Home
ಟೆಕ್ ನೌಕರಿ

ನೀವು ವಿ ಟೆಲಿಕಾಂ ಗ್ರಾಹಕರೇ?..ಯಾವುದಕ್ಕೂ ಈ ಮಾಹಿತಿ ನಿಮಗೆ ಉಪಯುಕ್ತ!

ದೇಶದ ಟೆಲಿಕಾಂ ವಲಯದಲ್ಲಿ ವಿ ಟೆಲಿಕಾಂ ತೃತೀಯ ದೊಡ್ಡ ಆಪರೇಟರ್‌ಗಳಲ್ಲಿ ಸಂಸ್ಥೆಯಾಗಿ ಕಾಣಿಸಿಕೊಂಡಿದೆ. ಈ ಸಂಸ್ಥೆಯ ಭಿನ್ನ ಬೆಲೆಯ ಪ್ಲ್ಯಾನ್‌ಗಳ ಮೂಲಕ ಚಂದಾದಾರರ ಗಮನ ಸೆಳೆದಿದೆ. ಇದರೊಂದಿಗೆ ಸಂಸ್ಥೆಯು ತನ್ನ ಬಳಕೆದಾರರ ಉಪಯುಕ್ತತೆಗಾಗಿ ಡೇಟಾ ಬ್ಯಾಲೆನ್ಸ್‌, ಪ್ಲ್ಯಾನಿನ ಮಾಹಿತಿ, ವಾಯಿಸ್ ಕರೆ, ವ್ಯಾಲಿಡಿಟಿ, ಎಸ್‌ಎಮ್‌ಎಸ್‌ ಸೌಲಭ್ಯಗಳ ಮಾಹಿತಿ ಚೆಕ್ ಮಾಡಲು ಅವಕಾಶ ನೀಡಿದೆ.

ಹೌದು, ವಿ ಟೆಲಿಕಾಂ ಬ್ಯಾಲೆನ್ಸ್‌ ಚೆಕ್ ಮಾಡಲು ಕೆಲವು USSD ಕೋಡ್‌ಗಳ ಆಯ್ಕೆ ನೀಡಿದೆ. ಈ ಕೋಡ್‌ಗಳ ಮೂಲಕ ಬಳಕೆದಾರರು ಸುಲಭವಾಗಿ ಅವರ ಯೋಜನೆಯ ಡೇಟಾ ಬ್ಯಾಲೆನ್ಸ್‌, ಯೋಜನೆಯ ಮಾಹಿತಿ, ವಾಯಿಸ್ ಕರೆ, ವ್ಯಾಲಿಡಿಟಿ, ಎಸ್‌ಎಮ್‌ಎಸ್‌ ಸೌಲಭ್ಯದ ಮಾಹಿತಿ ಪಡೆಯಬಹುದಾಗಿದೆ. ಕೆಲವೊಮ್ಮೆ ಬ್ಯಾಲೆನ್ಸ್‌ ಮಾಹಿತಿ ತಿಳಿಯುವುದು ಬಳಕೆದಾರರಿಗೆ ಕ್ಲಿಷ್ಟ್ ಎನಿಸುತ್ತದೆ ಅಂತಹ ವೇಳೆ ಈ ಕೋಡ್‌ ನೆರವಾಗುತ್ತವೆ.

ನೀವು ವಿ ಟೆಲಿಕಾಂ ಗ್ರಾಹಕರೇ?..ಯಾವುದಕ್ಕೂ ಈ ಮಾಹಿತಿ ನಿಮಗೆ ಉಪಯುಕ್ತ!

ಇದಲ್ಲದೇ ವಿ ಟೆಲಿಕಾಂ ಗ್ರಾಹಕರು ಅಧಿಕೃತ ವಿ ಅಪ್ಲಿಕೇಶನ್‌ ಮೂಲಕವು ಸಹ ಯೋಜನೆಯ ಪೂರ್ಣ ಮಾಹಿತಿ ಪಡೆಯಲು ಅವಕಾಶ ಇದೆ. ಹಾಗಾದರೆ ವಿ ಟೆಲಿಕಾಂನ ಯೋಜನೆಗಳ ಬ್ಯಾಲೆನ್ಸ್‌ ಚೆಕ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

USSD ಕೋಡ್ ಮೂಲಕ ವಿ ಸಂಖ್ಯೆಯ ಬ್ಯಾಲೆನ್ಸ್ ತಿಳಿಯಲು ಈ ಕ್ರಮ ಫಾಲೋ ಮಾಡಿ

*199*2*1# ಈ USSD ಕೋಡ್ ಅನ್ನು ವಿ ಟೆಲಿಕಾಂ ಸಂಖ್ಯೆಯ ಮುಖ್ಯ ಬ್ಯಾಲೆನ್ಸ್ ಮಾಹಿತಿ ತಿಳಿಯಲು ಬಳಸಬಹುದು.
*199*2*2# ಈ USSD ಕೋಡ್ ಅನ್ನು ವಿ ಟೆಲಿಕಾಂ ಸಂಖ್ಯೆಯ ಇಂಟರ್ನೆಟ್‌ ಬ್ಯಾನೆಲ್ಸ್‌ ಮಾಹಿತಿ ತಿಳಿಯಲು ಬಳಸಬಹುದು.
*199*1*7# ಈ USSD ಕೋಡ್ ಅನ್ನು ವಿ ಟೆಲಿಕಾಂ ಸಂಖ್ಯೆಯ ರೀಚಾರ್ಜ್‌ ಆಫರ್‌ ಮಾಹಿತಿ ತಿಳಿಯಲು ಬಳಸಬಹುದು.
*199*2*3# ಈ USSD ಕೋಡ್ ಮೂಲಕ ಕೊನೆಯ ಮೂರು ಕರೆ ಹಾಗೂ ಎಸ್‌ಎಮ್‌ಎಸ್‌ ಮಾಹಿತಿ ತಿಳಿಯಲು ಬಳಸಬಹುದು.

ನೀವು ವಿ ಟೆಲಿಕಾಂ ಗ್ರಾಹಕರೇ?..ಯಾವುದಕ್ಕೂ ಈ ಮಾಹಿತಿ ನಿಮಗೆ ಉಪಯುಕ್ತ!

ವಿ ಆಪ್‌ ಮೂಲಕ ಬ್ಯಾಲನ್ಸ್‌ ಮಾಹಿತಿ ತಿಳಿಯಲು ಹೀಗೆ ಮಾಡಿ

ಹಂತ 1 : ಗೂಗಲ್‌ ಪ್ಲೇ ಸ್ಟೋರ್ (Google Play Store) ತೆರೆಯಿರಿ
ಹಂತ 2 : ಬಳಿಕ ವಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಅದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿ.
ಹಂತ 3 : ನಂತರ ಆಪ್‌ ತೆರೆಯಿರಿ ಮತ್ತು ನಿಮ್ಮ ವಿ ಮೊಬೈಲ್‌ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
ಹಂತ 4 : ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಪಡೆಯುತ್ತೀರಿ. ಲಾಗ್ ಇನ್ ಮಾಡಲು ಅದನ್ನು ನಮೂದಿಸಿ.
ಹಂತ 5 : ಆ ನಂತರ ನಿಮ್ಮ ವಿ ಸಂಖ್ಯೆಯ ಮುಖ್ಯ ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಅನ್ನು ಅಪ್ಲಿಕೇಶನ್‌ನ ಮುಖಪುಟ ಸ್ಕ್ರೀನ್‌ನಲ್ಲಿ ಕಾಣಿಸಲಾಗುತ್ತದೆ.

ನೀವು ವಿ ಟೆಲಿಕಾಂ ಗ್ರಾಹಕರೇ?..ಯಾವುದಕ್ಕೂ ಈ ಮಾಹಿತಿ ನಿಮಗೆ ಉಪಯುಕ್ತ!

IVR ಮೂಲಕ ಸಹ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು

IVR ಎಂದರೆ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್). ಬಳಕೆದಾರರು ವಿ ಸಿಮ್‌ನ ಬ್ಯಾಲೆನ್ಸ್ ಮಾಹಿತಿ ಪಡೆಯಲು ಈ ಹಂತಗಳನ್ನು ಫಾಲೋ ಮಾಡಿ.
* ನಿಮ್ಮ ಫೋನಿನಿಂದ 199 ಸಂಖ್ಯೆಗೆ ಡಯಲ್ ಮಾಡಿ.
* ಅಲ್ಲಿ ಲಭ್ಯವಾಗುವ ಮಾಹಿತಿಯ ಅನುಗುಣವಾದ ಸಂಖ್ಯೆಯನ್ನು ಒತ್ತುವ ಮೂಲಕ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.
* ನಿಮ್ಮ ಭಾಷೆಯನ್ನು ಆಯ್ಕೆ ಮಾಡಿದ ಬಳಿಕ, ನಿಮ್ಮ ವಿ ಮೊಬೈಲ್‌ ಸಂಖ್ಯೆಯ ಬ್ಯಾಲೆನ್ಸ್‌ ಮಾಹಿತಿ ತಿಳಿಯಲು ಆಡಿಯೊ ಸೂಚನೆಗಳನ್ನು ಫಾಲೋ ಮಾಡಿರಿ.

Best Mobiles in India

English summary
Vi Balance Check: How to check Vi balance via USSD Codes and App: details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+