EPFO ಸದಸ್ಯರೆ, ಮರೆಯದೇ ಈ ಸೇವೆ ಆಕ್ಟಿವ್ ಮಾಡಿರಿ!..ಹಣ ವಿತ್‌ಡ್ರಾ ಮಾಡಲು ಅನುಕೂಲ!
ನೌಕರರ ಪಾಲಿಗೆ ಉದ್ಯೋಗಿ ಭವಿಷ್ಯ ನಿಧಿ (EPF) ಆರ್ಥಿಕ ಭರವಸೆ ಎಂದೇ ಹೇಳಬಹುದು. ಹೀಗಾಗಿ ನೌಕರರು ತನ್ನ EPF ಖಾತೆ ಅನ್ನು ಸುಗಮವಾಗಿ ನಿರ್ವಹಿಸಲು UAN (ಯುನಿವರ್ಸಲ್ ಖಾತೆ ಸಂಖ್ಯೆ) ಅನ್ನು ಆಕ್ಟಿವ್ ಇಡುವುದು ಅಗತ್ಯ. ಅಂದಹಾಗೆ ಯುಎಎನ್ - UAN ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಆಕ್ಟಿವ್ ಮಾಡಬಹುದಾಗಿದೆ.
ನೌಕರರ UAN ಸಂಖ್ಯೆ ಸಕ್ರಿಯವಾಗಿರುವುದು ಅಗತ್ಯ ಆಗಿದ್ದು, ನೌಕರರು ಇಪಿಎಫ್ ಹಣ ವಿತ್‌ಡ್ರಾ ಮಾಡಲು, ನಾಮಿನಿ ಸೇರಿಸಲು ಹಾಗೂ ಇತರೆ ಸೇವೆಗಳನ್ನು ಪಡೆದುಕೊಳ್ಳಲು ಖಾತೆ ಆಕ್ಟಿವ್ ಆಗಿರುವುದು ಅವಶ್ಯ ಆಗಿದೆ. ನೌಕರರು ಇಪಿಎಫ್‌ಓ ಮೆಂಬರ್ ಪೋರ್ಟಲ್ ಹಾಗೂ ಉಮಂಗ್ ಆಪ್ ಮೂಲಕ UAN ಸಂಖ್ಯೆಯನ್ನು ಸಕ್ರಿಯ ಮಾಡಬಹುದು. ಹಾಗಾದರೇ UAN ಸಂಖ್ಯೆ ಆಕ್ಟಿವ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಉಮಾಂಗ್ ಆಪ್ ಮೂಲಕ UAN ಆಕ್ಟಿವ್ ಮಾಡಲು ಹೀಗೆ ಮಾಡಿ
* ಮೊದಲಿಗೆ UMANG ಆಪ್ ತೆರೆಯಿರಿ ಹಾಗೂ ನಿಮ್ಮ ಆನ್‌ಲೈನ್ ಖಾತೆಗೆ ಲಾಗ್ ಇನ್ ಮಾಡಿ.
* ನಂತರ ಮೇಲಿನ ಬಾರ್‌ನಲ್ಲಿರುವ ಸರ್ಚ್ ಕಾಲಂನಲ್ಲಿ 'EPFO' ಎಂದು ನಮೂದಿಸಿ ಸರ್ಚ್ ಮಾಡಿರಿ.
* ಬಳಿಕ ಲಭ್ಯವಿರುವ ಮೆನುವನ್ನು ಕೆಳಗೆ ಸ್ಕ್ರಾಲ್ ಮಾಡಿ ಹಾಗೂ ಆಯ್ಕೆಗಳ ಲಿಸ್ಟ್‌ನಿಂದ 'UAN ಸಕ್ರಿಯಗೊಳಿಸುವಿಕೆ' ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ.
* ಆ ನಂತರ ನಿಮ್ಮ UAN, ಹೆಸರು, ಜನ್ಮ ದಿನಾಂಕ (DOB), ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಎಂಟ್ರಿ ಮಾಡಿರಿ.
* ಎಲ್ಲ ಹಂತ ಮುಗಿದ ಬಳಿಕ ಬಳಕೆದಾರರು ತಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್‌ಗೆ ಪಾಸ್‌ವರ್ಡ್ ಅನ್ನು ಪಡೆಯುತ್ತಾರೆ.

ಅಧಿಕೃತ EPFO ಪೋರ್ಟಲ್ ಮೂಲಕ UAN ನಂಬರ್ ಆಕ್ಟಿವ್ ಮಾಡಲು ಹೀಗೆ ಮಾಡಿ
ಹಂತ 1 : ಅಧಿಕೃತ EPFO ಮೆಂಬರ್ ಪೋರ್ಟಲ್ ವೆಬ್‌ಸೈಟ್‌ಗೆ ಭೇಟಿ ಮಾಡಿರಿ.
ಹಂತ 2 : ಬಳಿಕ ನಿಮ್ಮ UAN, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಎಂಟ್ರಿ ಮಾಡುವ ಮೂಲಕ ಲಾಗ್ ಇನ್ ಆಗಿರಿ.
ಹಂತ 3 : ಲಾಗ್ ಇನ್ ಆದ ನಂತರ, 'ಮ್ಯಾನೇಜ್' ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ. ಅಲ್ಲಿ ಡ್ರಾಪ್‌ಡೌನ್ ಮೆನುವಿನಿಂದ 'ಯುಎಎನ್ ಸಕ್ರಿಯಗೊಳಿಸಿ' ಆಯ್ಕೆ ಸೆಲೆಕ್ಟ್ ಮಾಡಿ.
ಹಂತ 4 : ಅಲ್ಲಿನ ಸೂಚನೆಗಳ ಪ್ರಕಾರ ನಿಮ್ಮ UAN, ಸದಸ್ಯ ID, ಆಧಾರ್, PAN ಅಥವಾ ಇತರ ಅಗತ್ಯವಿರುವ ವಿವರಗಳನ್ನು ಎಂಟ್ರಿ ಮಾಡಿರಿ.
ಹಂತ 5 : 'Get Authorization PIN' ಆಯ್ಕೆ ಅನ್ನು ಸೆಲೆಕ್ಟ್ ಕ್ಲಿಕ್ ಮಾಡಿ.
ಹಂತ 6 : ತದ ನಂತರ ಆಧಾರ್ ಜೊತೆಗೆ ಲಿಂಕ್ ಮಾಡಲಾದ ರಿಜಿಸ್ಟರ್ ಮೊಬೈಲ್ ನಂಬರ್‌ಗೆ OTP (ಒನ್ ಟೈಮ್ ಪಾಸ್‌ವರ್ಡ್) ಬರುತ್ತದೆ.
ಹಂತ 7 : ಬಳಿಕ ಸ್ವೀಕರಿಸಿದ OTP ಅನ್ನು ಎಂಟ್ರಿ ಮಾಡುವುದು ಹಾಗೂ UAN ಅನ್ನು ಸಕ್ರಿಯಗೊಳಿಸಿ ಆಯ್ಕೆ ಅನ್ನು ಕ್ಲಿಕ್ ಮಾಡಿ.
ಹಂತ 8 : ಆ ನಂತರ ನಿಮ್ಮ UAN ಅನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗುತ್ತದೆ. ಹಾಗೂ ದೃಢೀಕರಣ ಮೆಸಜ್ ಸಹ ಸ್ವೀಕರಿಸುತ್ತೀರಿ.
UAN ನಂಬರ್ ಆಕ್ಟಿವ್ ಮಾಡಲು ಅಗತ್ಯ ಇರುವ ದಾಖಲೆಗಳು
* ಪ್ಯಾನ್ ಕಾರ್ಡ್
* ಆಧಾರ್ ಕಾರ್ಡ್
* ಗುರುತು ಅಥವಾ ವಿಳಾಸದ ಪುರಾವೆ
* IFSC ಕೋಡ್ ಅನ್ನು ಒಳಗೊಂಡಿರುವ ನೌಕರರ ಬ್ಯಾಂಕ್ ಖಾತೆಯ ಮಾಹಿತಿ


Click it and Unblock the Notifications








