ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಈ ಬದಲಾವಣೆಯನ್ನು ಸುಲಭವಾಗಿ ಮಾಡಬಹುದು!
ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್ ಅಧಿಕ ಬಳಕೆದಾರರನ್ನು ಆಕರ್ಷಿಸಿದೆ. ಇನ್‌ಸ್ಟಾಗ್ರಾಮ್‌ನ ಕಿರು ವಿಡಿಯೋ ಫೀಚರ್ ರೀಲ್ ಸಹ ಈಗಾಗಲೇ ಸಾಕಷ್ಟು ಲೀಡಿಂಗ್‌ನಲ್ಲಿ ಇದೆ. ಹಾಗೆಯೇ ಇನ್‌ಸ್ಟಾಗ್ರಾಮ್‌ನ ಕೆಲವೊಂದು ಫೀಚರ್ಸ್‌ಗಳು ಬಳಕೆದಾರರಿಗೆ ಬಹು ಉಪಯುಕ್ತ ಎನಿಸಿವೆ. ಹಾಗೆಯೇ ಬಳಕೆದಾರರು ಸುಲಭವಾಗಿ ತಮ್ಮ ಯೂಸರ್ ನೇಮ್ (username) ಬದಲಾಯಿಸಬಹುದು.
ಹೌದು, ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಯೂಸರ್ ನೇಮ್ ಅನ್ನು ಬದಲಾಯಿಸಲು ಅವಕಾಶ ಇದೆ. ಬಳಕೆದಾರರು ಮೊಬೈಲ್ ಮೂಲಕ ಅಥವಾ ಲ್ಯಾಪ್‌ಟಾಪ್/ಪಿಸಿಯ ಮೂಲಕವು ಸಹ ಬಳಕೆದಾರ ಹೆಸರನ್ನು ಬದಲಾಯಿಸಲು ಕೆಲವು ವಿಧಾನಗಳನ್ನು ಸಂಸ್ಥೆಯು ನೀಡಿದೆ. ಹಾಗಾದರೇ ಇನ್‌ಸ್ಟಾಗ್ರಾಮ್‌ನಲ್ಲಿ ಯೂಸರ್ ನೇಮ್ ಬದಲಾಯಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್ ಮೂಲಕ ಇನ್‌ಸ್ಟಾಗ್ರಾಮ್ ಯೂಸರ್ ನೇಮ್ ಬದಲಿಸಲು ಹೀಗೆ ಮಾಡಿ:
ಬಳಕೆದಾರರೇ, ಆಂಡ್ರಾಯ್ಡ್ ಹಾಗೂ ಐಓಎಸ್ ಎರಡರಲ್ಲೂ, ಇನ್‌ಸ್ಟಾಗ್ರಾಮ್ ಆಪ್‌ನಲ್ಲಿ ಬಳಕೆದಾರರ ಯೂಸರ್ ನೇಮ್ ಬದಲಿಸುವ ವಿಧಾನ ಒಂದೇ ರೀತಿ ಇರುತ್ತದೆ. ಈ ಮುಂದಿನ ಕ್ರಮಗಳನ್ನು ಅನುಸರಿಸಿ.
ಪ್ರೋಫೈಲ್ ಮೂಲಕ ಹೀಗೆ ಮಾಡಿ
ಹಂತ 1 : ಇನ್‌ಸ್ಟಾಗ್ರಾಮ್ ಆಪ್ ತೆರೆಯಿರಿ ಮತ್ತು ಲಾಗಿನ್ ಆಗಿರಿ.
ಹಂತ 2 : ಬಳಿಕ ನಿಮ್ಮ ಪ್ರೊಫೈಲ್ ಪೇಜ್‌ಗೆ ಭೇಟಿ ನೀಡಿರಿ.
ಹಂತ 3 : ಆ ನಂತರ ಎಡಿಟ್ ಪ್ರೊಫೈಲ್ ಅನ್ನು ಸೆಲೆಕ್ಟ್ ಮಾಡಿ.
ಹಂತ 4 : ಬಳಿಕ ಯೂಸರ್ ನೇಮ್ ಬಾಕ್ಸ್ ಮೇಲೆ ಟ್ಯಾಪ್ ಮಾಡಿ ಮತ್ತು ಅದನ್ನು ಬದಲಾಯಿಸಿ.

ಅಕೌಂಟ್ಸ್ ಸೆಂಟರ್ ಮೂಲಕ ಹೀಗೆ ಮಾಡಿರಿ
ಹಂತ 1 : ಇನ್‌ಸ್ಟಾಗ್ರಾಮ್ ಆಪ್ ತೆರೆಯಿರಿ ಮತ್ತು ನಿಮ್ಮ ಅಕೌಂಟ್‌ಗೆ ಲಾಗಿನ್ ಆಗಿರಿ.
ಹಂತ 2 : ಆ ನಂತರ ಪ್ರೊಫೈಲ್ ಪೇಜ್‌ಗೆ ಭೇಟಿ ನೀಡಿರಿ.
ಹಂತ 3 : ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡ್ಯಾಶ್ ಮೆನು ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 4 : ಸೆಟ್ಟಿಂಗ್‌ಗಳು ಮತ್ತು ಸೆಕ್ಯುರಿಟಿ ಆಯ್ಕೆ ಮೇಲೆ ಟ್ಯಾಪ್ ಮಾಡಿರಿ.

ಹಂತ 5 : ಅಕೌಂಟ್ ಸೆಂಟರ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.
ಹಂತ 6 : ಪ್ರೊಫೈಲ್‌ಗಳು ಕ್ಲಿಕ್ ಮಾಡಿ ಬಳಿಕ ಯೂಸರ್ ನೇಮ್ ಆಯ್ಕೆ ಮೇಲೆ ಟ್ಯಾಪ್ ಮಾಡಿ
ಹಂತ 7 : ಯೂಸರ್ ನೇಮ್ ಆಯ್ಕೆಯನ್ನು ಮತ್ತೊಮ್ಮೆ ಕ್ಲಿಕ್ ಮಾಡಿರಿ
ಹಂತ 8 : ಆ ನಂತರ ಯೂಸರ್ ನೇಮ್ ಅನ್ನು ಎಡಿಟ್ ಮಾಡಬಹುದು.
ಪಿಸಿ/ಲ್ಯಾಪ್‌ಟಾಪ್ ಮೂಲಕ ಇನ್‌ಸ್ಟಾಗ್ರಾಮ್ ಯೂಸರ್ ನೇಮ್ ಬದಲಿಸಲು ಹೀಗೆ ಮಾಡಿ:
- ವೆನ್ ಬ್ರೌಸರ್‌ನಲ್ಲಿ Instagram.com ಗೆ ಭೇಟಿ ನೀಡಿ.
- ಆ ನಂತರ ಕೆಳಗಿನ ಎಡ ಭಾಗದ ಕಾರ್ನರ್‌ನಲ್ಲಿ ಇರುವ ಮೋರ್ ಬಟನ್ ಕ್ಲಿಕ್ ಮಾಡಿ (ಸೈಡ್ ಮೆನು), ಬಳಿಕ ಸೆಟ್ಟಿಂಗ್‌ಗಳು ಅಥವಾ ನಿಮ್ಮ ಪ್ರೊಫೈಲ್ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಆ ನಂತರ ಎಡಿಟ್ ಪ್ರೊಫೈಲ್ ಬಟನ್ ಮೇಲೆ ಕ್ಲಿಕ್ ಮಾಡಿರಿ.
- ಅಕೌಂಟ್ಸ್ ಸೆಂಟರ್ ಆಯ್ಕೆಯಲ್ಲಿ ಇನ್ನಷ್ಟು ನೋಡಿ ಆಯ್ಕೆ ಅನ್ನು ಕ್ಲಿಕ್ ಮಾಡಿ.
- ನಂತರ ನಿಮ್ಮ ಯೂಸರ್ ನೇಮ್ ಮೇಲೆ ಕ್ಲಿಕ್ ಮಾಡಿ. ಆಗ ಚಿಕ್ಕ ಪಾಪ್-ಅಪ್ ಬಾಕ್ಸ್ ಅನ್ನು ತೆರೆಯುತ್ತದೆ.
- ಯೂಸರ್ ನೇಮ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ ಹಾಗೂ ಕೆಳಗಿನ ಸ್ಕ್ರೀನ್‌ನಲ್ಲಿ ಯೂಸರ್ ನೇಮ್ ಅನ್ನು ಬದಲಾಯಿಸಿ.


Click it and Unblock the Notifications








