ಮಕ್ಕಳಿಗೆ 'ಬಾಲ ಆಧಾರ್ ಕಾರ್ಡ್' ಮಾಡಿಸುವುದು ಹೇಗೆ ಗೊತ್ತಾ?

|

ಭಾರತದ ಪ್ರತಿಯೊಬ್ಬ ಪ್ರಜೆಯು ಆಧಾರ್ ಕಾರ್ಡ್‌ ಮಾಡಿಸುವುದು ಕಡ್ಡಾಯವಾಗಿದೆ. ಅದೇ ರೀತಿ ಮಕ್ಕಳಿಗೂ ಸಹ ಆಧಾರ್ ಮಾಡಿಸುವುದು ಕಡ್ಡಾಯವಾಗಿದೆ. ಆದರೆ 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವ ಸಾಧ್ಯತೆಗಳು ಕಡಿಮೆ. ಈ ನಿಟ್ಟಿನಲ್ಲಿ ಚಿಕ್ಕ ಮಕ್ಕಳಿಗಾಗಿಯೇ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಬಯೋಮೆಟ್ರಿಕ್ ರಹಿತ ನೀಲಿ ಬಣ್ಣದ ಬಾಲ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಜಾರಿ ಮಾಡಿದೆ.

ಮಕ್ಕಳಿಗೆ ಬಯೋಮೆಟ್ರಿಕ್

ಯುಐಡಿಎಐ 5 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಸ್ಕ್ಯಾನ್ ಇಲ್ಲದೇ ನೀಲಿ ಬಣ್ಣದ ಬಾಲ ಆಧಾರ್ ವೇರಿಯಂಟ್ ಆಯ್ಕೆ ನೀಡಿದೆ. ಪಾಲಕರು ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ನೀಲಿ ಬಣ್ಣದ ಬಾಲ ಅಧಾರ್ ಕಾರ್ಡ್‌ ಮಾಡಿಸುವುದು. ಆನ್‌ಲೈನ್‌ ಮೂಲಕವೇ ಆಧಾರ್ ಕಾರ್ಡ್ ಸೆಂಟರ್‌ಗಳ ಭೇಟಿಯ ದಿನ ನಿಗದಿ ಮಾಡುವ ಅವಕಾಶವು ಇದೆ. ಆದರೆ ಯುಐಡಿಎಐ ಈಗ ಹೊಸ ನಿಯಮ ತಿಳಿಸಿದ್ದು, ಮಗು 5ನೇ ವಯಸ್ಸಿನಲ್ಲಿದ್ದಾಗ ಬಯೋಮೆಟ್ರಿಕ್ ಕಡ್ಡಾಯ ಎಂದಿದೆ.

ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ

ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ

ನೀಲಿ ಬಣ್ಣದ ಬಾಲ ಆಧಾರ್ ಕಾರ್ಡ್‌ಗೆ ಮಗುವಿನ ಕಣ್ಣುಗಳು, ಬೆರಳ ಗುರುತಿನ ಬಯೋಮೆಟ್ರಿಕ್ ಅಗತ್ಯ ಇರುವುದಿಲ್ಲ. ಆದರೆ ಮಗು 5 ವರ್ಷ ಆದಾಗ ಒಮ್ಮೆ ಬಯೋಮೆಟ್ರಕ್ ಮಾಡಿಸುವುದು ಕಡ್ಡಾಯ ಎಂದಿದೆ. ಹಾಗೂ ಮಗುವಿಗೆ 15 ವರ್ಷ ಆದಾಗ ಮತ್ತೊಮ್ಮೆ ಬಯೋಮೆಟ್ರಿಕ್ ಮಾಡಿಸಬೇಕು ಎಂದು ಯುಐಡಿಎಐ ಹೇಳಿದೆ.

ಬಾಲ ಆಧಾರ್ ಮಾಡಿಸಲು ಬೇಕಾಗುವ ದಾಖಲಾತಿಗಳು

ಬಾಲ ಆಧಾರ್ ಮಾಡಿಸಲು ಬೇಕಾಗುವ ದಾಖಲಾತಿಗಳು

* ಮಗುವಿನ ಜನ್ಮ ದಿನಾಂಕ ದಾಖಲಾತಿ
* ಪಾಲಕರ ಆಧಾರ್ ಕಾರ್ಡ್
* ಶಾಲಾ ದಾಖಲಾತಿ (ಐಡಿ ಕಾರ್ಡ್)

ಆನ್‌ಲೈನ್‌ನಲ್ಲಿ ಬಾಲ ಆಧಾರ್ ಕಾರ್ಡ್ ರಿಜಿಸ್ಟರ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಬಾಲ ಆಧಾರ್ ಕಾರ್ಡ್ ರಿಜಿಸ್ಟರ್ ಮಾಡುವುದು ಹೇಗೆ?

ನೀಲಿ ಬಣ್ಣದ ಬಾಲ ಆಧಾರ್ ಕಾರ್ಡ್ ಮಾಡಿಸಲು ಆನ್‌ಲೈನ್‌ ನಲ್ಲಿ ರಿಜಿಸ್ಟರ್ ಮಾಡಿಸುವುದಕ್ಕೆ ಅವಕಾಶ ನೀಡಲಾಗಿದೆ. ಆಧಾರ್‌ ಸೆಂಟರ್‌ಗೆ ಭೇಟಿ ಮಾಡುವ ದಿನವನ್ನು ಆನ್‌ಲೈನ್‌ನಲ್ಲಿಯೇ ನಿಗದಿ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ ಪಾಲಕರು ಈ ಮುಂದಿನ ಹಂತಗಳನ್ನು ಅನುಸರಿಸಿರಿ.
* ಅಧಿಕೃತದ UIDAI ವೆಬ್‌ಸೈಟ್‌ಗೆ ತೆರೆಯಿರಿ.
* ವೆಬ್‌ಸೈಟ್‌ಗೆ ಲಾಗ್‌ ಇನ್‌ ಆಗಿ, ಆಧಾರ್ ಕಾರ್ಡ್‌ ರಿಜಿಸ್ಟೆಷನ್ ಲಿಂಕ್ ಒತ್ತಿರಿ.
* ನಂತರ ಪಾಲಕರು ಮೊಬೈಲ್ ನಂಬರ್, ಮೇಲ್ ಐಡಿ ನಮೂದಿಸುವುದು.
* ಆನಂತರ ನಿಮ್ಮ ಜಿಲ್ಲಾ, ರಾಜ್ಯ ಗಳ ಮಾಹಿತಿ ಭರ್ತಿ ಮಾಡುವುದು.
* ಮುಂದೆ Fix Appointment tab ಅನ್ನು ಸೆಲೆಕ್ಟ್ ಮಾಡಿರಿ. ಮತ್ತು ನಿಮ್ಮ ಹತ್ತಿರದ ಆಧಾರ್ ಸೆಂಟರ್ ಸೆಲೆಕ್ಟ್ ಮಾಡಿ.
* ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ಆಧಾರ್ ಸೆಂಟರ್‌ಗೆ ಭೇಟಿ ನೀಡಿ.

ಬಾಲ ಆಧಾರ್ ಕಾರ್ಡ್ ಅಗತ್ಯತೆ

ಬಾಲ ಆಧಾರ್ ಕಾರ್ಡ್ ಅಗತ್ಯತೆ

* ಆಧಾರ್ ಕಾರ್ಡ್‌ ಮಾಡಿಸುವುದು ಕಡ್ಡಾಯ ಎಂದಿದೆ ಸರ್ಕಾರ.
* ಮಗುವನ್ನು ಶಾಲೆಗೆ ಸೇರಿಸುವಾಗ ಆಧಾರ್ ಕಾರ್ಡ್ ಕೇಳುವ ಸಾಧ್ಯತೆಗಳಿರುತ್ತವೆ.
* ವಿಮಾನ, ರೈಲು ಪ್ರವಾಸ ಮಾಡುವಾಗ ಮಗುವಿನ ಆಧಾರ್ ಕಾರ್ಡ್‌ ಬೇಕಿರುತ್ತದೆ.
* ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಹ ಆಧಾರ್ ಬೇಕಾಗುತ್ತದೆ.
* ಸಬ್‌ಸೀಡಿ ಸೌಲಭ್ಯಗಳ ಪ್ರಯೋಜನಗಳಿಗೂ ಆಧಾರ್ ಕಾರ್ಡ್‌ ಅಗತ್ಯ ಇರುತ್ತದೆ.

Best Mobiles in India

English summary
Baal Aadhaar Card is issued to the children under 5 years of age, and no biometric information is recorded while registering Baal Aadhaar Card.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X