Home
ಟೆಕ್ ನೌಕರಿ

ಗೂಗಲ್ ಪೇ UPI ಪಿನ್ ಮರೆತಿದ್ದರೆ, ಹೊಸ ಪಿನ್ ಸೆಟ್‌ ಮಾಡಲು ಹೀಗೆ ಮಾಡಿ!

ಸದ್ಯ ಡಿಜಿಟಲ್ ಪೇಮೆಂಟ್‌ ಹೆಚ್ಚು ಬಳಕೆಯಲ್ಲಿ ಕಾಣಿಸಿಕೊಂಡಿದ್ದು, ಅನೇಕರು ಗೂಗಲ್‌ ಪೇ, ಫೋನ್ ಪೇ ನಂತಹ ಯುಪಿಐ ಆಪ್‌ಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಅದರೊಂದಿಗೆ ಯುಪಿಐ ಆಪ್‌ಗಳ ಮೂಲಕವೇ ಮೊಬೈಲ್ ರೀಚಾರ್ಜ್, ಬಿಲ್ ಪೇಮೆಂಟ್‌ ಸೇರಿದಂತೆ ಹಲವು ಪಾವತಿಗಳನ್ನು ಮಾಡುತ್ತಿದ್ದಾರೆ. ಇನ್ನು ಯುಪಿಐ ಆಪ್‌ಗಳ ಬಳಕೆ ಸರಳ ಮತ್ತು ಸುರಕ್ಷಿತವು ಆಗಿವೆ. ಆದರೆ ಆಪ್‌ಗಳ ಪಾಸ್‌ವರ್ಡ್‌/ಪಿನ್ ವಿಷಯದ ಬಗ್ಗೆ ಗಮನ ನೀಡಲೇಬೇಕು. ಕೆಲವು ಸಂದರ್ಭಗಳಲ್ಲಿ ಬಳಕೆದಾರರು ಪಾಸ್‌ವರ್ಡ್‌ ಮರೆತಿರುತ್ತಾರೆ.

ಕೆಲವೊಮ್ಮೆ

ಹೌದು, ಗೂಗಲ್ ಪೇ UPI ಆಪ್‌ನಲ್ಲಿ ತ್ವರಿತವಾಗಿ ಆನ್‌ಲೈನ್ ಪೇಮೆಂಟ್ ಕೆಲಸಗಳನ್ನು ನಡೆಸಬಹುದಾಗಿದ್ದು, ಆದರೆ ಪಾಸ್‌ವರ್ಡ್‌ ಬಗ್ಗೆ ಜಾಗರೂಕತೆ ವಹಿಸಬೇಕು. ಅದಾಗ್ಯೂ ಕೆಲವೊಮ್ಮೆ ಬಳಕೆದಾರರು ತಪ್ಪಾಗಿ UPI ಪಿನ್ ಅನ್ನು 3 ಕ್ಕಿಂತ ಹೆಚ್ಚು ಬಾರಿ ನಮೂದಿಸಿದರೆ, ಅವರು ತಮ್ಮ ಪಿನ್ ಅನ್ನು ಮರು ಹೊಂದಿಸಬೇಕು ಅಥವಾ ಅವರ ಮುಂದಿನ ವಹಿವಾಟು ನಡೆಸಲು 24 ಗಂಟೆಗಳ ಕಾಲ ಕಾಯಬೇಕು. ಆದಾಗ್ಯೂ, ಗೂಗಲ್ ಪೇ ಬಳಕೆದಾರರು ತಮ್ಮ ಪಿನ್ ಅನ್ನು ಮರೆತಿದ್ದಾರೆ ಎಂದು ಖಚಿತವಾಗಿದ್ದರೆ, ಅವರು ತಮ್ಮ UPI ಪಿನ್ ಅನ್ನು ಅಪ್‌ಡೇಟ್ ಮಾಡಬಹುದು. ಹಾಗಾದರೇ ಗೂಗಲ್‌ ಪೇ, ಫೋನ್‌ ಪೇ ಮತ್ತು ಪೇಟಿಎಮ್‌ಯುಪಿಐ ಪಿನ್ ಬದಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್ ಪೇ- UPI ಪಿನ್ ಬದಲಿಸಲು ಹೀಗೆ ಮಾಡಿ:

ಗೂಗಲ್ ಪೇ- UPI ಪಿನ್ ಬದಲಿಸಲು ಹೀಗೆ ಮಾಡಿ:

* ನಿಮ್ಮ ಮೊಬೈಲ್ ಫೋನ್‌ನಲ್ಲಿ Google Pay ಆಪ್ ತೆರೆಯಿರಿ.
* ಸ್ಕ್ರೀನ್‌ ಮೇಲಿನ ಎಡ ಭಾಗದಲ್ಲಿಯಲ್ಲಿ ಕಾಣುವ ನಿಮ್ಮ ಫೋಟೋವನ್ನು ಟ್ಯಾಪ್ ಮಾಡಿ.
* ನಂತರ 'ಬ್ಯಾಂಕ್ ಖಾತೆ' ಕ್ಲಿಕ್ ಮಾಡಿ.
* ನೀವು ಎಡಿಟ್ ಮಾಡಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.
'* ಇನ್ನಷ್ಟು' ಟ್ಯಾಪ್ ಮಾಡಿ ನಂತರ 'ಚೇಂಜ್ ಯುಪಿಐ ಪಿನ್' ಆಯ್ಕೆ ಮಾಡಿ.
* ಹೊಸ ಯುಪಿಐ ಪಿನ್ ರಚಿಸಿ.
* ಅದೇ ಯುಪಿಐ ಪಿನ್ ಅನ್ನು ಮತ್ತೆ ನಮೂದಿಸಿ.

ಫೋನ್‌ ಪೇ ಅಪ್ಲಿಕೇಶನ್ ನಲ್ಲಿ UPI ಪಿನ್ ಬದಲಿಸಲು ಈ ಕ್ರಮ ಫಾಲೋ ಮಾಡಿ:

ಫೋನ್‌ ಪೇ ಅಪ್ಲಿಕೇಶನ್ ನಲ್ಲಿ UPI ಪಿನ್ ಬದಲಿಸಲು ಈ ಕ್ರಮ ಫಾಲೋ ಮಾಡಿ:

* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೋನ್‌ಪೇ ತೆರೆಯಿರಿ.
* ಪರದೆಯ ಮೇಲಿನ ಬಲ ಮೂಲೆಯಲ್ಲಿ ನೀಡಲಾಗಿರುವ ಮೂರು ಬಾರ್‌ಗಳ ಐಕಾನ್‌ ಅನ್ನು ಟ್ಯಾಪ್ ಮಾಡುವುದು.
* ಆಗ ಮೆನು ತೆರೆಯುತ್ತದೆ. ನಂತರ 'ಬ್ಯಾಂಕ್ ಅಕೌಂಟ್ಸ್' ವಿಭಾಗಕ್ಕೆ ಹೋಗಿ.
* ನಂತರ ನೀವು ಯುಪಿಐ ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
* ಆನಂತರ ನಿಮ್ಮ ಡೆಬಿಟ್ / ಎಟಿಎಂ ಕಾರ್ಡ್‌ನ ಕೊನೆಯ ಆರು ಅಂಕೆಗಳು ಮತ್ತು ಮುಕ್ತಾಯ ದಿನಾಂಕವನ್ನು ನಮೂದಿಸಿ.
* ನಿಮ್ಮ ಬ್ಯಾಂಕಿನಿಂದ ನೀವು ಸ್ವೀಕರಿಸುವ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ನಮೂದಿಸಿ
* ಸಬ್‌ಮಿಟ್‌ ಬಟನ್ ಕ್ಲಿಕ್ ಮಾಡಿ.

ಪೇಟಿಎಮ್‌- UPI ಪಿನ್ ಬದಲಿಸಲು ಹೀಗೆ ಮಾಡಿ

ಪೇಟಿಎಮ್‌- UPI ಪಿನ್ ಬದಲಿಸಲು ಹೀಗೆ ಮಾಡಿ

ಪೇಟಿಎಮ್‌- UPI ಪಿನ್ ಬದಲಿಸಲು ಹೀಗೆ ಮಾಡಿ
* ನಿಮ್ಮ ಫೋನ್‌ನಲ್ಲಿ Paytm ಆಪ್ ತೆರೆಯಿರಿ.
* ಪರದೆಯ ಮೇಲಿನ ಎಡ ಭಾಗದಲ್ಲಿ ಲಭ್ಯವಿರುವ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ (ನಿಮ್ಮ ಹೆಸರಿನ ಪಕ್ಕದಲ್ಲಿಯೇ).
* ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಸೆಟ್ಟಿಂಗ್‌ಗಳು' ಟ್ಯಾಪ್ ಮಾಡಿ.
* ನಾಲ್ಕು ಆಯ್ಕೆಗಳನ್ನು ಸ್ಕ್ರೀನ್‌ ಮೇಲೆ ಕಾಣಿಸಲಾಗುತ್ತದೆ. ಆಗ 'ಪಾವತಿ ಸೆಟ್ಟಿಂಗ್' ಅನ್ನು ಟ್ಯಾಪ್ ಮಾಡಿ.
* ಪಾವತಿ ಸೆಟ್ಟಿಂಗ್ ಅಡಿಯಲ್ಲಿ 'ಸೇವ್ಡ್ ಪಾವತಿ ವಿವರಗಳು' ಆಯ್ಕೆ ಕ್ಲಿಕ್ ಮಾಡಿ.
* ನೀವು ಯುಪಿಐ ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯ ಮೇಲೆ ಕ್ಲಿಕ್ ಮಾಡಿ.
* ಹೊಸ ಯುಪಿಐ ಪಿನ್ ರಚಿಸಿ ಆಯ್ಕೆ ಟ್ಯಾಪ್ ಮಾಡಿ.
* ನಿಮ್ಮ ಕಾರ್ಡ್ ಮತ್ತು ಮುಕ್ತಾಯ ದಿನಾಂಕದ ಕೊನೆಯ 6 ಅಂಕೆಗಳನ್ನು ನಮೂದಿಸಿ.
* ನಂತರ ಕಂಟಿನ್ಯೂ ಕ್ಲಿಕ್ ಮಾಡಿ.

Best Mobiles in India

English summary
How To Change Your UPI PIN On Google Pay App: Follow These Steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+