Subscribe to Gizbot

ಸ್ಮಾರ್ಟ್‌ಫೋನ್ ಸ್ವಚ್ಛತೆ ನೆನಪಿಡಬೇಕಾದ ಅಂಶಗಳೇನು?

Written By:

ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಇಲ್ಲದೆ ಸಾಮಾನ್ಯ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಉಂಟಾಗಿದೆ. ನಾವು ಹೋದ ಕಡೆಯೆಲ್ಲಾ ನಮ್ಮೊಂದಿಗೆ ಸ್ಮಾರ್ಟ್‌ಫೋನ್ ಅನ್ನು ನಾವು ತೆಗೆದುಕೊಂಡು ಹೋಗುತ್ತೇವೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ಗೊತ್ತೇ? ಕೆಲವೊಂದು ಸಂಶೋಧನೆಗಳ ಪ್ರಕಾರ ಟಾಯ್ಲೆಟ್ ಸೀಟಿಗಿಂತಲೂ ಅಧಿಕವಾಗಿ ನಿಮ್ಮ ಫೋನ್ ಕೀಟಾಣುಗಳನ್ನು ಹೊಂದಿರುತ್ತವೆಯಂತೆ.

ಓದಿರಿ: ನಿಮ್ಮ ಫೋನ್‌ಗಿಂತಲೂ ಹೆಚ್ಚು ಶುದ್ಧ ಈ 5 ವಿಷಯಗಳು

ನಮ್ಮ ಕೈಗಳನ್ನು ನಾವು ತೊಳೆದುಕೊಂಡಂತೆ ಫೋನ್ ಅನ್ನು ಆಗಾಗ್ಗೆ ತೊಳೆದುಕೊಳ್ಳಲಾಗುವುದಿಲ್ಲ. ಆದರೂ ನಿಮ್ಮ ಫೋನ್‌ನಲ್ಲಿರುವ ಬ್ಯಾಕ್ಟೀರಿಯಾವನ್ನು ದೂರಮಾಡಲು ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳೊಂದಿಗೆ ಬಂದಿರುವೆವು. ಹಾಗಿದ್ದರೆ ಇಂತಹ ಸೂಕ್ಷ್ಮಾಣುಜೀವಗಳಿರುವ ನಿಮ್ಮ ಫೋನ್‌ನ ಸ್ವಚ್ಛತೆಯನ್ನು ಮಾಡುವುದು ಹೇಗೆ ಎಂಬುದನ್ನು ನೀವು ಅರಿಯಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವಚ್ಛಮಾಡುವುದು

ಫೋನ್ ಸ್ವಚ್ಛಮಾಡುವುದು

ನಿಮ್ಮ ಫೋನ್ ಅನ್ನು ಆಫ್ ಮಾಡಿ

ಕವರ್ ಹೊರತೆಗೆಯಿರಿ

ಫೋನ್ ಕವರ್ ಹೊರತೆಗೆಯಿರಿ

ಇನ್ನು ನಿಮ್ಮ ಫೋನ್ ಏನಾರೂ ಕವರ್ ಅನ್ನು ಹೊಂದಿದ್ದಲ್ಲಿ ಅದನ್ನೂ ಹೊರತೆಗೆಯಿರಿ

ಬ್ಯಾಟರಿ ಹೊರತೆಗೆಯಿರಿ

ಸಾಧ್ಯವಾದಲ್ಲಿ ಬ್ಯಾಟರಿ ಹೊರತೆಗೆಯಿರಿ

ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಹೊರತೆಗೆಯಲು ಸಾಧ್ಯ ಎಂದಾದಲ್ಲಿ ಅದನ್ನೂ ಹೊರತೆಗೆಯಿರಿ

ಹೆಚ್ಚುವರಿ ಕಾಳಜಿ

ಸ್ಕ್ರೀನ್ ಗಾರ್ಡ್

ಇನ್ನು ಫೋನ್‌ನ ಸ್ಕ್ರೀನ್ ಗಾರ್ಡ್ ಅನ್ನು ನೀವು ತೆಗೆಯುತ್ತಿದ್ದೀರಿ ಎಂದಾದಲ್ಲಿ ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳಿ. ಏನಾದರೂ ಸ್ವಲ್ಪ ಯಾಮಾರಿದರೈ ಸ್ಕ್ರೀನ್ ಗಾರ್ಡ್‌ಗೆ ಹಾನಿ ಸಂಭವಿಸಬಹುದು.

ಕೀಬೋರ್ಡ್ ಸ್ವಚ್ಛ

ಕೀಬೋರ್ಡ್ ಸ್ವಚ್ಛಗೊಳಿಸುವಿಕೆ

ನಿಮ್ಮ ಫೋನ್ ಕೀಬೋರ್ಡ್ ಅಥವಾ ಕೀಪ್ಯಾಡ್ ಹೊಂದಿದೆ ಎಂದಾದಲ್ಲಿ ಆಲ್ಕೋಹಾಲ್ ಅದ್ದಿದ ಹತ್ತಿಯನ್ನು ಬಳಸಿ ಅದನ್ನು ಸ್ವಚ್ಛಗೊಳಿಸಿ.

 ಪ್ಲಾಸ್ಟಿಕ್ ಭಾಗ

ಫೋನ್‌ನ ಪ್ಲಾಸ್ಟಿಕ್ ಭಾಗ

ನಿಮ್ಮ ಫೋನ್‌ನ ಪ್ಲಾಸ್ಟಿಕ್ ಭಾಗಕ್ಕೂ ಆಲ್ಕೋಹಾಲ್ ಅದ್ದಿದ ಹತ್ತಿಯನ್ನು ಬಳಸಿ ಸ್ವಚ್ಛಗೊಳಿಸಿ. ಇನ್ನು ಫೋನ್ ಮೆಟಲ್ ಹಿಂಭಾಗವನ್ನು ಹೊಂದಿದೆ ಎಂದಾದಲ್ಲಿ, ನೀರಿನಲ್ಲಿ ಅದ್ದಿದ ಹತ್ತಿಯನ್ನು ಬಳಸಿ.

ಫೋನ್ ಒಳಭಾಗ

ಇನ್ನು ಫೋನ್ ಒಳಭಾಗ

ಫೋನ್‌ನ ಹೊರಭಾಗವನ್ನು ನೀವು ಪೂರ್ತಿಯಾಗಿ ಸ್ವಚ್ಛಮಾಡಿದ್ದೀರಿ ಎಂದಾದಲ್ಲಿ ಸ್ವಲ್ಪ ಪ್ರಮಾಣದ ನೀರಿನಲ್ಲಿ ಹತ್ತಿಯನ್ನು ಅದ್ದಿ ಅದನ್ನು ಬಳಸಿಕೊಂಡು ಒಳಭಾಗವನ್ನು ಸ್ವಚ್ಛಮಾಡಿ. ಕೂಡಲೇ ಈ ಭಾಗವನ್ನು ಒಣಗಿಸಿಕೊಳ್ಳಿ.

ಲೆನ್ಸ್ ಕ್ಲೀನ್

ಕ್ಯಾಮೆರಾ ಭಾಗ

ಫೋನ್‌ನ ಕ್ಯಾಮೆರಾ ಭಾಗವನ್ನು ಹತ್ತಿ ಬಳಸಿ ಸ್ವಚ್ಛಮಾಡಿ. ಹತ್ತಿ ಬಳಸಿ ಚಿತ್ರದಲ್ಲಿ ತೋರಿಸಿರುವಂತೆ ವೃತ್ತಾಕಾರವಾಗಿ ಶುದ್ಧಗೊಳಸಿ. ಲೆನ್ಸ್ ಕ್ಲೀನ್ ಆಯಿತು ಎಂದಾದಲ್ಲಿ ಲೆನ್ಸ್‌ನ ನೀರನ್ನು ಆದಷ್ಟು ಬೇಗ ಒಣಗಿಸಿ.

ಪ್ಲಾಸ್ಟಿಕ್ ಫೋನ್ ಕೇಸ್/ಕವರ್

ಕೇಸ್ ಸ್ವಚ್ಛಮಾಡಿ

ನೀವು ಪ್ಲಾಸ್ಟಿಕ್ ಫೋನ್ ಕೇಸ್/ಕವರ್ ಬಳಸುತ್ತಿದ್ದೀರಿ ಎಂದಾದಲ್ಲಿ ಆಲ್ಕೋಹಾಲ್‌ನಲ್ಲಿ ಅದನ್ನು ಮುಳುಗಿಸಿ ಒಳಭಾಗ ಮತ್ತು ಹೊರಭಾಗ ಸ್ವಚ್ಛಗೊಳಿಸಿ.

ಚರ್ಮದ ಕೇಸ್

ಚರ್ಮದ ಕೇಸ್

ನೀವು ಚರ್ಮದ ಕೇಸ್ ಅಥವಾ ಪೌಚ್ ಬಳಸುತ್ತಿದ್ದೀರಿ ಎಂದಾದಲ್ಲಿ ಇದಕ್ಕೆ ಬೇಕಾದ ನಿರ್ದಿಷ್ಟ ಸ್ವಚ್ಛತಾ ಉಪಕರಣವನ್ನು ಖರೀದಿಸಿ. ನಿಮ್ಮ ಚರ್ಮದ ಕೇಸ್ ಅನ್ನು ಒಣಗಿಸುವುದು ಅತಿಮುಖ್ಯವಾದ ಕೆಲಸವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you are going to reach out and touch your phone, make sure you rethink possibilities and clean your smartphone the right way. Then here is the right way to clean your phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot