Home
ಟೆಕ್ ನೌಕರಿ

ಶಾಶ್ವತವಾಗಿ 'ಇನ್‌ಸ್ಟಾಗ್ರಾಂ' ಖಾತೆ ಡಿಲೀಟ್ ಮಾಡಬೇಕೆ?.ಹೀಗೆ ಮಾಡಿ!

ಸಾಮಾಜಿಕ ಜಾಲತಾಣಗಳು ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಫೇಸುಬುಕ್‌, ವಾಟ್ಸಪ್‌ ಸೇರಿದಂತೆ ಇನ್‌ಸ್ಟಾಗ್ರಾಂ ಆಪ್‌ಗಳು ಜನಪ್ರಿಯ ಹೊಂದಿವೆ. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಲಿಸ್ಟ್‌ನಲ್ಲಿಯೂ ಫೇಸ್‌ಬುಕ್‌ ಒಡೆತನದ ಈ ಆಪ್‌ಗಳೆ ಮುಂದಿವೆ. ಈ ಸಾಮಾಜಿಕ ಆಪ್‌ಗಳನ್ನು ಬಳಸುವ ಬಹುತೇಕ ಬಳಕೆದಾರರು ಖಾತೆ ಡಿಲೀಟ್ ಮಾಡುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ ಅವರಿಗೆ ಈ ಲೇಖನದಲ್ಲಿದೆ ಉತ್ತರ.

ಶಾಶ್ವತವಾಗಿ 'ಇನ್‌ಸ್ಟಾಗ್ರಾಂ' ಖಾತೆ ಡಿಲೀಟ್ ಮಾಡಬೇಕೆ?.ಹೀಗೆ ಮಾಡಿ!

ಹೌದು, ಸ್ಮಾರ್ಟ್‌ಪೋನ್ ಹೊಂದಿರುವ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಲೇ ಇರುತ್ತಾರೆ. ಅದರಲ್ಲಿ ಇನ್‌ಸ್ಟಾಗ್ರಾಂ ಸಹ ಒಂದು. ಫೋಟೊ, ವಿಡಿಯೊ ಶೇರಿಂಗ್‌ನ ಆಯ್ಕೆ ಹೊಂದಿರುವ ಈ ಆಪ್ ತುಂಬಾ ಜನಪ್ರಿಯವಾಗಿದೆ. ಕೆಲವು ಬಳಕೆದಾರರಿಗೆ ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಶಾಶ್ವತವಾಗಿ ಕ್ಲೋಸ್‌ ಮಾಡಬೇಕು ಎಂದುಕೊಂಡಿರುತ್ತಾರೆ. ಆದರೆ ಡಿಲೀಟ್ ಮಾಡುವುದು ಹೇಗೆ ಎಂಬುದರಲ್ಲಿ ಗೊಂದಲ ಇರುತ್ತದೆ. ಹಾಗಾದರೇ ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಲೀಟ್ ಆಯ್ಕೆ ಇದೆ

ಡಿಲೀಟ್ ಆಯ್ಕೆ ಇದೆ

ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ತೆಗೆದು ಹಾಕುವ ಆಯ್ಕೆ ಇದ್ದು, ಅದು ಎರಡು ಮಾದರಿಯಲ್ಲಿ ಸಾಧ್ಯವಿದೆ. ಒಂದು ತಾತ್ಕಾಲಿಕವಾಗಿ ತೆಗೆದು ಹಾಕುವುದು ಮತ್ತು ಶಾಶ್ವತವಾಗಿ ಅಕೌಂಟ್ ತೆಗೆದುಹಾಕುವುದು. ತಾತ್ಕಾಲಿಕವಾಗಿ ತೆಗೆದರೇ ಮತ್ತೆ ಮರಳಿ ಸಕ್ರಿಯ ಮಾಡುವ ಆಯ್ಕೆ ಲಭ್ಯವಿರುತ್ತದೆ. ಆದರೆ ಶಾಶ್ವತವಾಗಿ ಡಿಲೀಟ್ ಮಾಡಿದರೇ ಮತ್ತೆ ಅಕೌಂಟ್ ಸಕ್ರಿಯ ಮಾಡಿಕೊಳ್ಳಲಾಗದು.

ವೆಬ್‌ ವರ್ಷನ್‌ನಲ್ಲಿ ಸಾಧ್ಯ

ವೆಬ್‌ ವರ್ಷನ್‌ನಲ್ಲಿ ಸಾಧ್ಯ

ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಡಿಲೀಟ್ ಆಯ್ಕೆಯು ಸ್ಮಾರ್ಟ್‌ಫೋನ್ ಅಥವಾ ಐಫೋನ್‌ಗಳ ಆಪ್‌ನಲ್ಲಿ ದೊರೆಯುವುದಿಲ್ಲ. ಹೀಗಾಗಿ ಲ್ಯಾಪ್‌ಟಾಪ್‌ ಅಥವಾ ಟ್ಯಾಬ್ಲೆಟ್‌ಗಳು ಮೂಲಕ ಇನ್‌ಸ್ಟಾಗ್ರಾಂ ವೆಬ್‌ ವರ್ಷನ್‌ ತೆರೆಯಬೇಕು. ಆ ಮೂಲ ಇನ್‌ಸ್ಟಾಗ್ರಾಂ ಡಿಲೀಟ್ ಮಾಡಬಹುದಾಗಿದೆ.

ತಾತ್ಕಾಲಿಕವಾಗಿ ಡಿಲೀಟ್ ಮಾಡುವುದು ಹೇಗೆ

ತಾತ್ಕಾಲಿಕವಾಗಿ ಡಿಲೀಟ್ ಮಾಡುವುದು ಹೇಗೆ

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಎಡಿಟ್ ಪ್ರೊಫೈಲ್ ಆಯ್ಕೆ ಒತ್ತಿರಿ.
* ತಾತ್ಕಾಲಿಕವಾಗಿ ಅಕೌಂಟ್ ಮುಚ್ಚಿರಿ ಆಯ್ಕೆ ಸೆಲೆಕ್ಟ್ ಮಾಡಿ. (Temporarily disable my account)
* ಅಕೌಂಟ್ ಮುಚ್ಚವ ಕಾರಣ ತಿಳಿಸಬೇಕು.
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ

ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಅಕೌಂಟ್ ತೆಗೆದುಹಾಕುವ ಸೂಕ್ತ ಕಾರಣ ತಿಳಿಸಬೇಕು.
* ನಂತರ ಶಾಶ್ವತವಾಗಿ ತೆಗೆದುಹಾಕುವ ಆಯ್ಕೆ ಕಾಣಿಸುತ್ತದೆ- rid of it forever
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ

Best Mobiles in India

English summary
How to delete your Instagram account forever.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+