತದೆ. ಆಹ್ವಾನ ಲಿಂಕ್ ಸ್ವೀಕರಿಸಿದ ಬಳಕೆದಾರರು ಲಿಂಕ್ ಕ್ಲಿಕ್ ಮಾಡಿ ಮತ್ತು ಹೆಸರನ್ನು ಎಂಟರ್ ಮಾಡಬೇಕು.

ಸ್ಕೈಪಿ ಆಪ್‌ ಇನ್ನು ಮುಂದೆ ಫೋನ್‌ನಲ್ಲಿ ಸಪೋರ್ಟ್ ಮಾಡುವುದಿಲ್ಲವಂತೆ!

ಅಂದಹಾಗೆ ಈ ಗೆಸ್ಟ್‌ ಸಂಭಾ‍ಷಣೆ ಲಿಂಕ್ 24 ಗಂಟೆಗಳ ಒಳಗಾಗಿ ಕೊನೆಗೊಳ್ಳುತ್ತದೆ ಮತ್ತು ಒಂದು ಗೆಸ್ಟ್‌ ಸಂಭಾಷಣೆ ಲಿಂಕ್'ಗೆ 300 ಜನರನ್ನು ಸೇರಿಸಬಹುದು. ಖಾತೆ ಇಲ್ಲದೇ ಲ್ಯಾಪ್‌ಟಾಪ್‌ ಮತ್ತು ಪಿಸಿಗಳಲ್ಲಿ ಸ್ಕೈಪಿ ಬಳಕೆ ಹೇಗೆ ಎಂದು ಮುಂದೆ ಓದಿ ತಿಳಿಯಿರಿ.

'ಸ್ಕೈಪಿ ಫಾರ್ ವೆಬ್' ಓಪನ್‌ ಮಾಡಿ

'ಸ್ಕೈಪಿ ಫಾರ್ ವೆಬ್' ಓಪನ್‌ ಮಾಡಿ

ಗೆಸ್ಟ್‌ ಲಿಂಕ್‌ ಪಡೆಯಬಹುದಾದ ಮತ್ತು ಚಾಟ್‌ ರೂಮ್ ಕ್ರಿಯೇಟ್ ಮಾಡಬಹುದಾದ 'ಸ್ಕೈಪಿ ಫಾರ್ ವೆಬ್' ವೆಬ್‌ಸೈಟ್‌ ಅನ್ನು ಓಪನ್ ಮಾಡಿ. ಅಥವಾ ವೆಬ್‌ಪೇಜ್‌ಗೆ ಹೋದಲು ಇಲ್ಲಿ ಕ್ಲಿಕ್ ಮಾಡಿ.

 'Start a Conversation' ಎಂಬಲ್ಲಿ ಕ್ಲಿಕ್ ಮಾಡಿ

'Start a Conversation' ಎಂಬಲ್ಲಿ ಕ್ಲಿಕ್ ಮಾಡಿ

ಯುಆರ್‌ಎಲ್ ಓಪನ್‌ ಮಾಡಿದ ನಂತರ, ಎರಡು ಆಪ್ಶನ್‌ಗಳನ್ನು ನೋಡಬಹುದು. 'Start a Conversation' ಮತ್ತು 'Download Skype'. ಆಪ್ಶನ್‌ಗಳು ಇರುತ್ತವೆ. ಅವುಗಳಲ್ಲಿ 'Start a Conversation' ಆಪ್ಶನ್ ಆಯ್ಕೆ ಮಾಡಿ ಇತರೆ ಪ್ರಕ್ರಿಯೆ ಮುಂದುವರೆಸಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಸರನ್ನು ಎಂಟರ್ ಮಾಡಿ

ಹೆಸರನ್ನು ಎಂಟರ್ ಮಾಡಿ

ನಂತರದಲ್ಲಿ ಹೆಸರನ್ನು ಎಂಟರ್ ಮಾಡಲು ಕೇಳಲಾಗುತ್ತದೆ. ಹೆಸರನ್ನು ಎಂಟರ್ ಮಾಡಿ, ಕೆಳಗಿನ ''Start a Conversation' ಕ್ಲಿಕ್ ಮಾಡಿ. ನಂತರ ವೆಬ್‌ಸೈಟ್ ಸಂಪೂರ್ಣ ಲೋಡ್ ಆಗುವವರೆಗೆ ಕಾಯಿರಿ.

ನಿಮ್ಮ ಆಹ್ವಾನ ಲಿಂಕ್ ಅನ್ನು ಕಾಪಿ ಮಾಡಿ ಶೇರ್‌ ಮಾಡಿ

ನಿಮ್ಮ ಆಹ್ವಾನ ಲಿಂಕ್ ಅನ್ನು ಕಾಪಿ ಮಾಡಿ ಶೇರ್‌ ಮಾಡಿ

ಮೇಲಿನ ಪ್ರಕ್ರಿಯೆಯಿಂದ ನಿಮ್ಮ ಅನನ್ಯ ಚಾಟ್‌ರೂಮ್‌ ಲಿಂಕ್ ಜೆನೆರೇಟ್ ಆಗುತ್ತದೆ. ಆ ಲಿಂಕ್‌ ಅನ್ನು ನಂತರ ನೀವು ನಿಮ್ಮ ಸ್ನೇಹಿತರಿಗೆ, ಕುಟುಂಬ ಸದಸ್ಯರಿಗೆ ಸ್ಕೈಪಿ ಸಂಭಾಷಣೆಗೆ ಸೇರಲು ಆಹ್ವಾನ ಕಳುಹಿಸಬಹುದು. ಅವರು ಸಹ ಲಿಂಕ್ ಕ್ಲಿಕ್ ಮಾಡಿ, ಹೆಸರು ಎಂಟರ್ ಮಾಡಿ, ಸಂಭಾಷಣೆಗೆ ಸೇರಬಹುದು.

300 ಸದಸ್ಯರನ್ನು ಗೆಸ್ಟ್‌ ಚಾಟ್‌ರೂಮ್‌ಗೆ ಸೇರಿಸಬಹುದು

300 ಸದಸ್ಯರನ್ನು ಗೆಸ್ಟ್‌ ಚಾಟ್‌ರೂಮ್‌ಗೆ ಸೇರಿಸಬಹುದು

'ಸ್ಕೈಪಿ ಫಾರ್ ವೆಬ್'ನಲ್ಲಿ ಸಂಭಾಷಣೆಗೆ 300 ಜನರನ್ನು ಸೇರಿಸಬಹುದು. 300 ಜನರನ್ನು ಸೇರಿಸಿದ ನಂತರ ಸಂಭಾಷಣೆ ಲಿಂಕ್ ವರ್ಕ್‌ ಆಗುವುದಿಲ್ಲ. ಅಲ್ಲದೇ ಕ್ರಿಯೇಟ್ ಮಾಡಿದ ಗೆಸ್ಟ್ ಚಾಟ್‌ರೂಮ್ 34 ಗಂಟೆಗಳವರೆಗೆ ವ್ಯಾಲಿಡ್ ಆಗಿರುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How to Use Skype Without an Account in Your PC/Laptop! To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X