ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ?.ಫೋನಿನಲ್ಲಿ ತಿಳಿಯುವುದು ಹೇಗೆ ಗೊತ್ತಾ?

|

2019ರ ಲೋಕಸಭಾ ಚುನಾವಣೆ ಶುರುವಾಗಿದ್ದು, ಎಲ್ಲೆಡೆ ಮತದಾನದ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ಮತದಾನ ಮಾಡಲು ಚುನಾವಣೆ ಆಯೋಗವು ನೀಡುವ ಗುರುತಿನ ಚೀಟಿ ಇರಬೇಕು. ಕೆಲವೊಮ್ಮೆ ಚುನಾವಣೆ ಗುರುತಿನ ಚೀಟಿ ಇದ್ದರೂ, ಮತಗಟ್ಟೆಯಲ್ಲಿ ಹೆಸರುಗಳು ಬಂದಿರುವುದಿಲ್ಲ. ಈ ಗೊಂದಲವನ್ನು ತಪ್ಪಿಸಲು ನೀವು ಮನೆಯಲ್ಲಿಯೇ ಕುಳಿತು ಮೊಬೈಲ್‌ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನಮೂದಾಗಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ?.ಫೋನಿನಲ್ಲಿ ತಿಳಿಯುವುದು ಹೇಗೆ ಗೊತ್ತಾ?

ಹೌದು, ಚುನಾವಣೆಯ ಮತಗಟ್ಟೆಗಳಲ್ಲಿ ಮತದಾರರ ಹೆಸರು ಬಂದಿದೆಯಾ ಎಂಬುದನ್ನು ತಿಳಿದುಕೊಳ್ಳಲು ಚುನಾವಣೆ ಆಯೋಗವು ಮತದಾರರಿಗೆ ಅನುಕೂಲ ಮಾಡಿಕೊಟ್ಟಿದ್ದು, ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಹೆಸರು ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಹಾಗಾದರೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎಂಬುದನ್ನು ಮೊಬೈಲ್‌ನಲ್ಲಿ ಹೇಗೆ ಖಚಿತಪಡಿಸಿಕೊಳ್ಳುವುದು ಎಂಬುದನ್ನು ತಿಳಿಯಲು ಮುಂದೆ ಓದಿರಿ.

SMS ಮೂಲಕ ಖಚಿತಪಡಿಸಿಕೊಳ್ಳಿ

SMS ಮೂಲಕ ಖಚಿತಪಡಿಸಿಕೊಳ್ಳಿ

ಹಂತ.1 ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮೆಸೆಜ್‌ ತೆರೆಯಿರಿ
ಹಂತ.2 EPIC ಎಂದು ಬರೆದು ಸ್ಪೇಸ್‌ ಬಿಟ್ಟು EPIC No.(ನಿಮ್ಮ ಚುನಾವಣೆ ಚೀಟಿಯಲ್ಲಿರುವ ಎಪಿಕ್ ನಂಬರ್‌ ಬರೆಯಿರಿ)
ಹಂತ.3 ನಂತರ ಈ ನಂಬರ್‌ಗೆ ಕಳುಹಿಸಿ-7738299899
ಹಂತ.4 ನಿಮಗೊಂದು ಎಸ್‌ಎಮ್‌ಎಸ್‌ ಬರುತ್ತದೆ ಅದರಲ್ಲಿ ಹೆಸರು ನಮೂದಾಗಿಯೋ ಅಥಾವಾ ಇಲ್ಲಯೋ ಎಂಬ ಮಾಹಿತಿ ಇರುತ್ತದೆ.

ಕರೆಯ ಮೂಲಕ ಖಚಿತಪಡಿಸಿಕೊಳ್ಳಿ

ಕರೆಯ ಮೂಲಕ ಖಚಿತಪಡಿಸಿಕೊಳ್ಳಿ

ಹಂತ.1 ನಿಮ್ಮ ಮೊಬೈಲ್‌ನಲ್ಲಿ ಕಾಲ್‌ ಡೈಯಲ್‌ ತೆರೆಯಿರಿ
ಹಂತ.2 ನಂತರ 1950 ನಂಬರ್‌ಗೆ ಕರೆ ಮಾಡಿರಿ
ಹಂತ.3 ಕರೆಯಲ್ಲಿ ನಿಮಗೆ ಚುನಾವಣಾ ಗುರುತಿನ ಚೀಟಿಯ (Voter ID) ಎಪಿಕ್ ನಂಬರ್, ಸ್ಥಳದ, ಮಾಹಿತಿ ಕೇಳಲಾಗುತ್ತದೆ.
ಹಂತ.4 ನೀವು ಮಾಹಿತಿ ತಿಳಿಸಿದ ನಂತರ ನಿಮ್ಮ ಹೆಸರು ನಮೂದಾರಿದೆಯೋ ಅಥವಾ ಇಲ್ಲವೋ ಎಂಬದನ್ನು ತಿಳಿಸುತ್ತಾರೆ.

ವೆಬ್‌ಸೈಟ್‌ನಿಂದ ಖಚಿತಪಡಿಸಿಕೊಳ್ಳಬಹುದು

ವೆಬ್‌ಸೈಟ್‌ನಿಂದ ಖಚಿತಪಡಿಸಿಕೊಳ್ಳಬಹುದು

ಹಂತ.1 ​ಸ್ಮಾರ್ಟ್‌ಫೋನ್‌ ಅಥವಾ ಪಿಸಿಯಲ್ಲಿ www.nvsp.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ.2 ಮತದಾರರ ಪಟ್ಟಿಯಲ್ಲಿ ಹೆಸರಿದೆ ಆಯ್ಕೆಯನ್ನು ಕ್ಲಿಕ್‌ ಮಾಡಿ.(Search Your Name in Electoral Roll)
ಹಂತ.3 ನಂತರ ಎಪಿಕ್ ನಂಬರ್‌ ಎಂಟ್ರಿ ಮಾಡಿ ಸರ್ಜ್‌ ಆಯ್ಕೆ ಒತ್ತಿರಿ.
ಹಂತ.4 ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎನ್ನುವ ಮಾಹಿತಿ ಕಾಣಿಸುತ್ತದೆ.

ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೇ

ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೇ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನಮೂದಾಗಿದ್ದು, ಆದರೆ ನಿಮ್ಮ ಬಳಿ ಚುನಾವಣಾ ಗುರುತಿನ ಚೀಟಿ (Voter ID) ಇಲ್ಲದಿದ್ದರೇ ನೀವು ಈ ಕೆಳಗಿನ ಯಾವುದಾದರು ಐಡಿಯನ್ನು ತೋರಿಸುವ ಮೂಲಕ ಮತ ಚಲಾಯಿಸಬಹುದಾಗಿದೆ.
* ಡ್ರೈವಿಂಗ್ ಲೈಸನ್ಸ್‌
* ಪಾಸ್‌ಪೋರ್ಟ್
* ಬ್ಯಾಂಕ್‌ ಪಾಸ್‌ಬುಕ್‌
* ಆಧಾರ ಕಾರ್ಡ್‌
* ಹೆಲ್ತ್ ಇನ್ಶೂರೆನ್ಸ್‌

ಓದಿರಿ : PDF ಫೈಲ್‌ಗಳನ್ನು JPG ಫಾರ್‌ಮೇಟ್‌ಗೆ ಕನ್‌ವರ್ಟ್‌ ಮಾಡುವುದು ಹೇಗೆ ಗೊತ್ತಾ.!ಓದಿರಿ : PDF ಫೈಲ್‌ಗಳನ್ನು JPG ಫಾರ್‌ಮೇಟ್‌ಗೆ ಕನ್‌ವರ್ಟ್‌ ಮಾಡುವುದು ಹೇಗೆ ಗೊತ್ತಾ.!

Best Mobiles in India

English summary
How to check your name in electoral list sitting at home.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X