Home
ಟೆಕ್ ನೌಕರಿ

ವಾಟ್ಸಾಪ್‌ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್‌ ತಿಳಿಯೋದು ಹೇಗೆ ಗೊತ್ತೆ?

ಜನಪ್ರಿಯ ಮೆಸೆಜಿಂಗ್ ಅಪ್ಲಿಕೆಶನ್ ವಾಟ್ಸಾಪ್ (WhatsApp) ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಆ ಪೈಕಿ ವಾಟ್ಸಾಪ್‌ ಪೇ ಒಂದಾಗಿದ್ದು, ಇದರೊಂದಿಗೆ ಕೆಲವೇ ಸೆಕೆಂಡುಗಳಲ್ಲಿ ಬಳಕೆದಾರರು ಅವರ ಬ್ಯಾಂಕ್ ಬ್ಯಾಲೆನ್ಸ್‌ ಸಹ ಪರಿಶೀಲಿಸಬಹುದಾಗಿದೆ. ಈ ಆಯ್ಕೆಯು ಬಳಕೆದಾರರಿಗೆ ಬಹಳ ಉಪಯುಕ್ತ ಎನಿಸಿದೆ. ವಾಟ್ಸಾಪ್ ಪೇಮೆಂಟ್‌ ಸೇವೆಗಾಗಿ ಕಂಪನಿಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನೊಂದಿಗೆ ಕೈಜೋಡಿಸಿದೆ.

ವಾಟ್ಸಾಪ್‌

ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್‌ ಸಂಸ್ಥೆಯ ವಾಟ್ಸಾಪ್‌ ಪೇ ಸೇವೆಯಲ್ಲಿ ಬಳಕೆದಾರರು ಹಣವನ್ನು ವರ್ಗಾಯಿಸುವ ಮತ್ತು ಸ್ವೀಕರಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಅಲ್ಲದೇ ವಾಟ್ಸಾಪ್‌ ಮೂಲಕ ಬಳಕೆದಾರರು ಬ್ಯಾಂಕ್ ಬ್ಯಾಲೆನ್ಸ್‌ ಚೆಕ್ ಮಾಡಲು ಅವಕಾಶ ಇದೆ. ಹಾಗಾದರೇ ವಾಟ್ಸಾಪ್‌ ಆಪ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್‌ ಮಾಹಿತಿ ತಿಳಿಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಮೂಲಕ ಬ್ಯಾಂಕ್ ಬ್ಯಾಲೆನ್ಸ್‌ ತಿಳಿಯಲು ಈ ಹಂತಗಳನ್ನು ಅನುಸರಿಸಿ:

ವಾಟ್ಸಾಪ್‌ ಮೂಲಕ ಬ್ಯಾಂಕ್ ಬ್ಯಾಲೆನ್ಸ್‌ ತಿಳಿಯಲು ಈ ಹಂತಗಳನ್ನು ಅನುಸರಿಸಿ:

* ಮೊದಲು ನಿಮ್ಮ ವಾಟ್ಸಾಪ್ ಖಾತೆಯನ್ನು ತೆರೆಯಿರಿ.
* ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ, ಮೇಲ್ಭಾಗದಲ್ಲಿ ಮೋರ್ ಎಂಬ ಆಯ್ಕೆಯನ್ನು ನೀವು ಪಡೆಯುತ್ತೀರಿ.
* ಆಗ ಅಲ್ಲಿ ಪೇಮೆಂಟ್ ಮಾಡುವ ಆಯ್ಕೆ ಸಿಗುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.
* ಇದರ ನಂತರ, ಪಾವತಿ ವಿಧಾನದಲ್ಲಿ ಸಂಬಂಧಿಸಿದ ಬ್ಯಾಂಕ್ ಖಾತೆಯ ಮೇಲೆ ಟ್ಯಾಪ್ ಮಾಡಿ.
* ಅಲ್ಲಿ ನೀವು ವ್ಯೂ ಅಕೌಂಟ್ ಬ್ಯಾಲೆನ್ಸ್ ಆಯ್ಕೆಯನ್ನು ಪಡೆಯುತ್ತೀರಿ.
* ವೀಕ್ಷಿಸಿ ಖಾತೆಯ ಬ್ಯಾಲೆನ್ಸ್ ಅನ್ನು ಟ್ಯಾಪ್ ಮಾಡಿ ಮತ್ತು ಅಲ್ಲಿ ನಿಮ್ಮ UPI ಪಿನ್ ಅನ್ನು ನಮೂದಿಸಿ.
* ನೀವು UPI ಪಿನ್ ನಮೂದಿಸಿದಾಗ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಸ್ಕ್ರೀನ್‌ ಮೇಲೆ ತೋರಿಸಲಾಗುತ್ತದೆ.

ಬ್ಯಾಲೆನ್ಸ್ ತಿಳಿಯಲು ಮತ್ತೊಂದು ವಿಧಾನ:

ಬ್ಯಾಲೆನ್ಸ್ ತಿಳಿಯಲು ಮತ್ತೊಂದು ವಿಧಾನ:

- ವಾಟ್ಸಾಪ್‌ ನಲ್ಲಿ ಹಣವನ್ನು ಕಳುಹಿಸುವಾಗ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಸಹ ನೀವು ಪರಿಶೀಲಿಸಬಹುದು.
- ಇದಕ್ಕಾಗಿ, ಪಾವತಿ ಸಂದೇಶದ ಪರದೆಯಲ್ಲಿ ನೀಡಲಾದ ಪಾವತಿ ವಿಧಾನವನ್ನು ಕ್ಲಿಕ್ ಮಾಡಿ.
- ನಂತರ ಅಲ್ಲಿ ತೋರಿಸುವ ವ್ಯೂ ಅಕೌಂಟ್ ಬ್ಯಾಲೆನ್ಸ್ ಮೇಲೆ ಟ್ಯಾಪ್ ಮಾಡಿ.
- ನಿಮ್ಮ ವಾಟ್ಸಾಪ್‌ ಖಾತೆಗೆ ನೀವು ಬಹು ಬ್ಯಾಂಕ್ ಖಾತೆಗಳನ್ನು ಸೇರಿಸಿದ್ದರೆ, ಅವುಗಳಲ್ಲಿ ಆಯಾ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
- ಇದರ ನಂತರ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ನಿಮ್ಮ UPI ಪಿನ್ ಅನ್ನು ನೀವು ನಮೂದಿಸಬೇಕು.

ವಾಟ್ಸಾಪ್‌ ಪೇ ಬಳಕೆ ಮುನ್ನ ಈ ಸಂಗತಿ ತಿಳಿಯಿರಿ:

ವಾಟ್ಸಾಪ್‌ ಪೇ ಬಳಕೆ ಮುನ್ನ ಈ ಸಂಗತಿ ತಿಳಿಯಿರಿ:

- ವಾಟ್ಸಾಪ್‌ ಪೇ ಸೇವೆಯನ್ನು ಸಕ್ರಿಯಗೊಳಿಸಲು ನೀವು ಬ್ಯಾಂಕ್ ಖಾತೆ ಮತ್ತು ಫೋನ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಲು ನೀವು ಸಾಮಾನ್ಯವಾಗಿ ಬಳಸುವ ಸ್ಕ್ರೀನ್‌ನ ಕೆಳಭಾಗದಲ್ಲಿರುವ 'ಲಗತ್ತುಗಳು' ಐಕಾನ್ ಕ್ಲಿಕ್ ಮಾಡುವ ಮೂಲಕ ಪಾವತಿಗಳನ್ನು ಮಾಡಬಹುದು. ಬಳಕೆದಾರರು ಯುಪಿಐ ಪಾಸ್ಕೋಡ್ ಅನ್ನು ಸಹ ಹೊಂದಿಸಬೇಕಾಗಿದೆ. ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಯುಪಿಐ ಅಪ್ಲಿಕೇಶನ್‌ನೊಂದಿಗೆ ಯುಪಿಐ ಪಾಸ್‌ಕೋಡ್ ಹೊಂದಿದ್ದರೆ ನೀವು ಅದೇ ಕೋಡ್ ಅನ್ನು ಬಳಸಬಹುದು.

ಬ್ಯಾಂಕ್

- ಗೂಗಲ್ ಪೇ, ಫೋನ್ ಪೇ, ಹಾಗೂ ವಿವಿಧ ಬ್ಯಾಂಕ್ ಅಪ್ಲಿಕೇಶನ್‌ಗಳು ಬಳಸುವ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ನಲ್ಲಿ ವಾಟ್ಸಾಪ್ ಪೇ ಸಹ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಹಣವನ್ನು ವಾಟ್ಸಾಪ್ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಹಣವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ವಾಟ್ಸಾಪ್‌ ಪೇ ಮೂಲಕ ವರ್ಗಾಯಿಸುವ ವ್ಯವಸ್ಥೆ ಇದೆ.

Best Mobiles in India

English summary
How To Check Account Balance Via WhatsApp: Follow These Steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+