Home
ಟೆಕ್ ನೌಕರಿ

WhatsApp ನಲ್ಲಿ ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸಲು ಈ ರೀತಿ ಮಾಡಿ!

ವಾಟ್ಸಾಪ್‌ ಇಂದು ಎಲ್ಲಾ ಕಡೆ ಹಾಸುಹೊಕ್ಕಾಗಿದೆ. ವಾಟ್ಸಾಪ್‌(WhatsApp) ಬಳಕೆ ಮಾಡದ ಸ್ಮಾರ್ಟ್‌ಫೋನ್‌ ಬಳಕೆದಾರರೇ ಇಲ್ಲ ಎಂದೇ ಹೇಳಬಹುದು. ಈ ನಡುವೆ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಈ ಮೂಲಕ ಜನರನ್ನು ವಂಚನೆ ಮಾಡುವಲ್ಲಿ ಯಶಸ್ವಿ ಸಹ ಆಗುತ್ತಿದ್ದಾರೆ. ಈ ಕಾರಣಕ್ಕೆ ವಾಟ್ಸಾಪ್‌ ಬಳಕೆದಾರರು ಎಚ್ಚರಿಕೆ ವಹಿಸುವುದು ಅನಿವಾರ್ಯ.

ಹೌದು, ವಾಟ್ಸಾಪ್‌ನಲ್ಲಿ ಸಾಮಾನ್ಯ ಕರೆಗಳೊಂದಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಸಹ ಇಂದು ಹೆಚ್ಚಾಗುತ್ತಿವೆ. ಕೆಲವರು ಕರೆಗಳ ಹಿನ್ನೆಲೆ ತಿಳಿದುಕೊಂಡು ಅವುಗಳಿಂದ ದೂರ ಸರಿದರೆ ಇನ್ನೂ ಕೆಲವರು ಅಂದರೆ ಈ ಕರೆಗಳ ಬಗ್ಗೆ ಅರಿವಿಲ್ಲದವರು ಮೋಸ ಹೋಗುತ್ತಿದ್ದಾರೆ. ಈ ನಡುವೆ ನೀವು ದಿನವಿಡೀ ಸ್ಪ್ಯಾಮ್ ಕರೆಗಳಿಂದ (spam calls) ಬೇಸತ್ತಿದ್ದೀರಾ?, ಇವುಗಳನ್ನು ನಿಯಂತ್ರಣ ಮಾಡುವುದು ಹೇಗೆ ಎಂದು ಚಿಂತೆಗೆ ಒಳಗಾಗಿದ್ದೀರಾ?. ಹಾಗಿದ್ರೆ, ಬನ್ನಿ ಇದಕ್ಕೆ ನಾವು ಪರಿಹಾರ ನೀಡುತ್ತೇವೆ.

WhatsApp ನಲ್ಲಿ ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸಲು ಈ ರೀತಿ ಮಾಡಿ!

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌: ವಾಟ್ಸಾಪ್‌ ಬಳಕೆದಾರರಿಗೆ ಅನುಕೂಲ ಆಗುವ ಹಲವಾರು ಫೀಚರ್ಸ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಈ ನಡುವೆ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಇದು ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಆಟೋಮ್ಯಾಟಿಕ್‌ ಆಗಿ ಮ್ಯೂಟ್‌ ‌ಮಾಡುತ್ತದೆ, ಇದಕ್ಕೆ ಅಜ್ಞಾತ ಕರೆ ಮಾಡುವವರನ್ನು ಮೌನಗೊಳಿಸು (Silence unknown callers) ಎಂದು ಹೆಸರು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸ್ಪ್ಯಾಮ್ ಕರೆಗಳ ವಿರುದ್ಧ ಹೋರಾಡಲು ಈ ಹೊಸ ಅಸ್ತ್ರವನ್ನು ನೀಡಿದೆ.

ಇನ್ನು ಈ ರೀತಿಯ ಮೋಸದ ಕರೆಗಳು ಹೆಚ್ಚಾಗಿ ಭಾರತ, ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಕೀನ್ಯಾ ಮತ್ತು ಇಥಿಯೋಪಿಯಾದಂತಹ ದೇಶಗಳಲ್ಲಿ ಹೆಚ್ಚಾಗಿ ಬರುತ್ತಿವೆ. ಇದರಿಂದಾಗಿಯೇ ಈಗ ವಾಟ್ಸಾಪ್ ವಂಚನೆ ಮತ್ತು ಸ್ಪ್ಯಾಮ್ ಕರೆಗಳನ್ನು 50% ರಷ್ಟು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಅನ್ನು ಬಳಕೆ ಮಾಡುತ್ತಿದೆ. ಇದರಿಂದಾಗಿ ಬಳಕೆದಾರರ ಭದ್ರತಾ ವಿಷಯದ ಮೇಲೆ ಹೆಚ್ಚು ಗಮನಹರಿಸಿದೆ.

ಈ ಫೀಚರ್ಸ್‌ ಹೇಗೆ ಕೆಲಸ ಮಾಡುತ್ತದೆ?: ಸಂಭಾವ್ಯ ಹಾನಿಯಿಂದ ನಿಮ್ಮನ್ನು ರಕ್ಷಿಸಲು ಅಂದರೆ ಸ್ಪ್ಯಾಮ್ ಮತ್ತು ಪರಿಚಯವಿಲ್ಲದ ಸಂಖ್ಯೆಗಳಿಂದ ಕರೆಗಳನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಲು ಇದು ಸಹಾಯ ಮಾಡುತ್ತದೆ. ಈ ಕರೆಗಳು ಬಂದಾಗ ನಿಮ್ಮ ಮೊಬೈಲ್‌ ರಿಂಗ್‌ ಆಗುವುದಿಲ್ಲ. ಆದರೆ, ಕರೆ ಮಾಡಿದವರು ನಿಮ್ಮ ಕರೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಯಾರು ಕರೆ ಮಾಡಿದ್ದರು ಎಂದು ತಿಳಿದುಕೊಳ್ಳಬಹುದು. ಹಾಗಿದ್ರೆ, ಈ ಫೀಚರ್ಸ್‌ ಅನ್ನು ನಿಮ್ಮ ಫೋನ್‌ನಲ್ಲಿ ಹೇಗೆ ಆಕ್ಟಿವ್‌ ಮಾಡುವುದು ಎಂದು ತಿಳಿಯೋಣ ಬನ್ನಿ.

ಹಂತ 1: ಮೊದಲು ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ವಾಟ್ಸಾಪ್‌ ಅಪ್‌ಅನ್ನು ಓಪನ್ ಮಾಡಿ. ಬಳಿಕ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಬೇಕಾಗುತ್ತದೆ. ಅಂದರೆ ಆಂಡ್ರಾಯ್ಡ್‌ ನಲ್ಲಿ ಸೆಟ್ಟಿಂಗ್‌ಗಳ ಮೆನುವನ್ನು ಪ್ರವೇಶಿಸಲು ಮೇಲಿನ ಬಲಭಾಗದಲ್ಲಿರುವ ಮೂರು-ಡಾಟ್ ಮೆನು ಐಕಾನ್ ಅನ್ನು ಟ್ಯಾಪ್ ಮಾಡಿ. iOS ನಲ್ಲಿ ಕೆಳಗಿನ ಎಡ ಮೂಲೆಯಲ್ಲಿರುವ ಸೆಟ್ಟಿಂಗ್‌ಗಳ ಐಕಾನ್ ಅನ್ನು ಟ್ಯಾಪ್ ಮಾಡಿ.

ಹಂತ 2: ಇದಾದ ನಂತರದಲ್ಲಿ ಅಲ್ಲೇ ಕಾಣಿಸಿಕೊಳ್ಳುವ ಗೌಪ್ಯತೆ (Privacy) ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಬಳಿಕ ಕರೆಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಇದಾದ ತರುವಾಯ ಅಜ್ಞಾತ ಕರೆ ಮಾಡುವವರನ್ನು ನಿಶ್ಯಬ್ದಗೊಳಿಸಿ (Silence unknown callers) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ. ಬಳಿಕ ಅಪರಿಚಿತ ಸಂಖ್ಯೆಗಳಿಂದ ಯಾವುದೇ ಕರೆ ಬಂದರೂ ಮೌನಗೊಳಿಸುತ್ತದೆ.

WhatsApp ನಲ್ಲಿ ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸಲು ಈ ರೀತಿ ಮಾಡಿ!

ಇನ್ನು ಈ ಫೀಚರ್ಸ್ ನಲ್ಲಿ ನೀವು ಯಾವುದೇ ಅಪರಿಚಿತ ಕರೆ ಅಥವಾ ಅಂತಹ ಯಾವುದೇ ಸ್ಪ್ಯಾಮ್ ಕರೆಯನ್ನು ಸ್ವೀಕರಿಸಿದರೆ ಕರೆ ಮಾಡುವವರನ್ನು ನಿರ್ಬಂಧಿಸಲು ಮತ್ತು ವರದಿ ಮಾಡಲು ಸಹ ಆಯ್ಕೆ ನೀಡಲಾಗುತ್ತದೆ. ಇದರೊಂದಿಗೆ ನೀವು ವಾಟ್ಸಾಪ್‌ ನಲ್ಲಿ ಅಪರಿಚಿತ ಫೋನ್ ಸಂಖ್ಯೆಯನ್ನು ನಿರ್ಬಂಧಿಸಲು ಚಾಟ್ ಬಾಕ್ಸ್‌ ಅನ್ನು ತೆರೆಯಿರಿ ಬಳಿಕ ಅಲ್ಲಿ ಬ್ಲಾಕ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ.

ಇದರೊಂದಿಗೆ ಆ ಸಂಪರ್ಕವನ್ನು ವರದಿ ಮಾಡಲು ಬಯಸಿದರೆ, ಸಂಪರ್ಕವನ್ನು ವರದಿ ಮಾಡಿ (Report contact) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ನಿಮಗೆ ಬ್ಲಾಕ್ ಆಯ್ಕೆ ತೆರೆದುಕೊಳ್ಳುತ್ತದೆ. ಅದನ್ನು ಟ್ಯಾಪ್ ಮಾಡಿ. ಈ ಕೆಲಸ ಮಾಡಿದ ನಂತರ ಅವರು ನಿಮಗೆ ಕರೆ ಮಾಡಲು ಅಥವಾ ಸಂದೇಶ ಕಳುಹಿಸಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಸ್ಟೇಟಸ್‌ ಹಾಗೂ ಪ್ರೊಫೈಲ್ ಫೋಟೋವನ್ನು ಸಹ ನೋಡಲು ಆಗುವುದಿಲ್ಲ.

Best Mobiles in India

English summary
If you're tired of spam calls all day long on WhatsApp then know how to block them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+