ಲಾಕ್‌ಡೌನ್ ವೇಳೆ ಬೇರೆ ಜಿಲ್ಲೆಗೆ ಹೋಗಲು ಇ-ಪಾಸ್ ಪಡೆಯುವುದು ಹೇಗೆ?
ದೇಶದಲ್ಲಿ ಕೊರೊನಾ ವೈರಸ್ ರಣಕೇಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್‌ಡೌನ್ ಜಾರಿ ಮುಂದುವರೆಸಿದೆ. ಈ ಅವಧಿಯಲ್ಲಿ ಮನೆಯಿಂದ ಹೊರಗಡೆ ಓಡಾಡುವುದು ಕಷ್ಟಸಾಧ್ಯ. ಆದರೆ ಅಗತ್ಯ ಸೇವೆಗಳ ಪೂರೈಕೆಗೆ ತೊಂದರೆ ಆಗಬಾರದೆಂದು, ಅಗತ್ಯ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಈಗಾಗಲೇ ಇ-ಪಾಸ್ ವ್ಯವಸ್ಥೆ ಮಾಡಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಅನೇಕ ಜನರು ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಲುಕಿದ್ದಾರೆ. ಅಂತಹವರ ಓಡಾಡಕ್ಕೆ ಒನ್ ಟೈಮ್ ಪಾಸ್ ನೀಡಲಾಗುತ್ತಿದೆ.

ಹೌದು, ಲಾಕ್‌ಡೌನ್ ಜಾರಿ ಮಾಡಿದಾಗಿನಿಂದ ಅನೇಕರು ಕೆಲಸ ಮಾಡುವ ಜಿಲ್ಲೆಗಳಲ್ಲಿಯೇ ಸಿಲುಕಿದ್ದಾರೆ. ಹೀಗೆ ಲಾಕ್‌ಡೌನ್‌ನಿಂದಾಗಿ ಬೇರೆ ಜಿಲ್ಲೆಯಲ್ಲಿ ಉಳಿದುಕೊಂಡವರು ಅವರ ಜಿಲ್ಲೆಗೆ ಹೋಗಲು ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಒಂದು ದಿನದ ಪಾಸ್ ವಿತರಿಸಲಾಗುತ್ತದೆ. ಹೀಗಾಗಿ ಅಂತರ್ ಜಿಲ್ಲೆಗಳ ನಡುವೆ ಪ್ರಯಾಣ ಮಾಡಲು ಜನರು ಆನ್‌ಲೈನ್ ಮೂಲಕ ಪಾಸ್ ಪಡೆಯಬಹುದಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಪಾಸ್ ತೋರಿಸಿ, ಆರೋಗ್ಯ ತಪಾಸಣೆಗೆ ಒಳಗಾಗಿ ಸಂಚರಿಸಬಹುದಾಗಿದೆ. ಇನ್ನು ಈ ಪಾಸ್ ಒಂದು ಅವಧಿಗೆ ಮಾತ್ರ ಬಳಸಬಹುದಾಗಿದೆ. ಪಾಸ್ ಪಡೆಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿ. https://kspclearpass.idp.mygate.com/ ಹಾಗೂ ಆನ್‌ಲೈನ್‌ನಲ್ಲಿ ಪಾಸ್‌ಗೆ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹಂತ 1
ಅಂತರ ಜಿಲ್ಲಾ ಪಾಸ್ ಪಡೆಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿರಿ. https://kspclearpass.idp.mygate.com/ ಮೊಬೈಲ್ ನಂಬರ್ ನಮೂದಿಸಿ. ಓಟಿಪಿ ಎಂಟ್ರಿ ಮಾಡಿ.

ಹಂತ 2
ನಂತರ ಪಾಸ್ ಪಡೆಯುವವರ ಪೂರ್ಣ ಮಾಹಿತಿ ಭರ್ತಿ ಮಾಡಿ. ಹೆಸರು, ಮನೆ ವಿಳಾಸ, ಪಿನ್ ನಂಬರ್ ಮತ್ತು ಪ್ರಯಾಣಕ್ಕೆ ಬಳಸುವ ವಾಹನದ ನಂಬರ್ ನಮೂದಿಸಿ. ನಂತರ Request pass ಒತ್ತಿರಿ.

ಹಂತ 3
ಜನ್ಮ ದಿನಾಂಕ, ಆಧಾರ್‌ಕಾರ್ಡ್, ಪ್ಯಾನ್, ವೋಟರ್‌ಐಡಿ, ಪಾಸ್‌ಪೋರ್ಟ್, ಡಿಎಲ್, ರೇಶನ್ ಕಾರ್ಡ್, ಮಾಹಿತಿ ಅಪ್‌ಲೋಡ್ ಮಾಡುವುದು.

ಹಂತ 4
ಭೇಟಿ ಆಗಲು ಹೋಗುವ ವ್ಯಕ್ತಿಯ ಜೊತೆಗಿನ ಸಂಬಂಧ ತಿಳಿಸುವುದು ಹಾಗೂ ಯಾವ ಕಾರಣಕ್ಕೆ ಹೋಗಲಾಗುತ್ತಿದೆ ಎಂಬ ಮಾಹಿತಿ ಭರ್ತಿ ಮಾಡುವುದು.

ಹಂತ 5
ಯಾವ ಸ್ಥಳ ಹಾಗೂ ಯಾವ ಜಿಲ್ಲೆಯಿಂದ ಪ್ರಯಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಭರ್ತಿ ಮಾಡುವುದು.

ಹಂತ 6
ನೀವು ಭೇಟಿ ನೀಡುವ ಸ್ಥಳದ ವಿಳಾಸ ನಮೂದಿಸುವುದು.

ಹಂತ 7
ಭೇಟಿ ಮಾಡುವ ವ್ಯಕ್ತಿಯ ಹೆಸರು ಹಾಗೂ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿರಿ.

ಹಂತ 8
ಪ್ರಯಾಣ ಮಾಡುವ ದಿನಾಂಕದ ಬಗ್ಗೆ ಮಾಹಿತಿ ನಮೂದಿಸಿ.

ಹಂತ 9
ಡ್ರೈವರ್ ಸೇರಿದಂತೆ ಮೂರು ಜನರಿಗೆ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಸಹ ಪ್ರಯಾಣಿಕರ ಮಾಹಿತಿ ಭರ್ತಿ ಮಾಡುವುದು.

ಹಂತ 10
ಮೇಲೆ ನೀಡಿರುವ ಎಲ್ಲ ಮಾಹಿತಿ ಸರಿಯಾಗಿದೆ ಎಂದು ಒಪ್ಪಿ (ಬಾಕ್ಸ್‌ನಲ್ಲಿ ಟಿಕ್ ಮಾಡಿ) ಕನ್ಫರ್ಮ್ ಬಟನ್ ಒತ್ತಿರಿ.

ಹಂತ 11
ಕನ್ಫರ್ಮ್ ಬಟನ್ ಒತ್ತಿದ ಮೇಲೆ ನಿಮಗೆ ಪಿಡಿಎಫ್ ಫಾರ್ಮೆಟ್‌ನಲ್ಲಿ ಇ-ಪಾಸ್ ಕಾಣಿಸುತ್ತದೆ.

ಹಂತ 12
ನಂತರ ಕೆಳಗಡೆ ಕಾಣಿಸುವ ಪ್ರಿಂಟ್ ಪಾಸ್ ಆಯ್ಕೆ ಒತ್ತಿರಿ. ಈ ರೀತಿ ಸುಲಭವಾಗಿ ನೀವು ಪಾಸ್ ಪಡೆಯಬಹುದು.


Click it and Unblock the Notifications








