Subscribe to Gizbot

ಲ್ಯಾಪ್‌ಟಾಪ್ ಬಳಸಿ ವೈಫೈ ಹಾಟ್‌ಸ್ಪಾಟ್ ರಚನೆ ಹೇಗೆ?

Written By:

ಇಂದಿನ ಆಧುನಿಕ ಜಗತ್ತಿನಲ್ಲಿ ಅಂತರ್ಜಾಲ ಎನ್ನುವುದು ಪ್ರತಿಯೊಬ್ಬರ ಅತ್ಯವಶ್ಯಕ ಸಂಪನ್ಮೂಲವಾಗಿ ಮಾರ್ಪಟ್ಟಿದೆ. ವೈಫೈ ಬಳಕೆ ಹೆಚ್ಚು ಆವಶ್ಯಕವಾಗುತ್ತಿರುವ ಈ ಕಾಲದಲ್ಲಿ ಜನರು ಈ ರೀತಿಯ ಸೌಲಭ್ಯಗಳನ್ನು ಇಂದು ಹೆಚ್ಚು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಹಲವಾರು ರೀತಿಯಲ್ಲಿ ವೈಫೈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕೆಲಸಗಳು ನಡೆಯುತ್ತಿದ್ದು ವೇಗವಾಗಿ ವೈಫೈ ಪಡೆದುಕೊಳ್ಳುವ ಕೆಲವೊಂದು ಯೋಜನೆಗಳು ಜಾರಿಯಲ್ಲಿವೆ.

ಓದಿರಿ: ಉಚಿತ ವೈಫೈ ಪಡೆದುಕೊಳ್ಳುವುದು ಹೇಗೆ?

ಇಂದಿನ ಲೇಖನದಲ್ಲಿ ನಿಮ್ಮ ಲ್ಯಾಪ್‌ಟಾಪ್ ಬಳಸಿ ವೈಫೈ ಹಾಟ್‌ಸ್ಪಾಟ್ ರಚಿಸುವ ಬಗ್ಗೆ ಮಾಹಿತಿಯನ್ನು ನಾವು ನೀಡಲಿದ್ದೇವೆ. ಅದು ಹೇಗೆ ಎಂಬುದನ್ನು ಸರಳ ಮಾಹಿತಿಗಳೊಂದಿಗೆ ನಾವು ನಿಮಗೆ ತಿಳಿಸಿಕೊಡಲಿದ್ದು ಸ್ಲೈಡರ್ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೇಸಿಕ್ (ಉಚಿತ) ಮತ್ತು ಪೇಯ್ಡ್ ಆವೃತ್ತಿ

ಕನೆಕ್ಟಿವಿಟಿ ಸಾಫ್ಟ್‌ವೇರ್

ಕನೆಕ್ಟಿವಿಟಿ ಸಾಫ್ಟ್‌ವೇರ್ ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬೇಸಿಕ್ (ಉಚಿತ) ಮತ್ತು ಪೇಯ್ಡ್ ಆವೃತ್ತಿಗಳೊಂದಿಗೆ ಈ ಸಾಫ್ಟ್‌ವೇರ್ ಬರುತ್ತಿದ್ದು ನಿಮಗೆ ಯಾವುದು ಅನುಕೂಲವೋ ಅದರ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ.

ರೀಬೂಟ್ ಪ್ರಕ್ರಿಯೆ

ಇನ್‌ಸ್ಟಾಲ್ ಮಾಡುವುದು

ಕನೆಕ್ಟಿವಿಟಿ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಲ್ಯಾಪ್‌ಟಾಪ್ ರೀಬೂಟ್ ಮಾಡಿ.

ಡಬಲ್ ಕ್ಲಿಕ್ ಮಾಡಿ

ಶಾರ್ಟ್‌ಕಟ್ ರಚನೆ

ರೀಬೂಟ್ ಒಮ್ಮೆ ಪೂರ್ಣಗೊಂಡ ನಂತರ, ಡೆಸ್ಕ್‌ಟಾಪ್‌ನಲ್ಲಿ ಶಾರ್ಟ್‌ಕಟ್ ರಚನೆಯಾಗುತ್ತದೆ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ.

ಚಾಲನೆಗಾಗಿ ಕ್ಲಿಕ್ಕಿಸಿ

ಪಾಪ್‌ಅಪ್

ಫೈರ್‌ವಾಲ್ ಅನ್‌ಬ್ಲಾಕಿಂಗ್‌ಗಾಗಿ ಪಾಪ್ ಅಪ್ ಗೋಚರಿಸಬಹುದಾಗಿದ್ದು, ಇದನ್ನು ಚಾಲನೆ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.

ಸೆಟ್ಟಿಂಗ್ಸ್ ಕಾನ್ಫಿಗರೇಶನ್

ಕನೆಕ್ಟಿವಿಟಿ ಚಾಲನೆಯಾಗುತ್ತಿದ್ದಂತೆ, ಸೆಟ್ಟಿಂಗ್ಸ್ ಕಾನ್ಫಿಗರೇಶನ್ ಮಾಡಬೇಕಾಗುತ್ತದೆ. ಡ್ರಾಪ್ ಡೌನ್ ಮೆನುವಿನಲ್ಲಿ, "ಇಂಟರ್ನೆಟ್ ಟು ಶೇರ್" ದೊರೆಯಲಿದ್ದು, ಹಾಟ್‌ಸ್ಪಾಟ್ ರಚಿಸುವುದಕ್ಕಾಗಿ ನೀವು ಹಂಚಿಕೊಳ್ಳಬಹುದಾದ ವೈಯರ್ಡ್ ಇಂಟರ್ನೆಟ್ ನೆಟ್‌ವರ್ಕ್ ನೀವು ಆಯ್ಕೆಮಾಡಬೇಕಾಗುತ್ತದೆ.

ಉಚಿತ ಆವೃತ್ತಿ

ಡೀಫಾಲ್ಟ್ ಪಾಸ್‌ವರ್ಡ್

ನೀವು ಉಚಿತ ಆವೃತ್ತಿಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಮ್ಮದೇ ಆದ ಡೀಫಾಲ್ಟ್ ಪಾಸ್‌ವರ್ಡ್ ಅನ್ನು ನಾವು ನೀಡಬೇಕಾಗುತ್ತದೆ.

ಸ್ಟಾರ್ಟ್ ಹಾಟ್‌ಸ್ಪಾಟ್

ಪಾಸ್‌ವರ್ಡ್ ಬದಲು

ಪಾಸ್‌ವರ್ಡ್ ಬದಲು ಮಾಡಿದ ನಂತರ, ಸ್ಟಾರ್ಟ್ ಹಾಟ್‌ಸ್ಪಾಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಕೆಲಸ ಆದಂತೆಯೇ.

ಉಚಿತ ಅವೃತ್ತಿಯಿಂದ ಲಭ್ಯ

ಐದು ಡಿವೈಸ್‌ಗಳ ಸಂಪರ್ಕ

ಈ ಉಚಿತ ಆವೃತ್ತಿ ಒಮ್ಮೆಗೆ ಐದು ಡಿವೈಸ್‌ಗಳನ್ನು ಸಂಪರ್ಕಪಡಿಸುವ ಸೌಲಭ್ಯವನ್ನು ನಿಮಗೆ ಒದಗಿಸುತ್ತದೆ.

ಪಾಸ್‌ವರ್ಡ್ ನಮೂದು

ವೈಫೈ ಆನ್‌ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಆನ್ ಮಾಡಿ, ಇಲ್ಲಿ ಪಾಸ್‌ವರ್ಡ್ ನಮೂದಿಸಿ ಮತ್ತು ನಿಮ್ಮ ಸಂಪರ್ಕವನ್ನು ಆನಂದಿಸಿ.

ಯುಎಸ್‌ಬಿ ವೈಫೈ ಅಡಾಪ್ಟರ್

ಡೆಸ್ಕ್‌ಟಾಪ್ ಕಂಪ್ಯೂಟರ್

ನಿಮ್ಮ ಡೆಸ್ಕ್‌ಟಾಪ್ ಕಂಪ್ಯೂಟರ್ ಅನ್ನು ಬಳಸಿ ಕೂಡ ವೈಫೈ ಹಾಟ್‌ಸ್ಪಾಟ್ ಅನ್ನು ರಚಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಬಾಹ್ಯ ಯುಎಸ್‌ಬಿ ವೈಫೈ ಅಡಾಪ್ಟರ್ ನಿಮಗೆ ಅಗತ್ಯವಿದೆ. ನಿಮ್ಮ ಬ್ರ್ಯಾಂಡ್‌ಗೆ ಅನುಗುಣವಾಗಿ ಅಡಾಪ್ಟರ್ ರೂ 600 ರಿಂದ 1,500 ಮತ್ತು ಅದಕ್ಕೂ ಮಿಗಿಲಾದ ಬೆಲೆಗಳಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
To show you how to turn your laptop into a Wi-Fi hotspot,here we are giving some easy steps which will help you to create hotspot.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot