Home
ಟೆಕ್ ನೌಕರಿ

ನೀವು ಏರ್‌ಟೆಲ್‌ ಸಿಮ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ಈ ಸಂಗತಿ ತಿಳಿಯೋದು ಸುಲಭ!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಭಾರ್ತಿ ಏರ್‌ಟೆಲ್ ಎರಡನೇಯ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಂಸ್ಥೆಯು ಬಳಕೆದಾರರನ್ನು ಆಕರ್ಷಿಸಲಿ ಹಲವು ಅತ್ಯುತ್ತಮ ರೀಚಾರ್ಜ್‌ ಯೋಜನೆಗಳನ್ನು ಪರಿಚಯಿಸಿದೆ. ಇದರ ಜೊತೆಗೆ ಕೆಲವೊಂದು ಹೆಚ್ಚುವರಿ ಸೇವೆಗಳನ್ನು ಕೂಡಾ ಲಭ್ಯ ಮಾಡಿದೆ. ಏರ್‌ಟೆಲ್‌ ಗ್ರಾಹಕರು ಮೊಬೈಲ್‌ನಲ್ಲಿಯೇ ಸುಲಭವಾಗಿ ಕಾಲ್ ಹಿಸ್ಟರಿ ತಿಳಿದುಕೊಳ್ಳಬಹುದಾಗಿದೆ.

ಹೌದು, ಏರ್‌ಟೆಲ್‌ ಬಳಕೆದಾರರು ತನ್ನ ಕಾಲ್‌ ಹಿಸ್ಟರಿ ತಿಳಿಯಲು ಅವಕಾಶ ಇದೆ. ಒಂದು ತಿಂಗಳು ಅಥವಾ ಸುಮಾರು ಆರು ತಿಂಗಳ ವರೆಗಿನ ಕಾಲ್‌ ಹಿಸ್ಟರಿ ಫೋನ್‌ ಲಾಗ್‌ನಲ್ಲಿ ತಿಳಿಯುವುದು ಕೆಲವೊಮ್ಮೆ ಸಾಧ್ಯವಾಗದು. ಏಕೆಂದರೆ ಕರೆಗಳು ಬಂದಾಗ ಅಥವಾ ಮಾಡಿದಾಗ ಹಿಂದಿನ ಕಾಲ್‌ ಹಿಸ್ಟರಿ ಮರೆಯಾಗುತ್ತವೆ. ಆದರೆ ಏರ್‌ಟೆಲ್‌ ಥ್ಯಾಂಕ್ಸ್‌ ಆಪ್‌ (Airtel Thanks app) ಮೂಲಕ ಬಳಕೆದಾರರು ಹಿಂದಿನ ಕಾಲ್‌ ಹಿಸ್ಟರಿ ಪಡೆಯಬಹುದಾಗಿದೆ.

ನೀವು ಏರ್‌ಟೆಲ್‌ ಸಿಮ್‌ ಬಳಕೆ ಮಾಡ್ತೀರಾ?..ಹಾಗಿದ್ರೆ, ಈ ಸಂಗತಿ ತಿಳಿಯೋದು ಸುಲಭ!

ಗ್ರಾಹಕರು ಕಾಲ್ ಹಿಸ್ಟರಿ ಅನ್ನು ಏರ್‌ಟೆಲ್‌ ಥ್ಯಾಂಕ್ಸ್‌ ಆಪ್‌ ಹಾಗೂ ಅಧಿಕೃತ ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳಬಹುದು. ಪ್ರೀಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಗ್ರಾಹಕರು ಕೂಡಾ ಈ ಸೌಲಭ್ಯ ಪಡೆಯಬಹುದು. ಹಾಗಾದರೇ ಏರ್‌ಟೆಲ್‌ ಥ್ಯಾಂಕ್ಸ್‌ ಆಪ್‌ ಮೂಲಕ ಕಾಲ್‌ ಹಿಸ್ಟರಿ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಪ್‌ ಮೂಲಕ ಕಾಲ್‌ ಹಿಸ್ಟರಿ ಪಡೆಯಲು ಈ ಕ್ರಮ ಅನುಸರಿಸಿ

* ಮೊದಲಿಗೆ ನಿಮ್ಮ ಫೋನಿನಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಅನ್ನು ತೆರೆಯಿರಿ.
* ನಂತರ, ಫೋನಿನಲ್ಲಿ ಸ್ಕ್ರೀನ್‌ ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಹೆಲ್ಪ್ ಟ್ಯಾಬ್ ಅನ್ನು ಕ್ಲಿಕ್‌ ಮಾಡಿ.
* ಬಳಿಕ ಅಲ್ಲಿ ಚಾಟ್ ನೌ ಅಥವಾ ಕಂಪ್ಲೇಂಟ್ಸ್ ಐಕಾನ್ ಅನ್ನು ಸೆಲೆಕ್ಟ್‌ ಮಾಡಿ.
* ಆ ನಂತರ ಮೊದಲೇ ರೆಕಾರ್ಡ್ ಮಾಡಲಾದ ಪ್ರಶ್ನೆಗಳ ಪಟ್ಟಿಯನ್ನು ಒದಗಿಸಲಾಗುತ್ತದೆ. ಕೆಳಗಿನ ಎಡಭಾಗದಲ್ಲಿರುವ ಟೈಪ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನಂತರ ಅಲ್ಲಿ ಕಾಲ್‌ ಹಿಸ್ಟರಿ ಎಂದು ಟೈಪ್ ಮಾಡಿ.

* ಆ ನಂತರ ನಿಮ್ಮ ಇಮೇಲ್ ಐಡಿಯಲ್ಲಿ ಕಾಲ್‌ ಹಿಸ್ಟರಿ EPREBILL (ಸ್ಪೇಸ್) ಯಾವ ತಿಂಗಳು (ಸ್ಪೇಸ್) ನಿಮ್ಮ ಇ-ಮೇಲ್ ಐಡಿ 121 ಗೆ ಎಸ್‌ಎಮ್‌ಎಸ್‌ ಮಾಡಲು ಟೆಕ್ಸ್ಟ್‌ ಅನ್ನು ಕಾಣುವಿರಿ. ಸೂಕ್ತ ಮಾಹಿತಿಯೊಂದಿಗೆ 121 ಗೆ ಎಸ್‌ಎಮ್‌ಎಸ್‌ ಮಾಡಿರಿ. ಉದಾಹರಣೆಗೆ: ಮಾರ್ಚ್‌ ತಿಂಗಳ ಕಾಲ್‌ ಹಿಸ್ಟರಿ ಬೇಕಿದ್ದರೆ, EPREBILL MARCH ನಿಮ್ಮ ಇಮೇಲ್‌ ಐಡಿ ನಮೂದಿಸಿ.

* ಎಸ್‌ಎಮ್‌ಎಸ್‌ ಕಳುಹಿಸಿದ ಬಳಿಕ, ಕೆಲವು ಕ್ಷಣಗಳ ನಂತರ ಈ ರೀತಿಯ ರಿಪ್ಲೇ ಪಡೆಯುವಿರಿ - 'ಹಾಯ್, (ನಿಮ್ಮ ಏರ್‌ಟೆಲ್ ನಂಬರ್) ಗಾಗಿ ಮಾರ್ಚ್‌ (ವರ್ಷ) ಕ್ಕೆ ಗ್ರಾಹಕರ ಇ-ಮೇಲ್ ಐಡಿಗೆ ಕಳುಹಿಸಲಾಗಿದೆ.

ಏರ್‌ಟೆಲ್‌ ವೆಬ್‌ಸೈಟ್‌ ಮೂಲಕ ಕಾಲ್‌ ಹಿಸ್ಟರಿ ಪಡೆಯಲು ಹೀಗೆ ಮಾಡಿ

* ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ವೆಬ್ ಬ್ರೌಸರ್ ತೆರೆಯಿರಿ ನಂತರ ಏರ್‌ಟೆಲ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ತೆರೆಯಿರಿ
* ಬಳಿಕ ಸ್ಕ್ರೀನ್‌ ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಖಾತೆ ಟ್ಯಾಬ್ ಅನ್ನು ಕ್ಲಿಕ್ ಮಾಡಿ
* ತದ ನಂತರ ನಿಮ್ಮ ಮೊಬೈಲ್ ನಂಬರ್‌ ಮತ್ತು ಪಾಸ್‌ವರ್ಡ್‌ ಲಾಗಿನ್ ಮಾಹಿತಿ ನಮೂದಿಸಿ.

* ಆ ನಂತರ ಬಳಕೆಯ ವಿವರಗಳ (Usage Details) ವಿಭಾಗ ತೆರೆಯಿರಿ.
* ಬಳಕೆಯ ವಿವರಗಳ ಕೆಳಗೆ, ನಿರ್ದಿಷ್ಟ ಅವಧಿಗೆ ಕಾಲ್‌ ಹಿಸ್ಟರಿ ವೀಕ್ಷಿಸುವ ಆಯ್ಕೆ ಅನ್ನು ಕಾಣುವಿರಿ.
* ನಿಮಗೆ ಬೇಕಾದ ದಿನಾಂಕ ಶ್ರೇಣಿಯನ್ನು ಆಯ್ಕೆ ಮಾಡಿ ಮತ್ತು Submit ಕ್ಲಿಕ್ ಮಾಡಿ.
* ನಂತರ ನಿಮ್ಮ ಕಾಲ್‌ ಹಿಸ್ಟರಿ ರೆಕಾರ್ಡ್ ಕಾಣಿಸಿಕೊಳ್ಳುತ್ತದೆ.

Best Mobiles in India

English summary
How to Check Airtel Call History Details. Step by step guide is here and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+