ಸದ್ಯ ಟ್ರೆಂಡಿಂಗ್‌ನಲ್ಲಿರುವ ಈ ವಾಲ್‌ಪೇಪರ್ ನಿಮ್ಮ ಫೋನಿನಲ್ಲಿ ಇದೆಯಾ?
ವಾಲ್‌ಪೇಪರ್‌ಗಳು ಸ್ಮಾರ್ಟ್‌ಫೋನ್‌ಗಳ ಅಂದವನ್ನು ಮತ್ತಷ್ಟು ಅಧಿಕ ಮಾಡುತ್ತವೆ. ಈ ನಿಟ್ಟಿನಲ್ಲಿ ಬಹುತೇಕ ಬಳಕೆದಾರರು ತಮ್ಮ ಇಷ್ಟದ ಫೋಟೋವನ್ನು ವಾಲ್‌ಪೇಪರ್ ಆಗಿ ಸೆಟ್ ಮಾಡಿಕೊಳ್ಳುತ್ತಾರೆ. ಈಗಂತೂ ತರಹೇವಾರಿ ವಾಲ್‌ಪೇಪರ್‌ಗಳು ಮೊಬೈಲ್‌ಗಳಲ್ಲಿ ಲಭ್ಯ ಇದ್ದು, ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆದ್ರೆ, ಸದ್ಯ ಟ್ರೆಂಡಿಂಗ್‌ನಲ್ಲಿರುವುದು ಇಮೋಜಿ ವಾಲ್‌ಪೇಪರ್!
ಹೌದು, ಪ್ರಿಯ ಸ್ಮಾರ್ಟ್‌ಫೋನ್ ಬಳಕೆದಾರರೇ, ಸದ್ಯ ಇಮೋಜಿ ವಾಲ್‌ಪೇಪರ್ ಹೆಚ್ಚು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಗೂಗಲ್ ಪಿಕ್ಸೆಲ್ ಹಾಗೂ ಆಂಡ್ರಾಯ್ಡ್ 14 ಬೀಟಾ ಆವೃತ್ತಿಯ ಬಳಕೆದಾರರು ಈ ನೂತನ ಮಾದರಿಯ ಇಮೋಜಿ ವಾಲ್‌ಪೇಪರ್‌ಗಳನ್ನು ಆನಂದಿಸಬಹುದು. ಅಂದಹಾಗೆ ಇತ್ತೀಚಿಗೆ ನಡೆದ ಗೂಗಲ್ I/O 2023 ಕಾರ್ಯಕ್ರಮದಲ್ಲಿ ಇದನ್ನು ಅನಾವರಣ ಮಾಡಲಾಯಿತು.

ಇನ್ನು ಬಳಕೆದಾರರು ಎಮೋಜಿ ವರ್ಕ್‌ಶಾಪ್ ಮೂಲಕ ಬಳಕೆದಾರರಿಗೆ ತಮ್ಮ ಸ್ವಂತ ಎಮೋಜಿ ವಾಲ್‌ಪೇಪರ್‌ಗಳನ್ನು ಸುಲಭವಾಗಿ ರಚಿಸಲು ಮತ್ತು ಹೊಂದಿಸಲು ಅನುಮತಿಸುತ್ತದೆ. ಒಂದು ವೇಳೆ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಆಂಡ್ರಾಯ್ಡ್ 14 ಬೀಟಾ 3 ಅಥವಾ ನಂತರದ ಆವೃತ್ತಿಯನ್ನು ಹೊಂದಿದ್ದರೆ, ವಾಲ್‌ಪೇಪರ್‌ಗಳಿಗಾಗಿ 'Emoji Workshop' ಎಂಬ ಹೊಸ ವಿಭಾಗವನ್ನು ಪ್ರವೇಶಿಸಬಹುದು. ಇನ್ನು ಆಂಡ್ರಾಯ್ಡ್ 14 ಬೀಟಾ 2 ಅಥವಾ ಹಿಂದಿನ ಆವೃತ್ತಿಯನ್ನು ಬಳಸುತ್ತಿದ್ದರೆ, ಎಮೋಜಿ ವಾಲ್‌ಪೇಪರ್ ಸಾಧ್ಯವಿಲ್ಲ ಎನ್ನಲಾಗಿದೆ.
ಎಮೋಜಿ ವಾಲ್‌ಪೇಪರ್‌ಗಳನ್ನು ರಚಿಸಲು ಆಂಡ್ರಾಯ್ಡ್ ಫೋನಿನಲ್ಲಿ ಹೀಗೆ ಮಾಡಿ:
ಹಂತ 1 : ಫೋನ್ ಮುಖಪುಟ ಸ್ಕ್ರೀನ್ ಮೇಲೆ ಮೇಲೆ ದೀರ್ಘವಾಗಿ ಒತ್ತಿರಿ.
ಹಂತ 2 : ವಾಲ್‌ಪೇಪರ್ ಮತ್ತು ಸ್ಟೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3 : ಹೆಚ್ಚಿನ (More Wallpapers) ವಾಲ್‌ಪೇಪರ್‌ಗಳನ್ನು ಆಯ್ಕೆ ಮಾಡಿ.
ಹಂತ 4 : ಎಮೋಜಿ ವರ್ಕ್‌ಶಾಪ್ (Emoji Workshop) ಆಯ್ಕೆ ಮಾಡಿ
ಹಂತ 5 : ನಿಮ್ಮ ಆದ್ಯತೆಯ ಎಮೋಜಿಗಳನ್ನು ಆಯ್ಕೆ ಮಾಡಲು ಎಡಿಟ್ ಎಮೋಜಿ ಆಯ್ಕೆಯನ್ನು ಬಳಸಿ, ಮಾದರಿಯನ್ನು ಆಯ್ಕೆ ಮಾಡಿ ಮತ್ತು ಬಣ್ಣವನ್ನು ಆರಿಸಿ.
ಹಂತ 6 : ಪ್ಯಾಟರ್ನ್ಸ್ ಟ್ಯಾಬ್ ಅಡಿಯಲ್ಲಿ ಸ್ಲೈಡರ್ ಅನ್ನು ಬಳಸಿಕೊಂಡು ನೀವು ಎಮೋಜಿಗಳ ಗಾತ್ರ ಮತ್ತು ಸಾಂದ್ರತೆಯನ್ನು ಸರಿಹೊಂದಿಸಬಹುದು.
ಹಂತ 7 : ನಿಮ್ಮ ಆಯ್ಕೆಗಳನ್ನು ನೀವು ಪೂರ್ಣಗೊಳಿಸಿದಾಗ, ವಾಲ್‌ಪೇಪರ್ ಹೊಂದಿಸಿ ಟ್ಯಾಪ್ ಮಾಡಿ.
ಎಮೋಜಿ ವರ್ಕ್‌ಶಾಪ್ ದೊಂದಿಗೆ, ಬಳಕೆದಾರರು 4,000 ಎಮೋಜಿಗಳನ್ನು ಬಳಸಿಕೊಂಡು ವೈಯಕ್ತಿಕಗೊಳಿಸಿದ ವಾಲ್‌ಪೇಪರ್‌ಗಳನ್ನು ವಿನ್ಯಾಸಗೊಳಿಸಬಹುದು. ಅವರು 14 ಎಮೋಜಿಗಳನ್ನು ಆಯ್ಕೆ ಮಾಡಬಹುದು ಮತ್ತು ಸ್ಲೈಡರ್ ಬಳಸಿ ಶೈಲಿ ಮತ್ತು ಸಾಂದ್ರತೆಯನ್ನು ಕಸ್ಟಮೈಸ್ ಮಾಡಬಹುದು. ಹಿನ್ನೆಲೆ ಮತ್ತು ಎಮೋಜಿ ಬಣ್ಣವನ್ನು ಆಯ್ಕೆ ಮಾಡುವ ಮೂಲಕ ವಾಲ್‌ಪೇಪರ್ ಅನ್ನು ಸಂವಾದಾತ್ಮಕವಾಗಿ ಮಾಡಬಹುದು.
ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಅವತಾರ ರಿಯಾಕ್ಷನ್ ಶೇರ್ ಮಾಡಲು ಹೀಗೆ ಮಾಡಿ:
ಹಂತ : 1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ತೆರೆಯಿರಿ.
ಹಂತ : 2 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಬಯಸುವ ರೀಲ್ ಅನ್ನು ತೆರೆಯಿರಿ.
ಹಂತ : 3 ಶೇರ್ ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ : 4 ನೀವು ರೀಲ್ ಅನ್ನು ಶೇರ್ ಮಾಡಲು ಬಯಸುವ ಖಾತೆಯನ್ನು ಆಯ್ಕೆಮಾಡಿ.
ಹಂತ : 5 ನೀವು ಆಯ್ಕೆ ಮಾಡಿದ ನಂತರ, ಒಂದು ಸಂದೇಶವನ್ನು ಬರೆಯಿರಿ, ಅದರ ಮೇಲೆ ಟ್ಯಾಪ್ ಮಾಡಿ, ಬಲಭಾಗದಲ್ಲಿ ಅವತಾರ್ ಬಟನ್ ಅನ್ನು ಕಾಣಬಹುದು.
ಹಂತ : 6 ಈಗ, ನಿಮ್ಮ ಎಲ್ಲಾ ಮೆಟಾ ಅವತಾರ್ ಸ್ಟಿಕ್ಕರ್‌ಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.
ಹಂತ : 7 ನೀವು ಅವತಾರ್ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿದ ನಂತರ ಸೆಂಡ್ ಟ್ಯಾಪ್ ಮಾಡಿ.
ಬಳಿಕ, ನೀವು ಚಾಟ್‌ಗೆ ಭೇಟಿ ನೀಡಿದರೆ, ನೀವು ಕಳುಹಿಸಿದ ರೀಲ್ ನಿಮ್ಮ ಅವತಾರ್ ರಿಯಾಕ್ಷನ್ ಜೊತೆಗೆ ಕಾಣಲಿದೆ. ಇತರರೊಂದಿಗೆ ರೀಲ್‌ಗಳು ಅಥವಾ ಪೋಸ್ಟ್‌ಗಳನ್ನು ಶೇರ್ ಮಾಡುವಾಗ ಅವತಾರ್ ಅನ್ನು ನೇರವಾಗಿ ಬಳಸುವುದಕ್ಕೆ ಉತ್ತಮ ಮಾರ್ಗವಾಗಿದೆ. ಇದಲ್ಲದೆ, ನೀವು ಹೆಚ್ಚಿನ ಅವತಾರ್ ರಿಯಾಕ್ಷನ್ ಕಳುಹಿಸಲು ಬಯಸಿದರೆ, ನೀವು ಅದನ್ನು ನೇರವಾಗಿ ಸ್ಟಿಕ್ಕರ್‌ಗಳ ಆಯ್ಕೆಯಿಂದ ಮಾಡಬಹುದಾಗಿದೆ.


Click it and Unblock the Notifications








