Home
ಟೆಕ್ ನೌಕರಿ

Paytm ಆಪ್‌ನಲ್ಲಿ ಪೇಮೆಂಟ್‌ ಹಿಸ್ಟರಿ ಡಿಲೀಟ್ ಮಾಡಬಹುದೇ?.ಇಲ್ಲಿದೆ ಮಾಹಿತಿ!

ಪ್ರಸ್ತುತ ಗ್ರಾಹಕರು ಸಣ್ಣ-ಪುಟ್ಟ ವ್ಯವಹಾರಗಳಿಗೂ ಆನ್‌ಲೈನ್‌ ಪೇಮೆಂಟ್‌ ನಡೆಸುತ್ತಾರೆ. ಪೇಮೆಂಟ್‌ ಮಾಡಲು ಮುಖ್ಯವಾಗಿ ಗೂಗಲ್‌ ಪೇ, ಫೋನ್‌ಪೇ ಹಾಗೂ ಪೇಟಿಎಂ ಅಪ್ಲಿಕೇಶನ್ ಗಳನ್ನು ಬಳಕೆ ಮಾಡುತ್ತಾರೆ. ಆ ಪೈಕಿ ಜನಪ್ರಿಯ ಯುಪಿಐ ಆಪ್‌ಗಳ ಪೈಕಿ ಪೇಟಿಎಂ (Paytm) ಸಹ ಒಂದಾಗಿದ್ದು, ಹಣ ವರ್ಗಾವಣೆ ಹೊರತಾಗಿಯೂ ಇದು ಹಲವು ಸೇವೆಗಳನ್ನು ಒದಗಿಸಿದೆ. ಹಾಗೆಯೇ ಪೇಟಿಎಂ (Paytm) ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಬಹುದಾಗಿದೆ.

ಹಣವನ್ನು

ಹೌದು, ಪೇಟಿಎಂ (Paytm) ಆಪ್‌ ಹಣವನ್ನು ಕಳುಹಿಸಲು ಅಥವಾ ಸ್ವೀಕರಿಸಲು ಉಪಯುಕ್ತ ವೇದಿಕೆಯಾಗಿದೆ. ಬಳಕೆದಾರರು ಅಗತ್ಯ KYC ಅನ್ನು ಭರ್ತಿ ಮಾಡುವ ಮೂಲಕ ಪೇಟಿಎಂ ಖಾತೆಯನ್ನು ರಚಿಸಬಹುದಾಗಿದೆ. ಹಾಗೆಯೇ Paytm ಖಾತೆಯನ್ನು ಡಿಲೀಟ್‌ ಸಹ ಮಾಡಬಹುದು. ಅಲ್ಲದೇ ಪೇಟಿಎಂ (Paytm) ಹಿಸ್ಟರಿ ಡಿಲೀಟ್ ಮಾಡಬಹುದೇ? ಹಾಗಾದರೇ ಪೇಟಿಎಂ ಖಾತೆ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

Paytm ಖಾತೆ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ:

Paytm ಖಾತೆ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ:

* ನಿಮ್ಮ ಪೇಟಿಎಂ (Paytm) ಖಾತೆಗೆ ಲಾಗಿನ್ ಮಾಡಿ.
* ಸ್ಕ್ರೀನ್‌ ಮೇಲಿನ ಎಡ ಭಾಗದಲ್ಲಿ ಹ್ಯಾಂಬರ್ಗರ್ ಮೆನುವನ್ನು ಟ್ಯಾಪ್ ಮಾಡಿ ಮತ್ತು ಕೆಲವು ಆಯ್ಕೆಗಳು ಗೋಚರಿಸುತ್ತವೆ.
* ನಂತರ 24×7 ಸಹಾಯವನ್ನು (24×7 help) ಟ್ಯಾಪ್ ಮಾಡಿ.
* ಪ್ರೊಫೈಲ್ ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡಿ, ಒಂದು ವೇಳೆ ಅದನ್ನು ಹುಡುಕಲಾಗದಿದ್ದರೆ, More Products and Services ಆಯ್ಕೆ ಮೇಲೆ ಟ್ಯಾಪ್ ಮಾಡಿ.
* ಬಳಿಕ I need to close/delete my account ಆಯ್ಕೆ ಸೆಲೆಕ್ಟ್‌ ಮಾಡಿರಿ.
* ಆ ನಂತರ I do not use this Paytm account ಆಯ್ಕೆಯನ್ನು ಕ್ಲಿಕ್ ಮಾಡಿರಿ.
* ಬಳಿಕ ಕೊನೆಯದಾಗಿ Message Us ಟ್ಯಾಪ್ ಮಾಡಿ ಮತ್ತು ಅದನ್ನು ಸೆಂಡ್ ಮಾಡಿರಿ.

Paytm ಹಿಸ್ಟರಿ ಡಿಲೀಟ್ ಮಾಡಬಹುದೇ?

Paytm ಹಿಸ್ಟರಿ ಡಿಲೀಟ್ ಮಾಡಬಹುದೇ?

Paytm ಹಿಸ್ಟರಿ ಡಿಲೀಟ್ ಮಾಡಲು ಯಾವುದೇ ಅಧಿಕೃತ ಮಾರ್ಗವಿಲ್ಲ. ಆದ್ರೆ, ಹಿಸ್ಟರಿ ಡೌನ್‌ಲೋಡ್ ಮಾಡಬಹುದು ಅಥವಾ ಪೇಟಿಎಂ ಅಪ್ಲಿಕೇಶನ್‌ನಲ್ಲಿ ಚೆಕ್‌ ಮಾಡಬಹುದಾಗಿದೆ. ನಿಮ್ಮ Paytm ಹಿಸ್ಟರಿಯನ್ನು ಡಿಲೀಟ್ ಮಾಡುವುದಾಗಿ ಹೇಳಿಕೊಂಡರೂ ಸಹ ನಿಮ್ಮ ಖಾತೆಯ ಮಾಹಿತಿಯನ್ನು ಯಾರಿಗೂ ನೀಡದಿರುವುದು ಉತ್ತಮ.

Paytmನಲ್ಲಿ ಬ್ಯಾಂಕ್‌ ಅಕೌಂಟ್‌ ಡಿಲೀಟ್ ಮಾಡಲು ಹೀಗೆ ಮಾಡಿರಿ

Paytmನಲ್ಲಿ ಬ್ಯಾಂಕ್‌ ಅಕೌಂಟ್‌ ಡಿಲೀಟ್ ಮಾಡಲು ಹೀಗೆ ಮಾಡಿರಿ

* ನಿಮ್ಮ ಫೋನಿನಲ್ಲಿ ಪೇಟಿಎಂ ಆಪ್‌ ಅನ್ನು ತೆರೆಯಿರಿ.
* ನಂತರ ಮೇಲಿನ ಎಡ ಮೂಲೆಯಲ್ಲಿರುವ ಹ್ಯಾಂಬರ್ಗರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಆ ಬಳಿಕ ಪ್ರೊಫೈಲ್ ಆಯ್ಕೆ.
* ಪೇಮೆಂಟ್‌ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ, ನಂತರ UPI ಮತ್ತು ಲಿಂಕ್ಡ್ ಬ್ಯಾಂಕ್ ಖಾತೆಗಳನ್ನು ಆಯ್ಕೆ ಮಾಡಿ.
* ಈಗ, ನಿಮ್ಮ ಪೇಟಿಎಂ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳ ಲಿಸ್ಟ್‌ ಕಾಣುತ್ತೀರಿ.
* ಯಾವುದೇ ಬ್ಯಾಂಕ್ ಖಾತೆಯನ್ನು ಡಿಲೀಟ್ ಮಾಡಲು, Remove Account ಆಯ್ಕೆ ಟ್ಯಾಪ್ ಮಾಡಿ ಮತ್ತು ಅದನ್ನು ಖಚಿತಪಡಿಸಿ.

Paytm ಬಿಸಿನೆಸ್ ಅಕೌಂಟ್‌ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ

Paytm ಬಿಸಿನೆಸ್ ಅಕೌಂಟ್‌ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿ

* ಪೇಟಿಎಂ ಆಪ್ ತೆರೆಯಿರಿ
* ನಂತರ ನಿಮ್ಮ ಫ್ರೋಫೈಲ್‌ ಐಕಾನ್ ಟ್ಯಾಪ್‌ ಮಾಡಿರಿ
* ಆ ಬಳಿಕ ಅಲ್ಲಿರುವ ಆಯ್ಕೆಗಳಲ್ಲಿ ಬಿಸಿನೆಸ್‌ ಅಕೌಂಟ್‌ ಆಯ್ಕೆ ಕ್ಲಿಕ್ ಮಾಡಿರಿ
* ನಂತರ ಸ್ಕ್ರಾಲ್‌ ಮಾಡಿರಿ, ಅಲ್ಲಿ ಕಾಣುವ Deactivate My Account ಸೆಲೆಕ್ಟ್ ಮಾಡಿರಿ.
* 24 ರಿಂದ 48 ಗಂಟೆಗಳ ಒಳಗಾಗಿ ಖಾತೆಯು ಡಿಲೀಟ್ ಆಗಲಿದೆ.

Best Mobiles in India

English summary
How to Delete Permanently Paytm Account: Follow These Steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+