Home
ಟೆಕ್ ನೌಕರಿ

IRCTC ಖಾತೆಯನ್ನು ಸುಲಭವಾಗಿ ರಚಿಸಲು ಈ ಕ್ರಮ ಅನುಸರಿಸಿ!

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪ್ರಯಾಣಿಕರಿಗೆ ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸುವ ಸೇವೆಯ ಜೊತೆಗೆ ಇತರೆ ಸೇವೆಗಳನ್ನು ನೀಡುತ್ತಿದೆ. ಐಆರ್‌ಸಿಟಿಸಿ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ತತ್ಕಾಲ್‌ ಟಿಕೆಟ್‌ ಸಹ ಪಡೆಯಬಹುದು. ಅಲ್ಲದೇ ಸಂಸ್ಥೆಯಿಂದ ಫುಡ್‌ ಸೇವೆಯನ್ನು ಪಡೆಯಬಹುದು. ಐಆರ್‌ಸಿಟಿಸಿ ಸೇವೆಗಳನ್ನು ಪಡೆಯಲು ಪ್ರಯಾಣಿಕರು IRCTC ಖಾತೆಯೊಮದನ್ನು ಹೊಂದಿರಬೇಕಿದೆ.

ಹೌದು, ಐಆರ್‌ಸಿಟಿಸಿ (IRCTC) ಸೇವೆ ಪಡೆಯಲು ಬಳಕೆದಾರರ ಖಾತೆಗೆ ಲಾಗ್ ಇನ್ ಆಗಿರಬೇಕು. IRCTC ಖಾತೆಯನ್ನು ಬಳಸಿ ಪ್ರಯಾಣಿಕರು ರೈಲ್ವೆ ಟಿಕೆಟ್‌ಗಳನ್ನು ಖರೀದಿಸುವುದು, ರದ್ದುಗೊಳಿಸುವಿಕೆ ಮತ್ತು ಮರುಪಾವತಿಗಳು, PNR ಸ್ಟೇಟಸ್‌ ಚೆಕ್ ಮಾಡುವುದು, ನಿಲ್ದಾಣಗಳ ನಡುವೆ ಪ್ರಯಾಣಿಸುವ ರೈಲುಗಳು, ರೈಲು ವೇಳಾಪಟ್ಟಿಗಳು ಸೇರಿದಂತೆ ಇತರೆ ಕೆಲವು ಸೇವೆಗಳನ್ನು ಪಡೆಯಬಹುದು.

IRCTC ಖಾತೆಯನ್ನು ಸುಲಭವಾಗಿ ರಚಿಸಲು ಈ ಕ್ರಮ ಅನುಸರಿಸಿ!

ಇನ್ನು ಐಆರ್‌ಸಿಟಿಸಿ ಖಾತೆ ಹೊಂದಿರದಿದ್ದರೆ, ಆನ್‌ಲೈನ್‌ ಮೂಲಕ ಹೊಸ IRCTC ಖಾತೆಯನ್ನು ರಚಿಸಬಹುದಾಗಿದೆ. ಅದಕ್ಕಾಗಿ ವ್ಯಾಲಿಡ್ ಇ-ಮೇಲ್ ಹಾಗೂ ಮೊಬೈಲ್‌ ನಂಬರ್‌ ಅಗತ್ಯ ಇರುತ್ತದೆ. ಹಾಗಾದರೆ ಐಆರ್‌ಸಿಟಿಸಿ (IRCTC) ನಲ್ಲಿ ಹೊಸದಾಗಿ ಖಾತೆ ರಚಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಖಾತೆ ರಚಿಸಲು ಈ ಕ್ರಮ ಅನುಸರಿಸಿ:

* ಅಧಿಕೃತ IRCTC ವೆಬ್‌ಸೈಟ್‌ಗೆ ಹೋಗಿ: irctc.co.in/nget/train-search.
* ಬಳಿಕ, ಪೇಜನ್‌ ಮೇಲ್ಭಾಗದಲ್ಲಿ ಲಭ್ಯವಿರುವ ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಸೇರಿದಂತೆ ಇತರ ವಿಷಯಗಳ ಜೊತೆಗೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
* ಖಾತೆಗೆ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
* ನಂತರ, ಎಂದಾದರೂ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ಪ್ರಯತ್ನಿಸುವಾಗ ಬಳಸಲಾಗುವ ಭದ್ರತಾ ಪ್ರಶ್ನೆಯನ್ನು ಆಯ್ಕೆ ಮಾಡಿ.

IRCTC ಖಾತೆಯನ್ನು ಸುಲಭವಾಗಿ ರಚಿಸಲು ಈ ಕ್ರಮ ಅನುಸರಿಸಿ!

* ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ನಿಮ್ಮ ವಿವರಗಳನ್ನು ಪರಿಶೀಲಿಸಿ.
* ಸಲ್ಲಿಸು ಬಟನ್ ಒತ್ತಿರಿ.
* ಅದರ ನಂತರ, ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್‌ಗಳಾಗಿ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ನಂತರ, ಒದಗಿಸಿದ ಜಾಗದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸದಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.
* ಕೊನೆಯದಾಗಿ, ಮತ್ತೊಮ್ಮೆ ಸಲ್ಲಿಸು ಆಯ್ಕೆ ಒತ್ತಿರಿ.

IRCTC ಖಾತೆಯನ್ನು ಸುಲಭವಾಗಿ ರಚಿಸಲು ಈ ಕ್ರಮ ಅನುಸರಿಸಿ!

IRCTC ಮೂಲಕ ರೈಲು ಟಿಕೆಟ್‌ ಬುಕ್ ಮಾಡಲು ಹೀಗೆ ಮಾಡಿ:

* IRCTC ಖಾತೆಗೆ ಲಾಗ್ ಇನ್ ಮಾಡಿ.
* ನಿರ್ಗಮನ ಮತ್ತು ತಲುಪುವ ನಿಲ್ದಾಣಗಳು, ಪ್ರಯಾಣದ ದಿನಾಂಕ ಮತ್ತು ರೈಲು ವರ್ಗವನ್ನು ಆಯ್ಕೆ ಮಾಡಿ.
* ನಿಮ್ಮ ಪ್ರಯಾಣಕ್ಕಾಗಿ ಲಭ್ಯವಿರುವ ರೈಲುಗಳು ಮತ್ತು ಸಮಯಗಳನ್ನು ಪರಿಶೀಲಿಸಲು ರೈಲುಗಳನ್ನು ಹುಡುಕಿ ಬಟನ್ ಮೇಲೆ ಕ್ಲಿಕ್ ಮಾಡಿ.
* ಬಯಸಿದ ರೈಲನ್ನು ಆಯ್ಕೆ ಮಾಡಿ ಮತ್ತು ಚೆಕ್ ಲಭ್ಯತೆ ಮತ್ತು ಶುಲ್ಕ ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ, ಕೋಟಾವನ್ನು ಆಯ್ಕೆ ಮಾಡಿ ಮತ್ತು ಬುಕ್ ನೌ ಬಟನ್ ಒತ್ತಿರಿ.
* ಅದರ ನಂತರ, ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

* ಆ ಬಳಿಕ, 'ಬುಕ್ಕಿಂಗ್ ಮುಂದುವರಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ.
* ವಿವರಗಳನ್ನು ಪರಿಶೀಲಿಸಿ ಮತ್ತು ಪಾವತಿ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡಿ.
* ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಒದಗಿಸಿದ ಜಾಗದಲ್ಲಿ ಪಾವತಿ ವಿವರಗಳನ್ನು ನಮೂದಿಸಿ.
* ನಿಮ್ಮ ಬುಕಿಂಗ್ ಪೂರ್ಣಗೊಳಿಸಲು ಪಾವತಿ ಮಾಡಿ ಬಟನ್ ಒತ್ತಿರಿ. ಪಾವತಿ ಪೂರ್ಣಗೊಂಡ ತಕ್ಷಣ ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ನಿಮ್ಮ ಟಿಕೆಟ್ ವಿವರಗಳನ್ನು ನೀವು ಸ್ವೀಕರಿಸುತ್ತೀರಿ.

Best Mobiles in India

English summary
Indian Railway Catering and Tourism Corporation (IRCTC) allows passengers to book train tickets online more conveniently. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+