Paytm FASTag: ಪೇಟಿಎಂ ಫಾಸ್ಟ್ಯಾಗ್ ಗಡುವು ಕೊನೆ! ಖಾತೆ ಕ್ಲೋಸ್ ಮಾಡೋದೇಗೆ?, ಹೊಸ ಸೇವೆ ಪಡೆಯೋದೇಗೆ?
ಪೇಟಿಎಮ್ ಫಾಸ್ಟ್ಯಾಗ್‌ನ (Paytm FASTag) ಗಡುವು ಇಂದಿಗೆ ಕೊನೆಯಾಗಲಿದೆ. ಅದಾಗ್ಯೂ ವ್ಯಾಲೆಟ್‌ಗೆ ಹೆಚ್ಚುವರಿ ಹಣವನ್ನು ಸೇರಿಸಲು ಅವಕಾಶ ಇಲ್ಲದಿದ್ದರೂ ವ್ಯಾಲೆಟ್ ಬ್ಯಾಲೆನ್ಸ್ ಖಾಲಿ ಆಗುವವರೆಗೆ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಹೌದು, ಜನರು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಯಾವುದೇ ಅನಾನುಕೂಲತೆಯನ್ನು ತಡೆಗಟ್ಟಲು ಈವರೆಗೆ ಪೇಟಿಎಂ ಫಾಸ್ಟ್ಯಾಗ್ ಅನ್ನು ಬಳಕೆ ಮಾಡುತ್ತಿದ್ದರು. ಆದರೆ, ಆರ್‌ಬಿಐನ ಕೆಲವು ನಿರ್ಬಂಧಗಳಿದಾಗಿ ಪೇಟಿಎಂ ಇನ್ಮುಂದೆ ಈ ಸೇವೆಯನ್ನು ನೀಡುವುದಿಲ್ಲ. ಆದ ಕಾರಣ ನೀವು ಈ ಪೇಟಿಎಂನ ಫಾಸ್ಟ್ಯಾಗ್ ಅನ್ನು ಕ್ಲೋಸ್ ಮಾಡಿ ಬೇರೆ ಬ್ಯಾಂಕ್‌ಗೆ ಬದಲಾಗಬೇಕಿದೆ. ಹಾಗಿದ್ರೆ, ಇದನ್ನು ಮಾಡುವುದು ಹೇಗೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪೇಟಿಎಂ ಫಾಸ್ಟ್ಯಾಗ್: ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರು ಮಾರ್ಚ್ 15, 2024 ರ ಮೊದಲು ಬೇರೆ ಬ್ಯಾಂಕ್‌ನಿಂದ ಹೊಸ ಫಾಸ್ಟ್ಯಾಗ್ ಅನ್ನು ಖರೀದಿ ಮಾಡಬೇಕು ಎಂದು ಈಗಾಗಲೇ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಿಫಾರಸು ಮಾಡಿದೆ. ಅಲ್ಲದೆ ಯಾವೆಲ್ಲಾ ಬ್ಯಾಂಕ್‌ಗಳು ಈ ಸೇವೆ ನೀಡಲಿವೆ ಅನ್ನೋ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಿದೆ. ಇದರಲ್ಲಿ ಸಾಕಷ್ಟು ಬ್ಯಾಂಕ್‌ಳಿಂದ ನೀವು ಖರೀದಿ ಮಾಡಬಹುದಾಗಿದೆ.
ಈಗಾಗಲೇ ತಿಳಿದಂತೆ ಪೇಟಿಎಂ ಪಾವತಿ ಬ್ಯಾಂಕ್‌ನಲ್ಲಿನ ಮಿತಿಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ನಿರ್ದೇಶನಗಳನ್ನು ಅನುಸರಿಸಿ, ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರು ಮಾರ್ಚ್ 15, 2024 ರ ನಂತರ ಖಾತೆಗೆ ರೀಚಾರ್ಜ್ ಮಾಡಲು ಸಾಧ್ಯವಿಲ್ಲ. ಆದರೆ, ನಿರ್ದಿಷ್ಟ ಟೋಲ್ ಪಾವತಿಗಳಿಗೆ ತಮ್ಮ ಅಸ್ತಿತ್ವದಲ್ಲಿರುವ ಬಾಕಿಯನ್ನು ಬಳಕೆ ಮಾಡಿಕೊಳ್ಳಬಹುದು.
ಪೇಟಿಎಂನಲ್ಲಿ ಫಾಸ್ಟ್ಯಾಗ್ ಖಾತೆ ರದ್ದು ಮಾಡಲು ಏನು ಮಾಡಬೇಕು?: ಮೊದಲು ಬಳಕೆದಾರರು ತಮ್ಮ ಪೇಟಿಎಂ ಆಪ್ ಅನ್ನು ಪ್ರವೇಶಿಸಬೇಕು ಮತ್ತು ವಾಲೆಟ್ ವಿಭಾಗಕ್ಕೆ ನ್ಯಾವಿಗೇಟ್ ಮಾಡಬೇಕು. ನಂತರ ವಾಲೆಟ್ ವಿಭಾಗದಲ್ಲಿ, ಫಾಸ್ಟ್ಯಾಗ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮ್ಯಾನೇಜ್ ಫಾಸ್ಟ್ಯಾಗ್ (Manage Fastag) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಬಳಿಕ ಕ್ಲೋಸ್ ಫಾಸ್ಟ್ಯಾಗ್ (Close Fastag) ಎಂಬ ಆಯ್ಕೆ ಮೇಲೆ ಒತ್ತಿರಿ.

ಇದಲ್ಲದೆ, ಸೇವಾ ವಿನಂತಿ ಮೂಲಕವೂ ಈ ಕೆಲಸ ಮಾಡಬಹುದು. ಗ್ರಾಹಕರ ಸಂಪರ್ಕಕ್ಕಾಗಿ ಅಧಿಕೃತ ಪೇಟಿಎಂ ವೆಬ್‌ಸೈಟ್‌ನಲ್ಲಿ (Official Paytm Website) ಅಥವಾ ಆಪ್‌ನ ಫಾಸ್ಟ್ಯಾಗ್ ವಿಭಾಗದಲ್ಲಿ ಈ ಸೌಲಭ್ಯ ಸಿಗಲಿದೆ. ಈ ವೇಳೆ ನಿಮ್ಮ ಫಾಸ್ಟ್‌ಟ್ಯಾಗ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಪರಿಶೀಲನೆ ಉದ್ದೇಶಗಳಿಗಾಗಿ ಅವರಿಗೆ ಅಗತ್ಯವಿರುವ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಬೀಡಬೇಕಿದೆ.
ಹೊಸ ಫಾಸ್ಟ್ಯಾಗ್ ಖರೀದಿ ಮಾಡುವುದು ಹೇಗೆ?: ಇನ್ನು ಪೇಟಿಎಂ ಫಾಸ್ಟ್ಯಾಗ್ ಅನ್ನು ಕ್ಲೋಸ್ ಮಾಡಿದ ನಂತರ ಹೊಸ ಫಾಸ್ಟ್ಯಾಗ್ ಖರೀದಿ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಹೊಸ ಫಾಸ್ಟ್ಯಾಗ್ ಅನ್ನು 7 ಕೆಲಸದ ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಅದಾಗ್ಯೂ ನಿಮ್ಮ ಬ್ಯಾಂಕಿಂಗ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್‌ಗೆ ಅರ್ಜಿ ಸಲ್ಲಿಸಲು ಆಗದಿದ್ದರೆ ಟೋಲ್ ಪ್ಲಾಜಾಗಳ ಬಳಿ ಇರುವ ಮಾರಾಟಗಾರರಿಂದ ಇದನ್ನು ಪಡೆಯಬಹುದಾಗಿದೆ. ಅಲ್ಲದೆ ಇದನ್ನು ತಕ್ಷಣವೇ ಸಕ್ರಿಯಗೊಳಿಸಬಹುದು. ಆದರೆ ಬೆಲೆಗಳು ಭಿನ್ನವಾಗಿರುತ್ತವೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

ಥರ್ಡ್ ಪಾರ್ಟಿ ಆಪ್‌ಗೆ ಅನುಮೋದನೆ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪೇಟಿಎಂ ನ ಮೂಲ ಘಟಕವಾದ One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL) ಗೆ ಬಹು-ಬ್ಯಾಂಕ್ ಮಾದರಿಯ ಅಡಿಯಲ್ಲಿ ಥರ್ಡ್ ಪಾರ್ಟಿ ಆಪ್ ಪೂರೈಕೆದಾರರಾಗಿ (TPAP) ಯುಪಿಐ ಸೇವೆಗಳಲ್ಲಿ ಭಾಗವಹಿಸಲು ಅನುಮೋದನೆ ನೀಡಿದೆ.
ಈ ಪರವಾನಗಿಯು ಪೇಟಿಎಂ ತನ್ನ ಆಪ್ ಬಳಕೆದಾರರಿಗೆ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಸೇವೆಗಳನ್ನು ನೀಡುವುದನ್ನು ಮುಂದುವರಿಸಲು ಅನುಮತಿಸುತ್ತದೆ.ಇನ್ನು ಪೇಟಿಎಮ್ ನಾಲ್ಕು ಹೊಸ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಪಾವತಿ ಸೇವೆಯನ್ನು ನೀಡಲಿದೆ. ಅದರಲ್ಲಿ ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್ ಆಗಿದೆ.


Click it and Unblock the Notifications








