Home
ಟೆಕ್ ನೌಕರಿ

ಗೂಗಲ್ ಪೇ, ಫೋನ್‌ ಪೇ, ಪೇಟಿಎಮ್‌ UPI ಪಿನ್ ಬದಲಿಸುವುದು ಹೇಗೆ ಗೊತ್ತಾ?

ಪ್ರಸ್ತುತ ಜನರು ಆನ್‌ಲೈನ್ ಸೇವೆಗಳತ್ತ ಹೆಚ್ಚಾಗಿ ವಾಲುತ್ತಿದ್ದು, ಆ ಪೈಕಿ ಬಳಕೆದಾರರ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಪೇ, ಫೋನ್‌ ಪೇ ಹಾಗೂ ಪೇಟಿಎಮ್‌ ಆಪ್‌ಗಳು ಇದ್ದೆ ಇರುತ್ತವೆ. ಈ ಆಪ್‌ಗಳ ಮೂಲಕವೇ ರೀಚಾರ್ಜ್, ಹಣ ವರ್ಗಾವಣೆ, ಬಿಲ್ ಪೇಮೆಂಟ್‌ನಂತಹ ಕೆಲಸಗಳಿಗೆ ಯುಪಿಐ-UPI ಪೇಮೆಂಟ್‌ ಆಪ್‌ಗಳನ್ನೇ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌) ಅಧಿಕವಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನು ಈ ಆಪ್‌ಗಳ ಬಳಕೆ ಸರಳ ಮತ್ತು ಸುರಕ್ಷಿತವು ಆಗಿವೆ. ಆದರೆ ಆಪ್‌ಗಳ ಪಾಸ್‌ವರ್ಡ್‌/ಪಿನ್ ವಿಷಯದ ಬಗ್ಗೆ ಗಮನ ನೀಡಲೇಬೇಕು.

ಡಿಜಿಟಲ್ ಪೇಮೆಂಟ್

ಹೌದು, ಪ್ರಸ್ತುತ ಡಿಜಿಟಲ್ ಪೇಮೆಂಟ್ ಬಳಕೆ ಅಧಿಕವಾಗಿದ್ದು, ಸದ್ಯದ ಲಾಕ್‌ಡೌನ್‌ ಅವಧಿಯಲ್ಲಿ ಹಣ ಟ್ರಾನ್ಸ್‌ಫರ್, ಬಿಲ್ ಪೇಮೆಂಟ್‌ಗೆ, ಇನ್ಶೂರೆನ್ಸ್‍ ಪಾವತಿ ಸೇರಿದಂತೆ ಹಲವು ಪಾವತಿಗಳಿಗೆ ಹೆಚ್ಚು ಅನುಕೂಲಕರವಾಗಿವೆ. ಇನ್ನೂ ಬಳಕೆದಾರರು ಈ ಆಪ್‌ಗಳಲ್ಲಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲಾಗಿರುತ್ತದೆ ಹಾಗೂ ಸುರಕ್ಷತೆಗಾಗಿ ಯುಪಿಐ ಪಿನ್ ರಚಿಸಿರುತ್ತಾರೆ. ಆರಂಭದಲ್ಲಿ ರಚಿಸಿದ ಯುಪಿಐ ಪಿನ್‌ ಬದಲಾಯಿಸುವುದೇ ಇಲ್ಲ. ಆದರೆ ಸುರಕ್ಷಿತ ದೃಷ್ಠಿಯಿಂದ ಯುಪಿಐ ಪಿನ್‌ ಅನ್ನು ಆಗಾಗ್ಗೆ ಬದಲಾಯಿಸುವುದು ಅವಶ್ಯಕ. ಹಾಗಾದರೆ ಗೂಗಲ್‌ ಪೇ, ಫೋನ್ ಪೇ, ಹಾಗೂ ಪೇಟಿಎಮ್‌ ಆಪ್‌ಗಳಲ್ಲಿ ಯುಪಿಐ ಪಿನ್ ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫೋನ್‌ ಪೇ- UPI ಪಿನ್ ಬದಲಿಸಲು ಹೀಗೆ ಮಾಡಿ

ಫೋನ್‌ ಪೇ- UPI ಪಿನ್ ಬದಲಿಸಲು ಹೀಗೆ ಮಾಡಿ

* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋನ್‌ಪೇ ತೆರೆಯಿರಿ.
* ಪರದೆಯ ಮೇಲಿನ ಬಲ ಮೂಲೆಯಲ್ಲಿ ನೀಡಲಾಗಿರುವ ಮೂರು ಬಾರ್‌ಗಳ ಐಕಾನ್‌ ಅನ್ನು ಟ್ಯಾಪ್ ಮಾಡುವುದು.
* ಆಗ ಮೆನು ತೆರೆಯುತ್ತದೆ. ನಂತರ 'ಬ್ಯಾಂಕ್ ಅಕೌಂಟ್ಸ್' ವಿಭಾಗಕ್ಕೆ ಹೋಗಿ.
* ನಂತರ ನೀವು ಯುಪಿಐ ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
* ಆನಂತರ ನಿಮ್ಮ ಡೆಬಿಟ್ / ಎಟಿಎಂ ಕಾರ್ಡ್‌ನ ಕೊನೆಯ ಆರು ಅಂಕೆಗಳು ಮತ್ತು ಮುಕ್ತಾಯ ದಿನಾಂಕವನ್ನು ನಮೂದಿಸಿ.
* ನಿಮ್ಮ ಬ್ಯಾಂಕಿನಿಂದ ನೀವು ಸ್ವೀಕರಿಸುವ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ನಮೂದಿಸಿ
* ಸಬ್‌ಮಿಟ್‌ ಬಟನ್ ಕ್ಲಿಕ್ ಮಾಡಿ.

ಗೂಗಲ್ ಪೇ- UPI ಪಿನ್ ಬದಲಿಸಲು ಹೀಗೆ ಮಾಡಿ

ಗೂಗಲ್ ಪೇ- UPI ಪಿನ್ ಬದಲಿಸಲು ಹೀಗೆ ಮಾಡಿ

* ನಿಮ್ಮ ಮೊಬೈಲ್ ಫೋನ್‌ನಲ್ಲಿ Google Pay ಆಪ್ ತೆರೆಯಿರಿ.
* ಸ್ಕ್ರೀನ್‌ ಮೇಲಿನ ಎಡ ಭಾಗದಲ್ಲಿಯಲ್ಲಿ ಕಾಣುವ ನಿಮ್ಮ ಫೋಟೋವನ್ನು ಟ್ಯಾಪ್ ಮಾಡಿ.
* ನಂತರ 'ಬ್ಯಾಂಕ್ ಖಾತೆ' ಕ್ಲಿಕ್ ಮಾಡಿ.
* ನೀವು ಸಂಪಾದಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
'* ಇನ್ನಷ್ಟು' ಟ್ಯಾಪ್ ಮಾಡಿ ನಂತರ 'ಚೇಂಜ್ ಯುಪಿಐ ಪಿನ್' ಆಯ್ಕೆಮಾಡಿ.
* ಹೊಸ ಯುಪಿಐ ಪಿನ್ ರಚಿಸಿ.
* ಅದೇ ಯುಪಿಐ ಪಿನ್ ಅನ್ನು ಮತ್ತೆ ನಮೂದಿಸಿ.

ಪೇಟಿಎಮ್‌- UPI ಪಿನ್ ಬದಲಿಸಲು ಹೀಗೆ ಮಾಡಿ

ಪೇಟಿಎಮ್‌- UPI ಪಿನ್ ಬದಲಿಸಲು ಹೀಗೆ ಮಾಡಿ

* ನಿಮ್ಮ ಫೋನ್‌ನಲ್ಲಿ Paytm ಆಪ್ ತೆರೆಯಿರಿ.
* ಪರದೆಯ ಮೇಲಿನ ಎಡ ಭಾಗದಲ್ಲಿ ಲಭ್ಯವಿರುವ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ (ನಿಮ್ಮ ಹೆಸರಿನ ಪಕ್ಕದಲ್ಲಿಯೇ).
* ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಸೆಟ್ಟಿಂಗ್‌ಗಳು' ಟ್ಯಾಪ್ ಮಾಡಿ.
* ನಾಲ್ಕು ಆಯ್ಕೆಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ, 'ಪಾವತಿ ಸೆಟ್ಟಿಂಗ್' ಅನ್ನು ಟ್ಯಾಪ್ ಮಾಡಿ.
* ಪಾವತಿ ಸೆಟ್ಟಿಂಗ್ ಅಡಿಯಲ್ಲಿ 'ಉಳಿಸಿದ ಪಾವತಿ ವಿವರಗಳು' ಕ್ಲಿಕ್ ಮಾಡಿ.
* ನೀವು ಯುಪಿಐ ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯ ಮೇಲೆ ಕ್ಲಿಕ್ ಮಾಡಿ.
* ಹೊಸ ಯುಪಿಐ ಪಿನ್ ರಚಿಸಿ' ಟ್ಯಾಪ್ ಮಾಡಿ.
* ನಿಮ್ಮ ಕಾರ್ಡ್ ಮತ್ತು ಮುಕ್ತಾಯ ದಿನಾಂಕದ ಕೊನೆಯ 6 ಅಂಕೆಗಳನ್ನು ನಮೂದಿಸಿ.
* ಕಂಟಿನ್ಯೂ ಕ್ಲಿಕ್ ಮಾಡಿ.

Best Mobiles in India

English summary
UPI Pin change process in a simple way. Here is the Step-by-step guide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+