Just In
- 8 hrs ago
ಇತ್ತೀಚಿನ ಒಪ್ಪೋ ಮೊಬೈಲ್ಗಳಿಗೆ ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್!
- 21 hrs ago
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- 23 hrs ago
ಗ್ರಾಹಕರಿಗೆ ಬಿಗ್ ಶಾಕ್!..ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ!
- 24 hrs ago
20,000ರೂ.ಒಳಗೆ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
Don't Miss
- News
ಆರ್ ಅಶೋಕ್ 1998 ಉಪ ಚುನಾವಣೆಯಲ್ಲಿ ಗೆದ್ದಿದ್ದು ಕಳ್ಳ ವೋಟಿನಿಂದ!
- Finance
Gold Rate Today: ಸತತವಾಗಿ ಚಿನ್ನದ ದರ ಹೆಚ್ಚಳ, ಮೇ 22ರ ಬೆಲೆ ಪರಿಶೀಲಿಸಿ
- Sports
ಥಾಮಸ್ ಕಪ್ ವಿಜೇತರನ್ನು ಅಭಿನಂದಿಸಿದ ಪ್ರಧಾನಿ; ಮೋದಿಗೆ ನೀಡಿದ್ದ ಭರವಸೆ ಈಡೇರಿಸಿದ ಲಕ್ಷ್ಯ ಸೇನ್
- Movies
ರಿಲೀಸ್ಗೂ ಮೊದಲೇ 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಭವಿಷ್ಯ ನುಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
- Education
ICSI CS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Googleನಲ್ಲಿ ನೀವು ಏನೇ ಸರ್ಚ್ ಮಾಡಿ, ಆದ್ರೆ ಇದನ್ನು ಮಾತ್ರ ಮರೆಯಬೇಡಿ!
ಸದ್ಯ ಪ್ರತಿಯೊಬ್ಬರು ಏನೇ ಯಾವುದೇ ವಿಷಯದ ಮಾಹಿತಿ ಬೇಕಿದ್ದರೂ ಸ್ಮಾರ್ಟ್‌ಫೋನ್ ಬಳಸಿ ಗೂಗಲ್ ಸರ್ಚ್ ಮಾಡಿ ಬಿಡುತ್ತಾರೆ. ಆದರೆ ಸರ್ಚ್ ಮಾಡಿರುವ ಮಾಹಿತಿ ಹಿಸ್ಟರಿಯಲ್ಲಿ ಸೇವ್ ಆಗಿರುತ್ತದೆ. ಇದರೊಂದಿಗೆ ಲೊಕೇಶನ್ ಸರ್ಚ್ ಮಾಡಿರುವ ಮಾಹಿತಿಗಳು ಸಹ ಸರ್ಚ್ ಹಿಸ್ಟರಿಯಲ್ಲಿ ದಾಖಲಾಗಿ ಉಳಿದಿರುತ್ತವೆ. ಕೆಲವರು ಮೇಲಿಂದ ಮೇಲೆ ಹಿಸ್ಟರಿ ಕ್ಲಿಯರ್ ಮಾಡುತ್ತಿರುತ್ತಾರೆ. ಆದರೆ ಇನ್ನು ಕೆಲವರು ಈ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.

ಹೌದು, ಮೊಬೈಲ್ ಬಳಕೆದಾರರು ಗೂಗಲ್ ವೆಬ್ ಸರ್ಚ್‌ನಲ್ಲಿ ಏನೇ ಮಾಹಿತಿ ಜಾಲಾಡಿದರು ಅದು ಹಿಸ್ಟರಿಯಲ್ಲಿ ಸ್ಟೋರ್ ಆಗಿರುತ್ತದೆ. ಹಾಗೆಯೇ ಭೇಟಿ ನೀಡಿದ ಸ್ಥಳದ ಲೊಕೇಶನ್ ಹಾಗೂ ಲೊಕೇಶನ್ ಸರ್ಚ್ ಮಾಹಿತಿಯು ಸಹ ಹಿಸ್ಟರಿಯಲ್ಲಿ ದಾಖಲಾಗಿರುತ್ತವೆ. ಹಿಸ್ಟರಿಯಲ್ಲಿ ಸ್ಟೋರ್ ಆಗಿರುವ ಮಾಹಿತಿ ಡಿಲೀಟ್ ಮಾಡುವುದು ಉತ್ತಮ. ಪದೇ ಪದೇ ಡಿಲೀಟ್ ಮಾಡುವುದು ಬೇಜಾರು ಎನ್ನುವುದಾದರೇ, ಆಟೋ ಡಿಲೀಟ್ ಆಯ್ಕೆ ಸೆಟ್ ಮಾಡಬಹುದು.

ಬಳಕೆದಾರರು ಸರ್ಚ್ ಮಾಹಿತಿಗಳನ್ನು ಮ್ಯಾನುವಲ್ ಆಗಿ ಕ್ಲಿಯರ್ ಮಾಡಬಹುದಾಗಿದೆ. ಇಲ್ಲವೇ ಗೂಗಲ್‌ನಲ್ಲಿರುವ ಆಟೋ ಡಿಲೀಟ್ ಮೂಲಕವಾದರು ಡಿಲೀಟ್ ಮಾಡಬಹುದಾಗಿದೆ. ಆಟೋ ಡಿಲೀಟ್ ಮಾಡಲು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿ, ಆಟೋ ಡಿಲೀಟ್ ವ್ಯವಸ್ಥೆ ಸಕ್ರಿಯ ಮಾಡಬಹುದಾಗಿದೆ. ಹಾಗಾದರೇ ಆಟೋ ಡಿಲೀಟ್ ಸೆಟ್ಟಿಂಗ್ ಮಾಡುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಟೋ ಡಿಲೀಟ್
ವೆಬ್ ಸರ್ಚ್ ಹಾಗೂ ಲೊಕೇಶನ್ ಮಾಹಿತಿಗಳ ಡೇಟಾವನ್ನು Google ಸ್ವಯಂಚಾಲಿತವಾಗಿ ಅಳಿಸಲು, ನೀವು Google ಖಾತೆಯಲ್ಲಿ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಈ ಆಟೋ ಡಿಲೀಟ್ ಸೌಲಭ್ಯದಲ್ಲಿ 18 ತಿಂಗಳು ಅಥವಾ 3 ತಿಂಗಳ ನಂತರ ಡೇಟಾಗಳು ಆಟೋ ಡಿಲೀಟ್ ಮಾಡುವ ಆಯ್ಕೆಗಳಿವೆ. ಬಳಕೆದಾರರು ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳಬಹುದು. ಈ ಮುಂದಿನ ಹಂತಗಳನ್ನು ಅನುಸರಿಸಿ.

ಈ ಕ್ರಮ ಅನುಸರಿಸಿ:
ಹಂತ 1- ನಿಮ್ಮ Google ಖಾತೆಗೆ ಲಾಗ್ ಇನ್ ಮಾಡಿ ಮತ್ತು 'Data & Personalization' ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
ಹಂತ 2- ಆ ನಂತರ ಕೆಳಗೆ ಸ್ಕ್ರಾಲ್ ಮಾಡಿ Activity Controls ವಿಭಾಗವನ್ನು ಕಾಣುತ್ತಿರಿ. ಇದು ಮೆನುವು ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ, ಲೊಕೇಶನ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿ ಎಂಬ ಮೂರು ವಿಭಾಗಗಳನ್ನು ಹೊಂದಿದೆ.

ಹಂತ 3- ಆ ಬಳಿಕ ನಂತರ ಅಲ್ಲಿ ಕಾಣುವ ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
ಹಂತ 4: ನಂತರ 'ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವೀಟಿ' ವಿಭಾಗದ ಮೇಲೆ ಕ್ಲಿಕ್ ಮಾಡಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು Auto-Delete ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5: ಆಗ ನಿಮಗೆ ಡೇಟಾವನ್ನು ಯಾವಾಗ ಸ್ವಯಂ ಡಿಲೀಟ್ ಮಾಡಬೇಕು ಎಂಬು ಆಯ್ಕೆ ಪಟ್ಟಿ ಕಾಣಿಸುತ್ತದೆ. 3 ತಿಂಗಳ ಅಥವಾ 18 ತಿಂಗಳ ಆಯ್ಕೆ ಕಾಣಿಸುತ್ತವೆ. ನಿಮಗೆ ಬೇಕಾದ ಒಂದು ಆಯ್ಕೆ ಸೆಲೆಕ್ಟ್ ಮಾಡಿ Next ಬಟನ್ ಒತ್ತಿರಿ.
ಹಂತ 6: ನಂತರ ಇದೇ ರೀತಿ ನೀವು ಲೊಕೇಶನ್ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿಗಳನ್ನು ಆಟೋ ಡಿಲೀಟ್ ಮಾಡಲು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಸರ್ಚ್ ಕೀ ವರ್ಡ್- Do a Barrel Roll
ಗೂಗಲ್ ಸರ್ಚ್‌ನಲ್ಲಿ Do a Barrel Roll ಕೀ ವರ್ಡ್ ಟೈಪ್ ಮಾಡಿ ಸರ್ಚ್ ಮಾಡಿದರೇ ಖಂಡಿತಾ ನಿಮ್ಮ ಕಣ್ಣುಗಳ ಮುಂದೆ ಮ್ಯಾಜಿಕ್ ನಡೆಯಲಿದೆ. ಏಕೆಂದರೇ ಈ ಕೀ ವರ್ಡ್ ಸರ್ಚ್ ಮಾಡಿದಾಗ ಕಾಣಿಸುವ ಫಲಿತಾಂಶದಲ್ಲಿ Do a Barrel Roll ಫಲಿತಾಂಶ ತೆರೆಯಿರಿ ಆಗ ಫಲಿತಾಂಶದ ಪುಟ ಗಿರಗಿರನೆ ತಿರುಗಿ ಬಿಡುತ್ತದೆ. ಹಾಗೆಯೇ ಎರಡು ಬಾರಿ, ಹತ್ತು ಬಾರಿ, ಇಪ್ಪತ್ತು ಬಾರಿ, ನೂರು ಬಾರಿ ಹಾಗೂ ಸಾವಿರ ಬಾರಿ ತಿರುಗುವ ಆಯ್ಕೆ ಸಹ ಕಾಣಿಸುತ್ತದೆ.

ಸರ್ಚ್ ಕೀ ವರ್ಡ್- zerg rush
ಗೂಗಲ್ ಸರ್ಚ್‌ನಲ್ಲಿ zerg rush ಕೀ ವರ್ಡ್ ಅನ್ನು ಟೈಪ್ ಮಾಡಿ, ಬಂದಿರುವ ಸರ್ಚ್ ಫಲಿತಾಂಶಗಳೆಲ್ಲವು ಹಾಗೆಯೇ ಕ್ರಮೇಣ ಮಾಯವಾಗುತ್ತಾ ಹೋಗುತ್ತವೆ. zerg rush ಎನ್ನುವುದು ಒಂದು ಆಕ್ರಮಣ ತಂತ್ರವಾಗಿದ್ದು, ದೊಡ್ಡ ಪಡೆಯೊಂದಿಗೆ ಅಥವಾ ಗ್ಯಾಂಗ್‌ನೊಂದಿಗೆ ಆಕ್ರಮಣ ಮಾಡುವುದಾಗಿದೆ. ಅದೇ ರೀತಿ zerg rush ಸರ್ಚ್ ಮಾಡಿದಾಗ ಫಲಿತಾಂಶ ಪುಟದಲ್ಲಿ ಯೆಲ್ಲೊ ರಿಂಗ್‌ಗಳು ಫಲಿತಾಂಶವನ್ನು ಮಾಯ ಮಾಡುತ್ತವೆ/ನಾಶ ಮಾಡುತ್ತವೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999