Home
ಟೆಕ್ ನೌಕರಿ

ಕರ್ನಾಟಕ ಚುನಾವಣೆ 2023: ಮೊಬೈಲ್‌ನಲ್ಲಿ ಕ್ಷಣ ಕ್ಷಣದ ರಿಸಲ್ಟ್‌ ನೋಡಲು ಹೀಗೆ ಮಾಡಿ

ಕರ್ನಾಟಕ ಚುನಾವಣೆ 2023ರ ಮತ ಎಣಿಕೆ ಇಂದು ನಡೆಯುತ್ತಿದ್ದು,ಜನರ ಗಮನವೆಲ್ಲಾ ಫಲಿತಾಂಶದ ಕಡೆ ಕೇಂದ್ರೀಕೃತವಾಗಿದೆ.ಇದಕ್ಕಾಗಿ ಬಹುಪಾಲು ಮಂದಿ ಕಣ್ಣು ಮಿಟುಕಿಸದ ಹಾಗೆ ಮಾಧ್ಯಮಗಳ ಮುಂದೆ ಕೂರುವುದು ಅಥವಾ ಇನ್ನಿತರೆ ಸೈಟ್‌ಗಳಿಗೆ ಭೇಟಿ ನೀಡುವುದು ಸಾಮಾನ್ಯ.ಆದರೆ,ನಿಮ್ಮ ಫೋನ್‌ ಮೂಲಕವೇ ಅತ್ಯಂತ ಸರಳವಾಗಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಅಧಿಕೃತ ಫಲಿತಾಂಶ ತಿಳಿದುಕೊಳ್ಳಿ.

ಹೌದು, ಚುನಾವಣಾ ಆಯೋಗವು ಚುನಾವಣೆ ಸಂಬಂಧದ ಮಾಹಿತಿಯನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದ್ದು, ಅದರಂತೆ ಈಗ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ನೀವು ವೀಕ್ಷಣೆ ಮಾಡಬಹುದು. ಈ ಮಾಹಿತಿಯನ್ನು ಯಾರೂ ಬೇಕಾದರೂ ಸಹ ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್‌ಫೋನ್ ಇದ್ದರೆ ಸಾಕು. ಈ ಮೂಲಕ ರಾಜ್ಯದಲ್ಲಿ ಯಾವ ಪಾರ್ಟಿ ಮುನ್ನೆಡೆಯಲ್ಲಿದೆ, ಯಾವ ಪಾರ್ಟಿ ಹಿನ್ನೆಡೆಯಲ್ಲಿದೆ ಹಾಗೂ ಯಾವೆಲ್ಲಾ ಕ್ಷೇತ್ರದಲ್ಲಿ ಯಾರ್ಯಾರು ಎಷ್ಟೆಷ್ಟು ಮತ ಗಳಿಸಿದ್ದಾರೆ ಎನ್ನವ ಸಂಪೂರ್ಣ ವಿವರವನ್ನು ಕಂಡುಕೊಳ್ಳಬಹುದು.

ಕರ್ನಾಟಕ ಚುನಾವಣೆ 2023: ಮೊಬೈಲ್‌ನಲ್ಲಿ ಕ್ಷಣ ಕ್ಷಣದ ರಿಸಲ್ಟ್‌ ನೋಡಲು ಹೀಗೆ ಮಾಡಿ

ಚುನಾವಣಾ ಆಯೋಗದ ಸೈಟ್‌ಗೆ ಭೇಟಿ ನೀಡಿ: ನೀವು ಅಧಿಕೃತವಾದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರೆ ಮೊದಲು ಚುನಾವಣಾ ಆಯೋಗದ ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು https://eci.gov.in/ ಎಂದು ಟೈಪ್‌ ಮಾಡಿದರೆ ಸಾಕು. ಇದಾದ ನಂತರ ನೀವು ಅಲ್ಲೇ ಕಾಣಿಸಿಕೊಳ್ಳುವ ಇಸಿಐ ರಿಸಲ್ಟ್‌ ವೆಬ್‌ಸೈಟ್‌ ಎಂಬ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ. ಬಳಿಕ ಈ ಪುಟದಲ್ಲಿ ಹೇಗೆ ಅಗತ್ಯ ಫಲಿತಾಂಶ ತಿಳಿಯುವುದು ಎನ್ನುವುದನ್ನು ಸರಳ ಹಂತದ ಮೂಲಕ ವಿವರಿಸಿದ್ದೇವೆ ಗಮನಿಸಿ.

ಹಂತ 1 : ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ ತೆರೆದ ನಂತರ ಮೊದಲ ಆಯ್ಕೆಯಲ್ಲಿಯೇ ಮೇ 2023ರ ವಿಧಾನಸಭೆ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗಳು ಎಂಬ ಬಟನ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ನಂತರ ನಿಮಗೆ ಮತ್ತೊಂದು ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ಪಾರ್ಟಿವೈಸ್‌, ಕ್ಷೇತ್ರವಾರು-ಎಲ್ಲಾ ಅಭ್ಯರ್ಥಿಗಳು ಹಾಗೂ ಕ್ಷೇತ್ರವಾರು ಟ್ರೆಂಡ್ಸ್‌ ಎಂಬ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ ಗಮನಿಸಿ.

ಕರ್ನಾಟಕ ಚುನಾವಣೆ 2023: ಮೊಬೈಲ್‌ನಲ್ಲಿ ಕ್ಷಣ ಕ್ಷಣದ ರಿಸಲ್ಟ್‌ ನೋಡಲು ಹೀಗೆ ಮಾಡಿ

ಹಂತ 2: ಇದೇ ಪುಟದಲ್ಲಿ ನೀವು ಪಾರ್ಟಿವೈಸ್‌ ಫಲಿತಾಂಶವನ್ನು ಗಮನಿಸಿಬಹುದಾಗಿದೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿದಂತೆ ಯಾವೆಲ್ಲಾ ಪಕ್ಷಕ್ಕೆ ಮುನ್ನೆಡೆ ಇದೆ ಎಂದು ಸುಲಭವಾಗಿ ತಿಳಿದಿಕೊಳ್ಳಬಹುದು. ಜೊತೆಗೆ ಈ ಬಾರಿ ಯಾವ ಸರ್ಕಾರ ರಚನೆ ಆಗುತ್ತದೆ ಎಂದು ಊಹಿಸಬಹುದು. ಅದಾಗ್ಯೂ ಅಭ್ಯರ್ಥಿಗಳ ಸಂಪೂರ್ಣ ವಿವರವನ್ನು ವೀಕ್ಷಣೆ ಮಾಡಬೇಕು ಎಂದರೆ ಕ್ಷೇತ್ರವಾರು-ಎಲ್ಲಾ ಅಭ್ಯರ್ಥಿಗಳ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಹಂತ 3: ಕ್ಷೇತ್ರವಾರು-ಎಲ್ಲಾ ಅಭ್ಯರ್ಥಿಗಳು ಆಯ್ಕೆ ಮೇಲೆ ಟ್ಯಾಪ್‌ ಮಾಡಿದ ನಂತರ ರಾಜ್ಯ ಹಾಗೂ ಕ್ಷೇತ್ರ ಎಂಬ ಎರಡು ಆಯ್ಕೆ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ನಿಮಗೆ ಅಗತ್ಯ ಇರುವ ಕ್ಷೇತ್ರವನ್ನು ಸೆಲೆಕ್ಟ್‌ ಮಾಡಿಕೊಳ್ಳಿ. ಬಳಿಕ ಅದರಲ್ಲಿ ಅಭ್ಯರ್ಥಿಗಳ ಹೆಸರು, ಪಕ್ಷ, ಮತಗಳ ಸಂಖ್ಯೆ ಹಾಗೂ ಶೇಖಡವಾರು ಮತಗಳ ವಿವರ ಕಾಣಿಸಿಕೊಳ್ಳುತ್ತದೆ. ಜೊತೆಗೆ ಇದೇ ಪರದೆಯಲ್ಲಿ ಯಾವೆಲ್ಲಾ ಸುತ್ತಿನ ಮತ ಎಣಿಕೆಯಲ್ಲಿ ಎಷ್ಟು ಮತಗಳು ಬಂದಿವೆ ಎಂದೂ ಸಹ ತಿಳಿದುಕೊಳ್ಳಬಹುದು.

ಕರ್ನಾಟಕ ಚುನಾವಣೆ 2023: ಮೊಬೈಲ್‌ನಲ್ಲಿ ಕ್ಷಣ ಕ್ಷಣದ ರಿಸಲ್ಟ್‌ ನೋಡಲು ಹೀಗೆ ಮಾಡಿ

ಹಂತ 4: ಇನ್ನು ಮೂರನೇ ಆಯ್ಕೆಯಾದ ಕ್ಷೇತ್ರವಾರು ಟ್ರೆಂಡ್‌ನಲ್ಲಿ ಮುನ್ನಡೆಯಲ್ಲಿರುವ ಅಭ್ಯರ್ಥಿಗಳ ವಿವರ ಹಾಗೂ ಪಾರ್ಟಿ ಹಾಗೂ ಹಿನ್ನೆಡೆಯಲ್ಲಿರುವ ಅಭ್ಯರ್ಥಿಗಳ ವಿವರ ಹಾಗೂ ಪಾರ್ಟಿ, ಕ್ಷೇತ್ರ ವಿವರ, ಕ್ಷೇತ್ರದ ಸಂಖ್ಯೆ ಜೊತೆಗೆ ಮುನ್ನಡೆ ಹಾಗೂ ಹಿನ್ನೆಡೆಯ ಅಭ್ಯರ್ಥಿಗಳು ಪಡೆದ ಮತಗಳ ಅಂತರದ ವಿವರ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Best Mobiles in India

English summary
Counting of votes for Karnataka Election 2023 is going on today and people's attention is focused on the result. Meanwhile know how you can check the official result right on your smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+