Home
ಟೆಕ್ ನೌಕರಿ

Hidden camera in hotels: ಹೋಟೆಲ್ ರೂಮ್‌ನಲ್ಲಿನ ಹಿಡನ್ ಕ್ಯಾಮೆರಾಗಳನ್ನು ಈ ರೀತಿ ಪತ್ತೆ ಮಾಡಿ!

ಹೋಟೆಲ್‌ ಹಾಗೂ ಇನ್ನಿತರೆ ಖಾಸಗಿ ರೂಮ್‌ಗಳಲ್ಲಿ ವಾಸ ಮಾಡಲು ಬರುವ ಜನರಿಗೆ ಅವರ ಅರಿವಿಲ್ಲದಂತೆ ಮತ್ತು ಒಪ್ಪಿಗೆಯಿಲ್ಲದೆ ಕ್ಯಾಮೆರಾಗಳನ್ನು ಇಡುವುದು ಅನುಚಿತ ಮತ್ತು ಕಾನೂನು ಬಾಹಿರವಾಗಿದೆ. ಅನಧಿಕೃತ ವಿಡಿಯೋ ಕಣ್ಗಾವಲು ಗೌಪ್ಯತೆ ಹಕ್ಕುಗಳನ್ನು ಉಲ್ಲಂಘನೆಯಾಗಿದೆ. ಅದಾಗ್ಯೂ, ಇತ್ತೀಚಿಗೆ ಈ ರೀತಿಯ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿವೆ.

ಹೌದು, ಹೋಟೆಲ್‌ಗಳು ಪ್ರಮುಖವಾಗಿ ಅತಿಥಿಗಳ ಸುರಕ್ಷತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡಬೇಕಿದೆ. ಇದರೊಂದಿಗೆ ಪ್ರತಿಷ್ಠಿತ ಹೋಟೆಲ್‌ಗಳು ಅತಿಥಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಭದ್ರತಾ ಕ್ರಮಗಳನ್ನು ಹೊಂದಿವೆ. ಆದರೆ ಈ ಕ್ರಮಗಳು ಯಾವಾಗಲೂ ಕಾನೂನು ಮತ್ತು ನೈತಿಕ ಗಡಿಯೊಳಗೆ ಇರಬೇಕು. ಇವುಗಳನ್ನು ಮೀರಿದರೆ ಎಲ್ಲರಿಗೂ ಸಮಸ್ಯೆ ನಿರ್ಮಾಣ ಆಗುತ್ತದೆ. ಈ ಕಾರಣಕ್ಕಾಗಿಯೇ ಹೋಟೆಲ್‌ಗಳಲ್ಲಿ ಎಲ್ಲೆಲ್ಲಿ ಕ್ಯಾಮೆರಾಗಳನ್ನು ಅಡಗಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಪ್ರಮುಖವಾದ ಕೆಲಸ.

ಹೋಟೆಲ್ ರೂಮ್‌ನಲ್ಲಿನ ಹಿಡನ್ ಕ್ಯಾಮೆರಾಗಳನ್ನು ಈ ರೀತಿ ಪತ್ತೆ ಮಾಡಿ!

ದಕ್ಷಿಣ ಕೊರಿಯಾದ ಹೋಟೆಲ್ ಕೊಠಡಿಗಳಲ್ಲಿ 1,000 ಕ್ಕೂ ಹೆಚ್ಚು ಜನರ ಕೋಣೆಯೊಳಗಿನ ಚಟುಕೆಯನ್ನು ರಹಸ್ಯವಾಗಿ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿಯೂ ಇಂತಹ ಕೆಲವು ಪ್ರಕರಣಗಳು ಆಗಾಗ್ಗೆ ವರದಿ ಆಗುತ್ತಲೇ ಇರುತ್ತವೆ ಅಂದರೆ ಕಳೆದ ವರ್ಷದ ಕೊನೆಯಲ್ಲಿ ಯುಪಿಯ ಹೋಟೆಲ್ ಕೋಣೆಯಲ್ಲಿ ದಂಪತಿಗಳ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಹಾಗೆಯೇ ಉತ್ತರಾಖಂಡ್‌ನ ತೆಹ್ರಿಯಲ್ಲಿ 2019ರಲ್ಲಿ ಹೋಟೆಲ್ ಕೋಣೆಯ ಸೀಲಿಂಗ್ ಫ್ಯಾನ್‌ನಲ್ಲಿ ಕ್ಯಾಮೆರಾವನ್ನು ಇಡಲಾಗಿತ್ತು. ಇದರಿಂದ ಜನರ ಖಾಸಗಿ ಕ್ಷಣಗಳ ಚಿತ್ರಗಳು ಮತ್ತು ವಿಡಿಯೋಗಳನ್ನು ರೆಕಾರ್ಡ್‌ ಮಾಡಿಕೊಂಡು ಆಗಾಗ್ಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿತ್ತಂತೆ. ಇದರಿಂದಾಗಿಯೇ ನೀವು ಹೋಟೆಲ್‌ಗೆ ಹೋದಾಗ ಎಚ್ಚರದಿಂದಿರುವುದು ಮುಖ್ಯ. ಈ ಕಾರಣಕ್ಕಾಗಿಯೇ ನೀವು ಯಾವುದೇ ಖಾಸಗಿ ರೂಂಗೆ ಹೋದಾಗ ಈ ಕೆಲಸ ಮಾಡಿ.

ಸೀಲಿಂಗ್ ಫ್ಯಾನ್ ಪರಿಶೀಲಿಸಿ: ಆರಂಭದಲ್ಲಿ ನೀವು ಯಾವುದೇ ಖಾಸಗಿ ಕೋಣೆಗೆ ಹೋದಾಗ ಅಲ್ಲಿ ಸೀಲಿಂಗ್ ಫ್ಯಾನ್ ಕಡೆ ಗಮನಹರಿಸಿ. ಇದನ್ನು ಪತ್ತೆ ಮಾಡುವುದು ಸಹ ಬಹಳ ಸುಲಭ. ಅಂದರೆ ಯಾವುದೇ ಕ್ಯಾಮೆರಾ ಇದ್ದರೂ ಸಹ ಅದು ಕೆಲಸ ಮಾಡುತ್ತಿದ್ದರೆ ಅದರಿಂದ ಕೆಂಪು ಬೆಳಕು ಮಿನುಗುತ್ತದೆ. ಇದನ್ನು ಪತ್ತೆ ಮಾಡಬೇಕು ಎಂದರೆ ನೀವು ಬ್ಯಾಟರಿ ಅಥವಾ ಟಾರ್ಚ್ ಬೆಳಕನ್ನು ಆ ಕಡೆ ತೋರಿಸಿ.

ವಿಶೇಷವಾಗಿ ಕಾಣುವ ವಸ್ತುಗಳ ಮೇಲೆ ಕಣ್ಣಿಡಿ: ಕೋಣೆಯಲ್ಲಿನ ವಾಂಟೇಜ್ ಪಾಯಿಂಟ್‌ಗಳ ಕಡೆ ಗಮನಹರಿಸುವುದು ಪ್ರಮುಖವಾಗಿ ಕೆಲಸವಾಗಿದೆ. ಈ ಪ್ರದೇಶಗಳು ಸಣ್ಣ ಕ್ಯಾಮೆರಾವನ್ನು ಮರೆಮಾಡಬಹುದಾದ ಸ್ಥಳವಾಗಿರಬಹುದು. ಈ ಕಾರಣಕ್ಕೆ ನೀವು ಕನ್ನಡಿಗಳು ಅಥವಾ ಅಲಂಕಾರಿಕ ತುಣುಕುಗಳ ಮೇಲೆ ಕಣ್ಣಿಡಿ. ಈ ರೂಂಗೆ ಇದು ಅನಗತ್ಯ ಎಂದು ಭಾವಿಸುವ ಯಾವುದೇ ವಸ್ತು ಕಂಡರೂ ಅದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ.

ವಿದ್ಯುತ್ ಟೂಲ್ಸ್‌ ಪರಿಶೀಲಿಸಿ: ಇದೆಲ್ಲಕ್ಕೂ ಮಿಗಿಲಾಗಿ ಹೆಚ್ಚಿನ ಗುಪ್ತ ಕ್ಯಾಮರಾ ಡಿವೈಸ್‌ಗಳು ಸಾಮಾನ್ಯವಾಗಿ ವಿದ್ಯುತ್ ವೈರ್‌ಗಳ ಜೊತೆಗೆ ಇರುತ್ತವೆ. ಆದ್ದರಿಂದ ನೀವು ಅಸಾಮಾನ್ಯ ತಂತಿಗಳು ಅಥವಾ ಮಿಟುಕಿಸುವ ದೀಪಗಳು ಏನಾದರೂ ಕಂಡು ಬಂದರೆ ಅಲ್ಲಿ ಗುಪ್ತ ಕ್ಯಾಮರಾ ಇರಬಹುದು ಎಂಬ ಶಂಕೆ ನಿಮ್ಮಲ್ಲಿರಲಿ. ಜೊತೆಗೆ ಅಲ್ಲೇ ಇರಿಸುವ ಸ್ಪೀಕರ್ ಹಾಗೂ ಅದರ ಮೆಶ್ ಅನ್ನು ಪರಿಶೀಲಿಸಿ. ಅದನ್ನೂ ಸಹ ನೀವು ಫ್ಲ್ಯಾಶ್‌ಲೈಟ್ ಅಥವಾ ಟಾರ್ಚ್‌ನೊಂದಿಗೆ ಪತ್ತೆ ಮಾಡಬಹುದು.

ಹ್ಯಾಂಗರ್‌ಗಳನ್ನೂ ಗಮನಿಸಿ: ಇನ್ನುಳಿದಂತೆ ಕೋಣೆಯಲ್ಲಿರುವ ವಾಶ್‌ ರೂಂನಲ್ಲಿ ಹ್ಯಾಂಗರ್‌ಗಳನ್ನೂ ಗಮನಿಸಿವುದು ಅತೀ ಮುಖ್ಯ. ಯಾಕೆಂದರೆ ಬಾತ್ರೂಮ್ನಲ್ಲಿ ಕೊಕ್ಕೆಗಳು ಅಥವಾ ಟವೆಲ್ ಮತ್ತು ಹೇರ್ ಡ್ರೈಯರ್ ಹೋಲ್ಡರ್ಗಳಲ್ಲಿ ಹಿಡನ್ ಪಿನ್‌ಹೋಲ್ ಕ್ಯಾಮೆರಾ ಜೋಡಿಸಲು ಅವಕಾಶ ಇರುತ್ತದೆ. ಜೊತೆಗೆ ಬೆಂಕಿ ಎಚ್ಚರಿಕೆಗಾಗಿ ಬಳಕೆ ಮಾಡುವ ಡಿವೈಸ್‌ನ ಒಳಗೂ ಸಹ ಗುಪ್ತ ಕ್ಯಾಮೆರಾ ಆಯ್ಕೆ ಇರುವ ಸಂಭವ ಹೆಚ್ಚಾಗಿರುತ್ತದೆ.

ಹೋಟೆಲ್ ರೂಮ್‌ನಲ್ಲಿನ ಹಿಡನ್ ಕ್ಯಾಮೆರಾಗಳನ್ನು ಈ ರೀತಿ ಪತ್ತೆ ಮಾಡಿ!

ಗುಬ್ಬಿಗಳು, ಹಿಡಿಕೆಗಳು, ಬಾಗಿಲುಗಳು ಮತ್ತು ಡ್ರಾಯರ್ಗಳನ್ನು ಪರಿಶೀಲಿಸಿ: ಇನ್ನುಳಿದಂತೆ ಈ ಸಣ್ಣ ಕ್ಯಾಮೆರಾಗಳನ್ನು ಗುಬ್ಬಿಗಳು, ಹಿಡಿಕೆಗಳು, ಬಾಗಿಲುಗಳು ಹಾಗೂ ಡ್ರಾಯರ್‌ಗಳ ಲಾಕ್‌ನಲ್ಲಿ ಇರಿಸಲಾಗುತ್ತದೆ. ಇವುಗಳನ್ನು ಪರಿಶೀಲಿಸುವುದು ಸಹ ಅಗತ್ಯವಾದ ಕೆಲಸವಾಗಿದೆ. ಇಷ್ಟೆಲ್ಲಾ ಮಾಡಿದರೂ ಸರಿಯಾಗಿ ಕ್ಯಾಮರಾ ಕಾಣಿಸುತ್ತಿಲ್ಲ ಎಂದಾದರೆ ನಿಮ್ಮ ಬಳಿ ಏನಾದರೂ ಕ್ಯಾಮೆರಾ ಲೆನ್ಸ್ ಇದ್ದರೆ ಈ ಮೂಲಕವೂ ಕ್ಯಾಮೆರಾ ಪತ್ತೆ ಮಾಡಬಹುದು. ಇದಕ್ಕಾಗಿ ಕೋಣೆಯ ಲೈಟ್ಸ್‌ ಆಪ್‌ ಮಾಡಿ ಲೆನ್ಸ್‌ ಮೂಲಕ ಎಲ್ಲಾ ಕಡೆ ಕಣ್ಣಾಯಿಸಿ.

ಕನ್ನಡಿ ಮೇಲೆ ಬೆರಳಿಡುವ ತಂತ್ರ: ಇನ್ನು ನಿಮ್ಮ ಬೆರಳು ಮತ್ತು ಅದರ ಪ್ರತಿಫಲನದ ನಡುವಿನ ಅಂತರವನ್ನು ಕನ್ನಡಿ ಮೂಲಕ ತಿಳಿದುಕೊಳ್ಳಿ. ಅಂದರೆ ನಿಮ್ಮ ಕೋಣೆಯಲ್ಲಿರುವ ಕನ್ನಡಿಗೆ ಎದುರಾಗಿ ನಿಮ್ಮ ಬೆರಳನ್ನು ಕನ್ನಡಿ ಮೇಲೆ ಇರಿಸಿ. ಅದರಲ್ಲಿ ಬೆರಳಿನ ಪ್ರತಿಬಿಂಬ ಮತ್ತು ಬೆರಳಿನ ನಡುವೆ ಯಾವುದೇ ಅಂತರವಿಲ್ಲದಿದ್ದರೆ, ಕನ್ನಡಿಯ ಇನ್ನೊಂದು ಬದಿಯಲ್ಲಿ ಕ್ಯಾಮೆರಾ ಇರುವ ಸಾಧ್ಯತೆಯಿದೆ ಎಂದರ್ಥ.

Best Mobiles in India

English summary
It is inappropriate and illegal to place camera in hotels and other private rooms without the knowledge and consent of occupants. Learn how to detect these types of hidden cameras.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+