ನೂತನ ಥ್ರೆಡ್ಸ್ ಆಪ್ ಸಹವಾಸ ಬೇಡವೇ ಬೇಡ ಅಂದ್ರೆ, ಹೀಗೆ ಮಾಡಿ!
ಮೆಟಾ ಮಾಲೀಕತ್ವದ ನೂತನ ಥ್ರೆಡ್ಸ್ ಅಪ್ಲಿಕೇಶನ್ ಟ್ವಿಟರ್ ಪ್ರತಿಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದು, ಇದು ಟ್ವಿಟರ್‌ಗೆ ನೇರಾ ನೇರ ಟಾಂಗ್ ನೀಡಿರುವುದಂತು ಸುಳ್ಳಲ್ಲ. ಮೆಟಾ ಸಂಸ್ಥೆಯು ತನ್ನ ಥ್ರೆಡ್ಸ್ ಆಪ್‌ನಲ್ಲಿ ಹಲವು ನೂತನ ಫೀಚರ್ಸ್‌ಗಳು ಸೇರ್ಪಡೆ ಆಗಿದ್ದು, ಮತ್ತಷ್ಟು ಬಳಕೆದಾರ ಸ್ನೇಹಿ ಆಗುವ ಪ್ರಯತ್ನ ನಡೆಸಿದೆ. ಅದಾಗ್ಯೂ, ಥ್ರೆಡ್ಸ್ ಆಪ್ ನಿಮಗೆ ಬೇಡವಾಗಿದೆಯೇ? ಹಾಗಿದ್ರೆ, ಈ ಕೆಲಸ ಮಾಡಿ.
ಹೌದು, ಮೆಟಾ ಒಡೆತನದ ಥ್ರೆಡ್ಸ್ ಆಪ್ ಟ್ವಿಟರ್‌ಗೆ ಪೈಪೋಟಿ ನೀಡುತ್ತಾ ಸಾಗಿದೆ. ಸದ್ಯ ಸೋಶಿಯಲ್ ಮೀಡಿಯಾಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಆಪ್‌ಗಳನ್ನು ಬಳಸುವುದು ಕೆಲವು ಬಳಕೆದಾರರ ಕಷ್ಟವೇ ಸರಿ ಅಥವಾ ಇನ್ನು ಕೆಲವರಿಗೆ ಈ ನೂತನ ಥ್ರೆಡ್ಸ್ ಇಷ್ಟವಾಗಿರದೆ ಇರಬಹುದು. ಒಂದು ವೇಳೆ ಥ್ರೆಡ್ಸ್ ಆಪ್ ನಿಷ್ಕ್ರಿಯ ಮಾಡಲು ಬಯಸಿದರೆ, ಅದಕ್ಕೆ ಮಾರ್ಗ ಇದೆ.

ಟ್ವಿಟರ್ ಎದುರಾಳಿ ಎಂದು ಗುರುತಿಸಿಕೊಂಡಿರುವ 'ಥ್ರೆಡ್ಸ್ ಅಪ್ಲಿಕೇಶನ್' ಅನ್ನು ಜುಲೈ 6 ರಂದು ವಿಶ್ವಾದ್ಯಂತ ಬಳಕೆಗೆ ಜಾರಿಯಾಯಿತು. ಲಾಂಚ್ ಆದ ಆರಂಭದಲ್ಲೇ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಿರುವ ಥ್ರೆಡ್ಸ್ ಭಾರೀ ಸದ್ದು ಮಾಡಿದೆ. ಅಂದಹಾಗೆ ಇದು ಇನ್‌ಸ್ಟಾಗ್ರಾಮ್‌ನ ಜಂಟಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗಾದರೆ ಥ್ರೆಡ್ಸ್ ಆಪ್ ನಿಷ್ಕ್ರಿಯ ಮಾಡುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಥ್ರೆಡ್ಸ್ ಖಾತೆಯನ್ನು ನಿಷ್ಕ್ರಿಯ ಮಾಡಲು ಈ ಕ್ರಮಗಳನ್ನು ಅನುಸರಿಸಿ:
ಹಂತ 1 : ನಿಮ್ಮ ಮೊಬೈಲ್‌ನಲ್ಲಿ ಥ್ರೆಡ್‌ಗಳ ಆಪ್ ತೆರೆಯಿರಿ. ನಂತರ ಆಪ್‌ನ ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಪ್ರೊಫೈಲ್ ಫೋಟೋ ಮೇಲೆ ಟ್ಯಾಪ್ ಮಾಡಿ.
ಹಂತ 2 : ನಂತರ ಸೆಟ್ಟಿಂಗ್‌ಗಳ ಮೆನುವನ್ನು ಪ್ರವೇಶಿಸಲು ಮೇಲಿನ ಬಲ ಭಾಗದ ಮೂಲೆಯಲ್ಲಿರುವ ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 3 : ಬಳಿಕ ಖಾತೆಯನ್ನು ಆಯ್ಕೆ ಮಾಡಿ.
ಹಂತ 4 : ಆ ನಂತರ ಡಿಆಕ್ಟಿವೇಟ್ ಪ್ರೊಫೈಲ್ ಮೇಲೆ ಟ್ಯಾಪ್ ಮಾಡಿ.
ಹಂತ 5 : ಥ್ರೆಡ್ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಿ ಟ್ಯಾಪ್ ಮಾಡುವ ಮೂಲಕ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಿ ಎಂಬುದನ್ನು ದೃಢೀಕರಿಸಿ.
ಗಮನಿಸಬೇಕಾದ ಸಂಗತಿ :
ಥ್ರೆಡ್ ಖಾತೆಯನ್ನು ನಿಷ್ಕ್ರಿಯ ಮಾಡುವುದು ಎಂದರೆ ನಿಮ್ಮ ಪ್ರೊಫೈಲ್, ಥ್ರೆಡ್‌ಗಳು, ಪ್ರತ್ಯುತ್ತರಗಳು, ಲೈಕ್ಸ್ ಮತ್ತು ಫಾಲೋ ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯ ಮಾಡುವುದು ಮತ್ತು ಇತರರಿಂದ ಮರೆಮಾಡಲಾಗುತ್ತದೆ. ಆದರೆ ನಿಮ್ಮ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲಾಗುವುದಿಲ್ಲ. ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನಮೂದಿಸಿ ಮತ್ತೆ ಲಾಗ್ ಇನ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಬೇಕಾದರೂ ಮತ್ತೆ ಸಕ್ರಿಯ ಮಾಡಬಹುದು.
ಥ್ರೆಡ್ ಆಪ್‌ನಲ್ಲಿನ ಕೆಲವು ಆಕರ್ಷಕ ಫೀಚರ್ಸ್ :
ಕ್ವಿಕ್ ಆಗಿ ಫಾಲೋ ಮಾಡುವ ಆಯ್ಕೆ ಇದೆ : ಈ ಆಯ್ಕೆಯು ಬಳಕೆದಾರರಿಗೆ ಆಪ್‌ನಲ್ಲಿ ಇತರ ಬಳಕೆದಾರರನ್ನು ಕ್ವಿಕ್ ಆಗಿ ಫಾಲೋ ಮಾಡಲು ನೆರವು ಮಾಡಿಕೊಡುತ್ತದೆ. ಇದ್ರಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ತೆರೆಯದೆ, ಫಾಲೋ ಬಟನ್ ಅನ್ನು ಕ್ಲಿಕ್ ಮಾಡದೆಯೇ ಇತರ ಬಳಕೆದಾರ ಅನ್ನು ಫಾಲೋ ಮಾಡಬಹುದು. ಅದಕ್ಕಾಗಿ + ಐಕಾನ್ ಅನ್ನು ಕ್ಲಿಕ್ ಮಾಡಬೇಕು.
ನ್ಯೂ ಥ್ರೆಡ್ ಕ್ವಿಕ್ ಆಗಿ ತೆರೆಯಬಹುದು : ಥ್ರೆಡ್ ಆಪ್‌ನಲ್ಲಿ ಫೋಟೊ, ವಿಡಿಯೋ ಶೇರ್ ಮಾಡಲು ಅಥವಾ ಬೇರೆ ಏನಾದರೂ ಫೋಸ್ಟ್ ಮಾಡಲು ಹೊಸ ಥ್ರೆಡ್ ಅನ್ನು ಬಳಕೆದಾರರು ತ್ವರಿತವಾಗಿ ಹೊಸ ಥ್ರೆಡ್ಸ್ ತೆರೆಯಬಹುದು. ಅದಕ್ಕಾಗಿ ಆಪ್‌ನ ಕೆಳಭಾಗದಲ್ಲಿರುವ + ಮೇಲೆ ಟ್ಯಾಪ್ ಮಾಡಿದರೆ ಸಾಕು. ಹಾಗೆಯೇ ಥ್ರೆಡ್‌ನಲ್ಲಿ (ಮಲ್ಟಿಪಲ್ ಥ್ರೆಡ್‌ಗಳು) ಹೊಸ ಥ್ರೆಡ್ ಅನ್ನು ಸೇರಿಸಲು, ಥ್ರೆಡ್ಸ್‌ಗೆ ಆಡ್ ಬಟನ್ ಅನ್ನು ಟ್ಯಾಪ್ ಮಾಡಬೇಕು.


Click it and Unblock the Notifications








