ನಿಮ್ಮ ಐಫೋನ್‌ನಲ್ಲಿ ಡಾಟಾ ಬ್ಯಾಕ್ ಅಪ್ ಮಾಡುವುದು ಹೇಗೆ ಗೊತ್ತಾ?
ಮಾಹಿತಿ ಸುರಕ್ಷತೆಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಿಂತ ಆಪಲ್ ಐಫೋನ್‌ಗಳನ್ನು ಗ್ರಾಹಕರು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಬಹುತೇಕ ಬಳಕೆದಾರರು ಆಂಡ್ರಾಯ್ಡ್ ಫೋನ್‌ಗಳಲ್ಲಿ ತಮ್ಮ ಡಾಟಾವನ್ನು ಬ್ಯಾಕ್‌ಅಪ್ ಪಡೆದುಕೊಳ್ಳತ್ತಾರೆ. ಅದೇ ರೀತಿ ಆಪಲ್ ಐಫೋನ್ ಬಳಕೆದಾರರು ಡಾಟಾ ಬ್ಯಾಕ್‌ಅಪ್ ಮಾಡಲು ಅವಕಾಶಗಳಿವೆ.

ಹೌದು, ನಿಮ್ಮ ಫೋನಿನಲ್ಲಿ ಸ್ಟೋರ್ ಮಾಡಿದ ಡಾಟಾಗಳನ್ನು ಕೆಲವೊಮ್ಮೆ ಮರಳಿ ಪಡೆಯುವ ಅಗತ್ಯವಿರುತ್ತದೆ. ಆಗ ಬ್ಯಾಕ್ಅಪ್ ಮಾಡಿಕೊಳ್ಳುವ ಮೂಲಕ ಫೋನಿನಲ್ಲಿ ಸ್ಟೋರ್ ಮಾಡಿರುವ ಡೇಟಾ ಪಡೆಯಬಹುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್‌ಗೆ ಸ್ಥಳ ನೀಡಿರುವಂತೆ ಐಫೋನ್‌ಗೂ ಐ ಕ್ಲೌಡ್ ಸ್ಟೋರೇಜ್ ಆಯ್ಕೆ ಇದ್ದು, ಬಳಕೆದಾರರು ಕಂಪನಿಯ ಈ ಆಯ್ಕೆ ಬಳಸಿಕೊಳ್ಳುವುದರ ಮೂಲಕ ತಮ್ಮ ಪೋಟೊಗಳನ್ನು, ಮೇಲ್‌ಗಳನ್ನು, ಕಾಂಟ್ಯಾಕ್ಟ್ಸ್‌ಗಳನ್ನು ಮತ್ತು ಕ್ಯಾಲೆಂಡರ ಮಾಹಿತಿಗಳನ್ನು ಬ್ಯಾಕ್‌ಅಪ್ ಸ್ಟೋರೇಜ್ ಮಾಡಿಕೊಳ್ಳಬಹುದು. ಹಾಗಾದರೇ ಐಫೋನ್‌ನಲ್ಲಿ ಬ್ಯಾಕ್‌ಅಪ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಐ ಕ್ಲೌಡ್
ಆಪಲ್ ಕಂಪನಿಯು ಬ್ಯಾಕ್‌ಅಪ್ ಸ್ಟೋರೇಜ್‌ಗಾಗಿ 'ಐ ಕ್ಲೌಡ್' ಫೀಚರ್ ಅನ್ನು ತನ್ನ ಐಫೋನ್‌ಗಳಲ್ಲಿ ಪರಿಚಯಿಸಿದ್ದು, ದತ್ತಾಂಶಗಳನ್ನು ಸ್ಟೋರೇಜ್ ಮಾಡಲು ಆನ್‌ಲೈನ್ ಸ್ಥಳಾವಕಾಶ ಒದಗಿಸಲಿದೆ. ಬ್ಯಾಕ್‌ಅಪ್ ದತ್ತಾಂಶಗಳು ಸೆಕ್ಯುರ್ ಆಗಿರಲಿದ್ದು, ಫೈಲ್‌ಗಳನ್ನು ಮೂಲ ರೆಸಲ್ಯೂಶನ್‌ನಲ್ಲಿಯೇ ಸ್ಟೋರ್ ಮಾಡಿಕೊಳ್ಳುತ್ತದೆ. ಐಫೋನ್ ಆಂತರಿಕ ಸಂಗ್ರಹ ಫುಲ್ ಆದಾಗ ಸ್ಟೋರ್ ಆದ ಫೈಲ್‌ಗಳು ಕಡಿಮೆ ಗಾತ್ರಕ್ಕೆ ಬದಲಾಯಿಸಿಕೊಳ್ಳುತ್ತದೆ.

ಐ ಕ್ಲೌಡ್ ಆಕ್ಟಿವ್ ಮಾಡಿ
ಐ ಕ್ಲೌಡ್ ಆಯ್ಕೆಯು ಆಕ್ಟಿವ್ ಆಗಿದ್ದರೇ ಮಾತ್ರ ಫೋಟೊ, ಕಾಂಟ್ಯಾಕ್ಟ್ಸ್, ಕ್ಯಾಲೆಂಡರ್ ಮಾಹಿತಿಗಳು ಬ್ಯಾಕ್‌ಅಪ್ ಸ್ಟೋರೇಜ್ ಆಗುತ್ತವೆ. ಹೀಗಾಗಿ ಐಫೋನಿನಲ್ಲಿ ಐ ಕ್ಲೌಡ್ ಆಕ್ಟಿವ್ ಆಗಿರುವ ಬಗ್ಗೆ ಚೆಕ್ ಮಾಡಿ. ಒಂದು ವೇಳೆ ಆಕ್ಟಿವ್ ಆಗಿರದಿದ್ದರೇ ಸೆಟ್ಟಿಂಗ್ಸ್‌ಗೆ ಆಯ್ಕೆಯಲ್ಲಿ ನಿಮ್ಮ ಹೆಸರಿನ ಐಕಾನ್ ಮೇಲೆ ಕ್ಲಿಕ್ ಮಾಡಿ ನಂತರ ಕಾಣಿಸುವ ಲಿಸ್ಟ್‌ನಲ್ಲಿ ಐ ಕ್ಲೌಡ್ ಆಯ್ಕೆ ಮಾಡಿಕೊಂಡು ಆನ್ ಮಾಡಿರಿ.

5GB ಸ್ಟೋರೇಜ್ ಸಾಮರ್ಥ್ಯ
ಐಫೋನ್‌ನ ಐ ಕ್ಲೌಡ್ ಆನ್‌ಲೈನ್ ಸ್ಟೋರೇಜ್‌ನಲ್ಲಿ 5GB ಸ್ಥಳಾವಕಾಶ ಇರಲಿದ್ದು, ಇದನ್ನು 2TB ವರೆಗೂ ವಿಸ್ತರಿಸಿಕೊಳ್ಳಬಹುದಾದ ಅವಕಾಶವಿದೆ ಆದರೆ ಅದಕ್ಕೆ ಹಣ ನೀಡಬೇಕಿದೆ. ಸೆಟ್ಟಿಂಗ್ಸ್ > ಮ್ಯಾನೆಜ್ > ಸ್ಟೋರೇಜ್ ಪ್ಲ್ಯಾನ್ > ಚೇಂಜ್ ಸ್ಟೋರೇಜ್ ಪ್ಲ್ಯಾನ್ ಆಯ್ಕೆ ಹೋಗಿ ಮೆಮೊರಿ ಹೆಚ್ಚಿಸಿಕೊಳ್ಳಬಹುದು.

ಐ ಟ್ಯೂನ್
ಐಫೋನ್ ಐ ಕ್ಲೌಡ್ ಆನ್‌ಲೈನ್ ಸ್ಟೋರೇಜ್ ನಂತಯೇ ಐ ಟ್ಯೂನ್ ಆಯ್ಕೆಯನ್ನು ಬಳಸಬಹುದಾಗಿದೆ. ಚಾರ್ಜ್ ಕೇಬಲ್ ಮೂಲಕ ಐಫೋನ್ ಅನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿ ಐ ಟ್ಯೂನ್ ರನ್ ಮಾಡಿರಿ. ನಂತರ ಬ್ಯಾಕ್‌ಅಪ್ ಬಾಕ್ಸ್‌ನಲ್ಲಿ ದತ್ತಾಂಶಗಳನ್ನು ಸ್ಟೋರ್ ಮಾಡಬಹುದಾಗಿದೆ.

ಥರ್ಡ್‌ಪಾರ್ಟ್ ಆಪ್
ಬ್ಯಾಕ್ಅಪ್ ಸ್ಟೋರೇಜ್‌ಗಾಗಿ ಕಂಪನಿಯ ಆಯ್ಕೆಗಳನ್ನು ಹೊರತುಪಡಿಸಿ ಥರ್ಡ್‌ಪಾರ್ಟ್ ಆಪ್‌ಗಳನ್ನು ಸಹ ಐಫೋನ್ ಬಳಕೆದಾರರು ಬಳಸಿಕೊಳ್ಳಬಹುದಾಗಿದ್ದು, ಅವುಗಳಲ್ಲಿ ಐಫೋನ್ ಬ್ಯಾಕ್‌ಅಪ್ ಎಕ್ಟ್ಸಿರಿಯರ್ ಸಹ ಒಂದಾಗಿದೆ. ಇದರಲ್ಲಿ ಮೆಸೆಜ್, ಪೋಟೊ, ಕಾಲ್ ಹಿಸ್ಟರಿ ಸೇರಿದಂತೆ ಹಲವು ಮಾಹಿತಿಗಳ ಬ್ಯಾಕ್‌ಅಪ್ ಪಡೆಯಬಹುದಾಗಿದೆ.


Click it and Unblock the Notifications








