Subscribe to Gizbot

ನಿಮ್ಮ ಫೋನ್‌ಗಿಂತಲೂ ಹೆಚ್ಚು ಶುದ್ಧ ಈ 5 ವಿಷಯಗಳು

Written By:

ದಿನಕ್ಕೆ ಎಷ್ಟು ಬಾರಿ ನೀವು ನಿಮ್ಮ ಫೋನ್ ಅನ್ನು ಸ್ಪರ್ಶಿಸುತ್ತೀರಾ? ಎಲ್ಲಾ ಸಮಯ ಕೂಡ ನಿಮ್ಮ ಫೋನ್ ಅನ್ನು ನೀವು ಸ್ಪರ್ಶಿಸುತ್ತೀರಾ? ಇದರಿಂದ ನಿಮ್ಮ ಫೋನ್‌ ಎಷ್ಟು ಕೊಳೆಯಾಗಿರಬಹುದು?

ನಾವು ಕೊಳಕು ವಸ್ತುಗಳನ್ನು ಸ್ಪರ್ಶಿಸುವುದಲ್ಲದೆ ಫೋನ್ ಅನ್ನು ಸ್ಪರ್ಶಿಸುತ್ತಿರುತ್ತೇವೆ. ಇದರಿಂದಾಗಿ ನಿಮ್ಮ ಡಿವೈಸ್‌ಗೆ ಬ್ಯಾಕ್ಟೀರಿಯಾಗಳು ವರ್ಗಾವಣೆಯಾಗುತ್ತವೆ. ನಮ್ಮ ಕೈಗಳನ್ನು ನಾವು ತೊಳೆಯುತ್ತೇವೆ ಆದರೆ ಫೋನ್‌ಗಳಲ್ಲನ್ನಲ್ಲ. ಇನ್ನು ಸಂಶೋಧನೆಗಳ ಪ್ರಕಾರ ನಮ್ಮ ಬೆರಳಿನಲ್ಲಿ ಗುರುತಿಸಲಾದ ಹೆಚ್ಚು ಸಾಮಾನ್ಯ ಬ್ಯಾಕ್ಟೀರಿಯಾದ 82 ಶೇಕಡಾದಷ್ಟು ಫೋನ್‌ಗಳು ಪಡೆದುಕೊಂಡಿರುತ್ತವೆಯಂತೆ.

ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ಗಳಿಗಿಂತಲೂ ಹೆಚ್ಚು ಸ್ವಚ್ಛವಾಗಿರುವ ವಿಷಯಗಳನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೌಚಾಲಯಗಳು

ಸಾರ್ವಜನಿಕ ಶೌಚಾಲಯಗಳು

ಸಾರ್ವಜನಿಕ ಶೌಚಾಲಯಕ್ಕಿಂತಲೂ ಹೆಚ್ಚಿನ ಬ್ಯಾಕ್ಟೀರಿಯಾಗಳು ನಿಮ್ಮ ಫೋನ್‌ನಲ್ಲಿ ಇರುತ್ತವೆ. ಸಾಮಾನ್ಯವಾಗಿರುವ ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ನಲ್ಲಿ 25,000 ಕ್ಕಿಂತಲೂ ಹೆಚ್ಚಿನ ಬ್ಯಾಕ್ಟೀರಿಯಾಗಳಿರುತ್ತವೆಯಂತೆ. ಸಾರ್ವಜನಿಕ ಶೌಚಾಲಯಗಳಲ್ಲಿ 1,201 ಬ್ಯಾಕ್ಟೀರಿಯಾಗಳಿರುತ್ತವೆ. ಇನ್ನು ಅಧ್ಯಯನಗಳ ಪ್ರಕಾರ 92 ಶೇಕಡಾದಷ್ಟು ಫೋನ್‌ಗಳು ಬ್ಯಾಕ್ಟೀರಿಯಾವನ್ನು ಒಳಗೊಂಡಿರುತ್ತವೆ ಅದರಲ್ಲಿ 16 ಶೇಕಡಾ ಕೈಗಳಲ್ಲಿರುತ್ತವೆ.

ಹಿಡಿ

ಬಾಗಿಲಿನ ಹಿಡಿ

ಇನ್ನು ಬಾಗಿಲಿನ ಹಿಡಿಯಲ್ಲೂ ಹೆಚ್ಚಿನ ಬ್ಯಾಕ್ಟೀರಿಯಾಗಳಿರುತ್ತವೆ. ಸೆಲ್ ಫೋನ್‌ನ ಬ್ಯಾಕ್ಟೀರಿಯಾ ಆರ್ದ್ರೀಕರಣವನ್ನು ಈ ಬಾಗಿಲಿನ ಹಿಡಿಗಳು ಹಾದು ಹೋಗುತ್ತವೆ. ಪ್ರತೀ ಚದರ ಇಂಚಿಗೆ 8,643 ಬ್ಯಾಕ್ಟೀರಿಯಾವನ್ನು ಬಾಗಿಲಿನ ಹಿಡಿಗಳು ಒಳಗೊಂಡಿರುತ್ತವೆ.

ಅಡುಗೆ ಕೋಣೆ

ಅಡುಗೆ ಕೋಣೆ

ಕಾಫಿ ಕಪ್‌ಗಳು, ಆಹಾರ ತುಣುಕುಗಳು ಬೇಯಿಸದ ಮಾಂಸ ಮುಂತಾದವುಗಳಿಂದ ಅಡುಗೆ ಕೋಣೆಯಲ್ಲಿ ಕ್ರಿಮಿಗಳು ಇರುತ್ತವೆ. ಪ್ರತೀ ಚದರ ಇಂಚಿಗೆ ಅಡುಗೆ ಕೋಣೆಯ ಹಾಸುಗಲ್ಲುಗಳಲ್ಲಿ 1,736 ಬ್ಯಾಕ್ಟೀರಿಯಾಗಳಿರುತ್ತವೆ.

ಆಹಾರ ತಟ್ಟೆಗಳು

ಸಾಕು ಪ್ರಾಣಿಗಳ ಆಹಾರ ತಟ್ಟೆಗಳು

ಇನ್ನು ನಮ್ಮ ಬಾಯಿಗಿಂತಲೂ ಸಾಕುಪ್ರಾಣಿಗಳ ಬಾಯು ಎಷ್ಟು ಸ್ವಚ್ಛವಾಗಿರಲು ಸಾಧ್ಯ. ಅಂದಾಜು ಪ್ರಮಾಣದಲ್ಲಿ ಪ್ರಾಣಿಗಳ ಆಹಾರ ತಟ್ಟೆಯಲ್ಲಿ ಪ್ರತೀ ಚದರ ಇಂಚಿಗೆ 2,110 ಬ್ಯಾಕ್ಟೀರಿಯಾಗಳಿರುತ್ತವೆ.

ಚೆಕ್ ಔಟ್ ಸ್ಕ್ರೀನ್

ಚೆಕ್ ಔಟ್ ಸ್ಕ್ರೀನ್

ಉದ್ದನೆಯ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ನಾವು ಎಟಿಎಮ್ ಅಥವಾ ಕಿರಾಣಿ ಅಂಗಡಿಗಳಲ್ಲಿ ಚೆಕ್ ಔಟ್ ಸ್ಕ್ರೀನ್ ಅನ್ನು ಬಳಸುತ್ತೇವೆ. ಆದರೆ ಎಟಿಎಮ್‌ನಲ್ಲಿರುವ ಚೆಕ್ ಔಟ್ ಸ್ಕ್ರೀನ್‌ನಲ್ಲಿ ಪ್ರತೀ ಚದದರ ಇಂಚಿಗೆ 4,500 ಬ್ಯಾಕ್ಟೀರಿಯಾಗಳಿರುತ್ತವೆ.

ಸ್ವಚ್ಛತಾ ಪರಿಕರಗಳು

ಫೋನ್ ಸ್ವಚ್ಛತಾ ಪರಿಕರಗಳು

ನಿಮ್ಮ ಫೋನ್ ಅನ್ನು ಸ್ವಚ್ಛವಾಗಿರಿಸುವ ಮತ್ತು ಬ್ಯಾಕ್ಟೀರಿಯಾ ರಹಿತವಾಗಿಸುವ ಹಲವಾರು ಪರಿಕರಗಳಿವೆ. ಆದರೆ ಈ ಪರಕರಗಳು ನಿಮ್ಮ ಫೋನ್ ಸ್ಕ್ರೀನ್‌ಗೆ ತೊಂದರೆಯನ್ನುಂಟು ಮಾಡುತ್ತವೆ. ಆದರೆ ಎಲ್ಲಾ ಸೂಕ್ಷ್ಮಾಣುಗಳನ್ನು ನಿವಾರಿಸುವಲ್ಲಿ ಸಫಲವಾಗಿರುವುದಿಲ್ಲ. ನಿಮ್ಮ ಫೋನ್ ಅನ್ನು ಟಿಶ್ಯೂನಿಂದ ಒರೆಸುವುದೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡದು.

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀರಿನಿಂದ ತೊಳೆಯುವುದು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು. ನಿಮ್ಮ ಕೈಗಳನ್ನು ನೀರಿನಿಂದ ತೊಳೆದುಕೊಂಡಂತೆ ಫೋನ್ ಅನ್ನು ತೊಳೆದುಕೊಳ್ಳಬೇಕು. ನೀರಿನಿಂದ ತೊಳೆದುಕೊಳ್ಳಬಹುದಾದ ಸ್ಮಾರ್ಟ್‌ಫೋನ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿಗೆ ಭೇಟಿ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How many times in a day you touch your mobile? Well, you touch your cell phone all the time, and even keep it close when you are not holding it. Have you ever thought how dirty your cell phones could be? Here are the things that are probably cleaner than your phones, check out the slideshow.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot