ಸ್ಮಾರ್ಟ್‌ಫೋನ್ ಅನ್ನು ಕೀಪ್ಯಾಡ್ ಫೋನ್ ಆಗಿ ಪರಿವರ್ತಿಸುವುದು ಹೇಗೆ? ಈಗಿನ ಟ್ರೆಂಡ್ ಇದೇ!
ಸ್ಮಾರ್ಟ್‌ಫೋನ್‌ಗಳಿಗೆ ದೊಡ್ಡ ಬೇಡಿಕೆ ಇದ್ದು, ಅಕ್ಷರ ಜ್ಞಾನ ಇಲ್ಲದವರು ಸಹ ಈ ಫೋನ್‌ಗಳನ್ನು ಬಳಕೆ ಮಾಡಲು ಕಲಿಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಫೋನ್‌ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಈ ನಡುವೆ ಫೀಚರ್ ಫೋನ್ ಅಥವಾ ಕೀಪ್ಯಾಡ್ ಫೋನ್‌ಗಳಿಗೂ ಸಹ ಬೇಡಿಕೆ ಇದೆ ಎಂದರೆ ತಪ್ಪಾಗಲಾರದು.
ಹೌದು, ಸ್ಮಾರ್ಟ್‌ಫೋನ್‌ಗಳು ನಮಗೆ ಎಲ್ಲಾ ರೀತಿಯಲ್ಲೂ ಅನುಕೂಲವಾಗಿದ್ದರೂ ಸಹ ಫೀಚರ್ ಫೋನ್‌ಗಳು ಅವುಗಳದೇ ಆದ ಮೌಲ್ಯದ ಮೂಲಕ ಇನ್ನೂ ಅಸ್ತಿತ್ವದಲ್ಲಿವೆ. ಈ ನಡುವೆ ಸ್ಮಾರ್ಟ್‌ಫೋನ್ ಬಳಕೆ ಮಾಡುವವರು ಹೊಸ ಫೀಚರ್ಸ್ ಫೋನ್ ಖರೀದಿ ಮಾಡುವ ಮೂಲಕ ಹೊಸ ಅನುಭವ ಪಡೆಯುತ್ತಾರೆ. ಹಾಗೆಯೇ ಸ್ಮಾರ್ಟ್‌ಫೋನ್ ಕೈ ಕೊಟ್ಟರೆ ತಕ್ಷಣಕ್ಕೆ ಇರಲಿ ಎಂದು ಇನ್ನೂ ಕೆಲವರು ಫೀಚರ್ ಫೋನ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ, ಸ್ಮಾರ್ಟ್‌ಫೋನ್ ಅನ್ನೇ ಫೀಚರ್ಸ್ ಫೋನ್ ಆಗಿ ಪರಿವರ್ತಿಸುವುದು ಹೇಗೆ ಗೊತ್ತಾ!?

ನೀವು ಹಲವಾರು ರೀತಿಯ ಸ್ಮಾರ್ಟ್‌ಫೋನ್ ಬಳಕೆ ಮಾಡಿರಬಹುದು. ಆದರೆ ನೋಕಿಯಾದ ಕೆಲವು ಫೀಚರ್ಸ್ ಫೋನ್‌ಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಯಾಕೆಂದರೆ ಆ ಫೋನ್‌ಗಳು ಆ ಕಾಲಘಟ್ಟದಲ್ಲಿ ಜನರಿಗೆ ಬಹಳ ಹತ್ತಿರವಾಗಿದ್ದವು. ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದವು. ಅದರಲ್ಲೂ ಆ ಫೋನ್‌ಗಳಲ್ಲಿ ನೋಕಿಯಾ 1280 (Nokia 1280) ಫೋನ್ ಸಹ ವಿಶೇಷವಾಗಿದ್ದು, ಈ ಫೋನ್ ಅನುಭವವನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಪಡೆಯಬಹುದು.
ನೀವು ಯಾವುದೇ ಆಂಡ್ರಾಯ್ಡ್ ಫೋನ್ ಹೊಂದಿದ್ದರೆ, ಅದನ್ನು ವಿಭಿನ್ನವಾಗಿ ಕಾಣುವಂತೆ ಮಾಡಲು ಸಾಫ್ಟ್‌ವೇರ್‌ನೊಂದಿಗೆ ನೀವು ಪ್ರಯತ್ನಿಸಬಹುದಾದ ಸಾವಿರಾರು ವಿಷಯಗಳಿವೆ. ಈ ಮೂಲಕ ನೀವು ವಿಭಿನ್ನ ಫಾಂಟ್‌ಗಳು, ವಿಭಿನ್ನ ಬಣ್ಣಗಳು ಮತ್ತು ವಾಲ್‌ಪೇಪರ್‌ಗಳು, ವಿಭಿನ್ನ ಥೀಮ್‌ಗಳು ಮತ್ತು ವಿಭಿನ್ನ ಇಂಟರ್ಫೇಸ್ ನ್ಯಾವಿಗೇಷನ್ ಮಾದರಿಗಳನ್ನು ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲ ಈ ಸೌಲಭ್ಯದ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಐಫೋನ್‌ನಂತೆ ಅಥವಾ ಒನ್‌ಪ್ಲಸ್ ಫೋನ್, ಸ್ಯಾಮ್‌ಸಂಗ್ ಫೋನ್‌ನಂತೆ ಕಾರ್ಯನಿರ್ವಹಿಸುವಂತೆ ಮಾಡಬಹುದು. ಆದರೆ, ಇಂಟರ್ನೆಟ್‌ನಲ್ಲಿ ಈಗ ಹೊಸ ಟ್ರೆಂಡ್ ಸೃಷ್ಟಿಯಾಗಿದ್ದು, ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಕ್ಲಾಸಿಕ್ ಮತ್ತು ಐಕಾನಿಕ್ ನೋಕಿಯಾ 1280 ಆಗಿ ಪರಿವರ್ತಿಸುತ್ತಿದ್ದಾರೆ.

ಈ ಫೋಟೋ ನೋಡಿದ್ರೆ ತಕ್ಷಣಕ್ಕೆ ಇದು ಅಸಲಿಯೋ ಅಥವಾ ನಕಲಿಯೋ ಎಂದು ಕಂಡುಕೊಳ್ಳುವುದು ಕಷ್ಟ. ಯಾಕೆಂದರೆ ಈ ಫೋನ್ ಥೇಟ್ ನೋಕಿಯಾ 1280 ನಂತೆ ಕಾಣಿಸುತ್ತಿದೆ. ಆದರೆ ಇದು ಸ್ಮಾರ್ಟ್‌ಫೋನ್. ಆಂಡ್ರಾಯ್ಡ್ ಲಾಂಚರ್ ಇದನ್ನು ಸಾಧ್ಯವಾಗಿಸಿದೆ. ಇದು ನೋಕಿಯಾ 1280 ಪ್ರೇರಿತ ವಿನ್ಯಾಸ ಮತ್ತು ಇಂಟರ್ಫೇಸ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮೇಲೆ ಕಾಣಬಹುದಾಗಿದೆ.
ಅಂದರೆ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಯ ಅರ್ಧಕ್ಕಿಂತ ಕಡಿಮೆ ಭಾಗ ಫೀಚರ್ಸ್ ಫೋನ್‌ನ ಡಿಸ್‌ಪ್ಲೇ ನಂತೆ ಆವರಿಸಿಕೊಳ್ಳಲಿದ್ದು, ಅದರಲ್ಲಿರುವ ಪಠ್ಯವು ಕಪ್ಪು ಬಣ್ಣದಲ್ಲಿ ಗೋಚರಿಸಲಿದೆ. ಜೊತೆಗೆ ಅದು ಹಸಿರು ಬಣ್ಣಕ್ಕೂ ತಿರುಗುತ್ತದೆ. ಉಳಿದ ಭಾಗವು ನೋಕಿಯಾ 1280 ನಂತೆಯೇ ಅದೇ ಶೈಲಿಯಲ್ಲಿ ವರ್ಚುವಲ್ T9 ಕೀಬೋರ್ಡ್ ಅನ್ನು ಹೊಂದಿದೆ. ನೀವು ಕ್ಲಾಸಿಕ್ ಸ್ನೇಕ್ ಆಟವನ್ನು ಸಹ ಆಡಬಹುದು. ಹಾಗಿದ್ರೆ, ನಿಮ್ಮ ಫೋನ್‌ನಲ್ಲಿ ಈ ವಿಶೇಷ ಅನುಭವ ಪಡೆಯುವುದು ಹೇಗೆ ಎಂಬುದನ್ನು ತಿಳಿಸಿದ್ದೇವೆ ನೋಡಿ.
- ಮೊದಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ್ ಪ್ಲೇ ಸ್ಟೋರ್ ವಿಭಾಗಕ್ಕೆ ಹೋಗಿ. ನಂತರ ಅಲ್ಲಿ ನೋಕಿಯಾ 1280 ಲಾಂಚರ್ ಎಂದು ಸರ್ಚ್ ಮಾಡಿ.
- ಈ ಲಾಂಚರ್ ಅಂದರೆ ಈ ಆಪ್ 20MB ಹೊಂದಿದ್ದು, ಇನ್‌ಸ್ಟಾಲ್ ಪ್ರಕ್ರಿಯೆ ಆರಂಭಿಸಿ.
- ಇದಾದ ನಂತರದಲ್ಲಿ ಮೇಜ್ ಪೇಜ್‌ಗೆ ತಲುಪಲು ಕೆಳಗಿನಿಂದ ಮೇಲಕ್ಕೆ ಸ್ಕ್ರಾಲ್ ಮಾಡಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನ ಪರದೆಯಲ್ಲಿ ಹೋಮ್ ಬಟನ್ ಒತ್ತಿರಿ.
-ಬಳಿಕ ನೀವು ಯಾವ ಲಾಂಚರ್ ಅನ್ನು ಬಳಸಲು ಬಯಸುತ್ತೀರಿ ಎಂದು ನಿಮ್ಮ ಫೋನ್ ಕೇಳುತ್ತದೆ. ಅಲ್ಲಿ ನೋಕಿಯಾ 1280 ಲಾಂಚರ್ ಅನ್ನು ಆಯ್ಕೆ ಮಾಡಿ, ನಂತರ ಆಲ್‌ವೇಸ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತೆ ಅರ ಮೇಲೆ ಟ್ಯಾಪ್ ಮಾಡಿ.
- ಲಾಂಚರ್ ಸರಿಯಾಗಿ ಕಾರ್ಯನಿರ್ವಹಿಸಲು ನೋಟಿಫಿಕೇಸನ್‌ಗಳಿಗೆ ಅನುಮತಿಗಳನ್ನು ಹೊಂದಿಸಿ. ಬಳಿಕ ಮೇಜ್‌ಪೇಜ್‌ಗೆ ಹಿಂತಿರುಗಿ.


Click it and Unblock the Notifications