ಈ ಸರಳ ವಿಧಾನಗಳಲ್ಲಿ ಜಿಪಿಆರ್‌ಎಸ್ ಸಕ್ರಿಯಗೊಳಿಸಿ

By Shwetha
|

ಜಿಪಿಆರ್‌ಎಸ್ (ಗ್ಲೋಬಲ್ ಪ್ಯಾಕೆಟ್ ರೇಡಿಯೊ ಸರ್ವೀಸ್) ಎಂಬುದು ಪ್ಯಾಕೆಟ್ ಆಧಾರಿತ ಡೇಟಾ ವರ್ಗಾವಣೆ ಸೇವೆಯಾಗಿದ್ದು, ಸೆಲ್ಯುಲರ್ ಫೋನ್‌ಗಳು ಮತ್ತು ಮೊಬೈಲ್ ಇಂಟರ್ನೆಟ್ ಡಿವೈಸ್‌ಗಳಲ್ಲಿ ವೈರ್‌ಲೆಸ್ ಸೇವೆಗಾಗಿ ಬಳಸಲಾಗುತ್ತದೆ. ಡೇಟಾ ಫೈಲ್‌ಗಳು ಎಲ್ಲಿಯಾದರೂ ಮುರಿದು ಹೋದಲ್ಲಿ ವಿವಿಧ ಇಂಟರ್ನೆಟ್ ಚಾನಲ್‌ಗಳ ಮೂಲಕ ಅದನ್ನು ರೂಟ್ ಮಾಡಿ ಅವುಗಳು ನಿಖರವಾದ ಸ್ಥಾನವನ್ನು ತಲುಪಿದೊಡನೆ ಪೂರ್ಣ ಡೇಟಾ ಫೈಲ್ ಅನ್ನು ರಚಿಸಲು ಅವುಗಳನ್ನು ಜೊತೆಯಾಗಿ ಇರಿಸಲಾಗುತ್ತದೆ.

ಇದನ್ನೂ ಓದಿ: 2015 ಕ್ಕೆ ಧೂಳೆಬ್ಬಿಸಲಿರುವ ಆಪಲ್ ಉತ್ಪನ್ನಗಳು

ಜಿಪಿಆರ್‌ಎಸ್ ಜೊತೆಗೆ, ಮೊಬೈಲ್ ಸಂವಹನ ಸೇವೆಗಳೊಂದಿಗೆ ಡೇಟಾ ಟ್ರಾನ್ಸ್‌ಫರ್ ಹೆಚ್ಚು ವೇಗದಲ್ಲಿರುತ್ತದೆ. ಮತ್ತು ಜಿಪಿಆರ್‌ಎಸ್ ಅನ್ನು ಬಳಸುತ್ತಿರುವವರು ಯಾವುದೇ ತೊಂದರೆಯಿಲ್ಲದ ಇಂಟರ್ನೆಟ್ ಸಂಪರ್ಕಗಳನ್ನು ತಮ್ಮ ಮೊಬೈಲ್ ಡಿವೈಸ್‌ಗಳಲ್ಲಿ ಹೊಂದಿರುತ್ತಾರೆ.

ಜಿಪಿಆರ್ಎಸ್ ಎಮ್‌ಪಿ 3 ಡೌನ್‌ಲೋಡ್‌ಗಳು, ವೀಡಿಯೊಗಳು, ಗೇಮ್‌ಗಳು, ವಾಲ್‌ಪೇಪರ್‌ಗಳನ್ನು ಸಕ್ರಿಯಗೊಳಿಸುತ್ತವೆ. ಹಾಗಿದ್ದರೆ ಇಷ್ಟೆಲ್ಲಾ ಸೇವೆಗಳನ್ನು ಒದಗಿಸುವ ಜಿಪಿಆರ್‌ಎಸ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ.

#1

#1

ಜಿಪಿಆರ್ಎಸ್‌ಗಾಗಿ ಅಗತ್ಯವಿರುವ ಸಿಮ್ ಕಾರ್ಡ್‌ನೊಂದಿಗೆ ನೀವು ಫೋನ್ ಅನ್ನು ಹೊಂದಿರುವಿರಿ ಎಂಬುದನ್ನು ಅರಿತುಕೊಳ್ಳಿ
ಜಿಪಿಆರ್ಎಸ್ ಸೇವೆಗಳಿಗಾಗಿ ಪ್ರೊಗ್ರಾಮ್ ಮಾಡದಿರುವ ಜಿಪಿಆರ್ಎಸ್ ಅನ್ನು ನಿಮ್ಮ ಫೋನ್‌ನಲ್ಲಿ ನೀವು ಸಕ್ರಿಯಗೊಳಿಸಲಾರಿರಿ. ನೀವು ಸರಿಯಾದ ಫೋನ್ ಅಥವಾ ಸಿಮ್ ಕಾರ್ಡ್ ಅನ್ನು ಹೊಂದಿಲ್ಲದಿದ್ದಲ್ಲಿ ಸರಿಯಾದುದನ್ನು ನೀವು ಖರೀದಿಸಬೇಕು.

#2

#2

ಜಿಪಿಆರ್ಎಸ್ ಸಂಯೋಜನೆಗೊಂಡಿರುವ ಮೊಬೈಲ್ ಸರ್ವಿಸ್ ಪ್ರೊವೈಡರ್ ಪ್ಲೇನ್ ಅನ್ನು ಹಾಕಿಸಿಕೊಳ್ಳಿ
200 ದೇಶಗಳಲ್ಲಿ ಜಿಪಿಆರ್ಎಸ್ ಲಭ್ಯವಿದ್ದು ಜಿಪಿಆರ್ಎಸ್ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವ ಮೊಬೈಲ್ ಸೇವೆಗಾಗಿ ಖರೀದಿ ಮಾಡಿ.

#3

#3

ನಿಮ್ಮ ಸೇವೆ ಒದಗಿಸುವವರನ್ನು ಸಂಪರ್ಕಿಸಿ ಮತ್ತು ಸೂಚನೆಗಳಿಗಾಗಿ ಕೇಳಿ
ನಿಮ್ಮ ಫೋನ್‌ನಲ್ಲಿ ಜಿಪಿಆರ್ಎಸ್ ಸೇವೆಯನ್ನು ಸಕ್ರಿಯಗೊಳಿಸಲು ಅಗತ್ಯವಾಗಿರುವ ಹಂತಗಳನ್ನು ಗ್ರಾಹಕ ಸೇವಾ ವಿಭಾಗ ನಿಮಗೆ ಒದಗಿಸುತ್ತದೆ.

#4

#4

ಸೂಕ್ತವಾದ ಸಂಖ್ಯೆ ಕೋಡ್ ಅನ್ನು ಬಳಸಿ ಒದಗಿಸುವವರ ಸ್ವಯಂಚಾಲಿತ ಜಿಪಿಆರ್‌ಎಸ್ ಸಕ್ರಿಯತೆಗೆ ಕರೆಮಾಡುವುದು

#5

#5

ಎಸ್‌ಎಮ್‌ಎಸ್ ಅಥವಾ ಪಠ್ಯ ಸಂದೇಶವನ್ನು ಜಿಪಿಆರ್ಎಸ್ ಸಕ್ರಿಯತೆಗಾಗಿ ಕಳುಹಿಸುವುದು. ಈ ಪಠ್ಯ ಸಂದೇಶವು ಸಂಖ್ಯೆ ಅಥವಾ ಕೋಡ್ ವರ್ಡ್ ಆಗಿದ್ದು ನಿಮ್ಮ ಸೇವೆ ಒದಗಿಸುವವರು ನಿಮಗೆ ನೀಡುವಂಥದ್ದಾಗಿದೆ.

#6

#6

ಮೊಬೈಲ್ ಫೋನ್‌ನಲ್ಲಿರುವ ಮೆನು ಮೂಲಕ ಜಿಪಿಆರ್ಎಸ್ ಸೇವೆಗಳ ಸೆಟ್ಟಿಂಗ್ಸ್ ಅನ್ನು ಪ್ರವೇಶಿಸುವುದು. ನಿಮಗೆ ಸೂಕ್ತವಾದ ಮೆನು ಕುರಿತು ಸೇವೆ ಒದಗಿಸುವವರು ಸೂಚನೆಗಳನ್ನು ನೀಡುತ್ತಾರೆ. ಇದರಿಂದ ನಿಮ್ಮ ಫೋನ್‌ನಲ್ಲಿ ಜಿಪಿಆರ್ಎಸ್ ಸೇವೆಗಳ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದಾಗಿದೆ. ಜಿಪಿಆರ್ಎಸ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

Best Mobiles in India

English summary
GPRS (Global Packet Radio Service) is a packet-based method of data transfer, used for wireless services on cellular phones and mobile Internet devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X