ನೀವು ಫೋನಿನಲ್ಲಿ ಎಷ್ಟು ಡೇಟಾ ಬಳಕೆ ಮಾಡಿದ್ದೀರಾ ಗೊತ್ತಾ?..ತಿಳಿದ್ರೆ ಶಾಕ್ ಆಗ್ತೀರಾ!
ಸ್ಮಾರ್ಟ್‌ಫೋನ್ ಇದ್ದರೆ, ಅದಕ್ಕೆ ಪೂರಕವಾಗಿ ಇಂಟರ್ನೆಟ್ ಬೇಕೆ ಬೇಕಿದ್ದು, ಇಂಟರ್ನೆಟ್ ಇಲ್ಲದೇ ಫೋನ್ ಬಳಕೆ ಕಷ್ಟ ಎನ್ನುವಂತಾಗಿದೆ. ಏಕೆಂದರೆ ಅನೇಕ ಆನ್‌ಲೈನ್ ಕೆಲಸಗಳು ಸದ್ಯ ಇಂಟರ್ನೆಟ್ ಅವಲಂಭಿತವಾಗಿವೆ. ಬೆರಳ ತುದಿಯಲ್ಲಿ ಇಂಟರ್ನೆಟ್ ಸೌಲಭ್ಯ ಇರುವುದರಿಂದ ಅನೇಕ ಬಳಕೆದಾರರು ಎಷ್ಟು ಡೇಟಾ ಬಳಕೆ ಮಾಡಿದ್ದೇವೆ ಎನ್ನುವ ಬಗ್ಗೆ ತಿಳಿಯೋದು ಕಡಿಮೆ.
ಹೌದು, ಮೊಬೈಲ್‌ನಲ್ಲಿ ಅನೇಕ ಕೆಲಸಗಳಿಗೆ ಇಂಟರ್ನೆಟ್ ಬಳಕೆ ಮಾಡುವುದರಿಂದ ಅಧಿಕ ಡೇಟಾ ಖಾಲಿ ಆಗುತ್ತದೆ. ಆದರೆ ಎಷ್ಟು ಡೇಟಾ ಬಳಕೆ ಮಾಡಲಾಗಿದೆ ಎಂಬುದನ್ನು ಬಳಕೆದಾರರು ತಿಳಿಯಬಹುದಾಗಿದೆ. ಅದಕ್ಕಾಗಿ ಮೊಬೈಲ್‌ನಲ್ಲಿ ಅವಕಾಶ ಇದ್ದು, ಡೇಟಾ ಬಳಕೆಯ ಮಿತಿ ಕೂಡಾ ಸೆಟ್ ಮಾಡಲು ಅವಕಾಶ ಇದೆ. ಹಾಗಾದರೆ ನೀವು ಎಷ್ಟು ಡೇಟಾ ಬಳಕೆ ಮಾಡಿದ್ದೀರಾ ಎಂಬುದನ್ನು ತಿಳಿಯಲು ಹೀಗೆ ಮಾಡಿ.

ಆಂಡ್ರಾಯ್ಡ್ ಫೋನಿನಲ್ಲಿ ಡೇಟಾ ಬಳಕೆ ತಿಳಿಯಲು ಈ ಕ್ರಮ ಅನುಸರಿಸಿ :
* ಫೋನಿನಲ್ಲಿ ಹೋಮ್‌ಸ್ಕ್ರೀನ್‌ನಿಂದ ಮೇಲಕ್ಕೆ ಸ್ವೈಪ್ ಮಾಡಿರಿ
* ಬಳಿಕ ಅಪ್ಲಿಕೇಶನ್ ಡ್ರಾಯರ್ ಐಕಾನ್ ಕ್ಲಿಕ್ ಮಾಡಿ.
* ತದ ನಂತರ ಸೆಟ್ಟಿಂಗ್‌ಗಳ ಆಪ್ ಅನ್ನು ಸರ್ಚ್ ಮಾಡಿ ಹಾಗೂ ತೆರೆಯಿರಿ
* ನೆಟ್‌ವರ್ಕ್ ಮತ್ತು ಇಂಟರ್ನೆಟ್ ಮೆನುಗೆ ಭೇಟಿ ನೀಡಿ.
* SIMs ಆಯ್ಕೆ ಅನ್ನು ಕ್ಲಿಕ್ ಮಾಡಿ.
* ಕೆಳಗಿನ ಮೆನುವಿನಿಂದ ಆಪ್ ಡೇಟಾ ಬಳಕೆಯ ಅನ್ನು ಕ್ಲಿಕ್ ಮಾಡಿರಿ.
* ಸೆಟ್ ಸೈಕಲ್, ಆ ಅವಧಿಯಲ್ಲಿ ಒಟ್ಟು ಡೇಟಾ ಬಳಕೆ ಹಾಗೂ ಇನ್‌ಸ್ಟಾಲ್ ಡೇಟಾ ಬಳಕೆ ಅನ್ನು ಚೆಕ್ ಮಾಡಬಹುದು.
ಸ್ಯಾಮ್‌ಸಂಗ್ ಫೋನಿನಲ್ಲಿ ಡೇಟಾ ಬಳಕೆ ಹೀಗೆ ಚೆಕ್ ಮಾಡಿರಿ :
* ನಿಮ್ಮ ಫೋನಿನಲ್ಲಿ ಹೋಮ್‌ಸ್ಕ್ರೀನ್‌ನಿಂದ ಮೇಲಕ್ಕೆ ಸ್ವೈಪ್ ಮಾಡಿ
* ನಂತರ ಫೋನಿನ ಸೆಟ್ಟಿಂಗ್ಸ್ ಆಪ್ಸ್ ಓಪೆನ ಮಾಡಿರಿ.
* ಕನೆಕ್ಷನ್ಸ್ ಆಯ್ಕೆ ಕ್ಲಿಕ್ ಮಾಡಿ.
* ನಂತರದಲ್ಲಿ ಡೇಟಾ ಬಳಕೆ ಆಯ್ಕೆ ಅನ್ನು ಟ್ಯಾಪ್ ಮಾಡಿ.
* ಬಳಿಕ ಮೊಬೈಲ್ ಡೇಟಾ ಬಳಕೆ ಅನ್ನು ಸೆಲೆಕ್ಟ್ ಮಾಡಿ.
* ತದ ನಂತರದಲ್ಲಿ ಡೇಟಾ ಬಳಕೆಯ ಗ್ರಾಫ್ ಬಿಲ್ಲಿಂಗ್ ಸೈಕಲ್, ಡೇಟಾ ಬಳಕೆಯ ಮಿತಿ, ಡೇಟಾ ಬಳಕೆಯ ಅಲರ್ಟ್ ಮಿತಿ ಹಾಗೂ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿರುವ ಆಪ್ಸ್‌ಗಳ ಸಂಬಂಧಿತ ವಿವರ ಕಾಣಿಸುತ್ತದೆ.
ಐಫೋನಿನಲ್ಲಿ ಡೇಟಾ ಬಳಕೆ ತಿಳಿಯಲು ಈ ಕ್ರಮ ಅನುಸರಿಸಿ :
* ಐಫೋನ್‌ನಲ್ಲಿ ಸೆಟ್ಟಿಂಗ್ಸ್ ಆಪ್ ತೆರೆಯಿರಿ.
* ಮೊಬೈಲ್ ಡೇಟಾ (ಸೆಲ್ಯುಲಾರ್ ಡೇಟಾ) ಆಯ್ಕೆ ಸೆಲೆಕ್ಟ್ ಮಾಡಿರಿ.
* ಪ್ರಸ್ತುತ ಅವಧಿಗೆ ಡೇಟಾ ಬಳಕೆ ಅನ್ನು ಚೆಕ್ ಮಾಡಿರಿ.
* ಐಫೋನಿನಲ್ಲಿ ಇನ್‌ಸ್ಟಾಲ್ ಮಾಡಲಾದ ಪ್ರತಿಯೊಂದು ಆಪ್‌ನಿಂದ ಡೇಟಾ ಬಳಕೆಯನ್ನು ಸಹ ಚೆಕ್ ಮಾಡಬಹುದಾಗಿದೆ.
ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಡೇಟಾ ಅಲರ್ಟ್ ಹಾಗೂ ಲಿಮಿಟ್ ಸೆಟ್ ಮಾಡಲು ಈ ಕ್ರಮ ಫಾಲೋ ಮಾಡಿರಿ :
* ಫೋನಿನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ
* ಬಳಿಕ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಮೆನುವಿನಲ್ಲಿ ಪ್ರೈಮರಿ ಸಿಮ್ ಅನ್ನು ಸೆಲೆಕ್ಟ್ ಮಾಡಿರಿ
* ಡೇಟಾ ಅಲರ್ಟ್ ಮತ್ತು ಲಿಮಿಟ್ ಸ್ಕ್ರಾಲ್ ಮಾಡಿರಿ.
* ಮೊಬೈಲ್ ಡೇಟಾ ಬಳಕೆಯ ಸೈಕಲ್ ಅನ್ನು ಕ್ಲಿಕ್ ಮಾಡಿರಿ
* ಡೇಟಾ ಸೈಕಲ್ ಅನ್ನು ರೀಸೆಟ್ ಮಾಡಲು ಪ್ರತಿ ತಿಂಗಳ ದಿನಾಂಕವನ್ನು ಸೆಟ್ ಮಾಡಿರಿ
* ಡೇಟಾ ಅಲರ್ಟ್ ಅನ್ನು ಸೆಟ್ ಮಾಡಿ ಹಾಗೂ ಟ್ಯಾಪ್ ಮಾಡಿ
* ಡೇಟಾ ಲಿಮಿಟ್ ಅನ್ನು ಸೆಟ್ ಮಾಡಿ ಟಾಗಲ್ ಅನ್ನು ಆಕ್ಟಿವ್ ಮಾಡಿ
* ಡೇಟಾ ಲಿಮಿಟ್ ಸೆಟ್ ಮಾಡಿರಿ.


Click it and Unblock the Notifications








