ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಈಗ ತುಂಬಾ ಸುಲಭ!..ಹೀಗೆ ಮಾಡಿರಿ!
ದೇಶದ ಎಲ್ಲ ನಾಗರೀಕರಿಗೆ ಮಹತ್ವದ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ (Permanent Account Number - PAN) ಕೂಡಾ ಒಂದಾಗಿದೆ. ಇನ್ನು ನಾಗರೀಕರು ಪ್ಯಾನ್ ಕಾರ್ಡ್ ಪಡೆಯಲು ಸುಲಭವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಹೌದು, ಪ್ಯಾನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ನಾಗರೀಕರು ಆನ್‌ಲೈನ್ ಮೂಲಕವೇ ಸರಳವಾಗಿ ಪ್ಯಾನ್ ಕಾರ್ಡ್ ಮಾಡಿದಲು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇನ್ನು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಚಾಲ್ತಿ ಇರುವ ಮೊಬೈಲ್ ಸಂಖ್ಯೆ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ ಇರುವುದು ಅಗತ್ಯ ಆಗಿದೆ. ಹಾಗಾದರೇ ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

e-Filing ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಈ ಕ್ರಮ ಫಾಲೋ ಮಾಡಿ
* ಅರ್ಜಿದಾರರು ಮೊದಲಿಗೆ ಇ-ಫೈಲಿಂಗ್ ಪೋರ್ಟಲ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವುದು
* ಬಳಿಕ, ಮೇನ್‌ಪೇಜ್ ಮೂಲಕ ನ್ಯಾವಿಗೇಟ್ ಮಾಡಿ, ನಂತರ 'ಇನ್‌ಸ್ಟಂಟ್ ಇ-ಪ್ಯಾನ್' ಆಯ್ಕೆ ಅನ್ನು ಕ್ಲಿಕ್ ಮಾಡಿರಿ.
* ಇ-ಪ್ಯಾನ್ ಪೇಜ್ ತೆರೆದ ನಂತರ, ಡ್ರಾಪ್-ಡೌನ್ ಮೆನು ಬಾರ್‌ನಲ್ಲಿ ಕಾಣುವ 'ಚೆಕ್ ಸ್ಟೇಟಸ್ /ಡೌನ್‌ಲೋಡ್ ಪ್ಯಾನ್' ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ ಹಾಗೂ 'ಕಂಟಿನ್ಯೂ' ಆಯ್ಕೆ ಕ್ಲಿಕ್ ಮಾಡಿ.
* ನೀವು ಚೆಕ್ ಸ್ಟೇಟಸ್ ಪೇಜ್‌ನಲ್ಲಿದ್ದರೆ, ಚೆಕ್ ಸ್ಟೇಟಸ್ /ಡೌನ್‌ಲೋಡ್ ಪ್ಯಾನ್ ಆಯ್ಕೆ ಸೆಲೆಕ್ಟ್ ಮಾಡಿ.
* ಬಳಿಕ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡುವುದು ಹಾಗೂ 'ಕಂಟಿನ್ಯೂ' ಆಯ್ಕೆ ಅನ್ನು ಕ್ಲಿಕ್ ಮಾಡುವುದು.

ಪೋರ್ಟಲ್ ಮೂಲಕ ಈ ಕ್ರಮ ಅನುಸರಿಸಿ
- ಮೊದಲಿಗೆ ಆದಾಯ ತೆರಿಗೆ ವೆಬ್‌ಸೈಟ್‌ಗೆ ಭೇಟಿ ನೀಡಿ.
- 'ರಿಜಿಸ್ಟರ್' ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ, ರಿಜಿಸ್ಟ್ರೇಷನ್ ಪೇಜ್ ತೆರೆಯುತ್ತದೆ.
- 'ಟ್ಯಾಕ್ಸ್ ಪೇಯರ್' ಎಂಬ ಟ್ಯಾಬ್‌ನಲ್ಲಿ, ನಿಮ್ಮ ಪ್ಯಾನ್ ನಂಖ್ಯೆ ಅನ್ನು ನಮೂದಿಸಿ, ನಂತರ 'ವ್ಯಾಲಿಡೇಟ್' ಆಯ್ಕೆ ಕ್ಲಿಕ್ ಮಾಡಿ, ಬಳಿಕ 'ಹೌದು' ಆಯ್ಕೆ ಸೆಲೆಕ್ಟ್ ಮಾಡಿ. ನಂತರ 'ಕಂಟಿನ್ಯೂ' ಕ್ಲಿಕ್ ಮಾಡಿರಿ.
- ಆ ಬಳಿಕ ಅರ್ಜಿದಾರರು ತಮ್ಮ ಮೊದಲ ಹೆಸರು, ಮಧ್ಯದ ಹೆಸರು, ಕೊನೆಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಯಸ್ಸು ಮತ್ತು ರೆಸಿಡೆನ್ಸಿಯಲ್ ಸ್ಟೇಟಸ್ ಎಂಟ್ರಿ ಮಾಡಬೇಕಿರುತ್ತದೆ. ಆ ನಂತರ 'ಕಂಟಿನ್ಯೂ' ಆಯ್ಕೆ ಕ್ಲಿಕ್ ಮಾಡಿ.
- ಅದಾದ ಬಳಿಕ, ಅರ್ಜಿದಾರರು 'ಓಟಿಪಿ' ಗಾಗಿ ಕಾಂಟ್ಯಾಕ್ಟ್ ಮಾಹಿತಿ ನಮೂದಿಸಬೇಕಾಗುತ್ತದೆ. ನಿಮ್ಮ ಫೋನ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಅಂಚೆ ವಿಳಾಸವನ್ನು ಒಳಗೊಂಡಿರುತ್ತದೆ.
- ಆ ಬಳಿಕ , 'ಕಂಟಿನ್ಯೂ' ಆಯ್ಕೆ ಕ್ಲಿಕ್ ಮಾಡಿ, ನಮೂದಿಸಿದ ಮೊಬೈಲ್ ಮತ್ತು ಇಮೇಲ್ ಮೂಲಕ ಸ್ವೀಕರಿಸಿದ 'ಓಟಿಪಿ' ಗಳನ್ನು ಎಂಟ್ರಿ ಮಾಡಿರಿ ಹಾಗೂ ಕಂಟಿನ್ಯೂ ಮಾಡಿ.
- ಓಟಿಪಿ ಪರಿಶೀಲನೆಯ ಬಳಿಕ, ನಮೂದಿಸಿದ ಮಾಹಿತಿಯನ್ನು ವ್ಯಾಲಿಡೆಟ್ ಮಾಡಿರಿ .
- 'ರಿಜಿಸ್ಟರ್' ಆಯ್ಕೆ ಕ್ಲಿಕ್ ಮಾಡಿದ ಬಳಿಕ, ಅರ್ಜಿದಾರರು ಸ್ವೀಕೃತಿ ಸ್ಲಿಪ್ ಅನ್ನು ಪಡೆಯುತ್ತಾರೆ.

ಬೇಕಾಗುವ ದಾಖಲಾತಿಗಳು
ಗುರುತಿನ ಪುರಾವೆಗಾಗಿ
ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಡಿತರ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಇತರ ಅಂಗೀಕೃತ ಸಾರ್ವಜನಿಕ ವಲಯದಿಂದ ನೀಡಿದ ಫೋಟೋ ಗುರುತಿನ ಕಾರ್ಡ್ ಅಥವಾ ಪಿಂಚಣಿದಾರರ ಕಾರ್ಡ್‌ನ ಪ್ರತಿ, ಇಲ್ಲವೇ ದೃಢೀಕರಿಸಿದ ಅರ್ಜಿದಾರರ ಫೋಟೋ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಪ್ರಮಾಣಪತ್ರ.
ವಿಳಾಸದ ಪುರಾವೆಗಾಗಿ
ಮತದಾರರ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಅಥವಾ ಅರ್ಜಿದಾರರ ವಿಳಾಸವನ್ನು ಒಳಗೊಂಡ ಪೋಸ್ಟ್ ಆಫೀಸ್ ಪಾಸ್‌ಬುಕ್, ಲ್ಯಾಂಡ್‌ಲೈನ್ ಟೆಲಿಫೋನ್ ಬಿಲ್ (ಇತ್ತೀಚಿನ), ಬ್ರಾಡ್‌ಬ್ಯಾಂಡ್ ಕನೆಕ್ಷನ್ ಬಿಲ್ (ಇತ್ತೀಚಿನ), ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಅಥವಾ ಬ್ಯಾಂಕ್ ಖಾತೆ ಸ್ಟೇಟ್‌ಮೆಂಟ್ ಅಥವಾ ಸರ್ಕಾರ ನೀಡಿದ ನಿವಾಸ ಪ್ರಮಾಣಪತ್ರ ಅಥವಾ ಅಲೋಟಮೆಂಟ್ ಪತ್ರ ಅಥವಾ ಆಸ್ತಿ ತೆರಿಗೆ ಮೌಲ್ಯಮಾಪನಕ್ಕಾಗಿ ಇತ್ತೀಚಿನ ಆದೇಶ ಅಥವಾ ವಿದ್ಯುತ್ ಬಿಲ್.
ಜನ್ಮ ದಿನಾಂಕದ ಪುರಾವೆಗಾಗಿ
ಡ್ರೈವಿಂಗ್ ಲೈಸೆನ್ಸ್ ಇಲ್ಲವೇ ಪಾಸ್‌ಪೋರ್ಟ್ ಇಲ್ಲವೇ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕವನ್ನು ತಿಳಿಸುವ ನ್ಯಾಯಾಲಯದ ಮುಂದೆ ಸಹಿ ಮಾಡಿದ ಅಫಿಡವಿಟ್ ಅಥವಾ ಮುನ್ಸಿಪಲ್ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ ಇಲ್ಲವೇ ಕೇಂದ್ರ ಅಥವಾ ರಾಜ್ಯ ಸರ್ಕಾರವು ನೀಡಿದ ಅಧಿಕೃತ ರಿಜಿಸ್ಟ್ರಾರ್ ನಿವಾಸ ಪ್ರಮಾಣಪತ್ರ, ಅಥವಾ ಪಿಂಚಣಿ ಪಾವತಿ ಆದೇಶ.


Click it and Unblock the Notifications








