ಉಚಿತ ವೈಫೈ ಪಡೆದುಕೊಳ್ಳುವುದು ಹೇಗೆ?

By Shwetha
|

ಸ್ಮಾರ್ಟ್‌ಫೋನ್‌ ಬಳಕೆದಾರರು ಇಂದು ಇಂಟರ್ನೆಟ್‌ ಸಂಪರ್ಕ ಇಲ್ಲದೇ ಇರಲಾರದಂತಹ ಸನ್ನಿವೇಶವನ್ನು ತಮ್ಮ ದಿನನಿತ್ಯ ಹವ್ಯಾಸಗಳಿಂದ ಹಾಗೂ ಚಟುವಟಿಕೆಗಳಿಂದ ಕೆಲವೊಮ್ಮೆ ಎದುರಿಸುತ್ತಿದ್ದಾರೆ. ಕೆಲವರು ಮೆನೆಯಲ್ಲಿ ತಾವು ವಾಸಿಸುವ ಸ್ಥಳದಲ್ಲಿ ವೈ ಫೈ ಸಂಪರ್ಕ ಪಡೆದಿದ್ದಾರೆ. ಅಲ್ಲಿದ್ದ ಸಮಯದಲ್ಲಿ ಮಾತ್ರ ಅವರಿಗೆ ಈ ಉಚಿತ ಇಂಟರ್ನೆಟ್‌ ಸಂಪರ್ಕ ಸಾಧ್ಯ. ಹೌದಲ್ಲವೇ. ಆ ಸ್ಥಳವನ್ನು ನಿರ್ಗಮಿಸಿದ ನಂತರದಲ್ಲಿ ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ ಎಂಬ ಪ್ರಶ್ನೆ ಎಲ್ಲರಿಗೂ ಎದುರಾಗುತ್ತದೆ.

ಓದಿರಿ: ನಿಮ್ಮ ಕೇಬಲ್‌ ಕಂಪನಿಯಿಂದ ವೈ-ಫೈ ಪಡೆಯಿರಿ

ಸ್ಮಾರ್ಟ್‌ಫೋನ್‌ ಬಳಕೆದಾರರಾದ ನೀವೀಗ ಪಯಣ ಬಳಸಿದ ಪ್ರದೇಶಗಳಲೆಲ್ಲಾ ಉಚಿತ ವೈ ಫೈ ಸಂಪರ್ಕ ಪಡೆಯಬಹುದಾಗಿದೆ. ಅದು ಹೇಗೆ ಎಂದು ತಿಳಿಯಬೇಕಾದರೆ ಗಿಜ್‌ಬಾಟ್‌ನ ಇಂದಿನ ಲೇಖನದ ಪ್ರಮುಖ ಅಂಶಗಳನ್ನು ಅನುಸರಿಸಿ.

ವೈ ಫೈ ಹೊಂದಿರುವ ಸ್ಥಳ

ವೈ ಫೈ ಹೊಂದಿರುವ ಸ್ಥಳ

ಹೋಟೆಲ್‌ಗಳು ಮತ್ತು ಬ್ಯುಸಿನೆಸ್‌ಗಳ ವೈ-ಫೈ ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆ ಸ್ನೇಹಿಯಾಗಲು ಬಹಳ ಸಂಖ್ಯೆಯ ಹೋಟೆಲ್‌ಗಳು ಮತ್ತು ಬ್ಯುಸಿನೆಸ್‌ಗಳು ಉಚಿತ ವೈ-ಫೈ ಪಡೆದಿರುತ್ತವೆ. ಸ್ಮಾರ್ಟ್‌ಫೋನ್‌ ಬಳಕೆದಾರರಾದ ನೀವು ಯಾವಾಗಲು ವೈ ಫೈ ಹೊಂದಿರುವ ಸ್ಥಳಗಳನ್ನು ಮೊದಲು ತಿಳಿದುಕೊಳ್ಳಿ.

ಹಾಟ್‌ಸ್ಪಾಟ್‌ ಡಾಟಾಬೇಸ್‌ ಬಳಸಿ

ಹಾಟ್‌ಸ್ಪಾಟ್‌ ಡಾಟಾಬೇಸ್‌ ಬಳಸಿ

ನೀವು ಇರುವ ಸ್ಥಳದಲ್ಲಿ ಯಾವುದೇ ವೈ-ಫೈ ಸಂಪರ್ಕ ಇರದಿದ್ದಲ್ಲಿ ವೈ-ಫೈ ಬದಲು ಹಾಟ್‌ಸ್ಪಾಟ್‌ ಡಾಟಾಬೇಸ್‌ ಆನ್‌ ಮಾಡಿ. ಪ್ರಪಂಚದಾದ್ಯಂತ 100 ಮಿಲಿಯನ್‌ಗಿಂತ ಅಧಿಕವಾದ ವೈ-ಫೈ ಹಾಟ್‌ಸ್ಪಾಟ್‌ ಪಟ್ಟಿ ನಿಮಗೆ ಸಿಗುತ್ತದೆ. ಕೆಲವು ಸ್ಥಳೀಯ ಪ್ರದೇಶಗಳಲ್ಲೂ ಸಹ ವೈ-ಫೈ ಹಾಟ್‌ಸ್ಪಾಟ್‌ ಸಂಪರ್ಕ ದೊರೆಯುತ್ತದೆ.

ಹೈಡೆನ್‌ ನೆಟ್‌ವರ್ಕ್‌ ಹುಡುಕಿ

ಹೈಡೆನ್‌ ನೆಟ್‌ವರ್ಕ್‌ ಹುಡುಕಿ

ಕೆಲವೊಮ್ಮೆ ವೈ-ಫೈ ಹಾಟ್‌ಸ್ಪಾಟ್‌ ಡಾಕುಮೆಂಟ್‌ ಇಲ್ಲದ ಪ್ರದೇಶಲ್ಲೂ ಸಹ ಇಲ್ಲವೆಂದರೂ ಪರವಾಗಿಲ್ಲ. ನಾವು ನಿಮಗೆ ಹೈಡೆನ್‌ ನೆಟ್‌ವರಕ್‌ ಹುಡುಕಲು ಕೆಲವು ಅಪ್ಲಿಕೇಶನ್‌ಗಳನ್ನು ತಿಳಿಸುತ್ತೇವೆ.

ವೈ-ಫೈ ಹಾಟ್‌ಸ್ಪಾಟ್‌ ಹುಡುಕುವ ಅಪ್ಲಿಕೇಶನ್‌ಗಳು

ವೈ-ಫೈ ಹಾಟ್‌ಸ್ಪಾಟ್‌ ಹುಡುಕುವ ಅಪ್ಲಿಕೇಶನ್‌ಗಳು

ಈ ಅಪ್ಲಿಕೇಶನ್‌ಗಳು ಐಫೋನ್‌ ಮತ್ತು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಿಗೆ ಉಚಿತ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಹುಡುಕಿಕೊಡುತ್ತವೆ. * WiFinder * Hotspot Haven * JiWire * Wi-Fi Hotspot List * Hotspotr

ಬ್ರೌಸ್‌ ದಿ ರೈಟ್‌ ಸೈಟ್ಸ್‌

ಬ್ರೌಸ್‌ ದಿ ರೈಟ್‌ ಸೈಟ್ಸ್‌

ಕೆಲವೊಂದು ಬ್ರೌಸ್‌ ಸೈಟ್ಸ್‌ಗಳು ನಿಮಗೆ ನಿಮ್ಮ ವಯಕ್ತಿಕ ಮೇಲ್‌ಗಳನ್ನು ಅಥವಾ ಇತರೆ ಮಾಹಿತಿ ಪಡೆಯಲು ಅನುಕೂಲವಾಗುವುದಿಲ್ಲ. ಉದಾಹರಣೆಗೆ ಅಮೇಜಾನ್‌ ಸೈಟ್‌ ಮತ್ತು ಪೀಪಲ್‌ ಮ್ಯಾಗಝೀನ್‌ ಉಚಿತ ಆಕ್ಸೆಸ್ ನೀಡುತ್ತವೆ. ಇವುಗಳು ನಿಮಗೆ ಕೇವಲ ಆ ಸೈಟ್‌ಗಲ ಸೇವೆ ಮಾತ್ರ ನೀಡುತ್ತವೆ. ಆದ್ದರಿಂದ ಉತ್ತಮ ಸೈಟ್ಸ್‌ಗಳನ್ನು ಬ್ರೌಸ್‌ ಮಾಡಿ.

ಲಾಯಲ್ಟಿ ಪ್ರೋಗ್ರಮ್‌ಗಳಿಗೆ ಲಾಗಿನ್‌ ಆಗಿರಿ

ಲಾಯಲ್ಟಿ ಪ್ರೋಗ್ರಮ್‌ಗಳಿಗೆ ಲಾಗಿನ್‌ ಆಗಿರಿ

ಕೆಲವು ಬ್ಯುಸಿನೆಸ್‌ಗಳು ಹಾಗೂ ಹೋಟೆಲ್‌ಗಳು ಲಾಯಲ್ಟಿ ಪ್ರೋಗ್ರಾಮ್‌ಗಳಿಗೆ ಸೈನ್‌ ಆಪ್‌ ಆದಲ್ಲಿ ನಿಮಗೆ ಉಚಿತ ವೈ-ಫೈ ನೀಡುತ್ತವೆ. ಹಾಗೂ ಲಾಯಲ್ಟಿ ಪ್ರೋಗ್ರಾಮ್‌ಗಳು ಉಚಿತವಾಗಿರುತ್ತವೆ.

ಕೂಪನ್‌ ಕೋಡ್‌ಗಳನ್ನು ಪತ್ತೆ ಮಾಡಿ

ಕೂಪನ್‌ ಕೋಡ್‌ಗಳನ್ನು ಪತ್ತೆ ಮಾಡಿ

ಕೆಲವು ಸೈಟ್‌ಗಳು ನಿಮಗೆ ಕೂಪನ್‌ಕೋಡ್‌ಗಳೊಂದಿಗೆ ಉಚಿತ ವೈ-ಫೈ ಆಕ್ಸೆಸ್‌ ನೀಡುತ್ತವೆ. ಉದಾಹರಣೆಗೆ RetailMeNot ನಂತಹ ಸೈಟ್‌ಗಳು ವೋಚರ್ಸ್‌ಗಳನ್ನು ಹೊಂದಿರುತ್ತವೆ. ಇತರ ಸೈಟ್‌ಗಳೊಂದಿಗೆ ಸಹಭಾಗಿತ್ವ ಹೊಂದಿರುತ್ತವೆ.

MAC ಸ್ಫೂಫಿಂಗ್ ಜೊತೆ ಕಾಲಮಿತಿ ಪಡೆಯಿರಿ

MAC ಸ್ಫೂಫಿಂಗ್ ಜೊತೆ ಕಾಲಮಿತಿ ಪಡೆಯಿರಿ

ಕೆಲವೊಮ್ಮೆ ಉಚಿತ ವೈ-ಫೈ ಪಡೆಯುತ್ತೀರಿ. ಆದರೆ ಅದು ಕಾಲಮಿತಿ ಹೊಂದಿರುತ್ತದೆ. ಇಂತಹ ಸಮಯದಲ್ಲಿ ನಿಮ್ಮ ವೈ-ಫೈ ಬಳಕೆಯ ಸಮಯ ಧೀರ್ಘಗೊಳಿಸಲು ಸರಳ MAC ಅಡ್ರೆಸ್‌ ಸ್ಫೂಫಿಂಗ್‌ ಮಾಡಬಹುದು.

ನಿಮ್ಮ ಕೇಬಲ್‌ ಕಂಪನಿಯಿಂದ ವೈ-ಫೈ ಪಡೆಯಿರಿ

ನಿಮ್ಮ ಕೇಬಲ್‌ ಕಂಪನಿಯಿಂದ ವೈ-ಫೈ ಪಡೆಯಿರಿ

ಬಹುಶಃ ಬಹು ಸಂಖ್ಯಾತರಿಗೆ ಇದು ತಿಳಿದಿಲ್ಲ ಎನಿಸುತ್ತದೆ. ಕೇಬಲ್ ಇಂಟರ್ನೆಟ್‌ಗೆ ಸಬ್‌ಸ್ಕ್ರೈಬ್‌ ಆದಲ್ಲಿ, ಕೇಬಲ್‌ ಸೇವೆದಾರರ ನಗರದ ಎಲ್ಲಾ ವೈ-ಫೈ ಹಾಟ್‌ಸ್ಪಾಟ್‌ನಿಂದಲೂ ನೀವು ಉಚಿತ ವೈ-ಫೈ ಸಂಪರ್ಕ ಪಡೆಯಬಹುದಾಗಿದೆ.

Best Mobiles in India

English summary
In this article we can see how to find out free internet places. These methods help you to find out wifi hotspots.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X