ಐಫೋನ್ ಖರೀದಿ ಮಾಡಿದ್ದೀರಾ?..ಹಾಗಿದ್ರೆ ಇದನ್ನು ಒಮ್ಮೆ ಚೆಕ್ ಮಾಡಿಬಿಡಿ!
ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಭ್ಯ ಇದ್ದರೂ, ಐಫೋನ್‌ಗಳ ರೇಂಜ್ ಬೇರೆ ಲೆವೆಲ್‌ನಲ್ಲಿ ಇದೆ. ಅನೇಕ ಗ್ರಾಹಕರು ಐಫೋನ್ ಖರೀದಿಸಲು ಬಯಸುತ್ತಾರೆ, ಆದರೆ ಆಪಲ್ ಐಫೋನ್ ಬೆಲೆ ದುಬಾರಿ ಆಗಿವೆ. ಅದಾಗ್ಯೂ, ಗ್ರಾಹಕರು ಐಫೋನ್ ಖರೀದಿಸಲು ಮುಂದಾಗುತ್ತಾರೆ. ಒಂದು ವೇಳೆ ನೀವು ಐಫೋನ್ ಖರೀದಿಸಿದರೆ, ಅದು ರೀಫರ್ಬಿಶಡ್ (refurbished) ಫೋನಾ ಅಥವಾ ಇಲ್ಲವಾ ತಿಳಿಯಬಹುದು!
ಹೌದು, ಮೊಬೈಲ್ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ನಕಲಿ ಉತ್ಪನ್ನ ನೀಡುವ ಉದ್ದೇಶ ಹೊಂದಿರುವುದಿಲ್ಲ. ಆದರೆ, ಆನ್‌ಲೈನ್‌ನಲ್ಲಿ ಮೂಲಕ ಖರೀದಿಸುವಾಗ ಕೆಲವೊಮ್ಮೆ ರೀಫರ್ಬಿಶಡ್ (refurbished) ಫೋನ್ ಕೈ ಸೇರುವ ಸಾಧ್ಯತೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಖರೀದಿಸಿರುವ ಐಫೋನ್ ರೀಫರ್ಬಿಶಡ್ (refurbished) ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ಅವಕಾಶ ಇದೆ. ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೀಫರ್ಬಿಶಡ್ (refurbished) ಪತ್ತೆ ಮಾಡಲು ಈ ಕ್ರಮ ಅನುಸರಿಸಿ :
* ಐಫೋನಿನಲ್ಲಿ ಸೆಟ್ಟಿಂಗ್ಸ್ ಆಪ್ ತೆರೆಯಿರಿ ಮತ್ತು ಸಾಮಾನ್ಯ > ಅಬೋಟ್ ಆಯ್ಕೆ ಕ್ಲಿಕ್ ಮಾಡಿ.
* ಈ ಆಯ್ಕೆ ಕ್ಲಿಕ್ ಮಾಡಿದರೆ, ಡಿವೈಸ್ ಹೆಸರು, ಅದರ ಸಾಫ್ಟ್‌ವೇರ್ ಆವೃತ್ತಿ ಮತ್ತು ಮಾದರಿ ಸಂಖ್ಯೆ ಒಳಗೊಂಡಂತೆ ಐಫೋನ್ ಕುರಿತು ಪ್ರಮುಖ ಮಾಹಿತಿಯ ಪಟ್ಟಿ ಕಾಣುತ್ತದೆ.
* ಮಾದರಿ ಸಂಖ್ಯೆಯು M ನಿಂದ ಪ್ರಾರಂಭ ಆದರೆ, ಅದನ್ನು ಆಪಲ್ ಸಂಸ್ಥೆಯಿಂದ ಹೊಸದಾಗಿ ಖರೀದಿಸಲಾಗಿದೆ ಎಂದರ್ಥ.
* ಮಾದರಿ ಸಂಖ್ಯೆಯು F ನಿಂದ ಪ್ರಾರಂಭ ಆದರೆ, ಅದನ್ನು ಆಪಲ್ ಅಥವಾ ವಾಹಕದಿಂದ ರೀಫರ್ಬಿಶಡ್ ಮಾಡಲಾಗಿದೆ ಎಂದರ್ಥ.
* ಮಾದರಿ ಸಂಖ್ಯೆಯು P ನಿಂದ ಶುರುವಾದರೆ, ಅದನ್ನು ಪರ್ಸನಲೈಜ್ಡ್ ಐಫೋನ್ ಮಾದರಿ ಎಂದರ್ಥ
* ಮಾದರಿ ಸಂಖ್ಯೆಯು N ನಿಂದ ಪ್ರಾರಂಭ ಆದರೆ, ದೋಷಪೂರಿತ ಐಫೋನ್‌ಗೆ ಬದಲಿಯಾಗಿ ನೀಡಿರುವ ಐಫೋನ್ ಸಾಧನ ಎಂದರ್ಥ.
ಒಂದು ವೇಳೆ ರೀಫರ್ಬಿಶಡ್ (refurbished) ಆಗಿದ್ದರೆ..
ಒಂದು ವೇಳೆ ರೀಫರ್ಬಿಶಡ್ (refurbished) ಆಗಿದೆ ಎಂದು ಖಚಿತವಾದರೆ, ಅದಕ್ಕಾಗಿ ಗಾಬರಿ ಅಥವಾ ಭಯಪಡೆಬೇಕಿಲ್ಲ. ಏಕೆಂದರೆ ಆಪಲ್ ತನ್ನ ಪ್ರಮಾಣೀಕೃತ ರೀಫರ್ಬಿಶಡ್ ಮಾಡಿದ ಫೋಣ್‌ಗಳನ್ನು ಕಠಿಣ ಪ್ರಕ್ರಿಯೆಯ ಮೂಲಕ ಇರಿಸುತ್ತದೆ ಹಾಗೂ ಅವುಗಳನ್ನು ಹೊಸದಾಗಿ ಮಾಡುತ್ತದೆ. ಫೋನಿನ ಅವರು ಪ್ರತಿ ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ ಹಾಗೂ ಅಗತ್ಯವಿದ್ದರೆ ಫೋನಿನ ಕೆಲ ಭಾಗಗಳನ್ನು ಚೇಂಜ್ ಮಾಡುತ್ತಾರೆ.
ಹಾಗೆಯೇ ಈ ಅಂಶಗಳನ್ನು ಒಮ್ಮೆ ಗಮನಿಸಿ ಬಿಡಿ :
ಐಫೋನಿನ IMEI ನಂಬರ್ ಪರಿಶೀಲಿಸಿ : ಮೂಲ ಐಫೋನ್ ಮಾದರಿಗಳು IMEI ನಂಬರ್ ಅನ್ನು ಒಳಗೊಂಡಿರುತ್ತವೆ. ಈ ಮೂಲಕವೂ ಸಹ ಐಫೋನ್ ಅಸಲಿಯೆ ಅಥವಾ ನಕಲಿಯೇ ಎಂದು ಪತ್ತೆ ಮಾಡಬಹುದು.
ಇನ್ನು IMEI ನಂಬರ್ ನೋಡಲು ಸೆಟ್ಟಿಂಗ್ಸ್‌ಗೆ ಹೋಗಿ > ನಂತರ ಜನರಲ್ ಸೆಲೆಕ್ಟ್ ಮಾಡಿ > ಅಬೋಟ್ ಆಯ್ಕೆಯನ್ನು ಕ್ಲಿಕ್ ಮಾಡಿರಿ > ನಂತರ IMEI ನಂಬರ್ ನೋಡಲು ಕೆಳಗೆ ಸ್ಕ್ರಾಲ್ ಮಾಡಿರಿ. ಸ್ಕ್ರಾಲ್ ಮಾಡಿದ ಬಳಿಕ ಅಲ್ಲಿ ನಿಮಗೆ ಯಾವುದೇ IMEI ಅಥವಾ ಸರಣಿ ನಂಬರ್ ಕಾಣಿಸದೇ ಇದ್ದರೆ, ಆ ಐಫೋನ್ ಮಾದರಿಯು ನಕಲಿಯಾಗಿರುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಐಫೋನ್ ಆಪರೇಟಿಂಗ್ ಸಿಸ್ಟಮ್ ಪರಿಶೀಲಿಸಿ ನೋಡಿ :
ಐಫೋನ್ ಡಿವೈಸ್‌ಗಳು iOS ಓಎಸ್ ನಲ್ಲಿ ಕೆಲಸ ನಿರ್ವಹಿಸುತ್ತದೆ. ಆಪಲ್ ಸಂಸ್ಥೆಯ iOS ಓಎಸ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಿಂದ ಸಂಪೂರ್ಣ ಬದಲಿ ಆಗಿರುತ್ತದೆ. ಐಫೋನ್ ಚಾಲನೆಯಲ್ಲಿರುವ ಆಪರೇಟಿಂಗ್ ಸಿಸ್ಟಮ್ ಅನ್ನು ಚೆಕ್ ಮಾಡಲು ಸೆಟ್ಟಿಂಗ್ಸ್ ಮೆನುಗೆ ಭೇಟಿ ನೀಡಿರಿ. ಆ ನಂತರ ಸಾಫ್ಟ್‌ವೇರ್ ಟ್ಯಾಬ್‌ಗೆ ಹೋಗಿರಿ. ಆ ಬಳಿಕ ಐಒಎಸ್-ಚಾಲಿತ ಐಫೋನ್‌ಗಳು ಸಫಾರಿ, ಹೆಲ್ತ್, ಐಮೂವಿಯಂತಹ ಕೆಲವು ಆಪ್ಸ್‌ಗಳನ್ನು ಕಾಣಬಹುದಾಗಿದೆ.


Click it and Unblock the Notifications








