Home
ಟೆಕ್ ನೌಕರಿ

ನಿಮ್ಮ ಫೋನ್‌ ಕಳುವಾದರೂ ಚಿಂತೆ ಬೇಡ, ಇದನ್ನು ಆನ್‌ ಮಾಡಿದ್ರೆ ಸಾಕು..

ಸ್ಮಾರ್ಟ್‌ಫೋನ್‌ಗಳ ವಿಭಾಗಲ್ಲಿ ಐಫೋನ್‌ಗಳು (Apple iPhone) ಹೆಚ್ಚು ಭದ್ರತಾ ಫೀಚರ್ಸ್‌ಗೆ ಹೆಸರುವಾಸಿ. ಅಷ್ಟೇ ಅಲ್ಲದೆ ಈ ಫೋನ್‌ಗಳು ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಕೆಲಸ ಮಾಡುತ್ತವೆ. ಈ ವಿಭಾಗದಲ್ಲಿ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ (Stolen Device Protection) ಫೀಚರ್ಸ್‌ ಸಾಕಷ್ಟು ಅನುಕೂಲಕರವಾಗಿದೆ.

ಹೌದು, ಆಪಲ್‌ ಐಓಎಸ್‌ 17.3 ಬೀಟಾದೊಂದಿಗೆ ಉತ್ತಮವಾದ ಭದ್ರತಾ ಫೀಚರ್ಸ್‌ ಆಗಿರುವ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಅನ್ನು ಪರಿಚಯಿಸಿದೆ. ನಿಮ್ಮ ಫೋನ್‌ ಅನ್ನು ಯಾರಾದರೂ ಕದ್ದರೆ ಅಂತಹ ಘಟನೆಯಲ್ಲಿ ನಿಮ್ಮ ಡಿವೈಸ್‌ ಅನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತದೆ. ಹಾಗಿದ್ರೆ, ಈ ಫೀಚರ್ಸ್‌ ಅನ್ನು ಬಳಕೆ ಮಾಡುವುದು ಹೇಗೆ ಅನ್ನೋ ಹಂತ ಹಂತದ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಫೋನ್‌ ಕಳುವಾದರೂ ಚಿಂತೆ ಬೇಡ, ಇದನ್ನು ಆನ್‌ ಮಾಡಿದ್ರೆ ಸಾಕು..

ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಫೀಚರ್ಸ್: WSJ ನ ಜೊವಾನ್ನಾ ಸ್ಟರ್ನ್ ಅವರ ತನಿಖೆಯ ನಂತರ ಈ ಭದ್ರತಾ ಕ್ರಮವನ್ನು ಐಫೋನ್‌ಗಳಿಗೆ ಪರಿಚಯಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಐಫೋನ್ ಕಳ್ಳತನಗಳ ಉಲ್ಬಣವನ್ನು ಬಹಿರಂಗಪಡಿಸಲಾಗಿದೆ. ಈ ವೇಳೆ ಕಳ್ಳರು ಬಲಿಪಶುಗಳಿಂದ ಐಫೋನ್‌ಗಳನ್ನು ಕದಿಯುವ ಮೊದಲು ಅವರು ಪಾಸ್‌ಕೋಡ್‌ಗಳನ್ನು ನಮೂದಿಸುವುದನ್ನು ಗಮನಿಸಿಕೊಂಡಿರುತ್ತಾರೆ ಅನ್ನೋದನ್ನು ಕಂಡುಕೊಳ್ಳಲಾಗಿದೆ. ಇದಾದ ನಂತರದಲ್ಲಿ ಆ ಫೋನ್‌ ಅನ್ನು ಕದ್ದು ಸುಲಭವಾಗಿ ಬಳಕೆ ಮಾಡಲು ಮುಂದಾಗಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿವೆ.

ಆದರೆ, ಈಗ ಐಫೋನ್‌ಗಳಲ್ಲಿ ಲಭ್ಯ ಇರುವ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಫೀಚರ್ಸ್‌ ಇನ್ಮುಂದೆ ಐಫೋನ್‌ಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಕೆಲಸ ಮಾಡುತ್ತದೆ. ಅಂದರೆ ಹೊರಾಂಗಣದಲ್ಲಿ ಬಯೋಮೆಟ್ರಿಕ್ ದೃಢೀಕರಣವನ್ನು ಕೇಳುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಫೀಚರ್ಸ್‌ ಬಳಕೆದಾರರ ಅನುಭವದ ಮೇಲೆ ಕನಿಷ್ಠ ಪರಿಣಾಮದೊಂದಿಗೆ ಸುರಕ್ಷತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

ನಿಮ್ಮ ಫೋನ್‌ ಕಳುವಾದರೂ ಚಿಂತೆ ಬೇಡ, ಇದನ್ನು ಆನ್‌ ಮಾಡಿದ್ರೆ ಸಾಕು..

ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಅನ್ನು ಹೇಗೆ ಸಕ್ರಿಯಗೊಳಿಸುವುದು?
ಹಂತ 1 : ಮೊದಲು ನಿಮ್ಮ ಐಫೋನ್‌ iOS 17.3 ಬೀಟಾ ನವೀಕರಣವನ್ನು ಹೊಂದಿದೆಯೇ ಎಂದು ಪರಿಶೀಲಿಸಿ. ಇಲ್ಲವಾದರೆ ಅಪ್‌ಡೇಟ್‌ ಮಾಡಿ. ಇದಾದ ನಂತರದಲ್ಲಿ ಸೆಟ್ಟಿಂಗ್ಸ್‌ ಅಪ್ಲಿಕೇಶನ್‌ಗೆ ಹೋಗಿ. ಅಲ್ಲಿ ಫೇಸ್ ಐಡಿ ಮತ್ತು ಪಾಸ್‌ಕೋಡ್ (Face ID and Passcode) ಆಯ್ಕೆಯನ್ನು ಆರಿಸಿ.

ಹಂತ 2: ಇದನ್ನು ಆಯ್ಕೆ ಮಾಡಿದ ಮೇಲೆ ಅಲ್ಲೇ ನಿಮಗೆ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಆಕ್ಟಿವ್‌ ಪ್ರೊಟೆಕ್ಷನ್‌ (Active protection) ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಅದನ್ನು ಟ್ಯಾಪ್‌ ಮಾಡುವ ಮೂಲಕ ಸಕ್ರಿಯಗೊಳಿಸಿ. ಇಷ್ಟು ಮಾಡಿದ್ರೆ ನಿಮ್ಮ ಐಫೋನ್ ಈಗ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ನಲ್ಲಿ ಕೆಲಸ ಮಾಡುತ್ತಿದೆ ಎಂದರ್ಥ.

ಇನ್ನು ಈ ವಿಭಾಗದಲ್ಲಿ ನೀವು ಗಮನಿಸಬೇಕಾದ ವಿಷಯ ಏನೆಂದರೆ ಫೇಸ್ ಐಡಿ ಅಥವಾ ಟಚ್ ಐಡಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಅಪರೂಪದ ಸಂದರ್ಭದಲ್ಲಿ, ವಿಶ್ವಾಸಾರ್ಹ ಸ್ಥಳದಲ್ಲಿದ್ದಾಗ ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್ ಅನ್ನು ನಿಷ್ಕ್ರಿಯಗೊಳಿಸಲು ನಿಮ್ಮ ಪಾಸ್‌ಕೋಡ್‌ ಅನ್ನು ನೀವು ಬಳಸಬಹುದು. ಅಂದರೆ ನಿಮ್ಮ ಡಿವೈಸ್‌ ಅನ್ನು ಅನಿರೀಕ್ಷಿತ ಸಂದರ್ಭಗಳಲ್ಲಿಯೂ ಸಹ ಪ್ರವೇಶಿಸಬಹುದಾಗಿದೆ ಎಂದು ಖಚಿತಪಡಿಸುತ್ತದೆ.

ನಿಮ್ಮ ಫೋನ್‌ ಕಳುವಾದರೂ ಚಿಂತೆ ಬೇಡ, ಇದನ್ನು ಆನ್‌ ಮಾಡಿದ್ರೆ ಸಾಕು..

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ, ಸ್ಟೋಲನ್ ಡಿವೈಸ್ ಪ್ರೊಟೆಕ್ಷನ್‌ನೊಂದಿಗೆ ನಿಮ್ಮ ಐಫೋನ್‌ನ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ನಿಮ್ಮ ಸಮೀಪ ನಿಂತು ಫೋನ್‌ ಅನ್ನು ಥಟ್ಟನೆ ಕಿತ್ತುಕೊಂಡು ಹೋಗುವವರರನ್ನೇ ಮೂರ್ಖರನ್ನಾಗಿ ಮಾಡಬಹುದಾಗಿದೆ. ಅಂದರೆ ಕಳ್ಳತನ ಅಥವಾ ಅನಧಿಕೃತ ಪ್ರವೇಶದ ಸಂದರ್ಭದಲ್ಲಿ ನಿಮ್ಮನ್ನು ಶಾಂತಿಯುತವಾಗಿ ಇರುವಂತೆ ಮಾಡುವ ಸಾಮರ್ಥ್ಯ ಈ ಫೀಚರ್ಸ್‌ಗೆ ಇದೆ.

Best Mobiles in India

English summary
Apple introduced Stolen Device Protection which is a great security feature with iOS 17.3 beta. It works to protect your device in case someone steals your phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+