BSNL ವ್ಯಾಲಿಡಿಟಿ, ಡೇಟಾ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಗೊತ್ತಾ?
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾಗಿದೆ. ಹಲವು ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮೂಲಕ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡಿದೆ. ಇನ್ನು ಎಲ್ಲ ಟೆಲಿಕಾಂಗಳು ಬಳಕೆದಾರರ ಅನುಕೂಲಕ್ಕಾಗಿ ಡೇಟಾ ಬ್ಯಾಲೆನ್ಸ್, ಯೋಜನೆಯ ಮಾಹಿತಿ, ವಾಯಿಸ್ ಕರೆ, ವ್ಯಾಲಿಡಿಟಿ, ಎಸ್‌ಎಮ್‌ಎಸ್ ಪ್ರಯೋಜನಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿವೆ.

ಬಿಎಸ್‌ಎನ್‌ಎಲ್ ಟೆಲಿಕಾಂ ಸಹ ಬ್ಯಾಲೆನ್ಸ್ ಮಾಹಿತಿ ಪಡೆಯಲು ಬಳಕೆದಾರರಿಗೆ ಆಯ್ಕೆ ನೀಡಿದೆ. ಅದಕ್ಕಾಗಿ ಕೆಲವೊಂದು USSD ಕೋಡ್ ನೀಡಿದೆ. ಆ ಮೂಲಕ ಗ್ರಾಹಕರು ಡೇಟಾ, ಎಸ್‌ಎಮ್‌ಎಸ್, ಪ್ಲ್ಯಾನ್ ವ್ಯಾಲಿಡಿಟಿ ಮಾಹಿತಿಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ. ಆದರೆ ಕೆಲವೊಮ್ಮೆ ಬ್ಯಾಲೆನ್ಸ್ ಪರಿಶೀಲನೆ ಮಾಡುವಾಗ ತಕ್ಷಣಕ್ಕೆ USSD ಕೋಡ್‌ಗಳು ನೆನಪಿಗೆ ಬರುವುದಿಲ್ಲ. ಹೀಗಾಗಿ ಕೆಲವು ಬಳಕೆದಾರರಿಗೆ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಹಾಗಾದರೇ ಬಿಎಸ್‌ಎನ್‌ಎಲ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಮುಖ್ಯ ಬ್ಯಾಲೆನ್ಸ್ ಚೆಕ್ ಮಾಡಲು:
ಬಿಎಸ್‌ಎನ್‌ಎಲ್ ಸಂಖ್ಯೆಯಿಂದ ಮುಖ್ಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು, ನೀವು *123# ಅನ್ನು ಡಯಲ್ ಮಾಡಿದರೆ ಸಾಕು. USSD ಕೋಡ್ ಸ್ವಯಂಚಾಲಿತವಾಗಿ ಮಾಹಿತಿ ಕಾಣಿಸುತ್ತದೆ. ಹಾಗೆಯೇ ನೀವು *112# ಅನ್ನು ಸಹ ಡಯಲ್ ಮಾಡಬಹುದು. ಇನ್ನು ಎಸ್‌ಎಂಎಸ್ ಕಳುಹಿಸುವ ಮೂಲಕ ಬಿಎಸ್‌ಎನ್‌ಎಲ್ ಬ್ಯಾಲೆನ್ಸ್ ಪರಿಶೀಲಿಸುವ ಮಾಡುವ ಆಯ್ಕೆ ಅನ್ನು ಕಂಪನಿ ನೀಡಿದೆ. ಅದಕ್ಕಾಗಿ ಬಳಕೆದಾರರು ‘BAL' ಅನ್ನು 123 ಗೆ ಎಸ್‌ಎಮ್‌ಎಸ್ ಕಳುಹಿಸಬಹುದು. ಇದಲ್ಲದೆ, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು OTP ಬಳಸಿಕೊಂಡು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬಹುದು. ಬಳಿಕ ಅಪ್ಲಿಕೇಶನ್‌ನಿಂದ ಮುಖ್ಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು.

ಬಿಎಸ್‌ಎನ್‌ಎಲ್ ಡೇಟಾ ಬ್ಯಾಲೆನ್ಸ್ ಸಂಖ್ಯೆಗಳು ಅಥವಾ ವಿಚಾರಣೆ ಕೋಡ್‌ಗಳು:
- 2G ಅಥವಾ 3G ಡೇಟಾವನ್ನು ಪರಿಶೀಲಿಸಲು ಬಯಸಿದರೆ, *123*6# ಅಥವಾ *123*10# ಅನ್ನು ಡಯಲ್ ಮಾಡಬಹುದು.
- ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್‌ನಲ್ಲಿರುವ ಬಳಕೆದಾರರು *124# ಅನ್ನು ಡಯಲ್ ಮಾಡುವ ಮೂಲಕ ಡೇಟಾವನ್ನು ಪರಿಶೀಲಿಸಬಹುದು.
- *124*2# ಅನ್ನು ಬಳಸಿಕೊಂಡು ಬಿಎಸ್‌ಎನ್‌ಎಲ್ ನೆಟ್ ಬ್ಯಾಲೆನ್ಸ್ ಸಹ ಪರಿಶೀಲಿಸಬಹುದು
- ಡೇಟಾ ಬ್ಯಾಲೆನ್ಸ್ ತಿಳಿಯಲು *112# ಅನ್ನು ಡಯಲ್ ಮಾಡಬಹುದು.
- ನೈಟ್ ಡೇಟಾ ಬ್ಯಾಲೆನ್ಸ್ ಪರಿಶೀಲಿಸಲು, *123*8# ಅನ್ನು ಡಯಲ್ ಮಾಡಬಹುದು.
- ಅಪ್ಲಿಕೇಶನ್‌ಗೆ ಹೋಗುವ ಮೂಲಕ ಡೇಟಾ ಬ್ಯಾಲೆನ್ಸ್‌ನ ವಿವರಗಳನ್ನು ಸಹ ಪರಿಶೀಲಿಸಬಹುದು.

ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ವ್ಯಾಲಿಡಿಟಿ ಚೆಕ್ ಮಾಡಲು ಹೀಗೆ ಮಾಡಿ:
ಪ್ರಿಪೇಯ್ಡ್ ಸಿಮ್ ವ್ಯಾಲಿಡಿಟಿ ಅನ್ನು ಪರಿಶೀಲಿಸಲು, *123*1# ಅನ್ನು ಡಯಲ್ ಮಾಡಬಹುದು. ಇದು ನಿಮ್ಮ ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಸಂಖ್ಯೆಯ ವ್ಯಾಲಿಡಿಟಿ ವಿವರಗಳೊಂದಿಗೆ ಮುಖ್ಯ ಬ್ಯಾಲೆನ್ಸ್ ಅನ್ನು ನಿಮಗೆ ತೋರಿಸುತ್ತದೆ. ನಿಮ್ಮ BSNL ಮೊಬೈಲ್ ಸಂಖ್ಯೆಯ ಉಳಿದ ವ್ಯಾಲಿಡಿಟಿ ನೋಡಲು ಅಪ್ಲಿಕೇಶನ್ ಅನ್ನು ಸಹ ಬಳಸಬಹುದು.

ಬಿಎಸ್‌ಎನ್‌ಎಲ್ ಎಸ್‌ಎಮ್‌ಎಸ್ ಪ್ಯಾಕ್ ಬ್ಯಾಲೆನ್ಸ್ ತಿಳಿಯಲು ಈ ಕೋಡ್ ಬಳಸಿ:
USSD ಕೋಡ್‌ಗಳನ್ನು ಬಳಸಿಕೊಂಡು ಎಸ್‌ಎಮ್‌ಎಸ್ (SMS) ಪ್ಯಾಕ್ ಬ್ಯಾಲೆನ್ಸ್ ಅನ್ನು ತಿಳಿಯಲು ಆಯ್ಕೆಯನ್ನು ನೀಡಿದೆ. ಬಳಕೆದಾರರು ಉಳಿದಿರುವ ಎಸ್‌ಎಮ್‌ಎಸ್ ಬ್ಯಾಲೆನ್ಸ್‌ನ ಫಲಿತಾಂಶವನ್ನು ಪಡೆಯಲು ನೀವು ಕೆಳಗೆ ಸೂಚಿಸಿದ ಕೋಡ್‌ಗಳನ್ನು ಡಯಲ್ ಮಾಡಬೇಕಾಗಿರುವುದು:
*123*1#
*123*5#
*125#
*123*2#


Click it and Unblock the Notifications








