Home
ಟೆಕ್ ನೌಕರಿ

Second PUC Result: ದ್ವಿತೀಯ ಪಿಯು ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿದೆ ಸರಳ ಹಂತ

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು (Karnataka Department of Pre-Graduate Education) ದ್ವಿತೀಯ ಪಿಯು ಫಲಿತಾಂಶವನ್ನು ಇಂದು ಪ್ರಕಟ ಮಾಡಿದೆ. ಈ ನಡುವೆ ಸಾಕಷ್ಟು ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆಯುವ ಮೂಲಕ ಸಂಭ್ರಮ ಪಡುತ್ತಿದ್ದಾರೆ.

ಹೌದು, ಇಂದು ಬೆಳಗ್ಗೆ 10 ಗಂಟೆಗೆ ದ್ವಿತೀಯ ಪಿಯು (Second PUC) ಫಲಿತಾಂಶವನ್ನು ಪ್ರಕಟ ಮಾಡಲಾಗಿದ್ದು, ಅಂಕಪಟ್ಟಿಯನ್ನು ವೀಕ್ಷಣೆ ಮಾಡಲು ಮತ್ತು ಡೌನ್‌ಲೋಡ್ ಮಾಡಲು ಸುಲಭ ವ್ಯವಸ್ಥೆ ಮಾಡಿಕೊಡಲಾಗಿದೆ. ಹಾಗಿದ್ರೆ, ದ್ವಿತೀಯ ಪಿಯುಸಿ 2024 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹೇಗೆ ನೋಡಬಹುದು ಅನ್ನೋ ಮಾಹಿತಿಯನ್ನು ಸರಳವಾಗಿ ವಿವರಿಸಲಾಗಿದೆ ನೋಡಿ.

ದ್ವಿತೀಯ ಪಿಯು ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?...

ಫಲಿತಾಂಶಗಳನ್ನು ಪರಿಶೀಲಿಸಲು ಈ ಹಂತ ಅನುಸರಿಸಿ:
ಹಂತ 1 : ಮೊದಲು ಕರ್ನಾಟಕ ಫಲಿತಾಂಶ ಪೋರ್ಟಲ್ ವಿಭಾಗದಲ್ಲಿ ಭೇಟಿ ನೀಡಬೇಕು. ಇದಕ್ಕಾಗಿ ನೀವು karresults.nic.in ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಬಹುದು. ಇದಾದ ನಂತರ ಮೇನ್‌ಪೇಜ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಎಂಬ ಲಿಂಕ್‌ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

ಹಂತ 2: ಇದೆಲ್ಲಾ ಆದ ಮೇಲೆ ಅಲ್ಲಿ KSEAB ನೋಂದಣಿ ಸಂಖ್ಯೆಯನ್ನು ಕೇಳಲಾಗುತ್ತದೆ. ನಿಗದಿತ ಸ್ಥಳದಲ್ಲಿ ನಮೂದಿಸಿ ಮತ್ತು ಲಾಗಿನ್ ಪುಟದಲ್ಲಿ ವಿಷಯ ಸಂಯೋಜನೆ ಅಥವಾ ಸ್ಟ್ರೀಮ್ (ವಿಜ್ಞಾನ/ಕಲೆ/ವಾಣಿಜ್ಯ) ಆಯ್ಕೆಮಾಡಿ. ಬಳಿಕ ವಿವರಗಳನ್ನು ಸಲ್ಲಿಸಿದ ನಂತರದಲ್ಲಿ ನಿಮಗೆ ಅದೇ ಪೇಜ್‌ನ ಕೆಳಗೆ ಫಲಿತಾಂಶ ಕಾಣಿಸಿಕೊಳ್ಳುತ್ತದೆ. ಈ ವೇಳೆ ಅಗತ್ಯ ಇದೆ ಎಂದಾದರೆ ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ದ್ವಿತೀಯ ಪಿಯು ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?...

ಇನ್ನು ಪಿಯುಸಿ ಪರೀಕ್ಷೆಯನ್ನು ಮಾರ್ಚ್ 1 ರಿಂದ ಮಾರ್ಚ್ 22, 2024 ರವರೆಗೆ ನಡೆಸಲಾಗಿದ್ದು, ಈ ವರ್ಷ 6.9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹಾಜರಾಗಿದ್ದರು. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2024 ಅನ್ನು ವಿದ್ಯಾರ್ಥಿಗಳು ಪಡೆದ ವಿಷಯವಾರು ಮತ್ತು ಒಟ್ಟು ಅಂಕಗಳನ್ನು ಹೊಂದಿರುವ ಅಂಕಪಟ್ಟಿಯ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ.

ಈ ನಡುವೆ ಮರು-ಮೌಲ್ಯಮಾಪನ ಪ್ರಕ್ರಿಯೆಯ ವಿವರಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ದ್ವಿತೀಯ ಪಿಯುಸಿ ಮರುಮೌಲ್ಯಮಾಪನ ಪ್ರಕ್ರಿಯೆಗೆ ಅರ್ಜಿಗಳು ಏಪ್ರಿಲ್ 14 ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 20, 2024 ರಂದು ಕೊನೆಗೊಳ್ಳುತ್ತದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ 1,670 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಇದರ ಜೊತೆಗೆ ಒಟ್ಟಾರೆ ಉತ್ತೀರ್ಣ ಶೇಕಡಾ 81.15% ಕ್ಕೆ ಏರಿಕೆ ಆಗಿರುವುದು ಕರ್ನಾಟಕ್ಕೆ ಸಂತಸದ ವಿಚಾರವಾಗಿದೆ. ಅಂದರೆ 2024 ರ ಒಟ್ಟಾರೆ ಉತ್ತೀರ್ಣ ಶೇಕಡಾವಾರು ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು, ಕಳೆದ ವರ್ಷಕ್ಕಿಂತ ಶೇ.6.48ರಷ್ಟು ಹೆಚ್ಚಳವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಒಟ್ಟು 6,81,079 ವಿದ್ಯಾರ್ಥಿಗಳ ಪೈಕಿ 5,52,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯು ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?...

ಈ ನಡುವೆ ವರ್ಗವಾರು ಉತ್ತೀರ್ಣ ಶೇಕಡಾವಾರು ಗಮನಿಸುವುದಾದರೆ ಸಾಮಾನ್ಯ 87.29%, ಎಸ್‌ಸಿ 72.4%, ಎಸ್‌ಟಿ 72.78%, ಸಿ1- 81.03% ಅಂಕ ಪಡೆದಿದ್ದು, ಈ ನಡುವೆ ಪೂರಕ ಪರೀಕ್ಷೆಗೂ ಸಹ ದಿನಾಂಕ ನಿಗದಿ ಮಾಡಲಾಗಿದೆ. ಈ ಪೂರಕ ಪರೀಕ್ಷೆ ಏಪ್ರಿಲ್ 29, 2024 ರಂದು ಆರಂಭ ಆಗಲಿದೆ. ಇದಕ್ಕಾಗಿ ಇಂದಿನಿಂದಲೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಏಪ್ರಿಲ್ 16, 2024 ರಂದು ಮುಕ್ತಾಯಗೊಳ್ಳುತ್ತದೆ.

ವಿದ್ಯಾಲಕ್ಷ್ಮಿ ಎಂಬ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿದ್ದಾರೆ. ಇವರು ಈ ಪರೀಕ್ಷೆಯಲ್ಲಿ 598 ಅಂಕ ಗಳಿಸಿದ್ದಾರೆ. ಹಾಗೆಯೇ ಕಲಾ ವಿಭಾಗದಲ್ಲಿ ಮೇಧಾ ಡಿ, ವೇದಾಂತ್ ಜ್ಞಾನುಬಾ ನಾವಿ ಹಾಗೂ ಕವಿತಾ ಬಿವಿ 596 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಜ್ಞಾನವಿ ಎಂ ಅವರು 597 ಅಂಕ ಅಂಕಗಳನ್ನು ವಾಣಿಜ್ಯ ವಿಭಾಗದಲ್ಲಿ ಪಡೆದು ಟಾಪರ್ ಆಗಿದ್ದಾರೆ.

Best Mobiles in India

English summary
Second PUC Result declared at 10 am today and easy facility to view and download mark sheet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+