ಡಿಜಿಟಲ್‌ ಆಧಾರ್‌ ಕಾರ್ಡ್‌ ಡೌನ್‌ಲೋಡ್ ಮಾಡುವುದು ಹೇಗೆ ಗೊತ್ತಾ?

|

ಪ್ರಸ್ತುತ ಎಲ್ಲ ಕೆಲಸಗಳಿಗೂ ಆಧಾರ್‌ ಕಾರ್ಡ್‌ ಅಗತ್ಯವಿದೆ. ಆಧಾರ್‌ ಕಾರ್ಡ್‌ ಕಳೆದು ಹೋದಾಗ ಇಲ್ಲವೇ ಅಗತ್ಯ ಸಂದರ್ಭಗಳಲ್ಲಿ ಆಧಾರ್ ಕಾರ್ಡ್‌ ದೊರೆಕದೇ ಇದ್ದಾಗ ಏನು ಮಾಡುವುದು ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡುತ್ತದೆ. ಅಂತ ಸಂದರ್ಭಗಳಲ್ಲಿ ಡಿಜಿಟಲ್ ಆಧಾರ್ ಕಾರ್ಡ್‌ ನೆರವಾಗಲಿದೆ. ಈ ಡಿಜಿಟಲ್‌ ಆಧಾರ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಇದೆ.

ಯುಐಡಿಎಐ

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಆಧಾರ್ ದಾಖಲಾತಿ ಹೊಂದಿರುವವರಿಗೆ ತಮ್ಮ ಗುರುತಿನ ಚೀಟಿಯ ಡಿಜಿಟಲ್ ನಕಲನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನು UIDAI ಯ ವೆಬ್‌ಸೈಟ್ - uidai.gov.in ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ mAadhaar ಮೂಲಕ ಮಾಡಬಹುದು. ಯುಐಡಿಎಐ ಆಧಾರ್ ಬಯೋಮೆಟ್ರಿಕ್ ಐಡಿ ಪ್ರೋಗ್ರಾಂ ಅನ್ನು ನಿರ್ವಹಿಸುತ್ತದೆ ಮತ್ತು ಆನ್‌ಲೈನ್‌ನಲ್ಲಿ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ. ಹಾಗಾದರೆ ಡಿಜಿಟಲ್ ಆಧಾರ್ ಕಾರ್ಡ್‌ ಪಡೆಯುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಜಿಟಲ್‌ ಆಧಾರ್ ಪಡೆಯಲು ಈ ಕ್ರಮ ಅನುಸರಿಸಿರಿ:

ಡಿಜಿಟಲ್‌ ಆಧಾರ್ ಪಡೆಯಲು ಈ ಕ್ರಮ ಅನುಸರಿಸಿರಿ:

* ಆಧಾರ್ ವೆಬ್‌ಸೈಟ್‌ನಲ್ಲಿ (uidai.gov.in) 'ಆಧಾರ್ ಪಡೆಯಿರಿ-Get Aadhaar' ವಿಭಾಗದ ಅಡಿಯಲ್ಲಿ ಬಳಕೆದಾರರು 'ಆಧಾರ್ ಡೌನ್‌ಲೋಡ್' ಆಯ್ಕೆಯನ್ನು ಆರಿಸಿಕೊಳ್ಳುವುದು.

* ಆಧಾರ್ ಸಂಖ್ಯೆ (ಯುಐಡಿ)

* ದಾಖಲಾತಿ ಐಡಿ (ಇಐಡಿ)

ವರ್ಚುವಲ್ ಐಡಿ

* ವರ್ಚುವಲ್ ಐಡಿ (ವಿಐಡಿ) ಈ ಮೂರು ಆಯ್ಕೆಗಳಲ್ಲಿ ಒಂದನ್ನು ಆಯ್ದುಕೊಳ್ಳುವುದು.

* ಈ ಹಂತದಲ್ಲಿ ಮಾಸ್ಕ್ಡ ಆಧಾರ್ ನಕಲು ಬಯಸುತ್ತದೆಯೇ ಎಂದು ಬಳಕೆದಾರರು ಆಯ್ಕೆ ಮಾಡಬಹುದು. ಮಾಸ್ಕ್ಡ ಆಧಾರ್ ಆವೃತ್ತಿಯಲ್ಲಿ, ಸಂಪೂರ್ಣ ಯುಐಡಿ ಗೋಚರಿಸುವುದಿಲ್ಲ.

* ಅಗತ್ಯ ವಿವರಗಳನ್ನು ಭರ್ತಿ ಮಾಡಿದ ನಂತರ ಬಳಕೆದಾರರು "OTP ಕಳುಹಿಸು" ಬಟನ್‌ ಕ್ಲಿಕ್ ಮಾಡುವುದು. ನಿರ್ದಿಷ್ಟ ಜಾಗದಲ್ಲಿ OTP ಅನ್ನು (ಆಧಾರ್-ನೋಂದಾಯಿತ ಮೊಬೈಲ್‌ನಲ್ಲಿ ಸ್ವೀಕರಿಸಲಾಗಿದೆ) ನಮೂದಿಸುವುದು.

ಡೌನ್‌ಲೋಡ್

* ಆ ನಂತರ, ಮುಂದುವರಿಯಲು ಬಳಕೆದಾರರು "ಪರಿಶೀಲಿಸಿ ಮತ್ತು ಡೌನ್‌ಲೋಡ್" ಆಯ್ಕೆಯನ್ನು ಕ್ಲಿಕ್ ಮಾಡಿರಿ.

* ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಆಧಾರ್ ಕಾರ್ಡ್‌ನ ಡಿಜಿಟಲ್ ನಕಲನ್ನು ಬಳಸುತ್ತಿರುವ ಡಿವೈಸ್‌ನಲ್ಲಿ ಡೌನ್‌ಲೋಡ್ ಆಗುವುದು. ಡೌನ್‌ಲೋಡ್ ಮಾಡಿದ ಫೈಲ್ PDF ಸ್ವರೂಪದಲ್ಲಿರಲಿದೆ. ಮತ್ತು ಅದನ್ನು ಪಾಸ್‌ವರ್ಡ್‌ನಿಂದ ರಕ್ಷಿಸಲಾಗಿದೆ (ಬಳಕೆದಾರರು ಅದನ್ನು ತೆರೆಯಲು ಪಾಸ್‌ವರ್ಡ್ ಅನ್ನು ನಮೂದಿಸುವ ಅಗತ್ಯವಿದೆ).

* ಪಾಸ್‌ವರ್ಡ್ ಬಳಕೆದಾರರ ಹೆಸರಿನ ಮೊದಲ ನಾಲ್ಕು ಅಕ್ಷರಗಳ ದೊಡ್ಡ ಅಕ್ಷರಗಳ ಸಂಯೋಜನೆಯಾಗಿದ್ದು, ನಂತರ ಬಳಕೆದಾರರ ಜನ್ಮ ವರ್ಷವನ್ನು YYYY ಸ್ವರೂಪದಲ್ಲಿ UIDAI ವೆಬ್‌ಸೈಟ್ ತಿಳಿಸಿದೆ.

mAadhaar ಪ್ರಯೋಜನಗಳು

mAadhaar ಪ್ರಯೋಜನಗಳು

* mAadhaarನಲ್ಲಿ ಸಮೀಷದ ಆಧಾರ ಕೇಂದ್ರಗಳನ್ನು ಹುಡುಕಬಹುದು. ತಿದ್ದುಪಡಿ, ವಿಳಾಸ ಬದಲಾವಣೆಯ ಸ್ಟೇಟಸ್‌ ಮಾಹಿತಿಯನ್ನು ಈ ಆಪ್‌ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.

* ಈ ಆಪ್ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ದೃಢಿಕರಣ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.

* ಕಳೆದುಹೋದ ಆಧಾರ ಎನ್‌ರೋಲ್‌ಮೆಂಟ್ ಐಡಿಯ ನಂಬರ್‌ ಅನ್ನ ಈ ಆಪ್‌ ನಲ್ಲಿ ಹಿಂಪಡೆಯಬಹುದಾಗಿದೆ.

* ಈ ಆಪ್ ಮೂಲಕ ಆನ್‌ಲೈನ್ ವಿಳಾಸ ಬದಲಾವಣೆ ಕೋರಿಕೆ ಸಲ್ಲಿಸಬಹುದಾಗಿದೆ.

Most Read Articles
Best Mobiles in India

English summary
UIDAI enables Aadhaar enrollees holders to download a digital copy of their identification card.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X