Home
ಟೆಕ್ ನೌಕರಿ

Budget 2024: ಬಜೆಟ್ ಪ್ರತಿಯನ್ನು ನಿಮ್ಮ ಫೋನ್‌ನಲ್ಲೇ ಡೌನ್‌ಲೋಡ್ ಮಾಡಿಕೊಂಡು ಓದಿರಿ! ಇಲ್ಲಿದೆ ವಿವರ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ (Budget 2024) ಅನ್ನು ಕೊನೆಗೂ ಮಂಡನೆ ಮಾಡಲಾಗಿದೆ. ಈ ಬಜೆಟ್‌ ನಲ್ಲಿ ಹಲವಾರು ಕ್ಷೇತ್ರಗಳಿಗೆ ಬಂಫರ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಅದರಲ್ಲೂ 'ಟೆಕ್-ಬುದ್ಧಿವಂತ ಯುವಕರಿಗೆ' 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಘೋಷಣೆ ಮಾಡಿದ್ದು, ಇದು ಬಾರಿಯ ವಿಶೇಷವಾಗಿದೆ.

ಹೌದು, ಬಜೆಟ್ 2024 ಅನ್ನು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದರು. ಇನ್ನು ಲೋಕಸಭೆ ಚುನಾವಣೆಯ ಬಳಿಕ ಅಂದರೆ ಹೊಸ ಸರ್ಕಾರ ರಚನೆಯಾದ ನಂತರ ಈ ವರ್ಷದ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಾಗುತ್ತದೆ. ಅಲ್ಲಿವರೆಗೆ ಈಗ ಘೋ‍ಷಣೆ ಮಾಡಲಾದ ಬಜೆಟ್‌ ಅಸ್ತಿತ್ವದಲ್ಲಿ ಇರಲಿದೆ. ಈ ನಡುವೆ ಈ ಬಜೆಟ್‌ ನಲ್ಲಿ ಏನೆಲ್ಲಾ ಇದೆ ಎಂದು ಸಂಪೂರ್ಣವಾಗಿ ತಿಳಿಯಬೇಕು ಎಂದರೆ ನೀವು ಪ್ರತಿಯನ್ನು ಪಡೆಯಬೇಕು. ಹಾಗಿದ್ರೆ ಬಜೆಟ್ ಪ್ರತಿ ಬಗ್ಗೆ ಚಿಂತೆ ಬೇಡ. ಯಾಕೆಂದರೆ ಈ ಲೇಖನದಲ್ಲಿ ಅದನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಎಂದು ತಿಳಿಸಿಕೊಡಲಾಗಿದೆ ಓದಿರಿ.

ಬಜೆಟ್ ಪ್ರತಿಯನ್ನು ನಿಮ್ಮ ಫೋನ್‌ನಲ್ಲೇ ಡೌನ್‌ಲೋಡ್ ಮಾಡಿಕೊಂಡು ಓದಿರಿ!

ಬಜೆಟ್ 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2024 ಭಾಷಣವನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್‌ನ ಆಪ್ ಸ್ಟೋರ್ (Google Play Store and Apple App Store) ಅಥವಾ ಅಧಿಕೃತ ಸರ್ಕಾರಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮೀಸಲಾದ ಆಪ್‌ ಸೇರಿದಂತೆ ಬಹು ಪ್ಲಾಟ್‌ಫಾರ್ಮ್‌ ಮೂಲಕ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಲು ಈ ಹಂತ ಅನುಸರಿಸಿ:
ಹಂತ 1: ಮೊದಲು ನೀವು ಲ್ಯಾಪ್‌ಟಾಪ್‌ ಅಥವಾ ಸಿಸ್ಟಂನಲ್ಲಿ www.indiabudget.gov.in ಎಂದು ಟೈಪ್‌ ಮಾಡಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದಾದ ನಂತರದಲ್ಲಿ 'ಬಜೆಟ್ ಭಾಷಣಗಳು' (Budget speeches) ಎಂದು ಲೇಬಲ್ ಮಾಡಿದ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ.

ಬಜೆಟ್ ಪ್ರತಿಯನ್ನು ನಿಮ್ಮ ಫೋನ್‌ನಲ್ಲೇ ಡೌನ್‌ಲೋಡ್ ಮಾಡಿಕೊಂಡು ಓದಿರಿ!

ಹಂತ 2 : ನಂತರದಲ್ಲಿ 'ಬಜೆಟ್ 2024' ಎಂಬ ಲೇಬಲ್ ಕಾಣಿಸಿಕೊಳ್ಳುತ್ತದೆ. ಇದನ್ನು ಗಮನಿಸಿ ಅಲ್ಲಿ ಇತ್ತೀಚೆಗೆ ಸೇರಿಸಲಾದ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದೆಲ್ಲಾ ಆದ ಮೇಲೆ ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಬಜೆಟ್ 2024 ಗಾಗಿ ಡೌನ್‌ಲೋಡ್ ಲಿಂಕ್ ಅನ್ನು ಕಾಣಬಹುದು. ಈ ವೇಳೆ ನೀವು PDF ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಓದಬಹುದಾಗಿದೆ.

ಮೊಬೈಲ್ ಬಳಕೆದಾರರು ಬಜೆಟ್ ಪ್ರತಿ ಡೌನ್‌ಲೋಡ್‌ ಮಾಡಲು ಈ ಹಂತ ಅನುಸರಿಸಿ:
ಹಂತ 1 : ಮೊದಲು www.indiabudget.gov.in ಗೆ ಭೇಟಿ ನೀಡಿ. ಇದಾದ ನಂತರದಲ್ಲಿ ಪೇಜ್‌ ನ ಬಲಭಾಗದಲ್ಲಿರುವ ಡೌನ್‌ಲೋಡ್ ಮೊಬೈಲ್ ಅಪ್ಲಿಕೇಶನ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಆಯ್ಕೆ ಮಾಡಿ.

ಹಂತ 2: ಇದನ್ನು ಮಾಡಿದ ನಂತರ ನಿಮ್ಮನ್ನು ಕೇಂದ್ರ ಬಜೆಟ್ ಆಪ್ ಡೌನ್‌ಲೋಡ್ ವಿಭಾಗಕ್ಕೆ ನಿರ್ದೇಶಿಸಲಾಗುತ್ತದೆ. ನೀವು ಆಂಡ್ರಾಯ್ಡ್‌ ಡಿವೈಸ್‌ ಬಳಕೆ ಮಾಡುತ್ತಿದ್ದರೆ ಆಂಡ್ರಾಯ್ಡ್‌ ಆಪ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಇಲ್ಲವಾದರೆ ಅಂದರೆ ನೀವು ಐಫೋನ್‌ ಬಳಕೆ ಮಾಡುತ್ತಿದ್ರೆ ಆಪಲ್‌ ಆಪ್‌ ಸ್ಟೋರ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇದೆಲ್ಲಾ ಆದ ಮೇಲೆ ಈ ಆಪ್‌ನಲ್ಲಿ ಬಜೆಟ್‌ನ ಪ್ರತಿಗಳು PDF ನಲ್ಲಿ ಕಾಣಿಸಿಕೊಳ್ಳುತ್ತವೆ.

ಬಜೆಟ್ ಪ್ರತಿಯನ್ನು ನಿಮ್ಮ ಫೋನ್‌ನಲ್ಲೇ ಡೌನ್‌ಲೋಡ್ ಮಾಡಿಕೊಂಡು ಓದಿರಿ!

ಇನ್ನು ಯೂನಿಯನ್ ಬಜೆಟ್ ಆಪ್‌ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಆರ್ಥಿಕ ವ್ಯವಹಾರಗಳ ಇಲಾಖೆ (DEA) ಮೇಲ್ವಿಚಾರಣೆಯಲ್ಲಿ ಅಭಿವೃದ್ಧಿಪಡಿಸಿದೆ. ಇದು ಸಂಸತ್ತಿನ ಸದಸ್ಯರು ಮತ್ತು ಸಾರ್ವಜನಿಕರಿಗೆ 14 ಬಜೆಟ್-ಸಂಬಂಧಿತ ದಾಖಲೆಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ. ಪರಿಣಾಮ ಯೂನಿಯನ್ ಬಜೆಟ್ 2024 ಡಾಕ್ಯುಮೆಂಟ್‌ಗಳನ್ನು ಓದಲು ನಿಮಗೆ ಸುಲಭ ಪ್ರವೇಶ ನೀಡುತ್ತದೆ.

Best Mobiles in India

English summary
Budget 2024 was presented in Lok Sabha by Finance Minister Nirmala Sitharaman. See here for information on how to download a copy of this budget.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+