Home
ಟೆಕ್ ನೌಕರಿ

IRCTC ಆಪ್‌ನಲ್ಲಿ ಟಿಕೆಟ್‌ Cancel ಮಾಡಲು ಈ ಕ್ರಮ ಅನುಸರಿಸಿ!

IRCTC ಆಪ್‌ ಇಲಾಖೆಯ ಅಧಿಕೃತ ರೈಲು ಬುಕಿಂಗ್ ಅಪ್ಲಿಕೇಶನ್ ಆಗಿದೆ. ಸೀಟ್ ಲಭ್ಯತೆ, ತತ್ಕಾಲ್ ರೈಲು ಟಿಕೆಟ್, PNR ಸ್ಟೇಟಸ್‌ ಮತ್ತು ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸಲು ಈ ಅಪ್ಲಿಕೇಶನ್ ಉತ್ತಮ ಅನಿಸುತ್ತದೆ. ಈ ಆಪ್‌ನಲ್ಲಿ ಪ್ರಯಾಣಿಕರು ಸಿಂಗಲ್‌ ಟಿಕೆಟ್ ಹಾಗೂ ಗುಂಪು ಪ್ರಯಾಣದ ಟಿಕೆಟ್‌ ಮಾಡಬಹುದಾಗಿದೆ. ಹಾಗೆಯೇ ಬುಕಿಂಗ್ ಮಾಡಿದ ಟಿಕೆಟ್ ಕ್ಯಾನ್ಸಲ್ (Ticket cancellation) ಮಾಡುವ ಅವಕಾಶ ನೀಡಿದೆ.

IRCTC

ಹೌದು, IRCTC ವೆಬ್‌ಸೈಟ್ ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುವ ಆಯ್ಕೆ ಇದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರಯಾಣಿಸುವಾಗ ಸಾಮಾನ್ಯವಾಗಿ ಒಟ್ಟಿಗೆ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಟಿಕೆಟ್ ರದ್ದು ಮಾಡುವ ಸನ್ನಿವೇಶಗಳು ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಬಳಕೆದಾರರು ಟಿಕೆಟ್ ರದ್ದು ಮಾಡಬಹುದು ಅಥವಾ ಒಬ್ಬ ಸದಸ್ಯರ ಟಿಕೆಟ್ ಅಷ್ಟೇ ಸಹ ರದ್ದು ಮಾಡಲು ಅವಕಾಶ ಇದೆ. ಹಾಗಾದರೆ ಈ ಟಿಕೆಟ್ ರದ್ದು ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಈ ಕ್ರಮಗಳನ್ನು ಅನುಸರಿಸಿ:

ಈ ಕ್ರಮಗಳನ್ನು ಅನುಸರಿಸಿ:

* ಲಾಗಿನ್ ಸ್ಕ್ರೀನ್‌ನಲ್ಲಿ ಸರಿಯಾದ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ IRCTC ಇ-ಟಿಕೆಟಿಂಗ್ ವೆಬ್‌ಸೈಟ್ ತೆರೆಯಿರಿ ಮತ್ತು ಲಾಗಿನ್ ಮಾಡಿ.
* ಈಗ ನಿರ್ದಿಷ್ಟ ಇ-ಟಿಕೆಟ್ ಅನ್ನು ರದ್ದುಗೊಳಿಸಲು, My Transactions ಆಯ್ಕೆ ಗೆ ಹೋಗಿ.
* ಈಗ My Account ಮೆನುವಿನಲ್ಲಿ Booked Ticket History ಲಿಂಕ್ ಅನ್ನು ಕ್ಲಿಕ್ ಮಾಡಿ.
* ವಿಭಾಗದಲ್ಲಿ ನೀವು ಬುಕ್ ಮಾಡಿದ ಟಿಕೆಟ್‌ಗಳನ್ನು ನೋಡುತ್ತೀರಿ. ಈಗ ರದ್ದು ಮಾಡಬೇಕಾದ ಟಿಕೆಟ್ ಅನ್ನು ಆಯ್ಕೆ ಮಾಡಿ ಮತ್ತು Cancel Ticket ಕ್ಲಿಕ್ ಮಾಡಿ.
* ಟಿಕೆಟ್‌ಗಳನ್ನು ರದ್ದುಗೊಳಿಸಬೇಕಾದ ಪ್ರಯಾಣಿಕರ ಹೆಸರನ್ನು ಆಯ್ಕೆ ಮಾಡುವ ಮೂಲಕ ರದ್ದತಿಯನ್ನು ಪ್ರಾರಂಭಿಸಿ.

ದೃಢೀಕರಣ

* ಈಗ ಪ್ರಯಾಣಿಕರ ಹೆಸರಿನ ಮೊದಲು ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು Cancel Ticket ಬಟನ್ ಕ್ಲಿಕ್ ಮಾಡಿ.
* ರದ್ದತಿಯನ್ನು ಖಚಿತಪಡಿಸಲು ದೃಢೀಕರಣ ಪಾಪ್‌ನಲ್ಲಿ ಸರಿ ಕ್ಲಿಕ್ ಮಾಡಿ.
* ರದ್ದುಗೊಳಿಸುವಿಕೆಯು ಯಶಸ್ವಿಯಾದ ನಂತರ ರದ್ದತಿ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಟಿಕೆಟ್ ಹಣವನ್ನು ನಿಮ್ಮ ಖಾತೆಗೆ ಮರುಪಾವತಿಸಲಾಗುತ್ತದೆ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್‌ನಲ್ಲಿ ರದ್ದತಿಯ ದೃಢೀಕರಣ SMS ಮತ್ತು ಇಮೇಲ್ ಅನ್ನು ಸಹ ನೀವು ಪಡೆಯುತ್ತೀರಿ.

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ ರೈಲ್ವೆಯ ಇಲಾಖೆಯ ಅಧಿಕೃತ IRCTCಯ ಪಾಲುದಾರ ರೈಲು ಅಪ್ಲಿಕೇಶನ್ ಆಗಿದೆ. ಈ ಆಪ್‌ ಸಹ ಎಲ್ಲಾ ಅಗತ್ಯ ಫೀಚರ್ಸ್‌/ಸೇವೆಗಳ ಆಯ್ಕೆ ಹೊಂದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್‌ ಹಾಗೂ ತತ್ಕಾಲ್ ಟಿಕೆಟ್‌ಗಳ ಸರ್ಚ್ ಮಾಡಬಹುದು. ರನ್ನಿಂಗ್ ಟ್ರೈನಿನ ಲೈವ್ ಸ್ಟೇಟಸ್‌ ಚೆಕ್ ಮಾಡಬಹುದಾಗಿದೆ. ಹಾಗೆಯೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.

Ixigo ಟ್ರೈನ್ಸ್

Ixigo ಟ್ರೈನ್ಸ್

ಪ್ರಮುಖ ರೈಲು ಟಿಕೆಟ್ ಬುಕಿಂಗ್ ಆಪ್ಸ್‌ಗಳ ಪೈಕಿ Ixigo ಅಪ್ಲಿಕೇಶನ್‌ ಸಹ ಒಂದಾಗಿದೆ. ಈ ಆಪ್‌ನಲ್ಲಿ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟ್ರೈನ್ ಲೈವ್ ಸ್ಟೇಟಸ್‌ ಟ್ರಾಕಿಂಗ್ ಮಾಡಬಹುದಾಗಿದ್ದು, ಹಾಗೆಯೇ PNR ಸ್ಟೇಟಸ್‌ ಸಹ ಪರಿಶೀಲಿಸಬಹುದಾಗಿದೆ. ಇನ್ನು ಈ ಆಪ್‌ ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ಡಿವೈಸ್‌ಗಳಲ್ಲಿಯೂ ಲಭ್ಯವಿದೆ. ಹಾಗೆಯೇ ಈ ಆಪ್‌ನಲ್ಲಿ ವಿಮಾನಗಳು, ಬಸ್ಸುಗಳು, ಹೋಟೆಲ್‌ಗಳು ಮತ್ತು ಕ್ಯಾಬ್‌ಗಳನ್ನು ಸಹ ಕಾಯ್ದಿರಿಸಬಹುದು.

ರೈಲು ಯಾತ್ರಾ (RailYatra)

ರೈಲು ಯಾತ್ರಾ (RailYatra)

ರೈಲು ಯಾತ್ರಾ ಆಪ್‌ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಈ ರೈಲು ಯಾತ್ರಾ ಆಪ್‌ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್‌ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಪರಿಶೀಲಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಇನ್ನು ಈ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ವಿಶೇಷ ಆಯ್ಕೆ ಇದೆ.

Best Mobiles in India

English summary
How to cancel ticket in IRCTC online: Follow these steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+