ಫೇಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ?
ಫೇಸ್‌ಬುಕ್ ಪ್ರಪಂಚದ ಅತಿದೊಡ್ಡ ಸಾಮಾಜಿಕ ಜಾಲತಾಣ. ಒಮ್ಮೆ ಫೇಸ್‌ಬುಕ್ ಖಾತೆ ಓಪನ್ ಮಾಡಿದರೆ ಸಾಕು, ಫೇಸ್‌ಬುಕ್ ಮುಖಾಂತರ ಯಾವುದೇ ದೇಶದ ವ್ಯಕ್ತಿಯನ್ನು ಸಹ ಸಂಪರ್ಕಿಸಬಹುದು. ಅಲ್ಲದೇ ಫೇಸ್‌ಬುಕ್ ಖಾತೆ ಓಪನ್ ಮಾಡುವುದರಿಂದ ಫೇಸ್‌ಬುಕ್ ಬಳಕೆದಾರರು ತಮ್ಮ ಐಡೆಂಟಿಟಿ ತೋರಿಸಿಕೊಳ್ಳಲು ಸಹಾಯಕವಾಗುತ್ತದೆ.
ಇತ್ತೀಚಿನ ದಿನಗಳಲ್ಲಂತೂ ಫೇಸ್‌ಬುಕ್ ಯಾವುದೇ ಒಂದು ಉದ್ಯಮ ಮತ್ತು ಬ್ರ್ಯಾಂಡ್‌ಗಳ ಅಭಿವೃದ್ದಿಗಾಗಿ ಬಳಸಲ್ಪಡುವ ಪ್ರಭಾವಿ ಮಾಧ್ಯಮವಾಗಿದೆ. ಅಂದಹಾಗೆ ಫೇಸ್‌ಬುಕ್ ಅನ್ನು ನಿರಂತರವಾಗಿ ಬಳಕೆ ಮಾಡದವರು ಸಹ ಖಾತೆಯನ್ನು ಓಪನ್ ಮಾಡುತ್ತಾರೆ. ಹಾಗೆ ಕೆಲವರು ಖಾತೆ ಓಪನ್ ಮಾಡಿ ಬಹಳಷ್ಟು ದಿನ ಬಳಸಿ ಬೇಸರವೆನಿಸಿದರೆ ಡಿಲೀಟ್ ಮಾಡಬೇಕು ಎಂದು ಪ್ರಯತ್ನಿಸುತ್ತಾರೆ.
ಫೇಸ್‌ಬುಕ್ ಸುರಕ್ಷತೆ ಸಲಹೆಗಳು ತಿಳಿಯದೇ ಹ್ಯಾಕ್ ಆಗುವುದರಿಂದ ಕೆಲವರು ಅಂತಹ ಖಾತೆಗಳನ್ನು ಡಿಲೀಟ್ ಮಾಡಬೇಕು ಎಂದು ಕೊಳ್ಳುತ್ತಾರೆ. ಅಂತಹವರು ಇಂದಿನ ಲೇಖನದಲ್ಲಿ ಫೇಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ ಎಂದು ತಿಳಿಯರಿ.
ಫೇಸ್‌ಬುಕ್ ಲೈವ್ ನೋಟಿಫಿಕೇಶನ್ ಟರ್ನ್ ಆಫ್ ಮಾಡುವುದು ಹೇಗೆ?

ಹಂತ 1
ಮೊದಲಿಗೆ ನೀವು ಡಿಲೀಟ್ ಮಾಡಬೇಕು ಎಂದು ನಿರ್ಧರಿಸಿರುವ ಫೇಸ್‌ಬುಕ್ ಖಾತೆಯನ್ನು ಓಪನ್ ಮಾಡಿ.

ಹಂತ 2
ಫೇಸ್‌ಬುಕ್ ಖಾತೆ ಡಿಲೀಟ್ ಮಾಡಲು ಈಗ ಇಲ್ಲಿ ಕ್ಲಿಕ್ ಮಾಡಿ https://www.facebook.com/help/delete_account

ಹಂತ 3
ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಲಿಂಕ್ ಕ್ಲಿಕ್ ಮಾಡಿದ ನಂತರ ಓಪನ್ ಆದ ಪೇಜ್‌ನಲ್ಲಿ "Delete My Account" ಎಂಬಲ್ಲಿ ಕ್ಲಿಕ್ ಮಾಡಿ.

ಹಂತ 4
ಈ ಹಂತದಲ್ಲಿ ಸೆಕ್ಯೂರಿಟಿ ಚೆಕ್ ಬಾಕ್ಸ್ ಓಪನ್ ಆಗುತ್ತಿದೆ. ಅಲ್ಲಿ ನಿಮ್ಮ ಫೇಸ್‌ಬುಕ್ ಖಾತೆಯ ಪಾಸ್‌ವರ್ಡ್ ಎಂಟರ್ ಮಾಡಿ ನಂತರ ಕ್ಯಾಪ್‌ಚ ಟೆಕ್ಸ್ಟ್ ಅನ್ನು ನೀಡಿ ಮುಂದುವರಿಸಿ.

ಹಂತ 5
ಈ ಹಂತದಲ್ಲಿ ನಿಮ್ಮ ಫೇಸ್‌ಬುಕ್ ಖಾತೆ ಡಿಆಕ್ಟೀವ್ ಆಗುವ ಬಗ್ಗೆ ಮತ್ತು ನಂತರದ 14 ದಿನಗಳ ನಂತರ ನಿಮ್ಮ ಫೇಸ್‌ಬುಕ್ ಖಾತೆ ಶಾಶ್ವತವಾಗಿ ಡಿಲೀಟ್ ಆಗುವ ಬಗ್ಗೆ ಮೆಸೇಜ್ ಬರುತ್ತದೆ.

ಹಂತ 6
14 ದಿನಗಳ ನಂತರ ನಿಮ್ಮ ಫೇಸ್‌ಬುಕ್ ಖಾತೆ ಸಂಪೂರ್ಣವಾಗಿ ಡಿಲೀಟ್ ಆಗುತ್ತದೆ. ಆದರೆ ನೀವು 14 ದಿನಗಳ ಮಧ್ಯ ಏನಾದರೂ ಫೇಸ್‌ಬುಕ್ ಖಾತೆಗೆ ಲಾಗಿನ್ ಆದಲ್ಲಿ ನಿಮ್ಮ ಖಾತೆ ಪುನಃ ಆಕ್ಟಿವೇಟ್ ಆಗುತ್ತದೆ.

ಹಂತ 7
ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗಿನ್ ಆದಲ್ಲಿ ಚಿತ್ರದಲ್ಲಿ ತೋರಿಸಲಾದ ಮೆಸೇಜ್ ಬರುತ್ತದೆ. ನಿಮ್ಮ ಫೇಸ್‌ಬುಕ್ ಖಾತೆ ಡಿಲೀಟ್ ಪ್ರಕ್ರಿಯೆ ಕ್ಯಾನ್ಸೆಲ್ ಆಗುತ್ತದೆ. ವೀಡಿಯೋ ನೋಡಿ ಶಾಶ್ವತವಾಗಿ ಫೇಸ್‌ಬುಕ್ ಖಾತೆ ಡಿಲೀಟ್ ಮಾಡವುದನ್ನು ತಿಳಿಯಲು ಮುಂದಿನ ಸ್ಲೈಡರ್ ನೋಡಿ.
ವೀಡಿಯೊ
ವೀಡಿಯೋ ಸಹ ನೋಡಿ ಫೇಸ್‌ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಗಿಜ್‌ಬಾಟ್



Click it and Unblock the Notifications








